ಓಡೋ ಮೀಟರ್ ಕೇಬಲ್ ತೆಗೆದು ಹಾಕಿದ ಕಾರು ಡೀಲರ್'ಗೆ ರೂ.1 ಲಕ್ಷ ದಂಡ ವಿಧಿಸಿದ ಸಾರಿಗೆ ಇಲಾಖೆ

ಮೋಟಾರು ವಾಹನ ಕಾನೂನುಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವುದರಲ್ಲಿ ಕೇರಳ ರಾಜ್ಯವು ಇತರ ರಾಜ್ಯಗಳಿಗಿಂತ ಹೆಚ್ಚು ಸಕ್ರಿಯವಾಗಿದೆ. ಈ ಹಿಂದೆ ಹಲವು ಬಾರಿ ಕೇರಳ ಪೊಲೀಸರು ಹಾಗೂ ಕೇರಳ ಸಾರಿಗೆ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಮಾಡಿಫೈ ಮಾಡಲಾದ ವಾಹನಗಳ ವಿರುದ್ಧ ಕ್ರಮ ಕೈಗೊಂಡಿದ್ದರು.

ಓಡೋ ಮೀಟರ್ ಕೇಬಲ್ ತೆಗೆದು ಹಾಕಿದ ಕಾರು ಡೀಲರ್'ಗೆ ರೂ.1 ಲಕ್ಷ ದಂಡ ವಿಧಿಸಿದ ಸಾರಿಗೆ ಇಲಾಖೆ

ಇದರ ಜೊತೆಗೆ ಕೇರಳ ಪೊಲೀಸರು ರಸ್ತೆಯಲ್ಲಿ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವ ವಾಹನ ಸವಾರರ ವಿರುದ್ಧವೂ ಕ್ರಮ ಕೈಗೊಳ್ಳುತ್ತಿದ್ದಾರೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಅಲ್ಲಿನ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಈಗ ಕೇರಳ ಮೋಟಾರ್ ವಾಹನಗಳ ಇಲಾಖೆಯು ವಾಹನ ವಿತರಕ ಕೇಂದ್ರವೊಂದಕ್ಕೆ ರೂ. 1 ಲಕ್ಷಗಳ ದಂಡ ವಿಧಿಸಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಮಾತೃಭೂಮಿ ನ್ಯೂಸ್ ಯೂಟ್ಯೂಬ್ ಚಾನೆಲ್ ನಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಲಾಗಿದೆ.

ಓಡೋ ಮೀಟರ್ ಕೇಬಲ್ ತೆಗೆದು ಹಾಕಿದ ಕಾರು ಡೀಲರ್'ಗೆ ರೂ.1 ಲಕ್ಷ ದಂಡ ವಿಧಿಸಿದ ಸಾರಿಗೆ ಇಲಾಖೆ

ಈ ವೀಡಿಯೊದಲ್ಲಿ ಕಾಣುವ ಕಾರು ಸಂಬಂಧ ಪಟ್ಟ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿಯಾಗಿಲ್ಲ ಎಂಬುದು ದೃಢ ಪಟ್ಟಿದೆ. ಡೀಲರ್‌ಶಿಪ್‌ನ ದೈನಂದಿನ ಬಳಕೆಗಾಗಿ ಬಳಸಲಾಗುತ್ತಿದ್ದ ಕಾರನ್ನು ಮೋಟಾರ್ ವಾಹನ ಇಲಾಖೆ ವಶಪಡಿಸಿಕೊಂಡಿದೆ. ಡೀಲರ್‌ಗಳು ಈ ಕಾರ್ ಅನ್ನು ಕೋಯಿಕ್ಕೋಡ್‌ನಿಂದ ತಿರುವನಂತಪುರಂನಲ್ಲಿರುವ ಮತ್ತೊಂದು ಡೀಲರ್‌ಶಿಪ್ ಕೇಂದ್ರಕ್ಕೆ ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದರು.

