ಹೆಲ್ಮೆಟ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವುದನ್ನು ನಿಷೇಧಿಸಿದ ಸಾರಿಗೆ ಆಯುಕ್ತರು

ಕೇರಳ ರಾಜ್ಯ ಮೋಟಾರು ವಾಹನ ಇಲಾಖೆಯ ಸಾರಿಗೆ ಆಯುಕ್ತರು ಹೆಲ್ಮೆಟ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವುದು ಹಾಗೂ ಆ ಹೆಲ್ಮೆಟ್‌ಗಳ ಮೂಲಕ ಸಾರ್ವಜನಿಕ ರಸ್ತೆಗಳಲ್ಲಿ ವೀಡಿಯೊ ಮಾಡುವುದು ಕಾನೂನು ಬಾಹಿರವೆಂದು ಘೋಷಿಸಿದ್ದಾರೆ. ಈ ನಿಯಮವನ್ನು ಉಲ್ಲಂಘಿಸುವ ವಾಹನ ಸವಾರರ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಹೆಲ್ಮೆಟ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವುದನ್ನು ನಿಷೇಧಿಸಿದ ಸಾರಿಗೆ ಆಯುಕ್ತರು

ಹೆಲ್ಮೆಟ್‌ಗಳ ಮೇಲೆ ಕ್ಯಾಮೆರಾಗಳನ್ನು ಅಳವಡಿಸಿಕೊಂಡಿರುವ ವಾಹನ ಸವಾರರು ಜಾಗರೂಕತೆಯಿಂದ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡಲು ಸಾಧ್ಯವಿಲ್ಲ ಎಂಬುದು ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಕ್ಯಾಮೆರಾಗಳನ್ನು ಹೊಂದಿರುವ ಹೆಲ್ಮೆಟ್‌ಗಳು ಇತರ ವಾಹನ ಸವಾರರು ಹಾಗೂ ಪಾದಚಾರಿಗಳ ಗಮನವನ್ನು ತಮ್ಮತ್ತ ಸೆಳೆಯುತ್ತವೆ ಎಂದು ಸಾರಿಗೆ ಆಯುಕ್ತರು ಹೇಳಿದ್ದಾರೆ.

ಹೆಲ್ಮೆಟ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವುದನ್ನು ನಿಷೇಧಿಸಿದ ಸಾರಿಗೆ ಆಯುಕ್ತರು

ಈ ಆದೇಶಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆಗಳಿವೆ. ಕೆಲ ದಿನಗಳ ಹಿಂದೆ ಕೇರಳ ಪೊಲೀಸರು ಹೆಲ್ಮೆಟ್‌ನಲ್ಲಿ ಕ್ಯಾಮೆರಾ ಹೊಂದಿ ಕೆಟಿಎಂ ಬೈಕ್ ಚಾಲನೆ ಮಾಡುತ್ತಿದ್ದ ಬೈಕ್ ಸವಾರನ ವಿರುದ್ಧ ಕ್ರಮ ಕೈಗೊಂಡಿದ್ದರು.

ಹೆಲ್ಮೆಟ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವುದನ್ನು ನಿಷೇಧಿಸಿದ ಸಾರಿಗೆ ಆಯುಕ್ತರು

ಆ ಸಮಯದಲ್ಲಿ ಹೆಲ್ಮೆಟ್‌ನಲ್ಲಿ ಕ್ಯಾಮೆರಾ ಅಳವಡಿಸಬಾರದು ಎಂದು ಪೊಲೀಸರು ಬೈಕ್ ಸವಾರನಿಗೆ ತಿಳಿಸಿದ್ದರು. ಇದರಿಂದ ಬೈಕ್ ಸವಾರ ಹಾಗೂ ಪೊಲೀಸರ ನಡುವೆ ವಾಗ್ವಾದ ಉಂಟಾಗಿತ್ತು. ಕೊನೆಗೂ ಪೊಲೀಸರು ಆ ಬೈಕ್ ಸವಾರನಿಗೆ ದಂಡ ವಿಧಿಸಿದ್ದರು.

ಹೆಲ್ಮೆಟ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವುದನ್ನು ನಿಷೇಧಿಸಿದ ಸಾರಿಗೆ ಆಯುಕ್ತರು

ಆದರೆ ಬೈಕ್ ನಲ್ಲಿ ಯಾವುದೇ ಮಿರರ್ ಗಳಿಲ್ಲ ಎಂಬ ಕಾರಣಕ್ಕೆ ಆತನಿಗೆ ದಂಡ ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ಅಲ್ಲಿನ ಸಾರಿಗೆ ಆಯುಕ್ತರು ಹೆಲ್ಮೆಟ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಬಾರದು ಎಂದು ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದಾರೆ. ಇದರ ಹಿಂದಿರುವ ನಿಜವಾದ ಕಾರಣ ನಿಗೂಢವಾಗಿಯೇ ಉಳಿದಿದೆ ಎಂಬುದು ದ್ವಿಚಕ್ರ ವಾಹನ ಸವಾರರ ಅಭಿಪ್ರಾಯ.

ಹೆಲ್ಮೆಟ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವುದನ್ನು ನಿಷೇಧಿಸಿದ ಸಾರಿಗೆ ಆಯುಕ್ತರು

ಇದೇ ವೇಳೆ ಹೆಲ್ಮೆಟ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವುದರಿಂದ ವಿವಿಧ ಪ್ರಯೋಜನಗಳಿವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಸಾರ್ವಜನಿಕ ರಸ್ತೆಗಳಲ್ಲಿ ಕ್ಯಾಮೆರಾಗಳು ಬಹಳ ಅವಶ್ಯಕ. ಸಾಮಾನ್ಯವಾಗಿ ವಿದೇಶಗಳಲ್ಲಿರುವ ಕಾರುಗಳ ಡ್ಯಾಶ್‌ಬೋರ್ಡ್‌ನಲ್ಲಿ ಕ್ಯಾಮೆರಾಗಳನ್ನು ಅಳವಡಿಸುವುದು ಸಾಮಾನ್ಯ ಸಂಗತಿಯಾಗಿದೆ. ಇದೇ ಟ್ರೆಂಡ್ ಈಗ ಭಾರತದಲ್ಲಿ ವೇಗವಾಗಿ ಹರಡುತ್ತಿದೆ.

ಹೆಲ್ಮೆಟ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವುದನ್ನು ನಿಷೇಧಿಸಿದ ಸಾರಿಗೆ ಆಯುಕ್ತರು

ಭಾರತದಲ್ಲಿಯೂ ಸಹ ಹಲವಾರು ಜನರು ಈಗ ತಮ್ಮ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಕ್ಯಾಮೆರಾಗಳನ್ನು ಅಳವಡಿಸುತ್ತಾರೆ. ಅದೇ ರೀತಿ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡುವಾಗ ಕ್ಯಾಮೆರಾ ಇರುವ ಹೆಲ್ಮೆಟ್‌ಗಳನ್ನು ಬಳಸುತ್ತಿದ್ದಾರೆ. ಈಗ ಹೆಚ್ಚು ಹೆಚ್ಚು ಜನರು ದ್ವಿಚಕ್ರ ವಾಹನಗಳಲ್ಲಿ ಕ್ಯಾಮೆರಾ ಹೊಂದಿರುವ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಾಲನೆ ಮಾಡುವುದನ್ನು ಕಾಣಬಹುದು.

ಹೆಲ್ಮೆಟ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವುದನ್ನು ನಿಷೇಧಿಸಿದ ಸಾರಿಗೆ ಆಯುಕ್ತರು

ಕೆಲವರು ತಮ್ಮ ಪ್ರಯಾಣವನ್ನು ಕ್ಯಾಮೆರಾ ಹೊಂದಿರುವ ಹೆಲ್ಮೆಟ್‌ಗಳ ಮೂಲಕ ದಾಖಲಿಸುತ್ತಾರೆ. ನಂತರ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಾರೆ. ಇನ್ನೂ ಕೆಲವರು ಈ ದೃಶ್ಯಗಳನ್ನು ಸಾಕ್ಷಿಯಾಗಿ ಬಳಸುತ್ತಾರೆ. ಅಂದರೆ ಅಪಘಾತದಂತಹ ಸಂದರ್ಭದಲ್ಲಿ ಹೆಲ್ಮೆಟ್ ಮೌಂಟೆಡ್ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಗಳನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಗುತ್ತದೆ.

ಹೆಲ್ಮೆಟ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವುದನ್ನು ನಿಷೇಧಿಸಿದ ಸಾರಿಗೆ ಆಯುಕ್ತರು

ವಿನಾ ಕಾರಣ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣ ದಾಖಲಿಸಿದರೆ ಈ ವೀಡಿಯೊಗಳನ್ನು ತೋರಿಸಿ, ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಲಾಗಿದೆಎಂಬುದನ್ನು ಸಾಬೀತು ಪಡಿಸಬಹುದು. ಈ ಹಿಂದೆ ಇಂತಹ ಹಲವು ಘಟನೆಗಳು ನಡೆದಿವೆ. ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳ ಮೂಲಕ ಅನಗತ್ಯವಾಗಿ ದಂಡ ವಿಧಿಸುವುದನ್ನು ತಪ್ಪಿಸಬಹುದು.

ಹೆಲ್ಮೆಟ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವುದನ್ನು ನಿಷೇಧಿಸಿದ ಸಾರಿಗೆ ಆಯುಕ್ತರು

ಇದೇ ವೇಳೆ ಹೆಲ್ಮೆಟ್ ಮೌಂಟೆಡ್ ಕ್ಯಾಮೆರಾಗಳಲ್ಲಿ ದಾಖಲಾದ ವೀಡಿಯೊ ದೃಶ್ಯಗಳು ಪದೇ ಪದೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವೀಡಿಯೊಗಳಲ್ಲಿ ಸಂಚಾರಿ ಪೊಲೀಸರು ತಪ್ಪು ಮಾಡುವ ದೃಶ್ಯಗಳು ಸೇರಿವೆ ಎಂಬುದು ಗಮನಾರ್ಹ.

ಹೆಲ್ಮೆಟ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವುದನ್ನು ನಿಷೇಧಿಸಿದ ಸಾರಿಗೆ ಆಯುಕ್ತರು

ಅದೇ ರೀತಿ ಹೆಲ್ಮೆಟ್‌ಗಳಲ್ಲಿ ಅಳವಡಿಸಿರುವ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಗಳ ಮೂಲಕ ಪೊಲೀಸರು ಮಾಡಿದ ಒಳ್ಳೆಯ ಕಾರ್ಯಗಳು ಸಹ ಹೊರ ಜಗತ್ತಿಗೆ ಬಹಿರಂಗಗೊಂಡಿವೆ.

ಹೆಲ್ಮೆಟ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವುದನ್ನು ನಿಷೇಧಿಸಿದ ಸಾರಿಗೆ ಆಯುಕ್ತರು

ಕೆಲವೊಮ್ಮೆ ಈ ಹೆಲ್ಮೆಟ್ ಮೌಟೆಂಡ್ ಕ್ಯಾಮೆರಾಗಳು ಮಿಲಿಟರಿಯಂತಹ ಸೂಕ್ಷ್ಮ ಪ್ರದೇಶಗಳನ್ನು ಸಹ ಸೆರೆ ಹಿಡಿಯುತ್ತವೆ. ಇದರಿಂದ ದೊಡ್ಡ ದೊಡ್ಡ ಅನಾಹುತಗಳು ಸಂಭವಿಸುತ್ತವೆ ಎಂಬುದು ಹಲವು ದ್ವಿಚಕ್ರ ವಾಹನ ಸವಾರರಿಗೆ ತಿಳಿದಿಲ್ಲ. ಹೆಲ್ಮೆಟ್ ಮೌಟೆಂಡ್ ಕ್ಯಾಮೆರಾಗಳಿಂದ ಅನುಕೂಲ ಮಾತ್ರವಲ್ಲದೇ ಅನಾನುಕೂಲಗಳೂ ಇವೆ.

ಹೆಲ್ಮೆಟ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವುದನ್ನು ನಿಷೇಧಿಸಿದ ಸಾರಿಗೆ ಆಯುಕ್ತರು

ಈ ಕ್ಯಾಮೆರಾಗಳಿಂದ ಇತರ ದ್ವಿಚಕ್ರ ವಾಹನಗಳ ಸವಾರರು ವಿಚಲಿತರಾಗಬಹುದು. ಆದರೆ ಈ ಕ್ಯಾಮೆರಾಗಳಲ್ಲಿ ಸೆರೆಯಾಗುವ ದೃಶ್ಯಗಳು ವಿವಿಧ ಉದ್ದೇಶಗಳಿಗೆ ಬಳಕೆಯಾಗುತ್ತವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಂದಾಗಿ ಪ್ರತಿ ವರ್ಷ ಸುಮಾರು 1.50 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ ಎಂಬುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಳಿಗೆ ರಸ್ತೆ ನಿಯಮಗಳನ್ನು ಉಲ್ಲಂಘಿಸುವುದೇ ಪ್ರಮುಖ ಕಾರಣವಾಗಿದೆ. ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಮಾಡುವುದು ಸಹ ಸಂಚಾರಿ ನಿಯಮ ಉಲ್ಲಂಘನೆಯಾಗಿದೆ. ದ್ವಿಚಕ್ರ ವಾಹನ ಸವಾರರಿಗೆ ಅಪಘಾತವಾದಾಗ ತಲೆಗೆ ಪೆಟ್ಟು ಬಿಟ್ಟು ಪ್ರಾಣ ಕಳೆದು ಕೊಳ್ಳುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕೆ ದ್ವಿಚಕ್ರ ವಾಹನ ಸವಾರರಿಗೆ ಮಾತ್ರವಲ್ಲದೇ ಹಿಂಬದಿಯ ಸವಾರರಿಗೂ ಸಹ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಹಿಂಬದಿ ಸವಾರರು ಹೆಲ್ಮೆಟ್ ಧರಿಸದಿದ್ದರೇ ಸವಾರನಿಗೆ ದಂಡ ವಿಧಿಸಲಾಗುತ್ತದೆ.

Most Read Articles

Kannada
English summary
Kerala transport commissioner bans using of helmet mounted cameras details
Story first published: Thursday, August 12, 2021, 13:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X