ಲಾಕ್‌ಡೌನ್​ನಲ್ಲಿ ಸ್ವಂತ ವಿಮಾನ ತಯಾರಿಸಿ ಯುರೋಪ್‌ ಪ್ರವಾಸ ಮಾಡಿ ವಿಶ್ವದ ಗಮನ ಸೆಳೆದ ಕೇರಳದ ವ್ಯಕ್ತಿ

ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ ಕೆಲವರು ವರ್ಕ್ ಫ್ರಂ ಹೋಂ ಕೆಲಸ ಜೊತೆಗೆ ಒಟಿಟಿ ಮಾಧ್ಯಮದಲ್ಲಿ ಇರುವ ಸಿನೆಮಾ ಮತ್ತು ಶೋ ಗಳನ್ನು ನೋಡಿ ಸಮಯ ಕಳೆಯುತ್ತಿದ್ದರು. ಇನ್ನೂ ಕೆಲವರು ಹೊಸ ಅಡುಗೆಗಳನ್ನು ಟ್ರೈ ಮಾಡಿ ಸವಿಯುತ್ತಿದ್ದರು. ಆದರೆ ಕೇರಳದ ವ್ಯಕ್ತಿಯೊಬ್ಬ ವಿಮಾನವೊಂದನ್ನು ತಯಾರಿಸಿ ಕುಟುಂಬದೊಂದಿಗೆ ಯುರೋಪ್ ಪ್ರವಾಸ ತೆರಳಿದ್ದಾರೆ.

ಲಾಕ್‌ಡೌನ್​ನಲ್ಲಿ ಸ್ವಂತ ವಿಮಾನ ತಯಾರಿಸಿ ಯುರೋಪ್‌ ಪ್ರವಾಸ ಮಾಡಿ ವಿಶ್ವದ ಗಮನ ಸೆಳೆದ ಕೇರಳದ ವ್ಯಕ್ತಿ

ಕೊರೋನಾ ಸೋಂಕಿನ ಹಾವಳಿಯಿಂದ ಇಡೀ ಜಗತ್ತೇ ಸ್ತಬ್ಧವಾಗಿತ್ತು. ಕೇಂದ್ರ ಸರ್ಕಾರವು ಆ ಸಂದರ್ಭದಲ್ಲಿ ಲಾಕ್‌ಡೌನ್ ಅನ್ನು ಹೇರಿತ್ತು. ಆ ಸಮಯದಲ್ಲಿ ಪ್ರತಿಯೊಬ್ಬರು ಮನೆಯಲ್ಲೇ ಕಾಲ ಕಳೆಯಬೇಕಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಈ ಸಂದರ್ಭದಲ್ಲಿ ಕೆಲವರು ಸುಮ್ನೆ ಸಮಯ ವ್ಯರ್ಥ ಮಾಡಿದರೆ, ಇನ್ನೂ ಕೆಲವರು ಆ ಸಮಯವನ್ನು ಸದಪಯೋಗವನ್ನು ಪಡಿಸಿಕೊಂಡಿದ್ದಾರೆ. ಕೇರಳದ ವ್ಯಕ್ತಿಯೊಬ್ಬರು ಲಾಕ್‌ಡೌನ್ ಸಮಯದಲ್ಲಿ ಕುಟುಂಬದವರೊಡನೆ ಕಳೆದು ದೊಡ್ಡ ಸಾಧನೆಯನ್ನು ಮಾಡಿದ್ದಾರೆ.

ಲಾಕ್‌ಡೌನ್​ನಲ್ಲಿ ಸ್ವಂತ ವಿಮಾನ ತಯಾರಿಸಿ ಯುರೋಪ್‌ ಪ್ರವಾಸ ಮಾಡಿ ವಿಶ್ವದ ಗಮನ ಸೆಳೆದ ಕೇರಳದ ವ್ಯಕ್ತಿ

ಕೇರಳ ಮೂಲದ ಅಶೋಕ್ ಥಮರಕ್ಷನ್ ನಾಲ್ಕು ಸೀಟಿನ ವಿಮಾನ ತಯಾರಿಸಿದಾರೆ. ಇವರು ಕೇರಳದ ಶಾಸಕ ವಿ ಥಾಮರಾಕ್ಷನ್ ಅವರ ಪುತ್ರನಾಗಿದ್ದಾರೆ. ಅಶೋಕ್ ಥಮರಕ್ಷನ್ ಪಾಲಕ್ಕಾಡ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಟೆಕ್ ಮುಗಿಸಿದ ನಂತರ ಸ್ನಾತಕೋತ್ತರ ಪದವಿಗಾಗಿ 2006 ರಲ್ಲಿ ಯುಕೆಗೆ ತೆರಳಿದ್ದರು. ನಂತರ ಯುಕೆಯಲ್ಲೇ ಅವರು ನೆಲಿಸಿದ್ದಾರೆ. ಕೊರೋನಾ ಸಮಯದಲ್ಲಿ ಖಾಸಗಿ ವಿಮಾನವನ್ನು ತಯಾರಿಸುವ ಅಲೋಚನೆ ಅವರಿಗೆ ಬಂದಿದೆ.

