ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!

ವಿವಾಹವೆಂಬುದು ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾಗದ ಕ್ಷಣ. ಬದುಕಿನಲ್ಲಿ ಒಮ್ಮೆ ಬರುವ ಈ ಅದ್ಭುತ ಗಳಿಗೆಯನ್ನು ನೆನಪಿನಲ್ಲಿಟ್ಟುಕೊಳ್ಳಲು ವಧು - ವರರು ಸಾಕಷ್ಟು ಪ್ಲ್ಯಾನ್ ಮಾಡುತ್ತಾರೆ. ಪ್ರಿ ವೇಡಿಂಗ್ ಫೋಟೋಶೂಟ್ ನಿಂದ ಹಿಡಿದು, ತಮ್ಮ ಸಂಗಾತಿಗೆ ಅವರಿಷ್ಟದ ಸರ್ಪ್ರೈಸ್ ಗಿಫ್ಟ್ ಕೊಡುವ ಮೂಲಕ ಸಂಭ್ರಮಿಸುತ್ತಾರೆ.

ಕೇರಳದಲ್ಲಿ ನಡೆದ ಮದುವೆಯೊಂದರಲ್ಲಿ ವಧುವು ವರನಿಗೆ ದುಬಾರಿ ಬೆಲೆಯ ರಾಯಲ್ ಎನ್‌ಫೀಲ್ಡ್‌ ಹಂಟರ್ 350 ಬೈಕ್‌ನ್ನು ಉಡುಗೊರೆಯಾಗಿ ನೀಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಬರೋಬ್ಬರಿ 13.3 ಮಿಲಿಯನ್ ಗೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದ್ದು, ಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

Kerala Bride Give Surprise Gift Royal Enfield Hunter 350 Bike To Groom Trending In Instagram

ಈ ವಿಡಿಯೋದಲ್ಲಿ ವರನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಆತನ ಸ್ನೇಹಿತರು ಕರೆದುಕೊಂಡು ಬರುತ್ತಿದ್ದು, ಸರ್ಪ್ರೈಸ್ ಗಿಫ್ಟ್ ಬಳಿ ಬರುತ್ತಿದ್ದಂತೆ ವಧು ವರನ ಕಣ್ಣುಗೆ ಕಟ್ಟಿರುವ ಬಟ್ಟೆಯನ್ನು ಬಿಚ್ಚಿದ್ದಾಳೆ. ಆತ ಉಡೊಗೊರೆ ಕಂಡ ಕೊಡಲೇ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದು, ಇಬ್ಬರು ರಾಯಲ್ ಎನ್‌ಫೀಲ್ಡ್‌ ಹಂಟರ್ 350 ಬೈಕ್ ಮೇಲೆ ಹೊದಿಸಿದ್ದ ಬಟ್ಟೆಯನ್ನು ತೆಗೆದಿದ್ದಾರೆ. ಆ ಬಳಿಕ ಮೋಟಾರ್‌ಸೈಕಲ್ ನಲ್ಲಿ ಒಂದು ಸುತ್ತು ಹೋಗಿ ಬರುವುದನ್ನು ದೃಶ್ಯದಲ್ಲಿ ಕಾಣಬಹುದು.

ಕಳೆದ ವರ್ಷದ ಡಿಸೆಂಬರ್ ತಿಂಗಳು ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಜೋಡಿಯೊಂದು ವಿಭಿನ್ನವಾಗಿ ಮದುವೆಯಾಗಿ ಭಾರೀ ಸುದ್ದಿಯಾಗಿತ್ತು. ಮಿಥುನ್, ಪೂಜಾ ಎಂಬುವವರ ವಿವಾಹ ಸಮಾರಂಭ ಅದ್ದೂರಿಯಾಗಿ ನಡೆದಿತ್ತು. ವಧು ವರರ ಸ್ನೇಹಿತರು ವಿವಾಹ ಸಮಾರಂಭದಲ್ಲಿ ನವ ದಂಪತಿ, ವರನ ಮನೆಗೆ ತೆರಳಲು ಜೆಸಿಬಿ ವ್ಯವಸ್ಥೆಯನ್ನು ಮಾಡಿದ್ದರು.

Kerala Bride Give Surprise Gift Royal Enfield Hunter 350 Bike To Groom Trending In Instagram

ಹೂವಿನಿಂದ ಸಿಂಗಾರಗೊಂಡ ಜೆಸಿಬಿ ಮುಂಭಾಗ ವಿಶೇಷವಾದ ಸೋಫಾವನ್ನು ಜೋಡಿಸಿ, ಅದರ ಮೇಲೆ ವಧು - ವರರನ್ನು ಕುರಿಸಿ ಮೆರವಣಿಗೆ ಮಾಡಲಾಗಿತ್ತು. ರಸ್ತೆಯುದ್ದಕ್ಕೂ ನವ ದಂಪತಿ ಸ್ನೇಹಿತರೂ ಭರ್ಜರಿಯಾಗಿ ನೃತ್ಯ ಮಾಡಿ ಸಂಭ್ರಮಿಸಿದ್ದರು. ಈ ವಿವಾಹ ಸಮಾರಂಭದಲ್ಲಿ ಶಾಸ್ತ್ರಗಳು ಮಗಿಯುತ್ತಿದ್ದಂತೆ ವಧು - ವರರ ಸ್ನೇಹಿತರು ಆಯೋಜಿಸಿದ್ದ ಕೋಳಿ ಕಾಳಗ ಎಲ್ಲರ ಗಮನವನ್ನು ಸೆಳೆದಿತ್ತು.

ಕೇರಳದಲ್ಲಿ ವಧು ವರನಿಗೆ ಗಿಫ್ಟ್ ನೀಡಿದ ರಾಯಲ್ ಎನ್‌ಫೀಲ್ಡ್‌ ಹಂಟರ್ 350 (Royal Enfield Hunter 350) ಬೈಕ್ ಕುರಿತು ಹೇಳುವುದಾದರೆ, ಇದು ರೂ.1.50 ಲಕ್ಷದಿಂದ ರೂ.1.72 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ಮೋಟಾರ್‌ಸೈಕಲ್, 349 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 20.4 ಪಿಎಸ್ ಪವರ್ (ಶಕ್ತಿ) ಮತ್ತು 27 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5-ಸ್ವೀಡ್ ಗೇರ್ ಬಾಕ್ಸ್ ಪಡೆದಿದೆ.

ಈ ಬೈಕ್, ನಗರ ಪ್ರದೇಶದಲ್ಲಿ 40.19 ಕೆಎಂಪಿಎಲ್ ಹಾಗೂ ಹೆದ್ದಾರಿಯಲ್ಲಿ 35.98 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ. 17-ಇಂಚಿನ ವೀಲ್ಸ್ ಪಡೆದಿದ್ದು, ಡಬಲ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. 13-ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್ ಕೂಡ ಪಡೆದಿದೆ. ಇದರ ಗ್ರೌಂಡ್ ಕ್ಲಿಯರೆನ್ಸ್ 150 ಎಂಎಂ ಇದೆ. ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, March 29, 2024, 16:01 [IST]
English summary
Kerala bride give surprise gift royal enfield hunter 350 bike to groom trending instagram
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+