ನಾಲ್ಕು ತಲೆಮಾರುಗಳಿಂದ ಈ ಸೈಕಲ್ ಈ ಕುಟುಂಬದ ನೆಚ್ಚಿನ ವಾಹನ

ಜೂನ್ 3ರಂದು ವಿಶ್ವ ಬೈಸಿಕಲ್ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಬೈಕ್, ಸ್ಕೂಟರ್‌ಗಳು ಬರುವ ಮುನ್ನ ಸೈಕಲ್ ಬಹುತೇಕ ಜನರ ನೆಚ್ಚಿನ ವಾಹನವಾಗಿತ್ತು. ಈಗಲೂ ಜನರು ವೀಕೆಂಡ್ ಟ್ರಿಪ್‌ಗಳಿಗೆ ಹಾಗೂ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ಸೈಕಲ್‌ಗಳನ್ನು ಬಳಸುತ್ತರಾದರೂ ಅವುಗಳನ್ನೇ ಮೊದಲ ಆಯ್ಕೆಯನ್ನಾಗಿ ಪರಿಗಣಿಸುವುದಿಲ್ಲ.

ನಾಲ್ಕು ತಲೆಮಾರುಗಳಿಂದ ಈ ಸೈಕಲ್ ಈ ಕುಟುಂಬದ ನೆಚ್ಚಿನ ವಾಹನ

ಒಂದು ಬಾರಿ ಖರೀದಿಸಿದ ಸೈಕಲ್ ಅನ್ನು ಕೆಲವು ತಿಂಗಳು ಅಥವಾ ವರ್ಷಗಳ ನಂತರ ಮಾರಾಟ ಮಾಡುವುದುಂಟು. ಆದರೆ ಒಂದು ಕುಟುಂಬದ ನಾಲ್ಕು ತಲೆಮಾರುಗಳು ಒಂದೇ ಸೈಕಲ್ ಅನ್ನು ಬಳಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಸಂಗತಿ ಬೆಳಕಿಗೆ ಬಂದಿರುವುದು ದೇವರ ಸ್ವಂತ ನಾಡು ಎಂದೇ ಕರೆಯಲಾಗುವ ಕೇರಳದಿಂದ.

ನಾಲ್ಕು ತಲೆಮಾರುಗಳಿಂದ ಈ ಸೈಕಲ್ ಈ ಕುಟುಂಬದ ನೆಚ್ಚಿನ ವಾಹನ

ಈ ಬಗ್ಗೆದಿ ನ್ಯೂಸ್ ಮಿನಿಟ್ ವರದಿ ಮಾಡಿದೆ. 1950ರಲ್ಲಿ ಮಾರ್ಷಲ್ ಎ ಪಿರೇರಾರವರು ತನ್ನ ಸ್ನೇಹಿತರಾದ ಜಾನ್ ಎಂಬುವವರಿಂದ ಈ ಸೈಕಲ್ ಅನ್ನು ಉಡುಗೊರೆಯಾಗಿ ಪಡೆದರು.ಆಗ ಪಿರೇರಾರವರು ಮುನ್ನಾರ್‌ನಲ್ಲಿರುವ ಕಣ್ಣನ್ ದೇವನ್ ಹಿಲ್ಸ್ ಟೀ ಕಂಪನಿಯಲ್ಲಿ ಹಿರಿಯ ಕಾರ್ಯದರ್ಶಿಯಾಗಿದ್ದರು.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ನಾಲ್ಕು ತಲೆಮಾರುಗಳಿಂದ ಈ ಸೈಕಲ್ ಈ ಕುಟುಂಬದ ನೆಚ್ಚಿನ ವಾಹನ

ಅವರು ಉಡುಗೊರೆಯಾಗಿ ಪಡೆದ ಸನ್ ಬ್ರಾಂಡ್ ಸೈಕಲ್ ಅನ್ನು ಇಂಗ್ಲೆಂಡ್‌ನ ಕಾರ್ಲ್ಟನ್ ಕಾರ್ಖಾನೆಯಲ್ಲಿ ತಯಾರಿಸಲಾಗಿತ್ತು. ಈ ಕಾರಣಕ್ಕೆ ಪಿರೇರಾರವರು ಈ ಸೈಕಲ್ ಅನ್ನು ಪ್ರತಿಷ್ಠಿತ ಉಡುಗೊರೆಯಾಗಿ ಪರಿಗಣಿಸಿದರು.

