ಎಷ್ಟೇ ಜನ ಬಿಟ್ಟೋದರೂ ಮೊದಲಿನಿಂದ ಕಂಪನಿ ಜೊತೆಗಿದ್ದ ಉದ್ಯೊಗಿಗೆ ದುಬಾರಿ ಕಾರು ಗಿಫ್ಟ್ ನೀಡಿದ ಕಂಪನಿ

ವಿಶ್ವದಾದ್ಯಂತ ಇತ್ತೀಚೆಗೆ ಐಟಿ ಕಂಪೆನಿಗಳು ತನ್ನ ಕಂಪೆನಿಯ ಏಳಿಗೆಗೆ ಕಂಪೆನಿಯ ಉದ್ಯೋಗಿಗಳ ವಜಾ ನಿರ್ಧಾರವನ್ನು ಕೈಗೊಂಡಿದೆ. ಅದರಲ್ಲೂ ಗೂಗಲ್​, ಅಮೆಜಾನ್​, ಟ್ವಿಟರ್ ನಂತಹ ದೊಡ್ಡ ದೊಡ್ಡ ಕಂಪನಿಗಳು ಸಾವಿರಾರು ಉದ್ಯೋಗಿಗಳ ವಜಾ ಮಾಡಿದ್ದಾರೆ. ಜಾಗತಿಕ ಆರ್ಥಿಕ ಅನಿಶ್ಚಿತತೆ ಮತ್ತು ವೆಚ್ಚ ಕಡಿತದ ಉದ್ದೇಶದೊಂದಿಗೆ ಕಂಪನಿಗಳು ಉದ್ಯೋಗಿಗಳ ವಜಾಗೊಳಿಸುತ್ತಿವೆ.

ವಿಶ್ವದಾದ್ಯಂತ ಐಟಿ ಉದ್ಯೋಗದಾತರು ಸಿಬ್ಬಂದಿಯನ್ನು ವಜಾ ಮಾಡುವಗಾ, ಕೇರಳದ ಮೂಲದ ಐಟಿ ಸಂಸ್ಥೆಯು ತನ್ನ ಹಳೆಯ ಉದ್ಯೋಗಿಗೆ ಹೊಚ್ಚಹೊಸ ಮರ್ಸಿಡಿಸ್-ಬೆಂಝ್ ಸಿ-ಕ್ಲಾಸ್ ಕಾರನ್ನು ಉಡುಗೊರೆಯಾಗಿ ನೀಡಿದೆ. ಕೊರಟ್ಟಿ ಇನ್ಫೋಪಾರ್ಕ್‌ನಿಂದ ಜಾಗತಿಕ IT ಪರಿಹಾರ ಪೂರೈಕೆದಾರರಾಗಿರುವ Webandcrafts ತನ್ನ ಹಳೆಯ ಮತ್ತು ನಿಷ್ಠೆಯ ಉದ್ಯೋಗಿಗೆ ಮರ್ಸಿಡಿಸ್-ಬೆಂಝ್ ಸಿ-ಕ್ಲಾಸ್ ಕಾರನ್ನು ಉಡುಗೊರೆಯಾಗಿ ನೀಡಿದೆ. ಕಂಪನಿಯು ಹೇಳಿಕೆಯಲ್ಲಿ, ತನ್ನ ಉದ್ಯೋಗಿಗಳ ಕಠಿಣ ಪರಿಶ್ರಮವನ್ನು ಗುರುತಿಸುವ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದೆ.