ಲಾಕ್‌ಡೌನ್​ನಲ್ಲಿ ಸ್ವಂತ ವಿಮಾನ ತಯಾರಿಸಿ ಯುರೋಪ್‌ ಪ್ರವಾಸ ಮಾಡಿ ವಿಶ್ವದ ಗಮನ ಸೆಳೆದ ಕೇರಳದ ವ್ಯಕ್ತಿ

ಅದರಂತೆ ಕಾರ್ಯರೂಪಕ್ಕೆ ಇಳಿದ ಅವರು ಅದಕ್ಕಾಗಿ 1.4 ಕೋಟಿ ರೂಪಾಯಿ ಹಾಗೂ ಸುಮಾರು 1500 ಗಂಟೆಗಳ ಸಮಯವನ್ನು ವ್ಯಯ ಮಾಡಿದ್ದಾರೆ. ಈ ಬಗ್ಗೆ ದಿ ಸನ್‌ ಜೊತೆ ಮಾತನಾಡಿದ ಅಶೋಕ್ ಅವರು ಮಾತನಾಡಿ, ನನ್ನ ಬಾಲ್ಯದಿಂದಲೂ ವಿಮಾನಗಳು ನನ್ನನ್ನು ತುಂಬಾನೇ ಆಕರ್ಷಿಸಿದ್ದವು. ಇದನ್ನು ನಿರ್ಮಿಸಲು ನಾವು ಮೊದಲ ಲಾಕ್‌ಡೌನ್ ಸಮಯದಿಂದಲೂ ಹಣವನ್ನು ಉಳಿಸಲು ಪ್ರಾರಂಭಿಸಿದ್ದೆವು. ನಾವು ನಮ್ಮದೇ ಆದ ಸ್ವಂತ ವಿಮಾನವನ್ನು ಹೊಂದಬೇಕು ಎಂಬ ಬಗ್ಗೆ ಸದಾ ಯೋಚಿಸುತ್ತಿದ್ದೆವು ಹೀಗಾಗಿ ಮೊದಲ ಕೆಲವು ತಿಂಗಳುಗಳಲ್ಲಿ ನಾವು ಸಾಕಷ್ಟು ಹಣವನ್ನು ಉಳಿಸಿ ಈ ಯೋಜನೆಗೆ ಹಾಕಿದೆವು ಎಂದು ಅವರು ಹೇಳಿದ್ದಾರೆ.

ಲಾಕ್‌ಡೌನ್​ನಲ್ಲಿ ಸ್ವಂತ ವಿಮಾನ ತಯಾರಿಸಿ ಯುರೋಪ್‌ ಪ್ರವಾಸ ಮಾಡಿ ವಿಶ್ವದ ಗಮನ ಸೆಳೆದ ಕೇರಳದ ವ್ಯಕ್ತಿ

ಫೋರ್ಡ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅಶೋಕ್, ಆರಂಭದಲ್ಲಿ ಪೈಲಟ್ ಪರವಾನಗಿ ಪಡೆದ ನಂತರ ಪ್ರಯಾಣಕ್ಕಾಗಿ ಎರಡೂ ಸೀಟುಗಳ ಸಣ್ಣ ವಿಮಾನವನ್ನು ಬಾಡಿಗೆಗೆ ಪಡೆಯುತ್ತಿದ್ದರಂತೆ. ಆದರೆ ಅವರ ಕುಟುಂಬವನ್ನು ನೋಡಿದಾಗ, ಅವರು ತಮಗೆ ತಮ್ಮದೇ ಆದ ಖಾಸಗಿ ವಿಮಾನದ ಅಗತ್ಯವಿದೆ ಎಂಬುದರ ಅರಿವಾಗಿದೆ.

