ವಾಹನ ಚಾಲನೆ ವೇಳೆ ಮೊಬೈಲ್, ಬ್ಲೂಟೂತ್ ಬಳಸುವವರ ಡ್ರೈವಿಂಗ್ ಲೈಸೆನ್ಸ್ ಅಮಾನತು ಪಡಿಸಲು ಮುಂದಾದ ಸಾರಿಗೆ ಇಲಾಖೆ

ಭಾರತದ ಮೋಟಾರು ವಾಹನ ನಿಯಮಗಳ ಪ್ರಕಾರ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುವುದು ಕಾನೂನುಬಾಹಿರ. ಈ ನಿಯಮವು ಹಲವು ವರ್ಷಗಳಿಂದ ಜಾರಿಯಲ್ಲಿದೆ.

ವಾಹನ ಚಾಲನೆ ವೇಳೆ ಮೊಬೈಲ್, ಬ್ಲೂಟೂತ್ ಬಳಸುವವರ ಡ್ರೈವಿಂಗ್ ಲೈಸೆನ್ಸ್ ಅಮಾನತು ಪಡಿಸಲು ಮುಂದಾದ ಸಾರಿಗೆ ಇಲಾಖೆ

ಈ ನಿಯಮವು ಕೇವಲ ದ್ವಿಚಕ್ರ ವಾಹನ ಸವಾರರಿಗೆ ಮಾತ್ರ ಅನ್ವಯಿಸುತ್ತದೆ ಎಂಬುದು ಕೆಲವರ ತಪ್ಪು ಕಲ್ಪನೆ. ಈ ನಿಯಮವು ಕಾರು ಚಾಲನೆ ಮಾಡುವವರಿಗೂ ಸಹ ಅನ್ವಯಿಸುತ್ತದೆ. ಕಾರು ಚಾಲಕರಿಗೆ, ಕಾರು ಚಾಲನೆ ವೇಳೆ ಮೊಬೈಲ್ ಫೋನ್ ಮಾತ್ರವಲ್ಲದೆ ಬ್ಲೂಟೂತ್, ಇಯರ್‌ಫೋನ್‌ಗಳಂತಹ ಸಾಧನಗಳನ್ನು ಬಳಸುವುದನ್ನು ಸಹ ನಿಷೇಧಿಸಲಾಗಿದೆ.

ವಾಹನ ಚಾಲನೆ ವೇಳೆ ಮೊಬೈಲ್, ಬ್ಲೂಟೂತ್ ಬಳಸುವವರ ಡ್ರೈವಿಂಗ್ ಲೈಸೆನ್ಸ್ ಅಮಾನತು ಪಡಿಸಲು ಮುಂದಾದ ಸಾರಿಗೆ ಇಲಾಖೆ

ಕೇರಳ ಸರ್ಕಾರವು ಈ ಹಳೆಯ ನಿಯಮಕ್ಕೆ ಮರು ಜೀವ ನೀಡಿದೆ. ಈ ನಿಯಮದಡಿಯಲ್ಲಿ ಈ ಹಿಂದೆ ಅನೇಕ ವಾಹನ ಸವಾರರಿಗೆ ದಂಡ ವಿಧಿಸಲಾಗಿತ್ತು. ಈಗ ಕೇರಳ ಸರ್ಕಾರವು ಮತ್ತೆ ಈ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ.

ವಾಹನ ಚಾಲನೆ ವೇಳೆ ಮೊಬೈಲ್, ಬ್ಲೂಟೂತ್ ಬಳಸುವವರ ಡ್ರೈವಿಂಗ್ ಲೈಸೆನ್ಸ್ ಅಮಾನತು ಪಡಿಸಲು ಮುಂದಾದ ಸಾರಿಗೆ ಇಲಾಖೆ

ಇನ್ನು ಮುಂದೆ ಈ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವಂತೆ ಕೇರಳ ಸರ್ಕಾರವು ಸಾರಿಗೆ ಇಲಾಖೆಗೆ ಸೂಚನೆ ನೀಡಿದೆ. ವಾಹನ ಸವಾರರು ವಾಹನ ಚಾಲನೆ ವೇಳೆ ಸೆಲ್ ಫೋನ್ ಅಥವಾ ಬ್ಲೂಟೂತ್ ಬಳಸುತ್ತಿರುವುದು ಕಂಡುಬಂದರೆ ಅಂತಹವರ ಚಾಲನಾ ಪರವಾನಗಿಗಳನ್ನು ಅಮಾನತುಗೊಳಿಸುವಂತೆ ಸೂಚಿಸಲಾಗಿದೆ.

ವಾಹನ ಚಾಲನೆ ವೇಳೆ ಮೊಬೈಲ್, ಬ್ಲೂಟೂತ್ ಬಳಸುವವರ ಡ್ರೈವಿಂಗ್ ಲೈಸೆನ್ಸ್ ಅಮಾನತು ಪಡಿಸಲು ಮುಂದಾದ ಸಾರಿಗೆ ಇಲಾಖೆ

ಹಿಂದೆ ಈ ರೀತಿ ಉಲ್ಲಂಘನೆ ಮಾಡುವವರಿಗೆ ದಂಡ ಮಾತ್ರ ವಿಧಿಸಲಾಗುತ್ತಿತ್ತು. ಆದರೆ ಭವಿಷ್ಯದಲ್ಲಿ ಈ ನಿಯಮವನ್ನು ಉಲ್ಲಂಘಿಸುವ ಕೇರಳದ ನಿವಾಸಿಗಳು ಚಾಲನಾ ಪರವಾನಗಿ ಕಳೆದುಕೊಳ್ಳಲಿದ್ದಾರೆ ಎಂದು ಅಲ್ಲಿನ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ವಾಹನ ಚಾಲನೆ ವೇಳೆ ಮೊಬೈಲ್, ಬ್ಲೂಟೂತ್ ಬಳಸುವವರ ಡ್ರೈವಿಂಗ್ ಲೈಸೆನ್ಸ್ ಅಮಾನತು ಪಡಿಸಲು ಮುಂದಾದ ಸಾರಿಗೆ ಇಲಾಖೆ

ಈಗ ಮಾರಾಟವಾಗುತ್ತಿರುವ ಬಹುತೇಕ ಕಾರುಗಳಲ್ಲಿ ಬ್ಲೂಟೂತ್ ಇನ್ಫೋಟೇನ್ ಮೆಂಟ್ ಸಿಸ್ಟಂ ನೀಡಲಾಗುತ್ತದೆ. ಈ ಫೀಚರ್ ಮೊಬೈಲ್ ಫೋನ್ ಅನ್ನು ಸಂಪರ್ಕಿಸಲು, ಒಳಬರುವ ಎಸ್‌ಎಂಎಸ್ ಸ್ವೀಕರಿಸಲು ಹಾಗೂ ಫೋನ್ ಕಾಲ್'ಗಳನ್ನು ಮಾಡಲು ನೆರವಾಗುತ್ತದೆ.

ವಾಹನ ಚಾಲನೆ ವೇಳೆ ಮೊಬೈಲ್, ಬ್ಲೂಟೂತ್ ಬಳಸುವವರ ಡ್ರೈವಿಂಗ್ ಲೈಸೆನ್ಸ್ ಅಮಾನತು ಪಡಿಸಲು ಮುಂದಾದ ಸಾರಿಗೆ ಇಲಾಖೆ

ಈ ಸಾಧನವನ್ನು ಬಳಸುವುದು ಅಷ್ಟು ಸುಲಭವಲ್ಲ. ಇದಕ್ಕೆ ಬ್ಲೂಟೂತ್ ಸಂಪರ್ಕ ಸಾಧನಗಳ ಅಗತ್ಯವಿದೆ. ಬ್ಲೂಟೂತ್ ಬಳಸಿ ಫೋನ್ ಕಾಲ್ ಮಾಡುವಾಗ ಇಲ್ಲವೇ ಎಸ್‌ಎಂಎಸ್ ಓದುವಾಗ ಚಾಲಕನ ಗಮನವು ಅದರತ್ತ ಹೋಗುವುದರಿಂದ ಅಪಘಾತಗಳಾಗುವ ಸಾಧ್ಯತೆಗಳಿರುತ್ತವೆ.

ವಾಹನ ಚಾಲನೆ ವೇಳೆ ಮೊಬೈಲ್, ಬ್ಲೂಟೂತ್ ಬಳಸುವವರ ಡ್ರೈವಿಂಗ್ ಲೈಸೆನ್ಸ್ ಅಮಾನತು ಪಡಿಸಲು ಮುಂದಾದ ಸಾರಿಗೆ ಇಲಾಖೆ

ಕರೋನಾ ವೈರಸ್ ಎರಡನೇ ಅಲೆ ದೇಶಾದ್ಯಂತ ಆರ್ಭಟಿಸಿದ ಹಿನ್ನೆಲೆಯಲ್ಲಿ ಕೇರಳ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ಕರೋನಾ ವೈರಸ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದೆ.

ವಾಹನ ಚಾಲನೆ ವೇಳೆ ಮೊಬೈಲ್, ಬ್ಲೂಟೂತ್ ಬಳಸುವವರ ಡ್ರೈವಿಂಗ್ ಲೈಸೆನ್ಸ್ ಅಮಾನತು ಪಡಿಸಲು ಮುಂದಾದ ಸಾರಿಗೆ ಇಲಾಖೆ

ಕೇರಳದಲ್ಲಿಯೂ ಸಹ ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಿರುವುದರಿಂದ ವಾಹನಗಳು ಮತ್ತೆ ರಸ್ತೆಗಿಳಿದಿವೆ. ಈಗ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಕೇರಳ ಸರ್ಕಾರವು ಮುಂದಾಗಿದೆ.

ವಾಹನ ಚಾಲನೆ ವೇಳೆ ಮೊಬೈಲ್, ಬ್ಲೂಟೂತ್ ಬಳಸುವವರ ಡ್ರೈವಿಂಗ್ ಲೈಸೆನ್ಸ್ ಅಮಾನತು ಪಡಿಸಲು ಮುಂದಾದ ಸಾರಿಗೆ ಇಲಾಖೆ

2019ರಲ್ಲಿ ಕೇರಳ ಹೈಕೋರ್ಟ್ ಕೇಂದ್ರ ಮೋಟಾರು ವಾಹನ ನಿಯಮ 21 (25) ರ ಅಡಿಯಲ್ಲಿ ಹೊಸ ನಿಯಮವನ್ನು ಹೊರಡಿಸಿತು. ಅದರನ್ವಯ ವಾಹನ ಚಾಲನೆ ವೇಳೆ ಬ್ಲೂಟೂತ್ ಸಾಧನಗಳ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಯಿತು. ಕೇರಳ ಸಾರಿಗೆ ಇಲಾಖೆಯು ಈಗ ಈ ನಿಯಮದನ್ವಯ ಕ್ರಮ ಕೈಗೊಳ್ಳಲು ಮುಂದಾಗಿದೆ.

Most Read Articles

Kannada
English summary
Kerala MVD to suspend driving license for using Blue tooth while driving. Read in Kannada.
Story first published: Wednesday, June 30, 2021, 18:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X