ನಾಲ್ಕು ತಲೆಮಾರುಗಳಿಂದ ಈ ಸೈಕಲ್ ಈ ಕುಟುಂಬದ ನೆಚ್ಚಿನ ವಾಹನ

ಮಾರ್ಷಲ್ ಪಿರೇರಾ ನಂತರ ಈ ಸೈಕಲ್ ಅನ್ನು ನಂತರದ ಮೂರು ತಲೆಮಾರಿನವರು ಬಳಸಿದ್ದಾರೆ. ಅವರ ಮೂವರು ಮಕ್ಕಳಾದ ಅಲೆಕ್ಸಾಂಡರ್ ಶಾರ್ಟ್‌ಪೂಲ್, ಶೆರ್ಲಿ ಪಾಲ್ ಹಾಗೂಸಿರಿಲ್ ಪಿರೇರಾ ಈ ಸೈಕಲ್ ಅನ್ನು ಬಳಸಿದ್ದಾರೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ನಾಲ್ಕು ತಲೆಮಾರುಗಳಿಂದ ಈ ಸೈಕಲ್ ಈ ಕುಟುಂಬದ ನೆಚ್ಚಿನ ವಾಹನ

ಅವರ ಮಕ್ಕಳ ನಂತರ ಅವರ ಮೊಮ್ಮಕಳು ಸಹ ಈ ಸೈಕಲ್ ಅನ್ನು ಬಳಸಿದ್ದರು. ಈಗ ಅವರ ನಾಲ್ಕನೇ ತಲೆಮಾರಿನವರು ಅಂದರೆ ಅವರ ಮರಿ ಮಕ್ಕಳು ಸಹ ಬಳಸುತ್ತಿದ್ದಾರೆ. ಒಮ್ಮೆ ಈ ಸೈಕಲ್‌ನಲ್ಲಿದ್ದ ಹೆಡ್‌ಲೈಟ್‌ಗಳನ್ನು ಕಳವು ಮಾಡಲಾಗಿತ್ತು.

ನಾಲ್ಕು ತಲೆಮಾರುಗಳಿಂದ ಈ ಸೈಕಲ್ ಈ ಕುಟುಂಬದ ನೆಚ್ಚಿನ ವಾಹನ

ಈ ಸೈಕಲ್‌ನಲ್ಲಿದ್ದ ಟಯರ್‌ಗಳನ್ನು ಹಲವು ಬಾರಿ ಬದಲಿಸಲಾಗಿತ್ತು. ಈ ಎರಡನ್ನು ಹೊರತುಪಡಿಸಿ 70 ವರ್ಷಗಳಿಂದ ಈ ಸೈಕಲ್‌ನಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ನಾಲ್ಕು ತಲೆಮಾರುಗಳಿಂದ ಈ ಸೈಕಲ್ ಈ ಕುಟುಂಬದ ನೆಚ್ಚಿನ ವಾಹನ

ತಿರುವನಂತಪುರಂನ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮಾರ್ಷಲ್ ಪಿರೇರಾರವರ ಮೊಮ್ಮಗ ಜಾನ್ ಜೆ ಪಾಲ್, ವಿಶ್ವ ಬೈಸಿಕಲ್ ದಿನದಂದು ತಮ್ಮ ಕುಟುಂಬದ ಬಳಿಯಿರುವ ಈ ಸೈಕಲ್‌ನ ಹಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದರು.

ನಾಲ್ಕು ತಲೆಮಾರುಗಳಿಂದ ಈ ಸೈಕಲ್ ಈ ಕುಟುಂಬದ ನೆಚ್ಚಿನ ವಾಹನ

ಜಾನ್ ಜೆ ಪಾಲ್, ಮಾರ್ಷಲ್ ಪಿರೇರಾರವರ ಎರಡನೇ ಮಗ ಶೆರ್ಲಿ ಪಾಲ್ ಅವರ ಹಿರಿಯ ಮಗ. ಈ ಬಗ್ಗೆ ಮಾತನಾಡಿರುವ ಜಾನ್ ಜೆ ಪಾಲ್, ನನ್ನ ಅಜ್ಜ ಪ್ರತಿದಿನ ಸಂಜೆ ಈ ಬೈಸಿಕಲ್‌ನಲ್ಲಿ ಕಣ್ಣನ್ ದೇವನ್ ಕ್ಲಬ್‌ಗೆ ಹೋಗಿ ಟೆನಿಸ್ ಆಡುತ್ತಿದ್ದರು. ನನ್ನ ಚಿಕ್ಕಪ್ಪ, ನನ್ನ ತಾಯಿ ಸಹ ಈ ಸೈಕಲ್ ಬಳಸಿದ್ದಾರೆ. ನನ್ನ ಚಿಕ್ಕಪ್ಪಂದಿರು ಮುನ್ನಾರ್‌ಗೆ ಬಂದಾಗಲೆಲ್ಲಾ ಈ ಸೈಕಲ್ ಅನ್ನು ಬಳಸುತ್ತಿದ್ದರು.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ನಾಲ್ಕು ತಲೆಮಾರುಗಳಿಂದ ಈ ಸೈಕಲ್ ಈ ಕುಟುಂಬದ ನೆಚ್ಚಿನ ವಾಹನ

ನನ್ನ ತಾಯಿಯ ಸಹೋದರ ಅಲೆಕ್ಸಾಂಡರ್‌ರವರ ಮಗ ಆಲ್ಡ್ರಿನ್ ಅಲೆಕ್ಸಾಂಡರ್ ಹಾಕಿ ಆಟಗಾರರಾಗಿದ್ದು, ಭಾರತ ತಂಡದ ನಾಯಕರಾಗಿದ್ದರು. ನನ್ನ ತಾಯಿಯ ಇನ್ನೊಬ್ಬ ಸಹೋದರ ಸಿರಿಲ್ ಮ್ಯಾಟುಪೆಟ್ಟಿಗೆ ತೆರಳಿದ್ದರು ಎಂದು ಹೇಳಿದ್ದಾರೆ.

ನಾಲ್ಕು ತಲೆಮಾರುಗಳಿಂದ ಈ ಸೈಕಲ್ ಈ ಕುಟುಂಬದ ನೆಚ್ಚಿನ ವಾಹನ

1981ರಲ್ಲಿ ಮಾರ್ಷಲ್ ಪಿರೇರಾರವರ ಕುಟುಂಬವು ತಿರುವನಂತಪುರಂಗೆ ಸ್ಥಳಾಂತರಗೊಂಡಾಗ ಈ ಸೈಕಲ್ ಅನ್ನು ಅವರೊಂದಿಗೆ ತೆಗೆದುಕೊಂಡು ಹೋಗಲಾಯಿತು. ಮಾರ್ಷಲ್ ಪಿರೇರಾರವರ ಮಕ್ಕಳು, ಮೊಮ್ಮಕ್ಕಳು ಶಾಲೆ, ಕಾಲೇಜಿಗೆ ಈ ಸೈಕಲ್‌ನಲ್ಲಿಯೇ ಹೋಗುತ್ತಿದ್ದರು.

Most Read Articles

Kannada
English summary
Kerala family uses the same bicycle for 70 years. Read in Kannada.
Story first published: Wednesday, June 10, 2020, 10:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X