ಲಾಕ್‌ಡೌನ್​ನಲ್ಲಿ ಸ್ವಂತ ವಿಮಾನ ತಯಾರಿಸಿ ಯುರೋಪ್‌ ಪ್ರವಾಸ ಮಾಡಿ ವಿಶ್ವದ ಗಮನ ಸೆಳೆದ ಕೇರಳದ ವ್ಯಕ್ತಿ

ಇದಕ್ಕಾಗಿ ಕುಟುಂಬವು ಹಣವನ್ನು ಉಳಿಸಲು ಪ್ರಾರಂಭಿಸಿತು ಕೆಲವು ತಿಂಗಳುಗಳಲ್ಲಿ ಅವರು ಉತ್ತಮ ಮೊತ್ತವನ್ನು ಉಳಿಸುವಲ್ಲಿ ಯಶಸ್ವಿಯಾದರು ಎಂಬುದನ್ನು ಅವರು ವಿವರಿಸಿದರು. ಇಡೀ ಕುಟುಂಬವು ವಿಹಾರಕ್ಕೆ ಕೇರಳದಲ್ಲಿರುವ ತಮ್ಮ ಮನೆಗೆ ಮರಳಲು ಬಯಸುತ್ತಿರುವ ಕಾರಣ ಭಾರತೀಯ ಕಾನೂನುಗಳು ಸ್ವ ನಿರ್ಮಿತ ವಿಮಾನಗಳನ್ನು ಸಹ ಅನುಮತಿಸುತ್ತವೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ನಿರ್ಧಾರವು ಅವರ ಕುಟುಂಬಕ್ಕೆ ಸಾಕಷ್ಟು ಉತ್ಸಾಹ ತಂದಿದೆ ಎಂದು ಅಶೋಕ್ ಪುತ್ರಿ ಅಭಿಲಾಷಾ ಹೇಳಿದರು.

ಲಾಕ್‌ಡೌನ್​ನಲ್ಲಿ ಸ್ವಂತ ವಿಮಾನ ತಯಾರಿಸಿ ಯುರೋಪ್‌ ಪ್ರವಾಸ ಮಾಡಿ ವಿಶ್ವದ ಗಮನ ಸೆಳೆದ ಕೇರಳದ ವ್ಯಕ್ತಿ

ನಾವು ಸಾಕಷ್ಟು ಭಾರಿ ವಿಮಾನದಲ್ಲಿ ಪ್ರಯಾಣಿಸಿದ್ದೆವು ಆದರೆ ನಮ್ಮ ತಂದೆಯೇ ಪೈಲಟ್ ಆಗಿರುವ ನಮ್ಮದೇ ವಿಮಾನದಲ್ಲಿ ಪ್ರಯಾಣಿಸುತ್ತಿರುವುದು ಇದೇ ಮೊದಲು ಎಂದು ಹೇಳಿದರು. ವಿಮಾನವನ್ನು ನಿರ್ಮಿಸಿದ ನಂತರ, ಅಶೋಕ್, ಅವರ ಪತ್ನಿ ಅಭಿಲಾಷಾ ಮತ್ತು ಅವರ ಇಬ್ಬರು ಪುತ್ರಿಯರು ತಮ್ಮದೇ ವಿಮಾನದಲ್ಲಿ ಅನೇಕ ದೇಶಗಳಿಗೆ ಹೋಗಿದ್ದಾರೆ. ಅವರು ತಮ್ಮ 4 ಆಸನಗಳ ವಿಮಾನದಲ್ಲಿ ಜರ್ಮನಿ, ಆಸ್ಟ್ರಿಯಾ, ಜೆಕ್ ರಿಪಬ್ಲಿಕ್, ಇಟಲಿ ಮತ್ತು ಫ್ರಾನ್ಸ್‌ಗೆ ಭೇಟಿ ನೀಡಿದ್ದಾರೆ. ಅಶೋಕ್ ತಮ್ಮ ಕಿರಿಯ ಮಗಳ ಹೆಸರನ್ನು ವಿಮಾನಕ್ಕೆ ಇಟ್ಟಿದ್ದಾರೆ. ಇದನ್ನು ಜಿ-ದಿಯಾ ಎಂದು ಕರೆಯಲಾಗುತ್ತದೆ, ಅಲ್ಲಿ ಜಿ ಲಂಡನ್‌ನಲ್ಲಿನ ವಿಮಾನಗಳ ಐಕಾನ್ ಅನ್ನು ಪ್ರತಿನಿಧಿಸುತ್ತದೆ.

ಲಾಕ್‌ಡೌನ್​ನಲ್ಲಿ ಸ್ವಂತ ವಿಮಾನ ತಯಾರಿಸಿ ಯುರೋಪ್‌ ಪ್ರವಾಸ ಮಾಡಿ ವಿಶ್ವದ ಗಮನ ಸೆಳೆದ ಕೇರಳದ ವ್ಯಕ್ತಿ

ಅಶೋಕ್ ಅಲಿಸೆರಿಲ್ ಥಾಮರಾಕ್ಷನ್ ಕೇರಳದಿಂದ ಬಂದವರು ಮತ್ತು ಅವರು 2006 ರಲ್ಲಿ ತಮ್ಮ ಪತ್ನಿಯೊಂದಿಗೆ ಯುಕೆಗೆ ಸ್ಥಳಾಂತರಗೊಂಡರು. ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಅಶೋಕ್ ಲಾಕ್‌ಡೌನ್ ಸಮಯದಲ್ಲಿ ಮೊದಲಿನಿಂದಲೂ ವಿಮಾನವನ್ನು ನಿರ್ಮಿಸುವ ಆಲೋಚನೆಯನ್ನು ಮಾಡಿದರು. ಅವರು ಬ್ರಿಟಿಷ್ ಸಿವಿಲ್ ಏವಿಯೇಷನ್ ​​ಕಂಪನಿಯಿಂದ ಪೈಲಟ್ ಪರವಾನಗಿಯನ್ನು ಸಹ ಪಡೆದರು. ಅವರು ಲಂಡನ್‌ನಲ್ಲಿರುವ ತಮ್ಮ ಮನೆಯಲ್ಲಿ ತಾತ್ಕಾಲಿಕ ಕಾರ್ಯಾಗಾರವನ್ನು ನಿರ್ಮಿಸಿದರು ಮತ್ತು ವಿಮಾನದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಮೇ 2019 ರಂದು ಕೆಲಸವನ್ನು ಪ್ರಾರಂಭಿಸಿದರು ಮತ್ತು ನವೆಂಬರ್ 2021 ರೊಳಗೆ ಅದನ್ನು ಪೂರ್ಣಗೊಳಿಸಿದರು.

ಲಾಕ್‌ಡೌನ್​ನಲ್ಲಿ ಸ್ವಂತ ವಿಮಾನ ತಯಾರಿಸಿ ಯುರೋಪ್‌ ಪ್ರವಾಸ ಮಾಡಿ ವಿಶ್ವದ ಗಮನ ಸೆಳೆದ ಕೇರಳದ ವ್ಯಕ್ತಿ

ಅಶೋಕ್ ಅಲಿಸೆರಿಲ್ ಥಾಮರಾಕ್ಷನ್ ಬ್ರಿಟಿಷ್ ಸಿವಿಲ್ ಏವಿಯೇಷನ್ ​​ಕಂಪನಿಯಿಂದ ಪೈಲಟ್ ಪರವಾನಗಿಯನ್ನು ಸಹ ಪಡೆದಿದ್ದಾರೆ.ವಿ ಮಾನವನ್ನು ನಿರ್ಮಿಸುವ ಹಿಂದಿನ ಪ್ರಮುಖ ಕಾರಣವು ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ. ಇತರ ಯಾವುದೇ ಮೆಟ್ರೋ ನಗರಗಳಂತೆ, ಲಂಡನ್ ಕೂಡ ತನ್ನ ಟ್ರಾಫಿಕ್ ಜಾಮ್‌ಗಳಿಗೆ ಜನಪ್ರಿಯವಾಗಿದೆ. ವಾಸ್ತವವಾಗಿ ಇದು ರಸ್ತೆಯಲ್ಲಿ ಯಾವಾಗಲೂ ವಿಪರೀತ ಇರುವ ನಗರಗಳಲ್ಲಿ ಒಂದಾಗಿದೆ. ಈ ವಿಪರೀತದಿಂದ ಪಾರಾಗಲು ಅಶೋಕ್ ಸ್ವಂತವಾಗಿ ವಿಮಾನವನ್ನು ನಿರ್ಮಿಸಲು ನಿರ್ಧರಿಸಿದರು. ಈಗ ಅವರು ಟ್ರಾಫಿಕ್ ಬ್ಲಾಕ್‌ಗಳ ಬಗ್ಗೆ ಚಿಂತಿಸದೆ ಒಂದು ಗಂಟೆಯಲ್ಲಿ 250 ಕಿ.ಮೀ ವೇಗದಲ್ಲಿ ಪ್ರಯಾಣಿಸಬಹುದು.

Image Courtesy: Ashok Aliseril/Facebook

Most Read Articles

Kannada
English summary
Kerala man 4 seater plane built during lockdown travels europe with family details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X