ಭೇಷ್ ಬ್ರೋ!.. ಕಡಿಮೆ ಖರ್ಚಿನಲ್ಲಿ 'ಪೋರ್ಷೆ 911' ಮಾದರಿಯಲ್ಲೇ ಎಲೆಕ್ಟ್ರಿಕ್ ಕಾರು ತಯಾರಿಸಿದ ಯುವಕ
ವಿಶ್ವದಲ್ಲಿಯೇ ಭಾರತ ಅತ್ಯಂತ ಪ್ರತಿಭಾವಂತ ಯುವಕರನ್ನು ಹೊಂದಿರುವ ದೇಶವಾಗಿದೆ. ಅದರಲ್ಲೂ ಆಟೋಮೊಬೈಲ್ ವಿಭಾಗದಲ್ಲಿ ಸಾಕಷ್ಟು ಪರಿಣಿತರಿದ್ದು, ಇಂಧನ ಚಾಲಿತ ಕಾರುಗಳನ್ನು ಕಡಿಮೆ ಖರ್ಚಿನಲ್ಲಿ ಎಲೆಕ್ಟ್ರಿಕ್ ಕಾರುಗಳಾಗಿ ಪರಿವರ್ತಿಸುವ ಎಷ್ಟೋ ಉದಾಹರಣೆಗಳನ್ನು ನಾವು-ನೀವು ನೋಡಿದ್ದೇವೆ.
ಕೇರಳ ಮೂಲಕ ಯುವಕ ರಾಕೇಶ್ ಬಾಬು ಎಂಬುವವರೂ ಐಷಾರಾಮಿ ಪೋರ್ಷೆ 911 ಮಿನಿಯೇಚರ್ (Porsche 911 miniature) ಗೆ ಹೋಲಿಕೆಯಾಗುವ ಎಲೆಕ್ಟ್ರಿಕ್ ಕಾರನ್ನು ತಯಾರಿಸಿದ್ದಾರೆ. ಈ ವಿಡಿಯೋವನ್ನು ಅವರೇ ತಮ್ಮ ಯೂಟ್ಯೂಬ್ ಚಾನೆಲ್ ಸುಡಸ್ ಕಸ್ಟಮ್ಸ್ (Sudus Customs) ನಲ್ಲಿ ಹಂಚಿಕೊಂಡಿದ್ದಾರೆ. ರಾಕೇಶ್ ಬಾಬು ಕೌಶಲ್ಯಕ್ಕೆ ಹಲವಾರು ಫಿದಾ ಆಗಿದ್ದಾರೆ.

ಈಗಾಲೇ, ವಿವಿಧ ಕಾರು ಹಾಗೂ ಬೈಕ್‌ಗಳನ್ನು ಮಾರ್ಪಾಡು ಮಾಡಿ, ರಾಕೇಶ್ ಬಾಬು ಖ್ಯಾತಿ ಗಳಿಸಿದ್ದು, ಪೋರ್ಷೆ 911 ಮಿನಿಯೇಚರ್ ಗೆ ಹೋಲುವ ಎಲೆಕ್ಟ್ರಿಕ್ ಕಾರನ್ನು ಮಕ್ಕಳಿಗಾಗಿ ತಮ್ಮ ಗ್ಯಾರೇಜ್‌ನಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಅದಕ್ಕಾಗಿ ತುಂಬಾ ಕಷ್ಟಪಟ್ಟಿದ್ದಾರೆ. ಕಾರಿನ ವಿನ್ಯಾಸ (ಡಿಸೈನ್) ಪೋರ್ಷೆ 911ಗೆ ಒಂದಿಷ್ಟು ವ್ಯತ್ಯಾಸವಾಗದಂತೆ ನೋಡಿಕೊಂಡು ಅತ್ಯಾಕರ್ಷಕವಾಗಿ ತಯಾರಿಸಿದ್ದಾರೆ.
ಈ ಎಲೆಕ್ಟ್ರಿಕ್ ಕಾರಿನ ಫ್ರಂಟ್ ಹಳೆಯ ತಲೆಮಾರಿನ ಪೋರ್ಷೆ 911ಗೆ ಹೋಲುತ್ತದೆ. ಟಿವಿಎಸ್ ಎಕ್ಸ್ಎಲ್100 (TVS XL100) ಪಡೆದ ಹೆಡ್‌ಲ್ಯಾಂಪ್ ಅಳವಡಿಸಲಾಗಿದ್ದು, ಮಾರುಕಟ್ಟೆಯಲ್ಲಿ ಸಿಗುವ ಫಾಗ್ ಲ್ಯಾಂಪ್, ಏಂಜೆಲ್ ಲೈಟ್‌ನಿಂದ ಕೂಡ ಅಲಂಕರಿಸಲಾಗಿದೆ. ವೀಲ್ಸ್ ಕೂಡ ಅಲಾಯ್ ವೀಲ್ಸ್ ನಂತೆ ಕಾಣುವಂತೆ ವಿನ್ಯಾಸಗೊಳಿಸಲಾಗಿದೆ. ಟೈರ್‌ಗಳನ್ನು ಎಪ್ರಿಲಿಯಾ ಸ್ಕೂಟರ್ ಹಾಗೂ ಸಸ್ಪೆನ್ಷನ್ ಸೆಟಪ್ ಅನ್ನು ಹೋಂಡಾ ಆಕ್ಟಿವಾದಿಂದ ಎರವಲು ಪಡೆಯಲಾಗಿದೆ.

