Just In
Don't Miss!
- News
ನಾಯಿ ಮೇಲೆ ಕಾರು ಹತ್ತಿಸಿದ ನಿವೃತ್ತ ಇನ್ಸ್ಪೆಕ್ಟರ್ ವಿರುದ್ಧ ಕೇಸು !
- Finance
ಸತತ 4ನೇ ದಿನ ಇಳಿಕೆ ಕಂಡು ಒಂದು ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದ ಚಿನ್ನ
- Movies
ಟಾಲಿವುಡ್ ಗೆ ಹಾರಿದ ಮತ್ತೋರ್ವ ಕನ್ನಡದ ನಟಿ
- Lifestyle
ಹೊಟ್ಟೆಯ ಬಲಭಾಗದಲ್ಲಿ ನೋವು, ಈ ತೊಂದರೆಗಳಿರಬಹುದು
- Sports
ವಿರಾಟ್ ಕೊಹ್ಲಿ ಮತ್ತು ನನ್ನ ಮಧ್ಯೆ ಏನೂ ಬದಲಾಗಿಲ್ಲ: ಅಜಿಂಕ್ಯ ರಹಾನೆ
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಯಾ ಪೈಸೆ ಖರ್ಚಿಲ್ಲದೇ ಚಲಿಸುತ್ತಿದೆ ಈ ವೈದ್ಯರ ಕಾರು
ಟಾಟಾ ಮೋಟಾರ್ಸ್ ಈ ವರ್ಷದ ಆರಂಭದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ಹೊಸ ಕಾರುಗಳನ್ನು ಬಿಡುಗಡೆಗೊಳಿಸಿತು. ಇವುಗಳಲ್ಲಿ ಟಾಟಾ ಮೋಟಾರ್ಸ್‌ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿಯಾದ ನೆಕ್ಸಾನ್ ಸಹ ಸೇರಿದೆ.

ನೇರ ಪ್ರತಿಸ್ಪರ್ಧಿಯಲ್ಲದಿದ್ದರೂ ಟಾಟಾ ನೆಕ್ಸಾನ್ ಎಸ್‌ಯುವಿಯು ಹ್ಯುಂಡೈ ಕೋನಾ ಹಾಗೂ ಎಂಜಿ ಝಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ. ಟಾಟಾ ನೆಕ್ಸಾನ್ ದೇಶಿಯ ಮಾರುಕಟ್ಟೆಯಲ್ಲಿರುವ ಗುಣಮಟ್ಟದ ಎಲೆಕ್ಟ್ರಿಕ್ ಎಸ್‌ಯುವಿ ಕೂಡ ಆಗಿದೆ.

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿಯ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.13.99 ಲಕ್ಷಗಳಾದರೆ, ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.16.25 ಲಕ್ಷಗಳಾಗಿದೆ. ಇದುವರೆಗೂ ಟಾಟಾ ಮೋಟಾರ್ಸ್ 2,200ಕ್ಕೂ ಹೆಚ್ಚು ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಮಾರಾಟ ಮಾಡಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಚಾರ್ಜಿಂಗ್ ಸ್ಟೇಷನ್‌ನಂತಹ ಮೂಲಸೌಕರ್ಯಗಳ ಕೊರತೆಯಿಂದಾಗಿ ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲಿ ಇನ್ನೂ ಹೆಚ್ಚು ಜನಪ್ರಿಯವಾಗಿಲ್ಲ. ಇದರ ನಡುವೆಯೂ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿಯು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ.

ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿರುವ ಸೋಲಾರ್ ಸಿಸ್ಟಂ ಮೂಲಕ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಚಾರ್ಜ್ ಮಾಡುತ್ತಿರುವ ವೀಡಿಯೊವೊಂದು ಬಿಡುಗಡೆಯಾಗಿದೆ. ಸೋಲಾರ್ ಸಿಸ್ಟಂ ಕಾರಣದಿಂದಾಗಿ ಅವರು ತಮ್ಮ ನೆಕ್ಸಾನ್ ಎಲೆಕ್ಟ್ರಿಕ್ ಕಾರಿಗಾಗಿ ನಯಾ ಪೈಸೆಯನ್ನು ಖರ್ಚು ಮಾಡುತ್ತಿಲ್ಲ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸಾಮಾನ್ಯವಾಗಿ ಪೆಟ್ರೋಲ್, ಡೀಸೆಲ್ ಕಾರುಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಕಾರುಗಳ ನಿರ್ವಹಣಾ ವೆಚ್ಚ ಕಡಿಮೆ. ಆದರೆ ಎಲೆಕ್ಟ್ರಿಕ್ ಕಾರುಗಳಲ್ಲಿರುವ ಬ್ಯಾಟರಿಯನ್ನು ಚಾರ್ಜ್ ಮಾಡಲು ನಿರ್ದಿಷ್ಟ ಪ್ರಮಾಣದ ವಿದ್ಯುತ್ ವೆಚ್ಚವಾಗುತ್ತದೆ. ಇದಕ್ಕಾಗಿ ತುಸು ಹೆಚ್ಚಿನ ಮೊತ್ತದ ಎಲೆಕ್ಟ್ರಿಕ್ ಬಿಲ್ ಅನ್ನು ಪಾವತಿಸಬೇಕಾಗುತ್ತದೆ.

