ಬೈಕಿನ ಮಡ್ ಗಾರ್ಡ್ ತೆಗೆದು ಹಾಕಿದ ಯುವಕನಿಗೆ ದಂಡ ವಿಧಿಸಿದ ಸಾರಿಗೆ ಇಲಾಖೆ

ಟಾಟಾ ನೆಕ್ಸಾನ್ ಭಾರತದಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರು. ಈ ಕಾರನ್ನು ಕೇರಳ ಸಾರಿಗೆ ಇಲಾಖೆ ತನ್ನ ಅಧಿಕೃತ ವಾಹನವಾಗಿ ಬಳಸುತ್ತಿದೆ. ಕೇರಳ ಸಾರಿಗೆ ಇಲಾಖೆಯು ಕೇರಳದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ತಡೆಗಟ್ಟುವಲ್ಲಿ ನಿರತವಾಗಿದೆ.

ಬೈಕಿನ ಮಡ್ ಗಾರ್ಡ್ ತೆಗೆದು ಹಾಕಿದ ಯುವಕನಿಗೆ ದಂಡ ವಿಧಿಸಿದ ಸಾರಿಗೆ ಇಲಾಖೆ

ಮೋಟಾರು ವಾಹನ ಕಾಯ್ದೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕೇರಳ ಸಾರಿಗೆ ಇಲಾಖೆ ಕ್ರಮಗೊಳ್ಳುತ್ತಿರುವ ಹಲವು ವೀಡಿಯೊಗಳು ಸಾಮಾಜಿಕಜಾಲತಾಣಗಳಲ್ಲಿ ವೈರಲ್ ಆಗಿವೆ. ಈಗ ಇದಕ್ಕೆ ಪುಷ್ಟಿ ನೀಡುವಂತಹ ಮತ್ತೊಂದು ವೀಡಿಯೊವನ್ನು ಅಪ್ ಲೋಡ್ ಮಾಡಲಾಗಿದೆ.

ಬೈಕಿನ ಮಡ್ ಗಾರ್ಡ್ ತೆಗೆದು ಹಾಕಿದ ಯುವಕನಿಗೆ ದಂಡ ವಿಧಿಸಿದ ಸಾರಿಗೆ ಇಲಾಖೆ

ಇತ್ತೀಚಿಗೆ ದೇಶಾದ್ಯಂತ ಮೋಟಾರು ವಾಹನ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ತಪ್ಪಿಸಲು ಎಲ್ಲಾ ಸಾರಿಗೆ ಇಲಾಖೆಗಳು ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿವೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಬೈಕಿನ ಮಡ್ ಗಾರ್ಡ್ ತೆಗೆದು ಹಾಕಿದ ಯುವಕನಿಗೆ ದಂಡ ವಿಧಿಸಿದ ಸಾರಿಗೆ ಇಲಾಖೆ

ಕೇರಳ ಸಾರಿಗೆ ಇಲಾಖೆ ಮಾತ್ರ ಇತರ ರಾಜ್ಯಗಳ ಸಾರಿಗೆ ಇಲಾಖೆಗಳಿಗಿಂತ ಹೆಚ್ಚು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಇದಕ್ಕೆ ಇತ್ತೀಚಿಗೆ ನಡೆದಿರುವ ಘಟನೆ ಸ್ಪಷ್ಟಉದಾಹರಣೆಯಾಗಿದೆ.

