ಮಂಜು ಬಿದ್ದ ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಈ ಅಂಶಗಳನ್ನು ಗಮನಿಸಿ..

ಚಳಿಗಾಲದಲ್ಲಿ ಮಂಜಿನಿಂದ ಕೂಡಿದ ಹೆದ್ದಾರಿಗಳಲ್ಲಿ ವಾಹನ ಚಲಾಯಿಸುವುದು ತುಂಬಾ ಕಷ್ಟಕರ. ಇದು ರಸ್ತೆಗಳಲ್ಲಿ ಅಪಘಾತದ ಅಪಾಯ ಹೆಚ್ಚಿರುವುದರಿಂದ ಅತ್ಯಂತ ಎಚ್ಚರಿಕೆ ಅಗತ್ಯ. ಇಂತಹ ಪರಿಸ್ಥಿತಿಯಲ್ಲಿ ಬಹುತೇಕರು ವಾಹನ ಚಲಾಯಿಸಲು ಹೆಚ್ಚು ಆಸಕ್ತಿ ತೋರುವುದಿಲ್ಲ. ಆದರೆ, ಕೆಲಸದ ಅನಿವಾರ್ಯತೆಯಿಂದ ಇಂತಹ ಸನ್ನಿವೇಶದಲ್ಲಿ ವಾಹನಗಳನ್ನು ಚಲಾಯಿಸಬೇಕು.

ಕೆಲವೊಮ್ಮೆ ಅತ್ಯಂತ ಎಚ್ಚರಿಕೆಯಿಂದ ಇದ್ದರೂ ಕೂಡ ಅಪಘಾತಗಳು ಸಂಭವಿಸುತ್ತವೆ. ಮಂಜಿನಿಂದಾಗಿ ನಿನ್ನೆ ಹರಿಯಾಣದ ಯಮುನಾ ನಗರದಲ್ಲಿ ಅಪಘಾತವೊಂದು ವರದಿಯಾಗಿದೆ. ದಟ್ಟ ಮಂಜಿನಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 25 ಕಾರುಗಳು ಡಿಕ್ಕಿ ಹೊಡೆದಿವೆ. ಪರಿಣಾಮ ನಾಲ್ವರಿಗೆ ಗಾಯಗೊಂಡಿದ್ದಾರೆ. ಬಹುತೇಕ ವಾಹನಗಳಿಗೆ ಭಾರಿ ಹಾನಿಯಾಗಿದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಹೇಳಲಾಗಿದೆ. ದಟ್ಟ ಮಂಜಿನಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಂಜು ಬಿದ್ದ ರಸ್ತೆಯಲ್ಲಿ ವಾಹನ ಚಲಾಯಿಸುವ ಈ ಅಂಶಗಳನ್ನು ಗಮನಿಸಿ..

ಇಂತಹ ವಾತಾವರಣದಲ್ಲಿ ಅತ್ಯಂತ ಜಾಗರೂಕರಾಗಿ ಜೊತೆಗೆ ಅತ್ಯಂತ ಕಡಿಮೆ ವೇಗದಲ್ಲಿ ವಾಹನ ಚಲಾಯಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ದೇಶದ ಬಹುತೇಕ ಕಡೆ ಮಂಜಿನಿಂದಾಗಿ ರಸ್ತೆ ಅಪಘಾತಗಳು ವರದಿಯಾಗಿರುವುದರಿಂದ ನಾವು ಜಾಗರೂಕರಾಗಿರಬೇಕು. ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ರಸ್ತೆಯಲ್ಲಿ ಗೋಚರತೆಯ ಕೊರತೆಯಿಂದ ಟ್ರ್ಯಾಕ್ಟರ್ ಅಪಘಾತಕ್ಕೀಡಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಕಡಿಮೆ ಗೋಚರತೆ ಮತ್ತು ಅಜಾಗರೂಕತೆಯಿಂದ ಯಾವುದೇ ಸಮಯದಲ್ಲೂ ಬೇಕಾದಾರರೂ ಅಪಘಾತ ಸಂಭವಿಸಬಹುದು. ಆದ್ದರಿಂದ ಮಂಜು ಬಿದ್ದಾಗ ವಾಹನ ಚಲಾಯಿಸುವಾಗ ಏನು ಮಾಡಬೇಕು/ ಮಾಡಬಾರದು ಎಂಬುದನ್ನು ಇಲ್ಲಿ ತಿಳಿಸಿಕೊಡಲಾಗಿದೆ.