ಮೊದಲಿನಿಂದ ಕಂಪನಿ ಜೊತೆಗಿದ್ದ ಉದ್ಯೊಗಿಗೆ ಕಾರು ಗಿಫ್ಟ್ ನೀಡಿದ ಕಂಪನಿ

ಕಂಪನಿಯ ಮೊದಲ ಉದ್ಯೋಗಿಯಾಗಿರುವ ಚೀಫ್ ಕ್ರಿಯೆಟಿವ್ ಅಧಿಕಾರಿ ಕ್ಲಿಂಟ್ ಆಂಟೋನಿ ಅವರಿಗೆ ಈ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ. ಇವರು 2012 ರಲ್ಲಿ ಕಂಪನಿಗೆ ಸೇರಿದಾಗಿನಿಂದ ಅದೇ ಕಂಪನಿಯಲ್ಲಿಯೇ ಉಳಿದಿದ್ದಾರೆ. ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಅಬಿನ್ ಜೋಸ್ ಟಾಮ್ ಅವರು ಮಾತಾನಾಡಿ, ನಮ್ಮ ಉದ್ಯೋಗಿಗಳು ನಮ್ಮ ಕಂಪನಿಯ ಬೆನ್ನೆಲುಬಾಗಿದ್ದಾರೆ ಮತ್ತು ಅಂತಹ ಸಮರ್ಪಿತ ಮತ್ತು ಕಠಿಣ ಪರಿಶ್ರಮದ ತಂಡವನ್ನು ಹೊಂದಲು ನಮಗೆ ಹೆಮ್ಮೆ ಇದೆ. ಕ್ಲಿಂಟ್ ಮೊದಲಿನಿಂದಲೂ ನಮ್ಮೊಂದಿಗಿದ್ದಾರೆ ಮತ್ತು ನಮ್ಮ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಅವರ ಪ್ರಯತ್ನಗಳು ಮತ್ತು ನಿಷ್ಠೆಗೆ ನಮ್ಮ ಮೆಚ್ಚುಗೆಯನ್ನು ತೋರಿಸಲು ನಾವು ಬಯಸುತ್ತೇವೆ. ಇದಕ್ಕಾಗಿ ಅವರಿಗೆ ನಾವು ಮರ್ಸಿಡಿಸ್-ಬೆಂಝ್ ಸಿ-ಕ್ಲಾಸ್ ಕಾರನ್ನು ಉಡುಗೊರೆಯಾಗಿ ನೀಡುವುದಕ್ಕಿಂತ ಉತ್ತಮವಾದ ಆಯ್ಕೆ ಯಾವುದು ಇದೆ ಎಂದು ಹೇಳಿದರು. ಉದ್ಯೋಗಿಗೆ ನೀಡಿದ ಮರ್ಸಿಡಿಸ್-ಬೆಂಝ್ ಸಿ-ಕ್ಲಾಸ್ ಕಾರಿನ ನಿಖರವಾದ ರೂಪಾಂತರದ ಬಗ್ಗೆ ಮಾಹಿತಿ ಇಲ್ಲ. ಭಾರತದಲ್ಲಿ ಮರ್ಸಿಡಿಸ್-ಬೆಂಝ್ ಸಿ-ಕ್ಲಾಸ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.71 ಲಕ್ಷವಾಗಿದೆ. ಈ ಐಷಾರಾಮಿ ಕಾರಿನ ಟಾಪ್ ವೆರಿಯಂಟ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.78 ಲಕ್ಷವಾಗಿದೆ.

