ಕರುಣಾಮಯಿ ಅಪ್ಪನಿಗೆ 14 ವರ್ಷಗಳ ಬಳಿಕ ಇಷ್ಟದ ಬುಲೆಟ್ ಬೈಕ್ ಸರ್ಪ್ರೈಸ್ ಗಿಫ್ಟ್ ಕೊಟ್ಟ ಮಗ.. ವಿಡಿಯೋ
ಯಾವುದೇ ನಿರೀಕ್ಷೆಗಳು ಇಲ್ಲದೆ, ನಮ್ಮೆಲ್ಲ ಆಸೆಗಳನ್ನು ನಿರಾಸೆ ಮಾಡದೆ, ಈಡೇರಿಸುವ ಏಕೈಕ ವ್ಯಕ್ತಿಯೇ ಅಪ್ಪ.. ಪ್ರತಿಯೊಬ್ಬ ತಂದೆಯು ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಕನಸುಗಳನ್ನು ಕೂಡ ಬದಿಗಿಟ್ಟು ಕಷ್ಟಪಟ್ಟು ದುಡಿದು, ಹಣವನ್ನು ಕೂಡಿಡುತ್ತಾರೆ. ಕೇರಳದ ಕೊಚ್ಚಿಯಲ್ಲಿಯೂ ಹಾಗೆಯೇ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಕುಟುಂಬಕ್ಕಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ್ದು, ಕರುಣಾಮಯಿ ಅಪ್ಪನಿಗೆ ಪುತ್ರನೊಬ್ಬ ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ 350 (Royal Enfield Bullet 350) ಬೈಕ್‌ನ್ನು ಉಡುಗೊರೆಯಾಗಿ ನೀಡಿದ್ದಾನೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ಸಖತ್ ವೈರಲ್ ಆಗಿದೆ.
ಕಂಟೆಂಟ್ ಕ್ರಿಯೇಟರ್ ಆಗಿರುವ ಅಶ್ವಿನ್ ಎಂಬುವವರು ತಮ್ಮ ತಂದೆಗೆ 'ಬುಲೆಟ್' ಮೋಟಾರ್‌ಸೈಕಲ್‌ನ್ನು ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲೂ ಪೋಸ್ಟ್ ಮಾಡಿದ್ದಾರೆ. '14 ವರ್ಷಗಳ ಹಿಂದೆ, ಅವರು ಬುಲೆಟ್ ಖರೀದಿಸಬೇಕೆಂದು ನನಗೆ ಹೇಳಿದ್ದರು. ಅವರಿಗೆ ಆ ಅವಕಾಶಗಳು ಒದಗಿ ಬಂತು. ಆದರೆ, ಎಂದಿಗೂ ಬೈಕ್‌ನ್ನು ಖರೀದಿ ಮಾಡಲಿಲ್ಲ. ಬಹುಶಃ ಅವರು ತನ್ನನ್ನು ತಾನು ಮೊದಲೆಂದು ಪರಿಗಣಿಸಲಿಲ್ಲ. ಇದು ನಿಮಗಾಗಿ ಅಪ್ಪ' ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ.

ಸದ್ಯ, ಆ ತಂದೆ ಖುಷಿಯಿಂದ ನೂತನ ಮೋಟಾರ್‌ಸೈಕಲ್‌ನ್ನು ವಿತರಣೆ ಪಡೆಯುತ್ತಿರುವ ವಿಡಿಯೋಗೆ ನೆಟ್ಟಿಗರಿಂದಲೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸರಿ ಸುಮಾರು 89 ಲಕ್ಷದಷ್ಟು ವೀಕ್ಷಣೆಯಾಗಿದೆ. 10 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಇದರೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಕಾಮೆಂಟ್‌ಗಳನ್ನು ಪಡೆದುಕೊಳ್ಳುವಲ್ಲಿಯೂ ಯಶಸ್ವಿಯಾಗಿದೆ.
ರಾಯಲ್ ಎನ್‌ಫೀಲ್ಡ್ ಬುಲೆಟ್ 350 ವಿಶೇಷತೆಗಳೇನು:
ಈ ಬೈಕ್ ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಎಲ್ಲ ವಯೋಮಾನದ ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ರೂ.1.75 ಲಕ್ಷದಿಂದ ರೂ.2.20 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಇದು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಬೆಟಾಲಿಯನ್ ಬ್ಲ್ಯಾಕ್, ಮಿಲಿಟರಿ ಬ್ಲ್ಯಾಕ್, ಮಿಲಿಟರಿ ರೆಡ್, ಮಿಲಿಟರಿ ಸಿಲ್ವರ್ ಬ್ಲ್ಯಾಕ್ & ಮಿಲಿಟರಿ ಸಿಲ್ವರ್ ರೆಡ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.
ನೂತನ ಬುಲೆಟ್ ಮೋಟಾರ್‌ಸೈಕಲ್ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 349 ಸಿಸಿ ಏರ್-ಕೋಲ್ಡ್ ಸಿಂಗಲ್-ಸಿಲಿಂಡರ್ ಜೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 20.4 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 27 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 37 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.
ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಬಲ್ಬ್ - ಟೈಪ್ ಇಂಡಿಕೇಟರ್‌ಗಳು, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಎಂಜಿನ್ ಕಿಲ್ ಸ್ವಿಚ್ ಹಾಗೂ ಸರ್ವಿಸ್ ಡ್ಯೂ ಇಂಡಿಕೇಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಜೊತೆಗೆ ಸರಿ ಸುಮಾರು 195 ಕೆಜಿ ತೂಕವಿದ್ದು, 13 ಲೀಟರ್‌ನ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ.
ಈ ಬೈಕ್ 19/ 18-ಇಂಚಿನ ಸ್ಪೋಕ್ ವೀಲ್‌ಗಳು, ಮುಂಭಾಗ (ಫ್ರಂಟ್) 100-ಸೆಕ್ಷನ್ ಹಾಗೂ ಹಿಂಭಾಗ (ರೇರ್) 120-ಸೆಕ್ಷನ್ ಟೈರ್‌ಗಳನ್ನು ಹೊಂದಿದೆ. 2,110 ಎಂಎಂ ಉದ್ದ, 785 ಎಂಎಂ ಅಗಲ ಹಾಗೂ 1,120 ಎಂಎಂ ಎತ್ತರವು ಇದೆ. 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1390 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.
ಇದು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ & ಹಿಂಭಾಗ (ರೇರ್) ಟ್ವಿನ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಪಡೆದಿದೆ. ಡುಯಲ್ ಚಾನೆಲ್ ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.


Click it and Unblock the Notifications