ಅತಿ ವೇಗ, ಓವರ್‌ಟೇಕ್ ಮಾಡಬೇಡಿ:
ಹೆದ್ದಾರಿಯಲ್ಲಿ ಚಾಲನೆ ಮಾಡುವಾಗ ಈ ಅಂಶವನ್ನು ಪ್ರತಿಯೊಬ್ಬ ಚಾಲಕರು ಮುಖ್ಯವಾಗಿ ಗಮನಿಸಬೇಕು. ಮಂಜು ಬಿದ್ದಿರುವ ರಸ್ತೆಗಳು ಬಹುತೇಕ ಅಸಷ್ಟವಾಗಿ ಗೋಚರಿಸುತ್ತವೆ. ಅಂತಹ ಸಂದರ್ಭದಲ್ಲಿ ಅತಿ ವೇಗ ಅಥವಾ ಓವರ್ ಟೇಕ್ ಮಾಡುವಂತಹ ಕೆಲಸಗಳಿಗೆ ಎಂದಿಗೂ ಕೈ-ಹಾಕಬೇಡಿ. ಮಂಜಿನಲ್ಲಿ ವಾಹನಗಳನ್ನು ಓಡಿಸಲು ಉತ್ತಮ ಮಾರ್ಗವೆಂದರೆ ಅದು ತಾಳ್ಮೆಯ ಚಾಲನೆ. ತಾಳ್ಮೆಯಿಂದಿರಿ.. ಜೊತೆಗೆ ಸುರಕ್ಷಿತಯಿಂದ ನಿಮ್ಮ ಮನೆಗೆ ಹೋಗಲು ನಿಧಾನವಾಗಿ ಚಾಲನೆ ಮಾಡಿರಿ.

ನಿರ್ದಿಷ್ಟ ಟ್ರ್ಯಾಕ್‍ನಲ್ಲಿಯೇ ವಾಹನ ಚಲಾಯಿಸಿ:
ಮಂಜು ಬಿದ್ದ ರಸ್ತೆ ಅಪಘಾತಗಳ ಹಿಂದಿನ ಪ್ರಮುಖ ಕಾರಣವೆಂದರೆ ಅದು, ಗೋಚರತೆ ಕಡಿಮೆ ಇರುವುದು. ನಿಮ್ಮ ಸುರಕ್ಷತೆ ಖಚಿತಪಡಿಸಿಕೊಳ್ಳಲು, ಇತರೇ ವಾಹನಗಳಿಂದ ಸಾಕಷ್ಟು ಅಂತರ ಕಾಯ್ದುಕೊಳ್ಳುವುದು ಮುಖ್ಯ. ಮಂಜು ಬಿದ್ದ ಹೆದ್ದಾರಿಯಲ್ಲಿ ಚಾಲನೆ ಮಾಡುವಾಗ ನಿಮ್ಮ ಟ್ರ್ಯಾಕ್‍ನಲ್ಲಿ ಉಳಿಯುವುದು ಸಹ ಅತ್ಯಗತ್ಯ. ಹಠಾತ್ ಟ್ರ್ಯಾಕ್‍ ಬದಲಾವಣೆಯು ಅಪಘಾತಕ್ಕೆ ಕಾರಣವಾಗಬಹುದು.
ಗೋಚರತೆ ಕಳಪೆಯಾಗಿದ್ದರೆ, ವಾಹನವು ಟ್ರ್ಯಾಕ್‍ನಲ್ಲಿಯೇ ಇದೆ ಎಂಬುದನ್ನು ತಿಳಿದುಕೊಳ್ಳಲು ವೈಟ್ ಲೇನ್ ಅನ್ನು ಗಮನಿಸುತ್ತಿರಿ.

ಯಾವಾಗಲೂ ಜಾಗ್ರತೆ ಅಗತ್ಯ:
ಮಂಜು ಬಿದ್ದಾಗ ರಸ್ತೆಗಳು ಕಣ್ಣಿಗೆ ಗೋಚರಿಸುದಿಲ್ಲ. ಇಂತಹ ಸಂದರ್ಭದಲ್ಲಿ ನಿಮ್ಮ ಕಿವಿಗಳನ್ನು ಅಲರ್ಟ್ ಇಟ್ಟುಕೊಳ್ಳಿ. ಇದಕ್ಕಾಗಿ ನಿಮ್ಮ ವಾಹನದಲ್ಲಿ ಮ್ಯೂಸಿಕ್ ವಾಲ್ಯೂಮ್ ಕಡಿಮೆ ಮಾಡಿರಿ. ಜೊತೆಗೆ ಫೋನ್ ಕರೆಗಳನ್ನು ಅಟೆಂಡ್ ಮಾಡುವುದನ್ನು ತಪ್ಪಿಸಿ. ಮಂಜು ಬಿದ್ದ ರಸ್ತೆಯಲ್ಲಿ ಚಾಲನೆ ಕಡೆಗೆ ಹೆಚ್ಚಿನ ಗಮನವಿರಲಿ. ಇದು ಎಚ್ಚರದಿಂದಿರಲೂ, ಎದುರಿನಿಂದ ಬರುವ ವಾಹನಗಳ ಬಗ್ಗೆ ಗಮನಹರಿಸಲು ಸಹಾಯ ಮಾಡುತ್ತದೆ. ಅಲ್ಲದೆ, ವಾಹನದ ಅಪಾಯದ ದೀಪಗಳನ್ನು (hazard lights) ಆನ್ ಮಾಡಿ. ಇದರಿಂದ ರಸ್ತೆಯಲ್ಲಿ ಗೋಚರತೆ ಕಡಿಮೆ ಇದ್ದಾಗ, ಇತರೆ ವಾಹನಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.