ಬೈಕಿನ ಮಡ್ ಗಾರ್ಡ್ ತೆಗೆದು ಹಾಕಿದ ಯುವಕನಿಗೆ ದಂಡ ವಿಧಿಸಿದ ಸಾರಿಗೆ ಇಲಾಖೆ

ಈ ಘಟನೆಯಲ್ಲಿ ನಿಯಮ ಉಲ್ಲಂಘಿಸಿದ ಬೈಕ್ ಸವಾರನಿಗೆ ರೂ.1,000 ದಂಡ ವಿಧಿಸಲಾಗಿದೆ. ಬೈಕ್ ಸವಾರ ತನ್ನ ಯಮಹಾ ಆರ್ 15 ಬೈಕ್ ಅನ್ನು ಮಾಡಿಫೈಗೊಳಿಸಿದ್ದ ಕಾರಣಕ್ಕೆ ಸಾರಿಗೆ ಇಲಾಖೆ ದಂಡ ವಿಧಿಸಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಬೈಕಿನ ಮಡ್ ಗಾರ್ಡ್ ತೆಗೆದು ಹಾಕಿದ ಯುವಕನಿಗೆ ದಂಡ ವಿಧಿಸಿದ ಸಾರಿಗೆ ಇಲಾಖೆ

ಈ ಘಟನೆ ವಾಹನ ಮಾರ್ಪಾಡು ಮಾಡುವವರಿಗೆ ದೊಡ್ಡ ಶಾಕ್ ನೀಡಿದೆ. ಯಮಹಾ ಆರ್ 15 ಬೈಕಿನಲ್ಲಿದ್ದ ಮಡ್ ಗಾರ್ಡ್ ತೆಗೆದು ಹಾಕಿದ್ದ ಕಾರಣಕ್ಕೆ ಈ ಬೈಕ್ ಸವಾರನಿಗೆ ಸಾರಿಗೆ ಇಲಾಖೆ ದಂಡ ವಿಧಿಸಿರುವುದು ವಿಶೇಷ.

ಬೈಕಿನ ಮಡ್ ಗಾರ್ಡ್ ತೆಗೆದು ಹಾಕಿದ ಯುವಕನಿಗೆ ದಂಡ ವಿಧಿಸಿದ ಸಾರಿಗೆ ಇಲಾಖೆ

ಮಡ್ ಗಾರ್ಡ್ ಟಯರ್'ಗಳಲ್ಲಿ ಧೂಳು ಹಾಗೂ ಮಣ್ಣು ಸಿಕ್ಕಿಹಾಕಿಕೊಳ್ಳದಂತೆ ತಡೆಯುತ್ತದೆ. ಇಂತಹ ಪ್ರಮುಖ ಫೀಚರ್ ಅನ್ನು ತೆಗೆದುಹಾಕುವುದರಿಂದ ಈ ಬೈಕುಗಳ ಹಿಂದೆ ಬರುವ ಇತರ ವಾಹನ ಸವಾರರಿಗೆ ತೊಂದರೆಯುಂಟಾಗುತ್ತದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಬೈಕಿನ ಮಡ್ ಗಾರ್ಡ್ ತೆಗೆದು ಹಾಕಿದ ಯುವಕನಿಗೆ ದಂಡ ವಿಧಿಸಿದ ಸಾರಿಗೆ ಇಲಾಖೆ

ಈ ಬೈಕುಗಳಿಂದ ಹೊರ ಹೊಮ್ಮುವ ಮಣ್ಣು ಹಾಗೂ ಧೂಳಿನ ಕಣಗಳಿಂದಾಗಿ ಇತರ ವಾಹನ ಸವಾರರು ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಇದರ ಬಗ್ಗೆ ಅರಿವಿಲ್ಲದ ಕೆಲ ಯುವಕರು ಶೋಕಿಗಾಗಿ ಬೈಕಿನಲ್ಲಿರುವ ಮಡ್ ಗಾರ್ಡ್ ತೆಗೆದು ಹಾಕುತ್ತಾರೆ.

