ದ್ವಿಚಕ್ರ ವಾಹನಗಳಲ್ಲಿ ತೆರಳುವಾಗ ಛತ್ರಿ ಬಳಸುವುದನ್ನು ನಿಷೇಧಿಸಿದ ಸಾರಿಗೆ ಇಲಾಖೆ

ಕಾರು, ಬಸ್ಸಿನಲ್ಲಿ ಸಂಚರಿಸುವವರು ಮಳೆಯಿಂದ ರಕ್ಷಣೆ ಪಡೆದುಕೊಳ್ಳಬಹುದು. ಆದರೆ ದ್ವಿಚಕ್ರ ವಾಹನ ಸವಾರರು ಮಳೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದರಿಂದ ಹೆಚ್ಚಿನವರು ಛತ್ರಿಯನ್ನು ಹಿಡಿದು ದ್ವಿಚಕ್ರ ವಾಹನದಲ್ಲಿ ತೆರಳುತ್ತಾರೆ. ಇದು ತುಂಬಾ ಅಪಾಯಕಾರಿ ಮತ್ತು ಅಪಘಾತಗಳಿಗೆ ಕಾರಣವಾಗಬಹುದು.

ದ್ವಿಚಕ್ರ ವಾಹನಗಳಲ್ಲಿ ತೆರಳುವಾಗ ಛತ್ರಿ ಬಳಸುವುದನ್ನು ನಿಷೇಧಿಸಿದ ಸಾರಿಗೆ ಇಲಾಖೆ

ಇದರಿಂದ ಕೇರಳದ ಸಾರಿಗೆ ಆಯುಕ್ತರು ಬುಧವಾರ ಎಲ್ಲಾ ಪ್ರಾದೇಶಿಕ ಮತ್ತು ಜಂಟಿ-ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪತ್ರವನ್ನು ಬರೆದು ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವಾಗ ಛತ್ರಿಗಳನ್ನು ಬಳಸುವುದನ್ನು ನಿಷೇಧಿಸಿರುವುದಾಗಿ ತಿಳಿಸಿದೆ ಎಂದು ವರದಿಗಳಾಗಿದೆ. ಇದು ದ್ವಿಚಕ್ರ ವಾಹನ ಸವಾರರ ಸುರಕ್ಷತೆಯ ಭಾಗವಾಗಿ ಛತ್ರಿಗಳನ್ನು ಬಳಸದಂತೆ ಇಲಾಖೆ ಎಚ್ಚರಿಕೆ ನೀಡಿದೆ. ಒಂದು ವೇಳೆ ದ್ವಿಚಕ್ರ ವಾಹನ ಸವಾರರು ಛತ್ರಿಯನ್ನು ಬಳಿಸಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ದ್ವಿಚಕ್ರ ವಾಹನಗಳಲ್ಲಿ ತೆರಳುವಾಗ ಛತ್ರಿ ಬಳಸುವುದನ್ನು ನಿಷೇಧಿಸಿದ ಸಾರಿಗೆ ಇಲಾಖೆ

ಕೇರಳ ರಾಜ್ಯದಲ್ಲಿ ಮಳೆಗಾಲವಾಗಿರುವುದರಿಂದ ದ್ವಿಚಕ್ರ ವಾಹನ ಸವಾರರು ಛತ್ರಿಗಳನ್ನು ಬಳಸುತ್ತಿರುವ ಪ್ರಸಂಗಗಳು ಹೆಚ್ಚಾಗಿವೆ. ಇದು ಹೆಚ್ಚಿನ ವೇಗದ ಗಾಳಿ ಮತ್ತು ಇತರ ಗೊಂದಲಗಳಿಂದ ಅಪಘಾತಗಳಿಗೆ ಕಾರಣವಾಗುತ್ತದೆ. ಮುಖ್ಯವಾಗಿ ಏರೋಡೈನಾಮಿಕ್ ವಲ್ಲದ ವಿನ್ಯಾಸದಿಂದಾಗಿ ದ್ವಿಚಕ್ರ ವಾಹನದಲ್ಲಿ ಛತ್ರಿಯನ್ನು ಬಳಸುವುದು ಅತ್ಯಂತ ಅಪಾಯಕಾರಿ.

ದ್ವಿಚಕ್ರ ವಾಹನಗಳಲ್ಲಿ ತೆರಳುವಾಗ ಛತ್ರಿ ಬಳಸುವುದನ್ನು ನಿಷೇಧಿಸಿದ ಸಾರಿಗೆ ಇಲಾಖೆ

ಹೆಚ್ಚಿನ ವೇಗದ ಗಾಳಿಯ ವಿರುದ್ಧ ಛತ್ರಿ ಪ್ಯಾರಾಚೂಟ್‌ಗಳಂತೆಯೇ ಕಾರ್ಯನಿರ್ವಹಿಸುತ್ತದೆಮತ್ತು ಅದನ್ನು ಹಿಡಿದಿರುವ ವ್ಯಕ್ತಿಯನ್ನು ತೀವ್ರ ಬಲದಿಂದ ಎಳೆಯಬಹುದು. ಮಳೆಗಾಲದೊಂದಿಗೆ ರಾಜ್ಯದಲ್ಲಿ ಅತಿ ವೇಗದ ಗಾಳಿ ಕೂಡ ಸಾಮಾನ್ಯವಾಗಿದೆ. ತೆರೆದ ಛತ್ರಿ ಮತ್ತು ರಭಸದ ಗಾಳಿಯಿಂದ, ಇದು ಅವಘಡಕ್ಕೆ ಕಾರಣವಾಗಬಹುದು.

ದ್ವಿಚಕ್ರ ವಾಹನಗಳಲ್ಲಿ ತೆರಳುವಾಗ ಛತ್ರಿ ಬಳಸುವುದನ್ನು ನಿಷೇಧಿಸಿದ ಸಾರಿಗೆ ಇಲಾಖೆ

ಬೈಕ್ ಗಾಳಿಗೆ ವಿರುದ್ಧವಾಗಿ ಹೋಗುತ್ತಿದ್ದರೆ ಬೈಕಿನಲ್ಲಿರುವ ವ್ಯಕ್ತಿಯು ಅನುಭವಿಸುವ ಗಾಳಿಯ ವೇಗವು ತುಂಬಾ ಹೆಚ್ಚಿರುತ್ತದೆ. ಉದಾಹರಣೆಗೆ ಬೈಕ್ ಗಾಳಿಯ ದಿಕ್ಕಿಗೆ ವಿರುದ್ಧವಾಗಿ ಗಂಟೆಗೆ 50 ಕಿಮೀ ಮತ್ತು ಗಾಳಿಯ ವೇಗವು 30 ಕಿಮೀ/ಗಂಟೆಗೆ ಆಗಿದ್ದರೆ, ಬೈಕ್ ಮೇಲೆ ಕುಳಿತ ವ್ಯಕ್ತಿಯು ಗಾಳಿಯ ವೇಗ 50 ಪ್ಲಸ್ 30 ಎಂದು ಭಾಸವಾಗುತ್ತದೆ, ಇದು ಸೇರಿ 80 ಕಿಮೀ/ಗಂ ಆಗುತ್ತದೆ.

ದ್ವಿಚಕ್ರ ವಾಹನಗಳಲ್ಲಿ ತೆರಳುವಾಗ ಛತ್ರಿ ಬಳಸುವುದನ್ನು ನಿಷೇಧಿಸಿದ ಸಾರಿಗೆ ಇಲಾಖೆ

ಕೈಯಲ್ಲಿ ಒಂದು ಛತ್ರಿಯೊಂದಿಗೆ 80 ಕಿಮೀ/ಗಂಟೆಗೆ ಗಾಳಿಯ ವೇಗವು ವ್ಯಕ್ತಿಯನ್ನು ಸುಲಭವಾಗಿ ಎಳೆಯಬಹುದು ಮತ್ತು ಅಪಘಾತಕ್ಕೆ ಕಾರಣವಾಗುವ ರೀತಿ ದ್ವಿಚಕ್ರ ವಾಹನವದ ಕಂಟ್ರೋಲ್ ತಪ್ಪಬಹುದು. ಕೇರಳ ಸಾರಿಗೆ ಇಲಾಖೆ ಛತ್ರಿ ಬಳಸುವ ಸವಾರರ ಮೇಲೂ ಸೂಕ್ಷ್ಮವಾಗಿ ಕಣ್ಣಿಡುತ್ತದೆ ಮತ್ತು ದಂಡದ ಚಲನ್ ನೀಡುತ್ತದೆ ಎಂದು ಹೇಳಿದೆ ಅಲ್ಲದೆ, ಜನರು ಛತ್ರಿಗಳನ್ನು ಬಳಸದಂತೆ ನೋಡಿಕೊಳ್ಳಲು ಸಾರಿಗೆ ಇಲಾಖೆ ವಾಹನ ಚಾಲಕರಲ್ಲಿ ಜಾಗೃತಿ ಮೂಡಿಸುತ್ತದೆ.