ಆದರೆ ಈ ವ್ಯಕ್ತಿಯು ಸೌರಶಕ್ತಿಯನ್ನು ಬಳಸುತ್ತಿರುವುದರಿಂದ ಅವರು ತಮ್ಮ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬ್ಯಾಟರಿಯನ್ನು ಚಾರ್ಜ್ ಮಾಡಲು ಯಾವುದೇ ಮೊತ್ತವನ್ನು ಪಾವತಿಸಬೇಕಾಗಿಲ್ಲ. ಈ ಬಗ್ಗೆ ಸೋಲಾರ್ ಕಾರ್ಟ್ ಎಂಬ ಯೂಟ್ಯೂಬ್ ಚಾನೆಲ್ ವೀಡಿಯೊವನ್ನು ಬಿಡುಗಡೆಗೊಳಿಸಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಈ ವೀಡಿಯೊದಲ್ಲಿ ಇತ್ತೀಚೆಗೆ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಖರೀದಿಸಿದ ಕೇರಳದ ವೈದ್ಯರ ಬಗ್ಗೆ ಹೇಳಲಾಗಿದೆ. ಅವರ ಮನೆಯಲ್ಲಿ ಸೋಲಾರ್ ವ್ಯವಸ್ಥೆ ಇರುವುದರಿಂದ, ಎಲೆಕ್ಟ್ರಿಕ್ ಕಾರಿನ ಬ್ಯಾಟರಿಗಳನ್ನು ಚಾರ್ಜ್ ಮಾಡಲು ಅವರು ಯಾವುದೇ ಖರ್ಚು ಮಾಡಬೇಕಾಗಿಲ್ಲ.

ಅವರು ತಮ್ಮ ಮನೆಯಲ್ಲಿ 10 ತಿಂಗಳ ಹಿಂದಷ್ಟೇ ಈ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಿದ್ದರು. ಲಾಕ್ ಡೌನ್ ನಂತರ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದರು. ಮನೆಯಲ್ಲಿ ಸೋಲಾರ್ ಪ್ಯಾನೆಲ್'ಗಳು ಇರುವುದರಿಂದ ಈ ಎಲೆಕ್ಟ್ರಿಕ್ ಕಾರನ್ನು ಚಾರ್ಜ್ ಮಾಡಲು ಅವರು ಒಂದು ಪೈಸೆಯನ್ನೂ ಖರ್ಚು ಮಾಡಬೇಕಾಗಿಲ್ಲ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಸೋಲಾರ್ ಪ್ಯಾನೆಲ್ ಗಳು ಕಾರಿನ ಬ್ಯಾಟರಿಯನ್ನು ಚಾರ್ಜ್ ಮಾಡುವುದಷ್ಟೇ ಅಲ್ಲದೇ ಮನೆ ಬಳಕೆಗಾಗಿ ವಿದ್ಯುತ್ ಉತ್ಪಾದಿಸುತ್ತವೆ. ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಪರ್ಫಾಮೆನ್ಸ್ ತೃಪ್ತಿದಾಯಕವಾಗಿದೆ ಎಂದು ಅವರು ಹೇಳಿದ್ದಾರೆ. ಈ ಕಾರಿನಲ್ಲಿರುವ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಲು 30 ಯುನಿಟ್ ವಿದ್ಯುತ್ ವೆಚ್ಚವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಅವರು ವಾರಕ್ಕೆ ಒಂದು ಬಾರಿ ಮಾತ್ರ ತಮ್ಮ ಕಾರನ್ನು ಚಾರ್ಜ್ ಮಾಡುತ್ತಾರೆ. ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆದ ನಂತರ 250 ಕಿ.ಮೀಗಳವರೆಗೆ ಪ್ರಯಾಣಿಸಬಹುದು ಎಂದು ಅವರು ಹೇಳಿದ್ದಾರೆ. ಇದರ ಜೊತೆಗೆ ಎಲೆಕ್ಟ್ರಿಕ್ ಕಾರುಗಳಿಗೆ ಪೆಟ್ರೋಲ್, ಡೀಸೆಲ್ ಕಾರುಗಳಂತೆ ಸರ್ವಿಸ್'ನ ಅಗತ್ಯವಿಲ್ಲ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ
ಮೆಂಟೆನೆನ್ಸ್ ದೃಷ್ಟಿಯಿಂದಲೂ ಹೆಚ್ಚು ಮೊತ್ತವನ್ನು ಉಳಿಸಬಹುದು. ಈ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಮಾಲೀಕರು ಬ್ಯಾಟರಿಯನ್ನು ಚಾರ್ಜ್ ಮಾಡಲು ಸೋಲಾರ್ ಬದಲು ನಿಯಮಿತ ವಿದ್ಯುತ್ ಸಂಪರ್ಕವನ್ನು ಬಳಸಿದ್ದರೆ ಅಧಿಕ ಮೊತ್ತದ ಎಲೆಕ್ಟ್ರಿಕ್ ಬಿಲ್ ಅನ್ನು ಭರಿಸಬೇಕಾಗಿತ್ತು.

ಆದರೆ ಅವರು ಸೋಲಾರ್ ಪ್ಯಾನೆಲ್'ಗಳಿಂದ ಉತ್ಪತ್ತಿಯಾಗುವ ವಿದ್ಯುಚ್ಛಕ್ತಿಯನ್ನು ಬಳಸುತ್ತಿರುವುದರಿಂದ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಚಾರ್ಜ್ ಮಾಡಲು ಯಾವುದೇ ಖರ್ಚು ಮಾಡಬೇಕಿಲ್ಲ. ಈ ಮೂಲಕ ಒಂದು ಪೈಸೆಯನ್ನೂ ಖರ್ಚು ಮಾಡದೆ ಪರಿಸರ ಸ್ನೇಹಿಯಾದ ಎಲೆಕ್ಟ್ರಿಕ್ ಕಾರನ್ನು ಬಳಸುತ್ತಿದ್ದಾರೆ.