ಫ್ಯಾನ್ಸಿ ನಂಬರ್'ಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಯುವ ಉದ್ಯಮಿ

ಹೊಸ ಕಾರುಗಳನ್ನು ಖರೀದಿಸುವ ಭಾರತೀಯರು ಕುಟುಂಬದ ಸದಸ್ಯರನ್ನು ಸ್ವಾಗತಿಸುವಂತೆಯೇ ಹೊಸ ಕಾರುಗಳನ್ನು ಸಹ ಸ್ವಾಗತಿಸುತ್ತಾರೆ. ಕೇರಳದ ಯುವ ಉದ್ಯಮಿಯೊಬ್ಬರು ಜೀಪ್ ವ್ರಾಂಗ್ಲರ್ ರೂಬಿಕಾನ್ ಖರೀದಿಸಿದ್ದಾರೆ.

ಫ್ಯಾನ್ಸಿ ನಂಬರ್'ಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಯುವ ಉದ್ಯಮಿ

ಈ ಕಾರಿಗೆ ಫ್ಯಾನ್ಸಿ ನಂಬರ್ ಪಡೆಯಲು ಲಕ್ಷಾಂತರ ರೂಪಾಯಿಗಳನ್ನು ಸಹ ಖರ್ಚು ಮಾಡಿದ್ದಾರೆ. ಕೇರಳದ ಆರ್‌ಟಿಒ ಕಚೇರಿಯು ಫ್ಯಾನ್ಸಿ ನಂಬರ್ ಗಳನ್ನು ಹರಾಜು ಹಾಕಿ ಮಾರಾಟ ಮಾಡುತ್ತದೆ. ಹಲವಾರು ಜನರು ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಅದರಂತೆ ಕೇರಳದ ತ್ರಿಶೂರ್‌ನ ಡಾ.ಪ್ರವೀಣ್ ಸಹ ತಮ್ಮ ಹೊಸ ಜೀಪ್ ವ್ರಾಂಗ್ಲರ್ ರೂಬಿಕಾನ್‌ಗಾಗಿ ರೂ.6.25 ಲಕ್ಷ ನೀಡಿ ಫ್ಯಾನ್ಸಿ ನಂಬರ್ ಖರೀದಿಸಿದ್ದಾರೆ.

ಫ್ಯಾನ್ಸಿ ನಂಬರ್'ಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಯುವ ಉದ್ಯಮಿ

ಅವರು ಕೆಎಲ್-09-ಬಿಡಬ್ಲ್ಯು-0001 ಫ್ಯಾನ್ಸಿ ನಂಬರ್ ಅನ್ನು ಖರೀದಿಸಿದ್ದಾರೆ. ಅವರು ಖರೀದಿಸಿರುವ ಕಾರು ಕೇರಳ ರಾಜ್ಯದ ಮೊದಲ ಜೀಪ್ ವ್ರಾಂಗ್ಲರ್ ರುಬಿಕಾನ್ ಕಾರು ಎಂಬುದು ವಿಶೇಷ. ಜೀಪ್ ಕಂಪನಿಯು ತನ್ನ ಹೊಸ ವ್ರಾಂಗ್ಲರ್ ರೂಬಿಕಾನ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಫ್ಯಾನ್ಸಿ ನಂಬರ್'ಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಯುವ ಉದ್ಯಮಿ

ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.68.94 ಲಕ್ಷಗಳಾಗಿದೆ. ಭಾರತದಲ್ಲಿ ಜೀಪ್ ವ್ರಾಂಗ್ಲರ್ ರುಬಿಕಾನ್‌ನ 5 ಡೋರ್ ಮಾದರಿಯನ್ನು ಮಾರಾಟ ಮಾಡಲಾಗುತ್ತದೆ. ರೂಬಿಕಾನ್ ವ್ರಾಂಗ್ಲರ್ ಜೀಪ್ ಕಂಪನಿಯ ಹೆಚ್ಚು ಪರಿಣಾಮಕಾರಿ ಎಸ್‌ಯುವಿಯಾಗಿದೆ.