ಓಡೋ ಮೀಟರ್ ಕೇಬಲ್ ತೆಗೆದು ಹಾಕಿದ ಕಾರು ಡೀಲರ್'ಗೆ ರೂ.1 ಲಕ್ಷ ದಂಡ ವಿಧಿಸಿದ ಸಾರಿಗೆ ಇಲಾಖೆ

ಮೋಟಾರ್ ವಾಹನಗಳ ಇಲಾಖೆಯ ಪ್ರಕಾರ, Maruti Suzuki Ertiga ಎಂಪಿವಿಯ ಚಾಲಕ ವ್ಯಾಪಾರ ನೋಂದಣಿ ಪ್ರಮಾಣಪತ್ರವನ್ನು ಹೊಂದಿರಲಿಲ್ಲ. ಕಾರನ್ನು ಒಂದು ಡೀಲರ್‌ಶಿಪ್ ಕೇಂದ್ರದಿಂದ ಇನ್ನೊಂದಕ್ಕೆ ಸ್ಥಳಾಂತರಿಸುವಾಗ ವ್ಯಾಪಾರ ನೋಂದಣಿ ಪ್ರಮಾಣಪತ್ರ ಹೊಂದಿರುವ ಅಗತ್ಯವಿದೆ. ಈ ಕಾರಿನ ತಪಾಸಣೆ ವೇಳೆ ಡೀಲರ್‌ಗಳು ಕಾರಿನ ಓಡೋ ಮೀಟರ್ ಅನ್ನು ಮಾಡಿಫೈ ಮಾಡಿರುವುದು ಕಂಡು ಬಂದಿದೆ. ಈ ಅಕ್ರಮ ಕೃತ್ಯಕ್ಕಾಗಿ ಮೋಟಾರ್ ವಾಹನ ಕಾಯ್ದೆ ಸೆಕ್ಷನ್ 182 ಎ ಅಡಿಯಲ್ಲಿ ಡೀಲರ್ ಗೆ ರೂ. 1 ಲಕ್ಷ ದಂಡ ವಿಧಿಸಲಾಗಿದೆ.

ಓಡೋ ಮೀಟರ್ ಕೇಬಲ್ ತೆಗೆದು ಹಾಕಿದ ಕಾರು ಡೀಲರ್'ಗೆ ರೂ.1 ಲಕ್ಷ ದಂಡ ವಿಧಿಸಿದ ಸಾರಿಗೆ ಇಲಾಖೆ

ಮೋಟಾರ್ ವಾಹನ ಕಾಯ್ದೆಯ ಈ ಸೆಕ್ಷನ್ ಅನ್ನು ಅಕ್ರಮವೆಸಗುವ ವಿತರಕರ ವಿರುದ್ಧ ಬಳಸಲಾಗುತ್ತದೆ. ವಾಹನವನ್ನು ಉತ್ಪಾದನಾ ಘಟಕದಿಂದ ಪಡೆದ ನಂತರ ಆ ವಾಹನವನ್ನು ಗ್ರಾಹಕರಿಗೆ ಮಾರಾಟ ಮಾಡುವವರೆಗೂ ವಾಹನದ ರಚನೆ ಅಥವಾ ಭಾಗಗಳನ್ನು ವಿತರಕರು ಮಾರ್ಪಡಿಸುವುದು ಕ್ರಿಮಿನಲ್ ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ವಿತರಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ದಂಡ ಪಾವತಿಸುವವರೆಗೂ ಈ ಎರ್ಟಿಗಾ ಕಾರು ಮೋಟಾರು ವಾಹನಗಳ ಇಲಾಖೆಯ ವಶದಲ್ಲಿರುತ್ತದೆ.

ಓಡೋ ಮೀಟರ್ ಕೇಬಲ್ ತೆಗೆದು ಹಾಕಿದ ಕಾರು ಡೀಲರ್'ಗೆ ರೂ.1 ಲಕ್ಷ ದಂಡ ವಿಧಿಸಿದ ಸಾರಿಗೆ ಇಲಾಖೆ

ಕೋಯಿಕ್ಕೋಡ್ ಹಾಗೂ ಕೇರಳದ ರಾಜಧಾನಿ ತಿರುವನಂತಪುರಂ ನಡುವೆ ಸುಮಾರು 370 ಕಿ.ಮೀ ಅಂತರವಿದೆ. ಈ 370 ಕಿ.ಮೀ ದೂರದ ಸಂಚಾರವನ್ನು ಮರೆ ಮಾಚಲು ಡೀಲರ್‌ಗಳು ಕಾರಿನಲ್ಲಿದ್ದ ಓಡೋ ಮೀಟರ್‌ ಕೇಬಲ್ ಅನ್ನು ತೆಗೆದು ಹಾಕಿದ್ದಾರೆ. ಈ Ertiga ಕಾರನ್ನು ಮೊದಲು ಈ ರೀತಿ ಚಾಲನೆ ಮಾಡಲಾಗಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಓಡೋ ಮೀಟರ್ ಕೇಬಲ್ ತೆಗೆದು ಹಾಕಿದ ಕಾರು ಡೀಲರ್'ಗೆ ರೂ.1 ಲಕ್ಷ ದಂಡ ವಿಧಿಸಿದ ಸಾರಿಗೆ ಇಲಾಖೆ

ಅವರು ಈ ಕಾರ್ ಅನ್ನು ತಿರುವನಂತಪುರಂನಲ್ಲಿರುವ ಶೋರೂಂಗೆ ತೆಗೆದು ಕೊಂಡು ಹೋಗುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೋಟಾರ್ ವಾಹನ ಇಲಾಖೆ ಅಧಿಕಾರಿಗಳು ಕಾರಿನ ಆಟೋ ಮೀಟರ್ ಕಾರ್ಯನಿರ್ವಹಿಸದ ಕಾರಣ ಡೀಲರ್ ಗಳು ಏನು ಹೇಳಿದರೂ ನಂಬುವ ಮನಸ್ಥಿತಿಯಲ್ಲಿಲ್ಲ. ನಿಜ ಹೇಳಬೇಕೆಂದರೆ ದೇಶದಾದ್ಯಂತ ಕೆಲವು ವಿತರಕರು ಈಗಲೂ ಈ ರೀತಿ ಓಡೋ ಮೀಟರ್ ಕೇಬಲ್ ಗಳನ್ನು ತೆಗೆದು ಹಾಕಿ ವಾಹನಗಳನ್ನು ಚಾಲನೆ ಮಾಡುತ್ತಿದ್ದಾರೆ.

ಕಾರ್ ಅನ್ನು ಯಾರೂ ಬಳಸಿಲ್ಲ ಎಂದು ಗ್ರಾಹಕರ ಮುಂದೆ ಬಿಂಬಿಸುವ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ಇನ್ನು ಕೆಲವು ವಿತರಕರು ತಮ್ಮ ಸ್ವಂತ ಬಳಕೆಗಾಗಿ ಹೊಸ ಕಾರುಗಳನ್ನು ಬಳಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ರೀತಿ ಉದ್ದೇಶ ಪೂರ್ವಕವಾಗಿ ಓಡೋ ಮೀಟರ್ ಅನ್ನು ಹಾಳು ಮಾಡುವುದರಿಂದ ಇತರ ಬೇರೆ ತೊಂದರೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ.

ಓಡೋ ಮೀಟರ್ ಕೇಬಲ್ ತೆಗೆದು ಹಾಕಿದ ಕಾರು ಡೀಲರ್'ಗೆ ರೂ.1 ಲಕ್ಷ ದಂಡ ವಿಧಿಸಿದ ಸಾರಿಗೆ ಇಲಾಖೆ

ಓಡೋ ಮೀಟರ್ ಕಾರ್ಯ ನಿರ್ವಹಿಸದಿದ್ದರೆ ಚಾಲಕನಿಗೆ ವಾಹನ ಎಷ್ಟು ದೂರ ಚಲಿಸುತ್ತದೆ ಎಂದು ತಿಳಿಯುವುದಿಲ್ಲ. ಜೊತೆಗೆ ವಾಹನವು ಎಷ್ಟು ವೇಗದಲ್ಲಿ ಚಲಿಸುತ್ತಿದೆ ಎಂಬುದೂ ತಿಳಿಯುವುದಿಲ್ಲ. ಇದರಿಂದ ಅಪಘಾತಗಳಾಗುವ ಸಾಧ್ಯತೆಗಳಿರುತ್ತವೆ. ಆಧುನಿಕ ಕಾರುಗಳಲ್ಲಿರುವ ಓಡೋ ಆಟೋಮೀಟರ್ ಗಳನ್ನು ಹಾಳು ಮಾಡಿದರೆ ಸ್ಟೀಯರಿಂಗ್ ವ್ಹೀಲ್ ಕಾರ್ಯಾಚರಣೆಗೆ ಸಮಸ್ಯೆಯಾಗಬಹುದು. ಇದರಿಂದಲೂ ಅಪಘಾತಗಳಾಗುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕೆ ಓಡೋ ಮೀಟರ್ ಗಳನ್ನು ಹಾಳು ಮಾಡಿದರೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ. ಅಮೆರಿಕಾದಲ್ಲಿ ಓಡೋ ಮೀಟರ್ ಹಾಳುಗೆಡುವುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಮೆರಿಕಾದಲ್ಲಿ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇತ್ತೀಚಿಗೆ ಈ ರೀತಿಯ ಅಕ್ರಮವೆಸಗಿದ ವಾಹನ ವಿತರಕನಿಗೆ ಅಮೆರಿಕಾದ ನ್ಯಾಯಾಲಯವೊಂದು ಕಾರಾಗೃಹ ಶಿಕ್ಷೆ ವಿಧಿಸಿತ್ತು.

ಚಿತ್ರ ಕೃಪೆ: ಮಾತೃಭೂಮಿ ನ್ಯೂಸ್

Most Read Articles

Kannada
English summary
Kerala transport department imposes rs 1 lakh fine on dealer for cutting odometer cable details
Story first published: Monday, August 30, 2021, 20:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X