ನ್ಯಾವಿಗೇಷನ್ ಸ್ಕ್ರೀನ್ ಆನ್ ಮಾಡಿರಿ:
ಹೆದ್ದಾರಿ ಟ್ರ್ಯಾಕ್‌ನಲ್ಲಿ ಉಳಿಯಲು ನಕ್ಷೆ ಬಳಸಿ. ಗೂಗಲ್ ನಕ್ಷೆ ಯಾವಾಗಲೂ ನಿಖರವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಮಂಜಿನಿಂದ ಕೂಡಿದ ರಸ್ತೆಯಲ್ಲಿ ಚಾಲನೆ ಮಾಡುವಾಗ ನ್ಯಾವಿಗೇಷನ್ ಸ್ಕ್ರೀನ್ ಆನ್ ಮಾಡುವುದರಿಂದ ರಸ್ತೆಗಳಲ್ಲಿನ ತಿರುವುಗಳನ್ನು , ಗುರುತಿಸುವುದು ನಿಮಗೆ ಸುಲಭವಾಗುತ್ತದೆ. ವಿಶೇಷವಾಗಿ ಗುಡ್ಡಗಾಡಿನ ರಸ್ತೆಯಲ್ಲಿ ಚಾಲನೆ ಮಾಡುವಾಗ ಒಂದು ತಪ್ಪು ತಿರುವು ಅನಾಹುತಕ್ಕೆ ಕಾರಣವಾಗಬಹುದು. ಅಲ್ಲದೆ, ಮುಂದೆ ಬರುತ್ತಿರುವ ಟ್ರಾಫಿಕ್ ಅನ್ನು ಪರಿಶೀಲಿಸಲು ನಕ್ಷೆಗಳು ಸಹಾಯ ಮಾಡುತ್ತವೆ.

ಲೈಟ್, ವಿಂಡ್‌ಶೀಲ್ಡ್ & ವಿಂಡೋಗಳನ್ನು ಸ್ವಚ್ಛಗೊಳಿಸಿ:
ವಿಂಡೋ, ಲೈಟ್ ಮತ್ತು ವಿಂಡ್‌ಶೀಲ್ಡ್ ಅನ್ನು ಸ್ವಚ್ಛವಾಗಿಡಬೇಕು. ಮಂಜು ಬಿದ್ದ ರಸ್ತೆಯಲ್ಲಿ ಚಲಿಸುವಾಗ ವಿಂಡ್‌ಸ್ಕ್ರೀನ್ ಕೊಳಕಾಗಿದ್ದರೆ, ಅದರಿಂದ ರಸ್ತೆಯ ಗೋಚರತೆ ಕಡಿಮೆ ಇರುತ್ತದೆ. ಹೀಗಾಗಿ, ರಸ್ತೆ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತವೆ. ಅದನ್ನು ತಪ್ಪಿಸಲು ವಿಂಡ್‌ಶೀಲ್ಡ್ & ವಿಂಡೋಗಳನ್ನು ಕ್ಲಿನ್ ಮಾಡಿರಿ. ಮಂಜು ಬಿದ್ದ ರಸ್ತೆಗಳಲ್ಲಿ ವಾಹನ ಚಲಾಯಿಸಬೇಕಾದರೆ ತೀವ್ರ ಎಚ್ಚರಿಕೆ ಅಗತ್ಯ. ಆದ್ದರಿಂದ ಈ ಚಳಿಗಾಲದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಓಡಿಸುವಾಗ ಮೇಲಿನ ಸಲಹೆಗಳನ್ನೂ ಪಾಲಿಸುವುದು ತುಂಬಾ ಉಪಯೋಗಕಾರಿಯಾಗಿದೆ.

Article Published On: Tuesday, December 20, 2022, 14:41 [IST]
English summary
Keep these points in mind while driving on foggy roads
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+