Just In
Don't Miss!
- News
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೆಂಪೇಗೌಡ ವಿಮಾನ ನಿಲ್ದಾಣಕ್ಕೂ ಬಂತು ಮಂಜು ಕವಿದ ವೇಳೆ ವಿಮಾನಗಳಿಗೆ ಆಪದ್ಬಾಂದವನಾಗುವ ಕ್ಯಾಟ್ 3 ಬಿ ಸಿಸ್ಟಂ
ವಿಮಾನಗಳು ಲ್ಯಾಂಡಿಂಗ್ ಆಗುವ ವೇಳೆಯಲ್ಲಿ ಅಥವಾ ಟೇಕ್ ಆಫ್ ಆಗುವ ವೇಳೆಯಲ್ಲಿ ಬೆಳಕು ಸ್ಪಷ್ಟವಾಗಿ ಗೋಚರಿಸುವ ಅಗತ್ಯವಿರುತ್ತದೆ. ಇಲ್ಲದಿದ್ದರೆ ಮಂಜು ಕವಿದ ವಾತಾವರಣದಿಂದಾಗಿ ವಿಮಾನಗಳು ಅಪಘಾತಕ್ಕೀಡಾಗುವ ಸಾಧ್ಯತೆಗಳಿರುತ್ತವೆ.

ಈ ಹಿಂದೆಯೂ ಪ್ರತಿಕೂಲ ಹವಾಮಾನ ಹಾಗೂ ಮಂಜು ಕವಿದ ವಾತಾವರಣದಿಂದಾಗಿ ಹಲವು ವಿಮಾನ ಅವಘಡಗಳು ಸಂಭವಿಸಿವೆ. ಇದನ್ನು ತಡೆಗಟ್ಟಲು ವಿಮಾನ ನಿಲ್ದಾಣ ಪ್ರಾಧಿಕಾರಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತವೆ.

ಪ್ರತಿಕೂಲ ಹವಾಮಾನ ಹಾಗೂ ಮಂಜು ಕವಿದ ವಾತಾವರಣದಲ್ಲಿ ವಿಮಾನಗಳು ಲ್ಯಾಂಡಿಂಗ್ ಆಗಲು ಹಾಗೂ ಟೇಕ್-ಆಫ್ ಆಗಲು ಬೆಂಗಳೂರು ಅಂತರಾಷ್ಟ್ರೀಯವಿಮಾನ ನಿಲ್ದಾಣದಲ್ಲಿ ಹೊಸ ವಿಧಾನವನ್ನು ಅಳವಡಿಸಲಾಗಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ರನ್‌ವೇಯಲ್ಲಿ ಕ್ಯಾಟ್ 3 ಬಿ ಇನ್ಸ್'ಟ್ರೂಮೆಂಟ್ ಲ್ಯಾಂಡಿಂಗ್ ಸ್ಟಂ (ಐಎಲ್ಎಸ್) ಅಳವಡಿಸಲಾಗಿದೆ ಎಂದು ವರದಿಯಾಗಿದೆ.

ಹೊಸ ರನ್‌ವೇಯಲ್ಲಿ ಐಎಲ್‌ಎಸ್ ಹೊಂದಿರುವ ಕ್ಯಾಟ್ 3 ಬಿ ಅಳವಡಿಸಲಾಗಿದ್ದು, ಯಾವುದೇ ವಿಮಾನವು ಇಳಿಯುವಾಗ 50 ಮೀಟರ್ ಹಾಗೂ ಟೇಕ್ ಆಫ್ ಆಗುವಾಗ 125 ಮೀಟರ್ ದೂರ ಸ್ಪಷ್ಟವಾಗಿ ಕಾಣಲಿದೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ರನ್‌ವೇಯಲ್ಲಿನ ಗೋಚರತೆಯು ಲ್ಯಾಂಡಿಂಗ್ ಆಗುವಾಗ 50 ಅಡಿಗಳಿಗಿಂತ ಕಡಿಮೆ ಅಂದರೆ 15 ಮೀಟರ್ ದೂರದಲ್ಲಿದ್ದಾಗ ಹಾಗೂ ಟೇಕ್ ಆಫ್ ಆಗುವಾಗ 200 ಮೀಟರ್‌ಗಿಂತ ಕಡಿಮೆಯಿದ್ದಾಗ ಕ್ಯಾಟ್ 3 ಬಿ ಪೈಲಟ್‌ಗಳಿಗೆ ನೆರವಾಗುತ್ತದೆ.

ಕೆಂಪೇಗೌಡ ವಿಮಾನ ನಿಲ್ದಾಣವು, ರಾತ್ರಿ ವೇಳೆಯಲ್ಲಿ ಹಾಗೂ ಮುಂಜಾನೆ ವೇಳೆಯಲ್ಲಿ ಸ್ಪಷ್ಟವಾದ ಗೋಚರತೆಗಾಗಿ ಕ್ಯಾಟ್ -3 ಬಿಯನ್ನು ರನ್‌ವೇಯಲ್ಲಿ ಹೊಂದಿರುವ ದೇಶದ ಆರನೇ ವಿಮಾನ ನಿಲ್ದಾಣವಾಗಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕ್ಯಾಟ್ -3 ಬಿಗಳು ಏರ್ ಫೀಲ್ಡ್ ಗ್ರೌಂಡ್ ಲೈಟ್, ಟ್ರಾನ್ಸ್ ಮಿಷನ್ ಮೀಟರ್, ಆಟೋಮ್ಯಾಟಿಕ್ ಹವಾಮಾನ ವೀಕ್ಷಣಾ ಕೇಂದ್ರ, ಸರ್ಫೇಸ್ ಮೂವ್ ಮೆಂಟ್ ರಾಡಾರ್ ಹಾಗೂ ನ್ಯಾವಿಗೇಷನ್'ಗಳ ನೆರವಿನಿಂದ ಕಾರ್ಯನಿರ್ವಹಿಸುತ್ತವೆ.

ಪ್ರಯೋಗಗಳನ್ನು ಪೂರ್ಣಗೊಳಿಸಿದ ನಂತರ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಳವಡಿಸಿರುವ ಕ್ಯಾಟ್ -3 ಬಿ ರನ್‌ವೇಯನ್ನು ಪರಿಶೀಲಿಸಿತು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಹೊಸ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ವಿಮಾನಯಾನ ಸಂಸ್ಥೆಗಳು, ಕ್ಯಾಟ್ -3 ಬಿ ಕಾರ್ಯಾಚರಣೆಗಳಿಗೆ ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕಾಗಿದೆ ಎಂದು ಆಪರೇಟರ್ ಒಬ್ಬರು ಹೇಳಿದ್ದಾರೆ.
ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.