ಬೈಕಿನ ಮಡ್ ಗಾರ್ಡ್ ತೆಗೆದು ಹಾಕಿದ ಯುವಕನಿಗೆ ದಂಡ ವಿಧಿಸಿದ ಸಾರಿಗೆ ಇಲಾಖೆ

ಮಡ್ ಗಾರ್ಡ್ ತೆಗೆದು ಹಾಕುವುದನ್ನು ಸಹ ವಾಹನ ಮಾರ್ಪಾಡು ಎಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮಡ್ ಗಾರ್ಡ್ ತೆಗೆದು ಹಾಕಿದ ಯಮಹಾ ಆರ್ 15 ಬೈಕ್ ಸವಾರನಿಗೆ ಕೇರಳ ಸಾರಿಗೆ ಇಲಾಖೆ ಸ್ಥಳದಲ್ಲಿಯೇ ರೂ.1,000 ದಂಡ ವಿಧಿಸಿದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಬೈಕಿನ ಮಡ್ ಗಾರ್ಡ್ ತೆಗೆದು ಹಾಕಿದ ಯುವಕನಿಗೆ ದಂಡ ವಿಧಿಸಿದ ಸಾರಿಗೆ ಇಲಾಖೆ

ಈ ಘಟನೆಯ ವೀಡಿಯೊವನ್ನು ಜಿತೋಸ್ ಡೆಮನ್ ಎಂಬ ಯೂಟ್ಯೂಬ್ ಚಾನೆಲ್ ಅಪ್ ಲೋಡ್ ಮಾಡಿದೆ. ಅಂದ ಹಾಗೆ ಕೇರಳ ಸಾರಿಗೆ ಇಲಾಖೆಯು ತನ್ನ ಅಧಿಕೃತ ವಾಹನವಾಗಿ ಬಳಸುವ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.13,99,000ಗಳಾಗಿದೆ.

ಬೈಕಿನ ಮಡ್ ಗಾರ್ಡ್ ತೆಗೆದು ಹಾಕಿದ ಯುವಕನಿಗೆ ದಂಡ ವಿಧಿಸಿದ ಸಾರಿಗೆ ಇಲಾಖೆ

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್ ಅನ್ನು ಎಕ್ಸ್‌ಎಂ, ಎಕ್ಸ್‌ ಝಡ್ ಪ್ಲಸ್ ಹಾಗೂ ಎಕ್ಸ್‌ ಝಡ್ ಪ್ಲಸ್ ಲಕ್ಸ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್ ಅನ್ನು 60 ನಿಮಿಷಗಳಲ್ಲಿ 0 - 80% ವರೆಗೂ ಚಾರ್ಜ್ ಮಾಡಬಹುದು.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಸಾಮಾನ್ಯ ಪ್ಲಗ್‌ ಮೂಲಕ 10 - 90%ವರೆಗೆ ಚಾರ್ಜ್ ಮಾಡಲು 8.5 ಗಂಟೆ ಬೇಕಾಗುತ್ತದೆ ಎಂದು ಹೇಳಲಾಗಿದೆ. ಟಾಟಾ ಮೋಟಾರ್ಸ್ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ ಐಪಿ 67 ಪ್ರಮಾಣೀಕೃತ ಬ್ಯಾಟರಿ ಹಾಗೂ ಎಲೆಕ್ಟ್ರಿಕ್ ಮೋಟರ್‌ಗಳನ್ನು ಬಳಸಿದೆ.

ಬೈಕಿನ ಮಡ್ ಗಾರ್ಡ್ ತೆಗೆದು ಹಾಕಿದ ಯುವಕನಿಗೆ ದಂಡ ವಿಧಿಸಿದ ಸಾರಿಗೆ ಇಲಾಖೆ

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಐಸಿಇ ಕಾರುಗಳ ಪ್ಲಾಟ್‌ಫಾರಂನಲ್ಲಿಯೇ ಉತ್ಪಾದಿಸಲಾಗಿದೆ. ಟಾಟಾ ಮೋಟಾರ್ಸ್ ಕಂಪನಿಯು ಈ ಕಾರಿನಲ್ಲಿ ಹಲವಾರುಸುರಕ್ಷತಾ ಫೀಚರ್'ಗಳನ್ನು ನೀಡುತ್ತದೆ.

ಚಿತ್ರ ಕೃಪೆ: ಜಿತೋಸ್ ಡೆಮನ್

Most Read Articles

Kannada
English summary
Kerala MVD fines Yamaha R15 rider for removing mud guard. Read in Kannada.
Story first published: Monday, May 10, 2021, 15:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X