ಕರೋನಾ ವೈರಸ್: ಬೇರೆ ರಾಜ್ಯಗಳಿಗೆ ಮಾದರಿಯಾಗಲಿದೆ ಕೇರಳದ ಈ ಕ್ರಮಗಳು..!

ಕರೋನಾ ವೈರಸ್ ಎಂಬ ಮಹಾಮಾರಿ ಜಗತ್ತನ್ನೇ ತಲ್ಲಣಗೊಳಿಸಿರುವುದು ಸುಳ್ಳಲ್ಲ. ಪ್ರಪಂಚದ ಎಲ್ಲಾ ದೇಶಗಳು ಕರೋನಾ ವೈರಸ್‌ನಿಂದ ತತ್ತರಿಸಿವೆ. ಆದರೆ ಈ ಮಾರಣಾಂತಿಕ ವೈರಸ್‌ನಿಂದ ಪರಿಸರಕ್ಕೆ ಅನುಕೂಲವಾಗುತ್ತಿದೆ.

ಕರೋನಾ ವೈರಸ್: ಬೇರೆ ರಾಜ್ಯಗಳಿಗೆ ಮಾದರಿಯಾಗಲಿದೆ ಕೇರಳದ ಈ ಕ್ರಮಗಳು..!

ಪ್ರಪಂಚದ ಬಹುತೇಕ ದೇಶಗಳಲ್ಲಿನ ವಾಯುಮಾಲಿನ್ಯವು ಹಿಂದೆಂದು ಕಂಡು ಕೇಳರಿಯದ ರೀತಿಯಲ್ಲಿ ಕಡಿಮೆಯಾಗಿದೆ. ವಾಯುಮಾಲಿನ್ಯ ಮಾತ್ರವಲ್ಲದೇ ಜಲ ಮಾಲಿನ್ಯವು ಸಹ ಕಡಿಮೆಯಾಗಿದೆ. ಬಹುತೇಕ ನದಿಗಳ ನೀರು ಸ್ವಚ್ವವಾಗಿದೆ. ಕರೋನಾ ವೈರಸ್ ಮಾನವನಿಗೆ ಕೆಡುಕನ್ನು ಉಂಟು ಮಾಡುತ್ತಿದ್ದರೂ ಪರಿಸರಕ್ಕೆ ಅನುಕೂಲವನ್ನು ಮಾಡುತ್ತಿದೆ.

ಕರೋನಾ ವೈರಸ್: ಬೇರೆ ರಾಜ್ಯಗಳಿಗೆ ಮಾದರಿಯಾಗಲಿದೆ ಕೇರಳದ ಈ ಕ್ರಮಗಳು..!

ಕರೋನಾ ವೈರಸ್‌ ವ್ಯಾಪಕವಾಗಿ ಹರಡಲು ಮಾನವರು ಸಹ ಕಾರಣ. ಕರೋನಾ ವೈರಸ್ ಹರಡದಂತೆ ತಡೆಯಲು ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಆದರೆ ಜನರು ಮಾತ್ರ ತಲೆಕೆಡಿಸಿಕೊಳ್ಳದೇ ವಿನಾಕಾರಣ ರಸ್ತೆಗಿಳಿಯುತ್ತಿದ್ದಾರೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ವೈರಸ್: ಬೇರೆ ರಾಜ್ಯಗಳಿಗೆ ಮಾದರಿಯಾಗಲಿದೆ ಕೇರಳದ ಈ ಕ್ರಮಗಳು..!

ಇದರಿಂದಾಗಿ ಕರೋನಾ ವೈರಸ್ ಹರಡುವಿಕೆ ಹೊಸ ಉತ್ತುಂಗಕ್ಕೇರಿದೆ. ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ರಾಜ್ಯ ಸರ್ಕಾರಗಳು, ಜನರು ಹಾಗೂ ಸಾರ್ವಜನಿಕ ಸಂಸ್ಥೆಗಳು ತಮ್ಮ ಕೈಲಾದಷ್ಟು ಪ್ರಯತ್ನವನ್ನು ಮಾಡುತ್ತಿದ್ದಾರೆ.

ಕರೋನಾ ವೈರಸ್: ಬೇರೆ ರಾಜ್ಯಗಳಿಗೆ ಮಾದರಿಯಾಗಲಿದೆ ಕೇರಳದ ಈ ಕ್ರಮಗಳು..!