ಫ್ಯಾನ್ಸಿ ನಂಬರ್'ಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಯುವ ಉದ್ಯಮಿ

ಜೀಪ್ ಕಂಪನಿಯು ವ್ರಾಂಗ್ಲರ್ ರೂಬಿಕಾನ್ ಎಸ್‌ಯುವಿಯನ್ನು ಆಫ್-ರೋಡ್'ಗಳಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿದೆ. ಭಾರತದಲ್ಲಿ ಎಸ್‌ಯುವಿಗಳಿಗೆ ಹೆಚ್ಚಿನ ಬೇಡಿಕೆಯಿರುವ ಕಾರಣಕ್ಕೆ ವ್ರಾಂಗ್ಲರ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಫ್ಯಾನ್ಸಿ ನಂಬರ್'ಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಯುವ ಉದ್ಯಮಿ

ಜೀಪ್ ವ್ರಾಂಗ್ಲರ್ ರೂಬಿಕಾನ್ ಎಸ್‌ಯುವಿಯಲ್ಲಿ 2.0-ಲೀಟರಿನ 4-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 265 ಬಿಹೆಚ್‌ಪಿ ಪವರ್ ಹಾಗೂ 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ 8-ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಜೋಡಿಸಲಾಗಿದೆ.

ಫ್ಯಾನ್ಸಿ ನಂಬರ್'ಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಯುವ ಉದ್ಯಮಿ

4x4 ಎಸ್‌ಯುವಿಯನ್ನು ಖರೀದಿಸಲು ಬಯಸುವವರು ಜೀಪ್ ವ್ರಾಂಗ್ಲರ್ ರೂಬಿಕಾನ್‌ ಎಸ್‌ಯುವಿಯನ್ನು ಬೆಲೆ ಹೆಚ್ಚು ಎಂಬ ಕಾರಣಕ್ಕೆ ಖರೀದಿಸಲು ಸಾಧ್ಯವಾಗದಿದ್ದರೆ, ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಆರಿಸಿಕೊಳ್ಳಬಹುದು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮಹೀಂದ್ರಾ ಕಂಪನಿಯು ತನ್ನ ಹೊಸ ಥಾರ್ ಎಸ್‌ಯುವಿಯನ್ನು ಇತ್ತೀಚೆಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹಳೆಯ ಮಾದರಿಗೆ ಹೋಲಿಸಿದರೆ ಹೊಸ ತಲೆಮಾರಿನ ಥಾರ್ ಎಸ್‌ಯುವಿಯನ್ನು ಹಲವಾರು ರೀತಿಯಲ್ಲಿ ಅಪ್‌ಗ್ರೇಡ್ ಮಾಡಲಾಗಿದೆ. ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.9.80 ಲಕ್ಷಗಳಾಗಿದೆ.

ಫ್ಯಾನ್ಸಿ ನಂಬರ್'ಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಯುವ ಉದ್ಯಮಿ

ಹೊಸ ತಲೆಮಾರಿನ ಮಹೀಂದ್ರಾ ಥಾರ್ ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಗ್ಗದ ಬೆಲೆಯ 4x4 ಎಸ್‌ಯುವಿ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಹೊಸ ತಲೆಮಾರಿನ ಮಹೀಂದ್ರಾ ಥಾರ್ ಎಸ್‌ಯುವಿಗೆ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಆಫ್-ರೋಡ್ ಪ್ರಯಾಣದಲ್ಲಿ ಆಸಕ್ತಿ ಹೊಂದಿರುವ ವಿಐಪಿಗಳು ಥಾರ್ ಎಸ್‌ಯುವಿಯನ್ನು ಖರೀದಿಸಲು ಮುಂದಾಗಿದ್ದಾರೆ.

Most Read Articles

Kannada
English summary
Kerala businessman spends huge amount for fancy number. Read in Kannada.
Story first published: Friday, November 13, 2020, 19:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X