ಆಂಬ್ಯುಲೆನ್ಸ್ ಜೊತೆ ಆಟ ಬೇಡ... ಮನೆಗೆ ಹುಡುಕಿ ಹೋಗಿ 2.5 ಲಕ್ಷ ದಂಡ

ದೇಶದ ಪ್ರಧಾನಿಯವರ ವಾಹನದಲ್ಲೂ ಸೈರನ್ ಬಳಸುವುದಿಲ್ಲ, ಆದರೆ ಆಂಬ್ಯುಲೆನ್ಸ್, ಅಗ್ನಿಶಾಮಕದಂತಹ ತುರ್ತು ಸೇವಾ ವಾಹನಗಳಲ್ಲಿ ಮಾತ್ರ ಸೈರನ್ ಬಳಸುತ್ತಾರೆ. ಏಕೆಂದರೆ ಈ ತುರ್ತು ವಾಹನಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ಸೈರನ್ ಶಬ್ದ ಕಿವಿಗೆ ಬೀಳುವಾಗ ವಾಹನ ಚಾಲಕರು ತಮ್ಮ ವಾಹನಗಳನ್ನು ಆಂಬ್ಯುಲೆನ್ಸ್ಗೆ ದಾರಿ ಮಾಡಿಕೊಡುತ್ತಾರೆ. ಆದರೆ ಇತ್ತೀಚೆಗೆ ಮಾರುತಿ ಸುಜುಕಿ ಸಿಯಾಜ್ (Maruti Suzuki Ciaz) ಕಾರಿನ ಚಾಲಕನೊಬ್ಬ ಆಂಬ್ಯುಲೆನ್ಸ್ಗೆ ದಾರಿ ಬಿಡದೆ ಹುಚ್ಚಾಟ ಮೆರೆದಿದ್ದಾನೆ. ಈ ಕಾರು ಚಾಲಕನಿಗೆ 2.5 ಲಕ್ಷ ದಂಡ ವಿಧಿಸಲಾಗಿದೆ. ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಜಾಗರೂಕತೆ ಕಾರು ಚಾಲನೆ ಹೆಚ್ಚಾಗುತ್ತಿರುವುದು ನಾವು ಪ್ರತಿನಿತ್ಯ ರಸ್ತೆಗೆ ಇಳಿದಾಗ ಕಾಣಸಿಗುತ್ತದೆ. ಕೆಲವರು ಇಡೀ ರಸ್ತೆಯೇ ತಮ್ಮದು ಎಂಬಂತೆ ಬೇರೆ ವಾಹನಗಳಿಗೆ ದಾರಿ ಬಿಡದೆ ವಾಹನ ಚಲಾಯಿಸುತ್ತಾರೆ. ಕೆಲವರು ರಸ್ತೆ ನಿಯಮ ಉಲ್ಲಂಘಿಸಿದಾಗ ವಾಹನಗಳಿಗೆ ಪೊಲೀಸರು ದಂಡ ವಿಧಿಸುತ್ತಾರೆ. ದರೆ, ಇಲ್ಲಿ ಮಾರುತಿ ಸುಜುಕಿ ಸಿಯಾಜ್ ಕಾರು ಚಾಲಕ ಆಂಬ್ಯುಲೆನ್ಸ್‌ಗೆ (Ambulance) ದಾರಿ ಬಿಡದೆ ಹುಚ್ಚಾಟ ಮೆರೆದಿದ್ದಾನೆ.

Not Giving Way To Ambulance

ಆಂಬ್ಯುಲೆನ್ಸ್‌ನಲ್ಲಿದ್ದ ಡ್ಯಾಶ್ ಕ್ಯಾಮೆರಾದಲ್ಲಿ ಈ ದೃಶ್ಯಗಳು ದಾಖಲಾಗಿವೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಕಾರಿನ ನಂಬರ್ ಪ್ಲೇಟ್ ಮೂಲಕ ಸಂಬಂಧಪಟ್ಟ ಸಿಯಾಜ್ ಕಾರು ಮಾಲೀಕನನ್ನು ಪೊಲೀಸರು ಗುರುತಿಸಿದ್ದಾರೆ. ಈ ಬಳಿಕ ಪೊಲೀಸರು ನೇರವಾಗಿ ಅವರ ಮನೆಗೆ ತೆರಳಿ ಕಾರಿನ ಮಾಲೀಕರಿಗೆ 2.5 ಲಕ್ಷ ದಂಡ ವಿಧಿಸಿ, ಚಾಲನಾ ಪರವಾನಗಿ ರದ್ದುಗೊಳಿಸಿದ್ದಾರೆ.