ಈಗ ಕೇರಳದ ಟ್ಯಾಕ್ಸಿ ಚಾಲಕರು ಕರೋನಾ ವೈರಸ್ ಹರಡುವುದನ್ನು ತಡೆಯಲು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕೇರಳದ ಕ್ಯಾಬ್ ಚಾಲಕರು ತಮ್ಮನ್ನು ಹಾಗೂ ತಮ್ಮ ಟ್ಯಾಕ್ಸಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ವೈರಸ್‌ನಿಂದ ರಕ್ಷಿಸಲು ಕಾರಿನೊಳಗೆ ಫೈಬರ್ ಗ್ಲಾಸ್ ಅಳವಡಿಸಿದ್ದಾರೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕರೋನಾ ವೈರಸ್: ಬೇರೆ ರಾಜ್ಯಗಳಿಗೆ ಮಾದರಿಯಾಗಲಿದೆ ಕೇರಳದ ಈ ಕ್ರಮಗಳು..!

ಇದರಿಂದ ಕಾರನ್ನು ಎರಡು ಭಾಗಗಳಾಗಿ ವಿಂಗಡಿಸುವುದಲ್ಲದೆ, ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಪ್ರತ್ಯೇಕವಾದ ಜಾಗವನ್ನು ಒದಗಿಸಿದಂತಾಗುತ್ತದೆ. ಇದರ ಕುರಿತಾದ ವೀಡಿಯೊವನ್ನು ಮಲಯಾಳಂ ಸುದ್ದಿ ಸಂಸ್ಥೆಯಾದ ಏಷ್ಯಾನೆಟ್ ನ್ಯೂಸ್ ಬಿಡುಗಡೆಗೊಳಿಸಿದೆ.

ಕರೋನಾ ವೈರಸ್: ಬೇರೆ ರಾಜ್ಯಗಳಿಗೆ ಮಾದರಿಯಾಗಲಿದೆ ಕೇರಳದ ಈ ಕ್ರಮಗಳು..!

ಕೇರಳದಲ್ಲಿ ಈ ರೀತಿಯ ಕ್ರಮಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಛತ್ರಿಗಳನ್ನು, ಮಾಸ್ಕ್‌ಗಳನ್ನು ಹಾಗೂ ಸ್ಯಾನಿಟೈಜರ್‌ಗಳನ್ನು ಕಡ್ಡಾಯವಾಗಿ ಬಳಸಬೇಕೆಂದು ಕೇರಳ ಸರ್ಕಾರವು ಜನರಿಗೆ ಸೂಚಿಸಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವೈರಸ್: ಬೇರೆ ರಾಜ್ಯಗಳಿಗೆ ಮಾದರಿಯಾಗಲಿದೆ ಕೇರಳದ ಈ ಕ್ರಮಗಳು..!

ವ್ಯಕ್ತಿಯೊಬ್ಬ ಛತ್ರಿ ಬಳಸಿದರೆ, ಇನ್ನೊಬ್ಬ ವ್ಯಕ್ತಿಯಿಂದ ಕನಿಷ್ಠ 3 ಅಡಿ ದೂರದಲ್ಲಿರುತ್ತಾನೆ. ಇದರಿಂದಾಗಿ ಕರೋನಾ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದು ತಪ್ಪುತ್ತದೆ.

ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಗಳಲ್ಲಿ ಒಂದಾದ ಮಹೀಂದ್ರಾ ಅಂಡ್ ಮಹೀಂದ್ರಾದ ಅಧ್ಯಕ್ಷರಾದ ಆನಂದ್ ಮಹೀಂದ್ರಾರವರು ಈ ವೀಡಿಯೊ ನೋಡಿ ಕೇರಳ ರಾಜ್ಯದವರನ್ನು ಅಭಿನಂದಿಸಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್: ಬೇರೆ ರಾಜ್ಯಗಳಿಗೆ ಮಾದರಿಯಾಗಲಿದೆ ಕೇರಳದ ಈ ಕ್ರಮಗಳು..!

ಟ್ವಿಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿ ಟ್ಯಾಕ್ಸಿಗಳಲ್ಲಿನ ಸಾಮಾಜಿಕ ಅಂತರವನ್ನು ತೋರಿಸುವ ವೀಡಿಯೊವನ್ನು ಶೇರ್ ಮಾಡಿದ್ದಾರೆ. ಟ್ಯಾಕ್ಸಿಯಲ್ಲಿ ಅಳವಡಿಸಲಾಗಿರುವ ಫೈಬರ್ ಗ್ಲಾಸ್ ಪ್ರಯಾಣಿಕರು ಹಾಗೂ ಚಾಲಕರ ನಡುವೆ ಅಂತರ ಕಾಯ್ದುಕೊಳ್ಳುವುದು ಸ್ಪಷ್ಟವಾಗಿದೆ.

Article Published On: Thursday, May 7, 2020, 13:39 [IST]
English summary
Kerala call taxi drivers made Fibreglass partition for safety purpose. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+