ಈ ಹಿಂದೆಯು ಕೇರಳದ ಒಬ್ಬ ಉದ್ಯೋಗಿಯೊಬ್ಬರಿಗೆ ದುಬಾರಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಬೆಂಝ್ ಜಿಎಲ್‌ಎ ಎಸ್‍ಯುವಿ ಕಾರು ಉಡುಗೊರೆಯಾಗಿ ನೀಡಿದ್ದರು. ಸಿ.ಆರ್. ಅನೀಶ್ ಎಂಬ ವ್ಯಕ್ತಿ ಕಳೆದ 22 ವರ್ಷಗಳಿಂದ ಉದ್ಯಮಿ ಎಕೆ ಶಾಜಿ ಅವರ ಸಂಸ್ಥೆಯ ಮುಖ್ಯ ವ್ಯವಹಾರ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು ಉದ್ಯಮಿ ಎ.ಕೆ.ಶಾಜಿ.ಅವರು ತನ್ನ ಉದ್ಯೋಗಿ ಸಿ.ಆರ್. ಅನೀಶ್ ಅವರ ಕೆಲಸ ನಿಷ್ಠೆಗಾಗಿ ಐಷಾರಾಮಿ ಮರ್ಸಿಡಿಸ್ ಬೆಂಝ್ ಜಿಎಲ್‌ಎ ಎಸ್‍ಯುವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಶಾಜಿ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ವೀಡಿಯೊವನ್ನು ಸಹ ಹಂಚಿಕೊಂಡಿದ್ದರು. ಸಿಆರ್ ಅನೀಶ್ ಅವರಿಗಾಗಿ ಸಣ್ಣ ಸಮಾರಂಭವ ಏರ್ಪಡಿಸಿ ಕೇಕ್ ಕತ್ತರಿಸಿ ಬಳಿಕ ಈ ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರನ್ನು ಹಸ್ತಾಂತರಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅನಿ... ಕಳೆದ 22 ವರ್ಷಗಳಿಂದ ನೀವು ನನಗೆ ಬಲವಾದ ಬೆನ್ನೆಲುಬಾಗಿ ಇದ್ದೀರಿ. ನಿಮ್ಮ ಹೊಸ ಪ್ರಯಾಣದ ಪಾಲುದಾರನನ್ನು ನೀವು ಪ್ರೀತಿಸುತ್ತಿದ್ದೀರಿ ಎಂದು ಭಾವಿಸುತ್ತೇವೆ ಎಂದು ಉದ್ಯಮಿ ಇನ್ಸ್ಟಾಗ್ರಾಮ್‌ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

ಸಿ.ಆರ್. ಅನೀಶ್ ಅವರು ಉದ್ಯಮಿ ಶಾಜಿ ತನ್ನ ರಿಟೇಲ್ ಕಂಪನಿ MyG ಅನ್ನು ಪ್ರಾರಂಬಿಸುವ ಮೊದಲೇ ಶಾಜಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಶಾಜಿ ತನ್ನ ಉದ್ಯೋಗಿಗೆ ಕಾರನ್ನು ಉಡುಗೊರೆಯಾಗಿ ನೀಡಿರುವುದು ಇದೇ ಮೊದಲಲ್ಲ. ಎರಡು ವರ್ಷಗಳ ಹಿಂದೆ ಅವರು ತಮ್ಮ 6 ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಉದ್ಯೋಗಿಗಳು ಸಂಸ್ಥೆಯಲ್ಲಿ ಸಂತೋಷವಾಗಿರಬೇಕು ಎಂದು ಶಾಜಿ ಅರ್ಥಮಾಡಿಕೊಂಡಂತೆ ತೋರುತ್ತದೆ. ಒಬ್ಬ ವ್ಯಕ್ತಿಯು ಒಂದೇ ಸಂಸ್ಥೆಯಲ್ಲಿ ದೀರ್ಘಕಾಲ ಉಳಿಯಲು ನಿರ್ಧರಿಸುವ ನಿರ್ಣಾಯಕ ಅಂಶಗಳಲ್ಲಿ ಇದು ಒಂದಾಗಿದೆ.

ಮೇಲೆ ಹೇಳಿದಂತೆ, ಅನೀಶ್ ಕಳೆದ 22 ವರ್ಷಗಳಿಂದ ಶಾಜಿಯ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ವಿಬ್ಯಾಂಡ್‌ಕ್ರಾಫ್ಟ್ ಕಂಪನಿಯು ಗಿಫ್ಟ್ ನೀಡಿದ ಬಗ್ಗೆ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲ ಕಂಪನಿಗಳು ಆರ್ಥಿಕ ಹಿಂಜರಿತ ಹೆಸರಲ್ಲಿ ಉದ್ಯೋಗಿಗಳನ್ನು ವಜಾ ಮಾಡುತ್ತಿದೆ. ಇದರ ನಡುವೆ ವಿಬ್ಯಾಂಡ್‌ಕ್ರಾಫ್ಟ್ ದುಬಾರಿ ಮರ್ಸಿಡಿಸ್ ಬೆಂಝ್ ಕಾರು ಗಿಫ್ಟ್ ನೀಡಿರುವುದು ಮಾದರಿ ನಡೆ ಎಂದು ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Article Published On: Friday, February 10, 2023, 18:30 [IST]
English summary
Kerala it company webandcraft gifted mercedes benz car to its first employee details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+