ಆ ಬಳಿಕ ಪೊಲೀಸರು ನೇರವಾಗಿ ಅವರ ಮನೆಗೆ ತೆರಳಿ ಕಾರಿನ ಮಾಲೀಕರಿಗೆ 2.5 ಲಕ್ಷ ದಂಡ ವಿಧಿಸಿ, ಚಾಲನಾ ಪರವಾನಗಿ ರದ್ದುಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಿಡುಗಡೆಯಾದ ವೀಡಿಯೊದಲ್ಲಿ, ಸಿಲ್ವರ್ ಬಣ್ಣದ ಮಾರುತಿ ಸುಜುಕಿ ಡಿಜೈರ್ 2-ಲೇನ್ ರಸ್ತೆಯಲ್ಲಿ ಆಂಬ್ಯುಲೆನ್ಸ್ ಮುಂದೆ ತಿರುಗುತ್ತಿರುವುದನ್ನು ಕಾಣಬಹುದು.

Not Giving Way To Ambulance

ಯಾವುದೇ ವಾಹನ ಚಾಲಕರು ಆಂಬ್ಯುಲೆನ್ಸ್ ಸಮೀಪಿಸುತ್ತಿರುವುದನ್ನು ಕಂಡರೆ ಅದಕ್ಕೆ ದಾರಿ ಮಾಡಿಕೊಡಬೇಕು. ಅಲ್ಲದೇ ಬಹುತೇಕರು ದಾರಿ ಮಾಡಿಕೊಡುತ್ತಾರೆ. ಆದರೆ ಸೈರನ್ ಮೊಳಗುತ್ತಿದ್ದರೂ, ಆಂಬ್ಯುಲೆನ್ಸ್ ಚಾಲಕ ನಿರಂತರವಾಗಿ ಹಾರ್ನ್ ಮಾಡುತ್ತಿದ್ದರೂ ಈ ಮಾರುತಿ ಸಿಯಾಜ್ ಕಾರಿನ ಚಾಲಕ ದಾರಿ ಬಿಡಲಿಲ್ಲ. ರಸ್ತೆಯಲ್ಲಿ ಸಾಕಷ್ಟು ಸ್ಥಳವಿದ್ದರೂ, ಅವರು ಸೈಡ್ ಕೊಡದೇ ಆಂಬ್ಯುಲೆನ್ಸ್ ಚಲಿಸುತ್ತಿದ್ದ ಲೇನ್ ಕಡೆಗೆ ತಿರುಗಿಸಿ ಅಡ್ಡಾದಿಡ್ಡಿ ಚಾಲನೆ ಮಾಡಿದ್ದಾನೆ.

ಇದರಿಂದಾಗಿ ಈ ಸಿಯಾಜ್ ಕಾರಿನ ಚಾಲಕನಿಗೆ 2.5 ಲಕ್ಷ ರೂ. ದಂಡ ವಿಧಿಸಿದ್ದಾರೆ. ಈ ಮಾರುತಿ ಸಿಯಾಜ್ ಕಾರನ್ನು ಅ ಸಮಯದಲ್ಲಿ ಮಾಲೀಕನೆ ಚಾಲನೆ ಮಾಡಿರುವುದನ್ನು ಖಚಿತಪಡಿಸಿ ದಂಡವನ್ನು ವಿಧಿಸಿದ್ದಾರೆ. ಉಳಿದಂತೆ ಘಟನೆ ನಡೆದಾಗ ಆಂಬ್ಯುಲೆನ್ಸ್‌ನಲ್ಲಿ ರೋಗಿಗಳು ಇದ್ದರೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ಆಂಬ್ಯುಲೆನ್ಸ್ ಸೈರನ್ ಆಗಿ ವೇಗವಾಗಿ ಚಾಲನೆ ಮಾಡುವಾಗ ರೋಗಿ ಇರಬಹುದು ಅಥವಾ ರೋಗಿ ಕರೆದುಕೊಂಡು ಹೋಗಲು ಹೋಗುತ್ತಿರಬಹುದು.

ಈ ವೀಡಿಯೊದ ಕಾಮೆಂಟ್ ನೋಡಿದರೆ ಪ್ರತಿಯೊಬ್ಬ ನೆಟ್ಟಿಗರು ಕೇರಳ ಪೊಲೀಸರ ತ್ವರಿತ ಕ್ರಮವನ್ನು ಶ್ಲಾಘಿಸಿದ್ದಾರೆ. ಈ ಚಾಲಕನಿಗೆ ಇಷ್ಟು ದೊಡ್ಡ ದಂಡ ಮತ್ತು ಅವರ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲು ಆಗ್ರಹಿಸಿದ್ದಾರೆ. ಕೆಲವು ನೆಟ್ಟಿಗರು ಈ ಮಾರುತಿ ಸುಜುಕಿ ಸಿಯಾಜ್‌ನ ನೋಂದಣಿಯನ್ನು ಸಹ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, November 18, 2024, 19:07 [IST]
English summary
Kerala man driving licence revoked fined rs 2 5 lakh for not giving way to ambulance
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+