ಪೋರ್ಷೆ 911 ಕಾರಿಗೆ ಹೋಲಿಕೆ ಮಾಡಿದರೆ, ಈ ಕಾರು ಸ್ವಲ್ಪ ಎತ್ತರವಾಗಿದ್ದು, ಮಕ್ಕಳು ಆರಾಮದಾಯವಾಗಿ ಪ್ರಯಾಣಿಸಬಹುದು. ರೂಫ್ ಭಾಗವನ್ನು ಖಾಲಿ ಬಿಡಲಾಗಿದೆ. ಒಳಭಾಗ ಕೂಡ ಅಚ್ಚುಕಟ್ಟಾಗಿ ವಿನ್ಯಾಸ ಮಾಡಲಾಗಿದ್ದು, ಇಬ್ಬರೂ ಆರಾಮದಾಯವಾಗಿ ಪ್ರಯಾಣಿಯಬಹುದು. ಹೊರ ಭಾಗ ಸಂಪೂರ್ಣವಾಗಿ ಹಳದಿ (ಯೆಲ್ಲೋ) ಬಣ್ಣವನ್ನು ಬಳಿಯಲಾಗಿದೆ. ಇದರಿಂದ ನೋಡಲು ಅಂದವಾಗಿ ಕಾಣುತ್ತದೆ.
ಈ ಎಲೆಕ್ಟ್ರಿಕ್ ಕಾರು, 48 ವಿ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, 750 ಡಬ್ಲ್ಯೂ ಎಲೆಕ್ಟ್ರಿಕ್ ಮೋಟರ್ ಉಪಯೋಗಿಸಲಾಗಿದೆ. ಸಂಪೂರ್ಣ ಚಾರ್ಜ್ ನಲ್ಲಿ 40 - 50 ಕಿಮೀ ರೇಂಜ್ ನೀಡಲಿದ್ದು, ಇದರ ಮೋಟಾರ್ ಹಿಂದಿನ (ರೇರ್) ವೀಲ್ಸ್ ಗೆ ಪವರ್ ಕಳುಹಿಸುತ್ತದೆ. ಏನೇ ಆಗಲಿ.. ರಾಕೇಶ್ ಬಾಬು ಪೋರ್ಷೆ 911 ಮಿನಿಯೇಚರ್ ಗೆ ಹೋಲಿಕೆಯಾಗುವ ಎಲೆಕ್ಟ್ರಿಕ್ ಕಾರು ತಯಾರಿಸಿರುವುಕ್ಕೆ ಮೆಚ್ಚಲೇ ಬೇಕು.

ಇನ್ನು, ಕಳೆದ ಕೆಲವು ದಿನಗಳ ಹಿಂದೆ, ಕೇರಳದ ಯುವಕ ಹದಿಫ್, ಮಾರುತಿ 800 ಕಾರನ್ನು ರೋಲ್ಸ್ ರಾಯ್ಸ್ ಕಾರಿಂದಂತೆ ಮಾರ್ಪಾಡು ಮಾಡಿ, ಎಲ್ಲರನ್ನು ಬೆರಗುಗೊಳಿಸಿದ್ದ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿತ್ತು. ಈ ರೀತಿ ಕಾರನ್ನು ಮಾರ್ಪಾಡು ಮಾಡಲು ಆತ ಕೇವಲ ರೂ.45,000 ರೂಪಾಯಿ ಖರ್ಚು ಮಾಡಿದ್ದನು. ಗ್ರಿಲ್ ಮತ್ತು ಹೆಡ್‌ಲೈಟ್ ರೋಲ್ಸ್ ರಾಯ್ಸ್ ಕಾರಿಗೆ ಹೋಲಿಕೆಯಾಗುವಂತೆ ತಯಾರಿಸಿ, ಎಲ್ಲರ ಗಮನ ಸೆಳೆದಿದ್ದನು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications