ಇಂಚಿಂಚು ಹುಡಿಕಿ ಬೊಲೆರೋಗೆ ದಂಡ! ದುಬಾರಿ ಮಾಡಿಫೈ ಕಾರನ್ನು ಬಿಟ್ಟು ಕಳಿಸಿದ ಪೊಲೀಸರು?
ತಮಿಳುನಾಡಿನ ಬೊಲೆರೋ ವಾಹನಕ್ಕೆ ಕೇರಳ ಸಾರಿಗೆ ಇಲಾಖೆ ಅಧಿಕಾರಿಗಳು ವಿನಾಕಾರಣ ದಂಡ ವಿಧಿಸಿದ್ದಾರೆ ಎಂದು ಆರೋಪಿಸಿದ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಬೊಲೆರೋ ಕಾರಿನ ಅಲಾಯ್ ವೀಲ್‌ಗಳು, ಕಾನೂನು ಬಾಹಿರ ನಂಬರ್ ಪ್ಲೇಟ್ ಹಾಗೂ ವಿಂಡ್‌ಶೀಲ್ಡ್ ಸನ್‌ಫಿಲ್ಮ್ ಅಳವಡಿಕೆ ಸಂಬಂಧ ಪೊಲೀಸರು ದಂಡ ವಿಧಿಸಿದ್ದಾರೆ.
ಬೊಲೆರೋ ಚಾಲಕನ ಆರೋಪವೇನು?: ನಮ್ಮ ಕಾರಿನ ಅಲಾಯ್ ವೀಲ್‌ಗಳು ಹೊರಬಂದಿವೆ, ಹಾಗೆಯೇ ಕಾನೂನು ಬಾಹಿರ ನಂಬರ್ ಪ್ಲೇಟ್, ವಿಂಡ್‌ಶೀಲ್ಡ್ ಸನ್‌ಫಿಲ್ಮ್ ಅಳವಡಿಕೆ ಸಂಬಂಧ ದಂಡ ವಿಧಿಸಿದ್ದಾರೆ. ಆದರೆ ಕೇರಳದ ಫಾರ್ಚುನರ್ ಕೂಡ ಮಾಡಿಫೈಗೊಂಡಿದ್ದು, ಅದಕ್ಕೆ ಯಾವುದೇ ದಂಡ ವಿಧಿಸಿಲ್ಲ ಎಂದು ಆರೋಪಿಸಿ ಎಂಬಿಎಸ್ ಮುರುಗೇಶನ್ ಎಂಬ ಫೇಸ್ಬುಕ್ ಪೇಜ್‌ನಲ್ಲಿ ಬೊಲೆರೋ ಚಾಲಕ ವಿಡಿಯೋ ಪೋಸ್ಟ್ ಮಾಡಿದ್ದಾನೆ. ಈ ಪೇಜ್‌ಗೆ ಭೇಟಿ ನೀಡಿದಾಗ, ಅವರು ಈಗಾಗಲೇ ಟ್ರಾವೆಲ್ಸ್ ನಡೆಸುತ್ತಿರುವುದು ತಿಳಿದುಬಂದಿದೆ. ಅವರು ಮೋಟಾರು ವಾಹನ ಕಾಯ್ದೆಯ ಬಗ್ಗೆ ಪರಿಚಿತರಿರುವ ಸಾಧ್ಯತೆಯಿದೆ. ಆದ್ರೆ ಅವರ ಆರೋಪ ಸರಿಯೇ? ಎಂದಬುನ್ನು ಇಲ್ಲಿ ನೋಡೋಣ.

ಮಾಡಿಫೈ ವೀಲ್‌ಗಳನ್ನು ಬಳಸುವುದು ಮೋಟಾರು ವಾಹನ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಲ್ಲ. ಆದರೆ ಯಾವ ಗಾತ್ರದ ವೀಲ್‌ಗಳನ್ನು ಬಳಸಬೇಕು ಎಂಬುದರ ಬಗ್ಗೆ ನಿಯಮವಿದೆ. ಒಂದು ನಿರ್ದಿಷ್ಟ ವಾಹನಕ್ಕೆ ಫ್ಯಾಕ್ಟರಿ ಫಿಟ್ಟಿಂಗ್‌ನಲ್ಲಿ ಅಳವಡಿಸಲಾದ ವೀಲ್‌ಗಳ ಗಾತ್ರದ ಅಲಾಯ್ ವೀಲ್‌ಗಳನ್ನು ನೀವು ಬಳಸಿದರೆ ಯಾವುದೇ ಸಮಸ್ಯೆಯಿಲ್ಲ. ಆದ್ರೆ ವೀಲ್‌ಗಳು ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ಇದ್ದಾಗ ಸಮಸ್ಯೆ ಉದ್ಭವಿಸುತ್ತದೆ.
ಈಗ ವಿಷಯಕ್ಕೆ ಬಂದರೆ ವಿಡಿಯೋದಲ್ಲಿ ಕಾಣುವ ಬೊಲೆರೊ ಕಾರಿನ ಮುಂಭಾಗದ ವೀಲ್‌ಗಳು ವಾಹನದ ಬಾಡಿಯಿಂದ ಹೊರಬಂದಿವೆ. ಹಿಂಬದಿಯ ವೀಲ್‌ಗಳು ಸಾಮಾನ್ಯವಾಗಿ ಒಳಗಿರುವಂತೆ ಕಾಣುತ್ತಿವೆ. ಹೀಗಿದ್ದಾಗ ರಸ್ತೆ ಮತ್ತು ಕಾರಿನ ನಡುವೆ ಹಿಡಿತದಲ್ಲಿ ವ್ಯತ್ಯಾಸವಾಗುವುದಲ್ಲದೇ, ಚಾಲನೆಯಲ್ಲಿ ಬ್ಯಾಲೆನ್ಸ್ ಸಿಗುವುದಿಲ್ಲ. ಇದ್ದರೇ ಎಲ್ಲಾ ವೀಲ್‌ಗಳು ಸರಿಯಾದ ಸ್ಥಾನವನ್ನು ಆಕ್ರಮಿಸಿರಬೇಕು.

ಹಾಗಾಗಿ ಬೊಲೆರೋ ಮಾಡಿಫಿಕೇಷನ್ ಕಾನೂನಾತ್ಮಕವಾಗಿ ತಪ್ಪು, ಜೊತೆಗೆ ವೀಲ್‌ಗಳು ಹೊರಬಂದಿರುವುದರಿಂದ ಕೆಸರಿನ ರಸ್ತೆಗಳಲ್ಲಿ ಪ್ರಯಾಣಿಸಿದಾಗ ಇತರ ವಾಹನ ಸವಾರರ ಮೇಲೆ ಮಣ್ಣನ್ನು ಎಸೆಯುವ ಸಾಧ್ಯತೆಗಳು ಹೆಚ್ಚು. ಇದು ಕೂಡ ಕಾನೂನಾತ್ಮಕವಾಗಿ ತಪ್ಪು. ಹಾಗೆಯೇ ಹಿಂಭಾಗದ ಚಕ್ರಗಳು ಹೊರಗಿಲ್ಲದಿದ್ದರೂ, ದಂಡ ವಿಧಿಸಿರುವುದು ಸೂಕ್ತವಲ್ಲ. ಇನ್ನು ಕಾನೂನಿನ ಪ್ರಕಾರ ವಾಹನದ ಹಿಂಭಾಗದಲ್ಲಿರುವ ನಂಬರ್ ಪ್ಲೇಟ್‌ಗೆ ಸ್ಕ್ರೂ ಮಾಡಬೇಕು. ಆದ್ರೆ ಸ್ಕ್ರೂ ಅಳವಡಿಸಿಲ್ಲ, ಇದು ಕಾನೂನುಬಾಹಿರವಾಗಿದೆ. ಇದಕ್ಕಾಗಿ ಮೋಟಾರು ವಾಹನ ಅಧಿಕಾರಿಗಳು ದಂಡ ವಿಧಿಸಿರುವುದು ಸರಿಯಾಗಿದೆ. ವಾಹನದ ಸನ್ ಫಿಲ್ಮ್‌ಗೆ ಸಂಬಂಧಿಸಿದಂತೆ ವೀಡಿಯೊದಲ್ಲಿ ಸ್ಪಷ್ಟವಾಗಿ ತೋರಿಸಿದ ಕಾರಣ ಅದನ್ನು ನಿರ್ಣಯಿಸಲಾಗದು.
ಫಾರ್ಚುನರ್ ತಪ್ಪಿದೆಯೇ?: ಫಾರ್ಚೂನರ್ ಅಲಾಯ್ ವೀಲ್‌ಗಳು ಬಾಡಿಯಿಂದ ಹೊರಗೆ ಬಂದಿಲ್ಲ. ಸರಿಯಾದ ಗಾತ್ರದಲ್ಲಿ ಸ್ಥಿರಗೊಳಿಸಲಾಗಿದೆ. ಅವರು ಆರೋಪಿಸಿದ ಹೆಚ್ಚುವರಿ ಆಫ್ಟರ್ ಮಾರ್ಕೆಟ್ ಲ್ಯಾಂಪ್‌ಗಳು ಮುಚ್ಚಿರುವ ಸ್ಥಿತಿಯಲ್ಲಿರುವ ಕಾರಣ ಅದು ಕಾನೂನುಬಾಹಿರವಲ್ಲ. ಇನ್ನು ಸನ್‌ಫಿಲ್ಮ್ ವಿಷಯಕ್ಕೆ ಬಂದರೆ ಇಂಟೀರಿಯರ್ ಕಣ್ಣಿಗೆ ಕಾಣುತ್ತಿದ್ದು, ಅದು ಕೂಡ ನಿಯಮಗಳಿಗೆ ಒಳಪಟ್ಟಿದೆ ಎಂಬುದು ನಮ್ಮ ಅಭಿಪ್ರಾಯ.
ಕಾನೂನು ಸಮಸ್ಯೆಗಳಿಲ್ಲದೇ ವಾಹನಗಳನ್ನು ಮಾಡಿಫೈಗೊಳಿಸುವ ಬಗ್ಗೆ ಅನೇಕರಿಗೆ ತಿಳಿದಿಲ್ಲ. ವಿಶೇಷವಾಗಿ ಅಲಾಯ್ ವೀಲ್‌ಗಳ ವಿಷಯಕ್ಕೆ ಬಂದಾಗ ತಪ್ಪು ತಿಳುವಳಿಕೆಯನ್ನು ಹೊಂದಿದ್ದಾರೆ. ಅಲಾಯ್ ವ್ಹೀಲ್ ಬದಲಿಯನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ. ಆದರೆ ಕಾನೂನು ಅಡಿ ಕೆಲ ನಿಯಮಗಳನ್ನು ಪಾಲಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಅದರ ಗಾತ್ರಗಳ ಮೇಲೆ ಮಾತ್ರ ನಿರ್ಬಂಧಗಳನ್ನು ಹೇರಲಾಗುತ್ತದೆ ಎಂದಬುನ್ನು ಎಲ್ಲಾ ವಾಹನ ಮಾಲೀಕರು ತಿಳಿದಿರಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications