ಕರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಇನೊವಾ ಕ್ರಿಸ್ಟಾ ನೀಡಿದ ಪೀಠೋಪಕರಣ ಅಂಗಡಿ ಮಾಲೀಕ
ಭಾರತದಲ್ಲಿ ಕರೋನಾ ವೈರಸ್ ಸೋಂಕಿತರ ಸಂಖ್ಯೆ ವೇಗವಾಗಿ ಏರುತ್ತಿದೆ. ಕೋವಿಡ್ -19 ವೈರಸ್ ಹರಡುವುದನ್ನು ತಡೆಯಲು ಮೇ 3ರವರೆಗೆ ಇದ್ದ ಲಾಕ್‌ಡೌನ್ ಅನ್ನು ಮೇ 17ರವರೆಗೆ ವಿಸ್ತರಿಸಲಾಗಿದೆ. ಈ ಕಾರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲಾ ನಾಗರಿಕರು ತಮ್ಮ ಮನೆಗಳ ಒಳಗೆ ಇರಬೇಕು ಎಂದು ಸೂಚಿಸಿವೆ.

ಕರೋನಾ ವೈರಸ್ ನಿರ್ಮೂಲನೆಗೆ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಹಗಲು ಇರುಳು ಎನ್ನದೇ ಶ್ರಮಿಸುತ್ತಿದ್ದಾರೆ. ಕರೋನಾ ವೈರಸ್ ಹರಡುವುದನ್ನು ತಡೆಯಲು ಪೊಲೀಸರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಜನರನ್ನು ತಮ್ಮ ಮನೆಯೊಳಗೆ ಇರಿಸುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ.

ಲಾಕ್‌ಡೌನ್ ನಡುವೆಯೂ ಅನೇಕರು ಅನಗತ್ಯವಾಗಿ ತಿರುಗಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ಸಾಗಿಸುವವರು, ವೈದ್ಯರು, ಪೊಲೀಸ್, ಲೈನ್ ಟ್ರಕ್ ಹಾಗೂ ಸ್ವಚ್ವಗೊಳಿಸುವ ಕಾರ್ಮಿಕರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಅನೇಕರು ಸರ್ಕಾರಕ್ಕೆ ಹಣಕಾಸಿನ ನೆರವು ನೀಡುವುದರೊಂದಿಗೆ ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ. ಅನೇಕ ವಾಹನ ತಯಾರಕ ಕಂಪನಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹಣಕಾಸಿನ ನೆರವು ನೀಡುತ್ತಿವೆ. ಜೊತೆಗೆ ಆಟೋಮೋಟಿವ್ ನೆರವನ್ನೂ ನೀಡುತ್ತಿವೆ.

ಕೆಲವೇ ದಿನಗಳ ಹಿಂದೆ, ಎಂಜಿ ಮೋಟರ್ ಇಂಡಿಯಾವು ಕೋವಿಡ್ -19 ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರು ಬಳಸಲು 100 ಹೆಕ್ಟೇರ್ ಜಮೀನು ಒದಗಿಸುವುದಾಗಿ ಘೋಷಿಸಿತ್ತು. ದೊಡ್ಡ ಕಂಪನಿಗಳು ಈ ರೀತಿಯ ನೆರವು ನೀಡುವುದರಲ್ಲಿ ಯಾವುದೇ ಆಶ್ಚರ್ಯವೇನಿಲ್ಲ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಆದರೆ ಸಾಮಾನ್ಯ ಜನರು ಸ್ವಯಂಪ್ರೇರಿತರಾಗಿ ನೆರವಾಗುವುದು ನಿಜಕ್ಕೂ ಆಶ್ಚರ್ಯವನ್ನುಂಟು ಮಾಡುತ್ತದೆ. ಈ ರೀತಿಯ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಭಾರತದ ಉಳಿದ ರಾಜ್ಯಗಳಲ್ಲಿ ಕೋವಿಡ್ -19 ವೈರಸ್ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದ್ದರೆ, ಕೇರಳ ರಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ.

ಕರೋನಾ ವೈರಸ್ ಹರಡುವುದನ್ನು ತಡೆಗಟ್ಟುವುದರತ್ತ ಹಾಗೂ ಸೋಂಕಿತರನ್ನು ಗುಣಪಡಿಸುವುದರತ್ತ ಕೇರಳ ಸರ್ಕಾರವು ಗಮನ ಹರಿಸಿದೆ. ಕೇರಳ ಸರ್ಕಾರದ ಕ್ರಮಗಳು ಹಾಗೂ ಜನರ ಸಹಕಾರದಿಂದಾಗಿ ಕೇರಳದಲ್ಲಿ ಕರೋನಾ ವೈರಸ್ ಹರಡುವುದು ನಿಯಂತ್ರಣಕ್ಕೆ ಬರುತ್ತಿದೆ. ವೈದ್ಯರು, ಆರೋಗ್ಯ ಕಾರ್ಯಕರ್ತರು, ಪೊಲೀಸರು ಹಾಗೂ ಸ್ವಯಂಸೇವಕರ ಕೆಲಸದ ಸಂಪೂರ್ಣ ಲಾಭವನ್ನು ಕೇರಳ ಪಡೆದುಕೊಂಡಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಪೀಠೋಪಕರಣ ಅಂಗಡಿಯ ಮಾಲೀಕರೊಬ್ಬರು ತಮ್ಮ ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರನ್ನು ಪೊಲೀಸರಿಗೆ ನೀಡಿದ್ದಾರೆ. ಈ ಘಟನೆ ತ್ರಿಶೂರ್ ಜಿಲ್ಲೆಯ ಪುದುಕ್ಕಾಡ್‌ನಲ್ಲಿ ನಡೆದಿದೆ. ಪುದುಕ್ಕಾಡ್‌ನಲ್ಲಿ ಲಾಕ್‌ಡೌನ್ ಜಾರಿಗೊಳಿಸಲು ಅಲ್ಲಿನ ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ.

ಆದರೆ ತಮ್ಮ ಕರ್ತವ್ಯ ನಿರ್ವಹಿಸಲು ಅವರಿಗೆ ವಾಹನ ಕೊರತೆ ಉಂಟಾಗಿದೆ ಎಂಬ ಬಗ್ಗೆ ವರದಿಗಳಾಗಿದ್ದವು. ಈ ವಿಷಯ ತಿಳಿದ ಪೀಠೋಪಕರಣ ಅಂಗಡಿಯ ಮಾಲೀಕ ಪುಲ್ಲೊಕಾರನ್ ದೇವಸ್ಸಿರವರು ತಮ್ಮ ಟೊಯೊಟಾ ಇನೊವಾ ಕ್ರಿಸ್ಟಾವನ್ನು ಪೊಲೀಸರಿಗೆ ನೀಡಿದ್ದಾರೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. ಇದಕ್ಕೆ ಪೊಲೀಸ್ ಅಧಿಕಾರಿಗಳು ಕೂಡ ಒಪ್ಪಿಗೆ ನೀಡಿದ್ದಾರೆ. ಇದರ ಜೊತೆಗೆ ಕಾರನ್ನು ತಾವೇ ಚಾಲನೆ ಮಾಡುವುದಲ್ಲದೇ ಇಂಧನ ವೆಚ್ಚವನ್ನು ಭರಿಸಲಾಗುವುದೆಂದು ಹೇಳಿದ್ದಾರೆ.

ದೇವಸ್ಸಿ ಅವರ ಈ ನಿರ್ಧಾರಕ್ಕೆ ಕೇರಳ ಪೊಲೀಸರು ಹಾಗೂ ಅಲ್ಲಿನ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಈ ಬಗ್ಗೆ ಮಾತೃಭೂಮಿ ನ್ಯೂಸ್ ವರದಿ ಮಾಡಿದೆ. ಕರೋನಾ ತಡೆಗಟ್ಟಲು ಕೇರಳ ಸರ್ಕಾರದ ಕ್ರಮಗಳ ಜೊತೆಗೆ ಜನರ ಕೊಡುಗೆಗಳು ಸಹ ಕಾರಣವಾಗಿವೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಪುಲ್ಲೊಕಾರನ್ ದೇವಸ್ಸಿರವರು ಪೊಲೀಸ್ ಇಲಾಖೆಗೆ ನೀಡಲಾಗಿರುವ ಟೊಯೊಟಾ ಇನೊವಾ ಕ್ರಿಸ್ಟಾ ಭಾರತೀಯರ ನೆಚ್ಚಿನ ಕಾರುಗಳಲ್ಲಿ ಒಂದಾಗಿದೆ. ಟೊಯೊಟಾ ಇನೊವಾ ಕ್ರಿಸ್ಟಾ ಹಲವಾರು ಸುರಕ್ಷತಾ ಫೀಚರ್ ಹಾಗೂ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ಆರಾಮದಾಯಕವಾದ ಕಾರನ್ನು ಬಯಸುವವರಿಗೆ ಇನ್ನೋವಾ ಕ್ರಿಸ್ಟಾ ಮೊದಲ ಆಯ್ಕೆಯಾಗಿದೆ.

ಟೊಯೊಟಾ ಇನೊವಾ ಕ್ರಿಸ್ಟಾ ಕಾರಿನ ನಿರ್ವಹಣಾ ವೆಚ್ಚವೂ ಕಡಿಮೆ. ಇದರಿಂದಾಗಿ ಟೊಯೊಟಾ ಇನೊವಾ ಕ್ರಿಸ್ಟಾ ಟ್ಯಾಕ್ಸಿ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿರುವ ಕಾರುಗಳಲ್ಲಿ ಒಂದಾಗಿದೆ. ಪೊಲೀಸರಿಗೆ ಇಂತಹ ಸುಸಜ್ಜಿತ ಕಾರನ್ನು ನೀಡಿದ ಪುಲ್ಲೊಕಾರನ್ ದೇವಸ್ಸಿರವರಿಗೆ ಅಭಿನಂದನೆಗಳು.


Click it and Unblock the Notifications