ಛಲವಿದ್ರೆ ಏನು ಬೇಕಾದರೂ ಸಾಧ್ಯ.. ಮಾರುತಿ 800ನ್ನು ರೋಲ್ಸ್ ರಾಯ್ಸ್ ಕಾರಗಿಸಿದ ಯುವ ಪ್ರತಿಭೆ
ಛಲವಿದ್ದರೆ ಯಾರು ಏನನ್ನು ಬೇಕಾದರೂ ಸಾಧಿಸಲು ಸಾಧ್ಯ. ಅದನ್ನೇ ಇಲ್ಲೊಬ್ಬ ಯುವಕ ಮಾಡಿ ತೋರಿಸಿದ್ದಾನೆ. ಹಳೆಯ ಮಾರುತಿ 800 (Maruti 800) ಕಾರನ್ನು ಹೊಚ್ಚ ಹೊಸ ರೋಲ್ಸ್ ರಾಯ್ಸ್ (Rolls Royce) ಕಾರಿನಂತೆ ಕಡಿಮೆ ಖರ್ಚಿನಲ್ಲಿ ಮರುವಿನ್ಯಾಸಗೊಳಿಸಿದ್ದಾನೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಕೇರಳದ 18 ವರ್ಷದ ಹದಿಫ್ ಮೊದಲಿನಿಂದಲೂ ಆಟೋಮೊಬೈಲ್ ಉತ್ಸಾಹಿಯಾಗಿದ್ದು, ಮಾರುತಿ 800 ಕಾರನ್ನು ರೋಲ್ಸ್ ರಾಯ್ಸ್ ಕಾರಿಂದಂತೆ ಮಾರ್ಪಾಡು ಮಾಡಿ, ಎಲ್ಲರನ್ನು ಬೆರಗುಗೊಳಿಸಿದ್ದಾನೆ. ಈ ಕೆಲಸಕ್ಕೆ ಆತ ಒಟ್ಟು 45,000 ರೂಪಾಯಿ ಖರ್ಚು ಮಾಡಿದ್ದಾನೆ. ಹದಿಫ್‌ನ ಈ ಅದ್ಭುತ ಸಾಧನೆಯನ್ನು ಟ್ರಿಕ್ಸ್ ಟ್ಯೂಬ್ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅದು 3 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ.

ಈ ವೀಡಿಯೊದಲ್ಲಿ ಹದಿಫ್‌ನ ಕಾರುಗಳ ಮೇಲಿನ ಪ್ರೀತಿ ಹಾಗೂ ಐಷಾರಾಮಿ ವಾಹನದಂತೆ ಹಳೆಯ ಕಾರನ್ನು ಮಾರ್ಪಾಡು ಮಾಡಿರುವ ಕೌಶಲ್ಯವನ್ನು ಕಾಣಬಹುದು. ಇನ್ನೂ ಗಮನಿಸಬೇಕಾದ ಅಂಶವೆಂದರೆ, ಹದಿಫ್ ಅವರೇ ಈ ಕಾರಿಗೆ ರೋಲ್ಸ್ ರಾಯ್ಸ್ ನಂತೆ ಲೋಗೋವನ್ನು ವಿನ್ಯಾಸ ಮಾಡಿದ್ದಾರೆ. ಜೊತೆಗೆ ಹಲವು ತಿಂಗಳು ಮಾರುತಿ 800ನ್ನು ರೋಲ್ಸ್ ರಾಯ್ಸ್ ಕಾರಾಗಿ ಪರಿವರ್ತಿಸುವ ಕೆಲಸದಲ್ಲಿ ಅವರು ಶ್ರಮವಹಿಸಿದ್ದರಂತೆ.