ದ್ವಿಚಕ್ರ ವಾಹನಗಳಲ್ಲಿ ತೆರಳುವಾಗ ಛತ್ರಿ ಬಳಸುವುದನ್ನು ನಿಷೇಧಿಸಿದ ಸಾರಿಗೆ ಇಲಾಖೆ

ಕಳೆದ ತಿಂಗಳು ಕೇರಳದ 52 ವರ್ಷದ ಮಹಿಳೆ ತನ್ನ ಮಗನ ಜೊತೆ ಬೈಕಿನಲ್ಲಿ ಸವಾರಿ ಮಾಡುತ್ತಿದ್ದಾಗ ಛತ್ರಿ ತೆರೆಯಲು ಯತ್ನಿಸಿದ ನಂತರ ಬೈಕಿನಿಂದ ಕೆಳಗೆ ಬಿದ್ದಿದ್ದರು. ಮಹಿಳೆಗೆ ತಲೆಗೆ ತೀವ್ರ ಪೆಟ್ಟಾಗಿದ್ದು, ನಂತರ ಆವೆರು ಸಾವನ್ನಪ್ಪಿದ್ದಾರೆ. ಮುಂಜಾನೆ ಮಹಿಳೆ ಗೀತಾಕುಮಾರಿ ಕೆಲಸಕ್ಕೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ದ್ವಿಚಕ್ರ ವಾಹನಗಳಲ್ಲಿ ತೆರಳುವಾಗ ಛತ್ರಿ ಬಳಸುವುದನ್ನು ನಿಷೇಧಿಸಿದ ಸಾರಿಗೆ ಇಲಾಖೆ

ಮಳೆಯಿಂದಾಗಿ ಅವರು ಛತ್ರಿ ತೆರೆಯಲು ಪ್ರಯತ್ನಿಸಿದರು. ಅದರೆ ರಭಸದ ಗಾಳಿಯ ಅದರ ವಿರುದ್ದ ದಿಕ್ಕಿನಿಂದ ಬರುವಾಗ ಅವರ ಕಂಟ್ರೋಲ್ ತಪ್ಪಿ ಮಹಿಳೆ ಬೈಕ್ ನಿಂದ ಬಿದ್ದು ಅವರ ತಲೆಯ ಮೇಲೆ ಮಾರಣಾಂತಿಕ ಗಾಯಗಳನ್ನು ಹೊಂದಿದ್ದರು. ಇದರಿಂದ ಆವರು ಸಾವನ್ನಪ್ಪುತ್ತಾರೆ.

ದ್ವಿಚಕ್ರ ವಾಹನಗಳಲ್ಲಿ ತೆರಳುವಾಗ ಛತ್ರಿ ಬಳಸುವುದನ್ನು ನಿಷೇಧಿಸಿದ ಸಾರಿಗೆ ಇಲಾಖೆ

ಇದರಿಂದ ಇಂತಹ ಸನ್ನಿವೇಶಗಳಲ್ಲಿ ಪ್ರಯಾಣಿಸಲು ಹೆಚ್ಚು ಸುರಕ್ಷಿತವಾದ ಮಾರ್ಗವೆಂದರೆ ವಾಟರ್‌ಫ್ರೂಫ್ ಆದ ರೈನ್‌ಕೋಟ್ ಬಳಸುವುದು. ಸವಾರಿಗಾಗಿ ವಿನ್ಯಾಸಗೊಳಿಸಲಾದ ರೈನ್ಕೋಟ್‌ಗಳುತೋಳುಗಳ ತುದಿಯಲ್ಲಿ ಎಲಾಸ್ಟಿಕ್‌ಗಳನ್ನು ಹೊಂದಿದ್ದು ಅದು ಗಾಳಿಯು ರೈನ್ಕೋಟ್‌ಗೆ ಪ್ರವೇಶಿಸದಂತೆ ನೋಡಿಕೊಳ್ಳುತ್ತದೆ.

ದ್ವಿಚಕ್ರ ವಾಹನಗಳಲ್ಲಿ ತೆರಳುವಾಗ ಛತ್ರಿ ಬಳಸುವುದನ್ನು ನಿಷೇಧಿಸಿದ ಸಾರಿಗೆ ಇಲಾಖೆ

ರೈನ್ಕೋಟ್‌ಗಳು ಮತ್ತು ವಾಟರ್‌ಫ್ರೂಫ್ ರೈಡಿಂಗ್ ಜಾಕೆಟ್ ಗಳು ದ್ವಿಚಕ್ರ ವಾಹನಗಳಲ್ಲಿ ಬಳಸಲು ಹೆಚ್ಚು ಸುರಕ್ಷಿತವಾಗಿದೆ.ವಾಸ್ತವವಾಗಿ, ಅನೇಕ ಜನರು ಮಳೆಗಾಲದಲ್ಲಿ ತಮ್ಮ ತಲೆಯ ಮೇಲೆ ಪ್ಲಾಸ್ಟಿಕ್ ಹಾಕಿ ಪ್ರಯಾಣಿಸುತ್ತಾರೆ. ಅದು ಕೂಡ ಛತ್ರಿಗಳಂತೆಯೇ ಅಪಾಯಕಾರಿಯಾಗಿದೆ,

ದ್ವಿಚಕ್ರ ವಾಹನಗಳಲ್ಲಿ ತೆರಳುವಾಗ ಛತ್ರಿ ಬಳಸುವುದನ್ನು ನಿಷೇಧಿಸಿದ ಸಾರಿಗೆ ಇಲಾಖೆ

ಇನ್ನು ಹೆಲ್ಮೆಟ್'ಗಳು ದ್ವಿಚಕ್ರ ವಾಹನ ಸವಾರರಿಗೆ ಸುರಕ್ಷತೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಕಾರಣಕ್ಕಾಗಿಯೇ ಬೆಂಗಳೂರು ನಗರ ಸಂಚಾರ ಪೊಲೀಸರು ನಿರ್ದಿಷ್ಟ ತಾಂತ್ರಿಕ ಲಕ್ಷಣವಿರುವ ಹೆಲ್ಮೆಟ್ ಧರಿಸಿದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ. ಹೆಲ್ಮೆಟ್ ತಯಾರಕ ಕಂಪನಿಗಳು ಬೆಂಗಳೂರು ಸಂಚಾರಿ ಪೊಲೀಸರ ಕ್ರಮವನ್ನು ವಿರೋಧಿಸಿವೆ. ಹೆಲ್ಮೆಟ್ ತಯಾರಕ ಕಂಪನಿಗಳು ಹೆಲ್ಮೆಟ್ ಬಳಕೆದಾರರನ್ನು ಆಕರ್ಷಿಸಲು ಹಾಗೂ ಹೆಲ್ಮೆಟ್ ಬಳಕೆಯನ್ನು ಹೆಚ್ಚು ಆಸಕ್ತಿಕರವಾಗಿಸಲು ಹೆಲ್ಮೆಟ್ ಗಳನ್ನು ಅತ್ಯಾಧುನಿಕ ಫೀಚರ್ ಗಳನ್ನು ನೀಡುತ್ತಿವೆ.

ದ್ವಿಚಕ್ರ ವಾಹನಗಳಲ್ಲಿ ತೆರಳುವಾಗ ಛತ್ರಿ ಬಳಸುವುದನ್ನು ನಿಷೇಧಿಸಿದ ಸಾರಿಗೆ ಇಲಾಖೆ

ಈ ಅತ್ಯಾಧುನಿಕ ಫೀಚರ್ ಗಳಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಸಹ ಸೇರಿದೆ. ಈ ಫೀಚರ್ ವಾಹನ ಸವಾರರಿಗೆ ತಮ್ಮ ಸೆಲ್ ಫೋನ್‌ಗಳಿಗೆ ಬರುವ ಕರೆಗಳನ್ನು ಸ್ವೀಕರಿಸಲು ನೆರವಾಗುತ್ತದೆ. ಬೆಂಗಳೂರು ನಗರ ಸಂಚಾರಿ ಪೊಲೀಸರು ಬ್ಲೂ ಟೂತ್ ಫೀಚರ್ ಹೊಂದಿರುವ ಹೆಲ್ಮೆಟ್ ಬಳಕೆಯನ್ನು ನಿಷೇಧಿಸಿದ್ದಾರೆ. ನಿಯಮ ಉಲ್ಲಂಘಿಸಿ ಬ್ಲೂಟೂತ್ ಹೊಂದಿರುವ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡುವವರು ಭಾರೀ ದಂಡವನ್ನು ತೆರಬೇಕಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಬ್ಲೂಟೂತ್ ಹೊಂದಿರುವ ಹೆಲ್ಮೆಟ್ ಧರಿಸಿ ವಾಹನ ಸವಾರರು ವಾಹನ ಚಾಲನೆ ಮಾಡುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಈ ಕಾರಣಕ್ಕೆ ಪೊಲೀಸರು ಬ್ಲೂಟೂತ್ ಹೊಂದಿರುವ ಹೆಲ್ಮೆಟ್ ಗಳ ಬಳಕೆಯನ್ನು ನಿಷೇಧಿಸಿದ್ದಾರೆ ಎಂದಿದ್ದಾರೆ.

Most Read Articles

Kannada
English summary
Kerala mvd banned using umbrellas on moving two wheelers details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X