ಗೂಗಲ್ ಮ್ಯಾಪ್ ನೋಡಿ ಕಾರು ಚಾಲನೆ ಮಾಡಿ ಮಧ್ಯರಾತ್ರಿ ಕಾಡಿನಲ್ಲಿ ಸಿಲುಕಿದ ಕುಟುಂಬ!

ಇಂದು ಬಹುತೇಕ ಎಲ್ಲಾ ಕೆಲಸಗಳು, ವ್ಯವಹಾರಗಳು ಡಿಜಿಟಲ್ ಮೂಲಕವೇ ಹೆಚ್ಚಾಗಿ ನಡೆಯುತ್ತಿದೆ. ಇನ್ನು ಪ್ರಯಾಣದ ವೇಳೆಯೂ ಗೂಗಲ್ ಮ್ಯಾಪ್ ಅತೀ ಹೆಚ್ಚು ಬಳಸಲಾಗುತ್ತದೆ. ಗೂಗಲ್ ಮ್ಯಾಪ್ ಅನ್ನು ಬಳಸಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿದೆ.

ಗೂಗಲ್ ಮ್ಯಾಪ್ ನೋಡಿ ಕಾರು ಚಾಲನೆ ಮಾಡಿ ಮಧ್ಯರಾತ್ರಿ ಕಾಡಿನಲ್ಲಿ ಸಿಲುಕಿದ ಕುಟುಂಬ!

ನಮಗೆ ಗೊತ್ತಿಲ್ಲದ ಸ್ಥಳಗಳಿಗೂ ಇಂದು ನಾವು ದೈರ್ಯವಾಗಿ ಹೋಗುತ್ತೇವೆ, ಯಾಕೆಂದರೆ ಗೂಗಲ್ ಮ್ಯಾಪ್ ಇದೆ ಅಲ್ವ, ಅದು ನೋಡಿ ಹೋದ್ರೆ ಆಗುತ್ತೆ ಎಂದು ಹೇಳುತ್ತೇವೆ, ಗೊತ್ತಿಲ್ಲದ ಸ್ಥಳಗಳಿಗೂ ನಾವು ಗೂಗಲ್ ಮ್ಯಾಪ್ ನಲ್ಲಿ ಸರ್ಚ್ ಮಾಡಿ ತೆರಳುತ್ತೇವೆ. ಆದರೆ ಕೆಲವೊಂದು ಸಲ ಇದೇ ಗೂಗಲ್ ಮ್ಯಾಪ್ ನಿಂದ ಎಡವಟ್ಟಿನಿಂದ ದಾರಿ ತಪ್ಪಿ ಅನಾಹುತವಾಗುತ್ತದೆ. ಅದೇ ರೀತಿ ಗೂಗಲ್ ಮ್ಯಾಪ್ ನೋಡಿ ಹೋಗಿ ಮಧ್ಯರಾತ್ರಿ ಕುಟುಂಬವೊಂದು ಕಾಡಿನಲ್ಲಿ ಸಿಲುಕಿದ ಘಟನೆ ವರದಿಯಾಗಿದೆ.

ಗೂಗಲ್ ಮ್ಯಾಪ್ ನೋಡಿ ಕಾರು ಚಾಲನೆ ಮಾಡಿ ಮಧ್ಯರಾತ್ರಿ ಕಾಡಿನಲ್ಲಿ ಸಿಲುಕಿದ ಕುಟುಂಬ!

ಮುನ್ನಾರ್ ಪ್ರದೇಶದ ಖಾಸಗಿ ರೆಸಾರ್ಟ್ ನಲ್ಲಿ ತಂಗಿದ್ದ ಡಾ.ನವಾಬ್ ಮತ್ತು ಅವರ ಕುಟುಂಬ ಟಾಪ್ ಸ್ಟೇಷನ್ ಮತ್ತು ವಟ್ಟವಾಡ ಗ್ರಾಮಕ್ಕೆ ಭೇಟಿ ನೀಡಿದರು. ಹಿಂದಿರುಗುವಾಗ ಅವರು ಹೋಟೆಲ್ ತಲುಪಲು ಗೂಗಲ್ ಮ್ಯಾಪ್ ಅನ್ನು ಬಳಸಿದರು.

ಗೂಗಲ್ ಮ್ಯಾಪ್ ನೋಡಿ ಕಾರು ಚಾಲನೆ ಮಾಡಿ ಮಧ್ಯರಾತ್ರಿ ಕಾಡಿನಲ್ಲಿ ಸಿಲುಕಿದ ಕುಟುಂಬ!

ಆ ಪ್ರದೇಶದ ರಸ್ತೆಗಳ ಪರಿಚಯವಿಲ್ಲದ ಕಾರಣ ಗೂಗಲ್ ಮ್ಯಾಪ್ ಅನ್ನು ಕುರುಡಾಗಿ ಅನುಸರಿಸಿದರು. ಕೆಲ ಸಮಯ ವಾಹನ ಚಲಾಯಿಸಿದ ನಂತರ ಅವರು ಮುಖ್ಯ ರಸ್ತೆಯಿಂದ ದೂರ ಸರಿದರು ಮತ್ತು ಟೀ ತೋಟದ ನಡುವಿನ ಒರಟು ರಸ್ತೆಯಲ್ಲಿ ಕಾರನ್ನು ಚಲಾಯಿಸಿದರು.

ಗೂಗಲ್ ಮ್ಯಾಪ್ ನೋಡಿ ಕಾರು ಚಾಲನೆ ಮಾಡಿ ಮಧ್ಯರಾತ್ರಿ ಕಾಡಿನಲ್ಲಿ ಸಿಲುಕಿದ ಕುಟುಂಬ!

ಅವರು ಸುಮಾರು ಐದು ಗಂಟೆಗಳ ಕಾಲ ಒಳ ರಸ್ತೆಗಳಲ್ಲಿ ಸಾಗಿದರು ಮತ್ತು ಮಧ್ಯರಾತ್ರಿಯ ಹೊತ್ತಿಗೆ ಅವರು ನಡುರಸ್ತೆಯಲ್ಲಿ ಸಿಕ್ಕಿಹಾಕಿಕೊಂಡರು. ಏಕೆಂದರೆ ಅದು ಕೆಸರಿನಿಂದ ಕೂಡಿದ ರಸ್ತೆಗಳಾಗಿದೆ. ಗೂಗಲ್ ಮ್ಯಾಪ್ ನಲ್ಲಿ ಇವರು ಭಿನ್ನ ದಾರಿಯನ್ನು ಆಯ್ಕೆ ಮಾಡಿಕೊಂಡಿರುವ ಸಾದ್ಯತೆಗಳಿದೆ,

ಗೂಗಲ್ ಮ್ಯಾಪ್ ನೋಡಿ ಕಾರು ಚಾಲನೆ ಮಾಡಿ ಮಧ್ಯರಾತ್ರಿ ಕಾಡಿನಲ್ಲಿ ಸಿಲುಕಿದ ಕುಟುಂಬ!

ಕಾರು ಒಮ್ಮೆ ಕಾಡಿಗೆ ಪ್ರವೇಶಿಸಿದ ನಂತರ, ವಿಷಯಗಳು ಇನ್ನಷ್ಟು ಸವಾಲಾಗಿ ಪರಿಣಮಿಸಿದವು. ಡಾ.ನವಾಬ್ ಅವರ ಕುಟುಂಬ ಮಾರುತಿ ಸುಜುಕಿ ವ್ಯಾಗನ್ಆರ್ ಕಾರಿನಲ್ಲಿ ಪ್ರಯಾಣಿಸುತ್ತಿತ್ತು. ಹ್ಯಾಚ್ ಬ್ಯಾಕ್ ಮಣ್ಣಿನಲ್ಲಿ ಸಿಲುಕಿಕೊಂಡಿದೆ ಮತ್ತು ಅವರು ವಾಹನವನ್ನು ಹೊರತೆಗೆಯಲು ಯಾವುದೇ ಮಾರ್ಗವಿರಲಿಲ್ಲ. ಇವರಿಗೆ ಕೊನೆ ಬೇರಿ ದಾರಿ ಇಲ್ಲವೆಂದು ಅವರು ಅರಿತುಕೊಳ್ಳುವ ಹೊತ್ತಿಗೆ ಅವರು ಈಗಾಗಲೇ ಕಾಡಿನ ಮಧ್ಯದಲ್ಲಿದ್ದರು.

ಗೂಗಲ್ ಮ್ಯಾಪ್ ನೋಡಿ ಕಾರು ಚಾಲನೆ ಮಾಡಿ ಮಧ್ಯರಾತ್ರಿ ಕಾಡಿನಲ್ಲಿ ಸಿಲುಕಿದ ಕುಟುಂಬ!

ಅವರಿಗೆ ಬೇರೆ ದಾರಿಯು ಕೂಡ ಇರಲಿಲ್ಲ. ಕಾರು ಹಿಂದೆ ಅಥವಾ ಮುಂದಕ್ಕೆ ಚಲಿಸುತ್ತಿರಲಿಲ್ಲ, ಡಾ.ನವಾಬ್ ನಂತರ ಅಗ್ನಿಶಾಮಕ ಮತ್ತು ರೆಸಿಕ್ಯೂ ವಿಭಾಗವನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾರೆ. ಆದರೆ ಮೊಬೈಲ್ ನೇಟವರ್ಕ್ ತುಂಬಾ ಕಡಿಮೆ ಇತ್ತು. ಆದರೂ ಅವರು ಬುದ್ದಿವಂತಿಕೆ ಉಪಯೋಗಿಸಿ ಮೆಸೇಜ್ ಅನ್ನು ಕಳುಹಿಸಲು ಪ್ರಯತ್ನಿಸುತ್ತಾರೆ. ಕೊನೆಗೆ ಮೆಸೇಜ್ ಕಳುಹಿಸುವಲ್ಲಿ ಯಶಸ್ವಿಯಾದರು.

ಗೂಗಲ್ ಮ್ಯಾಪ್ ನೋಡಿ ಕಾರು ಚಾಲನೆ ಮಾಡಿ ಮಧ್ಯರಾತ್ರಿ ಕಾಡಿನಲ್ಲಿ ಸಿಲುಕಿದ ಕುಟುಂಬ!

ಮೆಸೇಜ್ ಸ್ವೀಕರಿಸಿದ ರೆಸಿಕ್ಯೂ ವಿಭಾಗವು 9 ಸಿಬ್ಬಂದಿಯ ತಂಡವು 1:30 ಗಂಟೆಗೆ ಕುಟ್ಟಿಯಾರ್ವಾಲ್ಲಿ ಪ್ರದೇಶದಲ್ಲಿ ಶೋಧ ಆರಂಭಿಸಿದ್ದರೂ, ವಾಹನ ಮತ್ತು ಪ್ರಯಾಣಿಕರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಡಾ.ನವಾಬ್ ತಮ್ಮೊಂದಿಗೆ ಹಂಚಿಕೊಂಡಿದ್ದ ಸ್ಥಳವನ್ನು ಕಂಡುಹಿಡಿಯಲು ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ.

ಗೂಗಲ್ ಮ್ಯಾಪ್ ನೋಡಿ ಕಾರು ಚಾಲನೆ ಮಾಡಿ ಮಧ್ಯರಾತ್ರಿ ಕಾಡಿನಲ್ಲಿ ಸಿಲುಕಿದ ಕುಟುಂಬ!

ಅವರು ನಂತರ ಎತ್ತರದ ಪ್ರದೇಶಕ್ಕೆ ತೆರಳಿ ಟಾರ್ಚ್ ಹಾಕಿ ಹುಡುಕಾಟ ಮಾಡುತಿದ್ದರು, ಅಧಿಕಾರಿಗಳು ಡಾ. ನವಾಬ್ ಅವರನ್ನು ಸಂಪರ್ಕಿಸಿದರು. ಅವರು ಕಾರಿನ ಹೆಡ್ ಲೈಟ್ ಅನ್ನು ಆನ್ ಮಾಡಲು ಹೇಳಿದರು, ಅದರಂತೆ ಹೆಡ್ ಲೈಟ್ ಅನ್ನು ಮಾಡಿದರು. ನಂತರ ಅಧಿಕಾರಿಗಳು ಇವರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ.

ಗೂಗಲ್ ಮ್ಯಾಪ್ ನೋಡಿ ಕಾರು ಚಾಲನೆ ಮಾಡಿ ಮಧ್ಯರಾತ್ರಿ ಕಾಡಿನಲ್ಲಿ ಸಿಲುಕಿದ ಕುಟುಂಬ!

ಅವರನ್ನು ರಕ್ಷಿಸಲು ಮುಂದಾಯಿತು. ಬೆಳಗಿನ ಜಾವ 4 ಗಂಟೆಗೆ ರಕ್ಷಣಾ ತಂಡವು ಅವರನ್ನು ರಕ್ಷಿಸಿ ಕಾಡಿನ ಹೊರಗೆ ಕರೆತರುವಲ್ಲಿ ಯಶಸ್ವಿಯಾದರು. ಇವರು ಸಿಲುಕಿಕೊಂಡ ಪ್ರದೇಶವು ಆನೆಗಳು ಮತ್ತು ಹುಲಿಯಂತಹ ಕಾಡು ಪ್ರಾಣಿಗಳಿವೆ ಎಂದು ತಿಳಿದುಬಂದಿದೆ. ಕುಟುಂಬವು ಅದೃಷ್ಟಶಾಲಿಯಾಗಿತ್ತು ಮತ್ತು ಅವರು ಅಂತಹದ್ದನ್ನು ಕಾಣಲಿಲ್ಲ.

Most Read Articles

Kannada
English summary
Kerala tourists lost their way using google map details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X