ಕಾರಿನ ಒಳಭಾಗ ಮತ್ತು ಮುಂಭಾಗದ ಪ್ರಮುಖ ಬದಲಾವಣೆಗಳಾಗಿವೆ. ಕಾರಿನ ಬಾಡಿ (ದೇಹ) ದಪ್ಪ, ದೃಢವಾದ ವಿನ್ಯಾಸವನ್ನು ಹೊಂದಿದೆ. ಗ್ರಿಲ್ ಮತ್ತು ಹೆಡ್‌ಲೈಟ್ ರೋಲ್ಸ್ ರಾಯ್ಸ್ ಕಾರಿಗೆ ಹೋಲಿಕೆಯಾಗುತ್ತದೆ. ಈ ಮಾರುತಿ 800ನ್ನು ರೋಲ್ಸ್ ರಾಯ್ಸ್ ಕಾರಿನಂತೆ ಮಾರ್ಪಾಡು ಮಾಡಲು, ಮೆಟಲ್ ಶಿಟ್ ಸೇರಿದಂತೆ ಕೆಲವೇ ಕೆಲವು ಪರಿಕರಗಳನ್ನು ಬಳಕೆ ಮಾಡಿದ್ದಾರೆ.

ಇದೇ, ಹದಿಫ್ ಅವರು ಮರುವಿನ್ಯಾಸಗೊಳಿಸಿದ ಮೊದಲ ವಾಹನವಲ್ಲ. ಈ ಹಿಂದೆ, ಬೈಕ್ ಎಂಜಿನ್ ಬಳಸಿ, ಅದ್ಭುತವಾಗಿ ಜೀಪ್ ತಯಾರಿಸಿದ್ದರು. ಏನೇ ಆಗಲಿ.. 18 ವರ್ಷದ ಯುವಕ ತನ್ನ ಕಾರುಗಳ ಮೇಲಿನ ಪ್ರೀತಿಯಿಂದ ಮಾರುತಿ 800ನ್ನು ರೋಲ್ಸ್ ರಾಯ್ಸ್ ಆಗಿ ಪರಿವರ್ತಿಸಿ, ಛಲವಿದ್ದರೆ ಏನು ಬೇಕಾದರೂ ಸಾಧ್ಯ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾನೆ.
ಮಾರುತಿ 800 (Maruti 800) ಸರಿ ಸುಮಾರು ಮೂರು ದಶಕಗಳ ಕಾಲ ಭಾರತದ ಮಾರುಕಟ್ಟೆಯಲ್ಲಿ ರಾಜನಂತೆ ಮೆರೆದಿತ್ತು. ಇದು ಅತ್ಯಂತ ಕಡಿಮೆ ಬೆಲೆಗೆ ಖರೀದಿಗೆ ದೊರೆಯುತ್ತಿದ್ದರಿಂದ ಪ್ರತಿಯೊಬ್ಬರು ಇಷ್ಟಪಟ್ಟು ಖರೀದಿಸುತ್ತಿದ್ದರು. ಆದರೆ, ದಿನ ಕಳೆದಂತೆ ಬೇಡಿಕೆ ಕುಸಿತವಾದ ಹಿನ್ನೆಲೆ, 2014ರಲ್ಲಿ ಇದರ ಮಾರಾಟವನ್ನು ಸ್ಥಗಿತಗೊಳಿಸಲಾಯಿತು. ಆ ಜಾಗಕ್ಕೆ ಮಾರುತಿ ಸುಜುಕಿ ಆಲ್ಟೊ 800 ಬಂತು. ಅದನ್ನು ಈ ವರ್ಷಾರಂಭದಲ್ಲಿ ಮಾರಾಟದಿಂದ ನಿಲ್ಲಿಸಲಾಗಿದೆ.
2014 ರಲ್ಲಿ ಮಾರುತಿ 800 ರೂ.2.06 ಲಕ್ಷದಿಂದ ರೂ.2.38 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿತ್ತು. ಪೆಟ್ರೋಲ್ ಹಾಗೂ ಎಲ್‌ಪಿಜಿ ಎಂಜಿನ್ ಆಯ್ಕೆಯಲ್ಲಿ ಸಿಗುತ್ತಿತ್ತು. ಅದಕ್ಕೆ ತಕ್ಕಂತೆ 14.0 - 16.1 kmpl ಮೈಲೇಜ್ ನೀಡುತ್ತಿತ್ತು. ಜೊತೆಗೆ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications