Just In
Don't Miss!
- News
ಕೊರೊನಾ ಸೋಂಕು ಹೆಚ್ಚಳ: ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ
- Movies
ಜಾಕಿ ಚಾನ್ ತಮ್ಮ ಮಗನಿಗೆ ಸಾವಿರಾರು ಕೋಟಿ ಆಸ್ತಿಯನ್ನು ಕೊಡುತ್ತಿಲ್ಲವೇಕೆ?
- Lifestyle
ಭಾನುವಾರದ ಭವಿಷ್ಯ: ಈ ದಿನ ಯಾವ ರಾಶಿಯವರಿಗೆ ಅದೃಷ್ಟದ ದಿನ
- Sports
ಹೈದರಾಬಾದ್ ಸೋಲಿಸಿ ಅಗ್ರ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
- Finance
ಮಹಾರಾಷ್ಟ್ರದಲ್ಲಿ ಲಾಕ್ಡೌನ್: ಕಾರುಗಳ ಉತ್ಪಾದನೆ ಮೇಲೆ ಭಾರೀ ಪರಿಣಾಮ
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮನೆಯಲ್ಲೇ ಅತ್ಯಾಧುನಿಕ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಯುವಕ
ಭಾರತದಲ್ಲಿ ಇಂಧನ ಬೆಲೆಯು ಗಗನಕ್ಕೇರಿರುವುದರಿಂದ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಹಲವಾರು ಜನಪ್ರಿಯ ವಾಹನ ತಯಾರಕ ಎಲೆಕ್ಟ್ರಿಕ್ ವಾಹನಾಗಳನ್ನು ಅಭಿವೃದ್ದಿ ಪಡಿಸುತ್ತಿದೆ. ಇನ್ನು ಗ್ರಾಹಕರು ಕೂಡ ಎಲೆಕ್ಟ್ರಿಕ್ ವಾಹನಗಳ ಕಡೆ ಮುಖಮಾಡುತ್ತಿದ್ದಾರೆ.

ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುವ ಸಮಯದಲ್ಲಿ ಕೇರಳದ ಮೂಲದ ವ್ಯಕ್ತಿ ರಾಕೇಶ್ ಬಾಬು ಅವರು ಮನೆಯಲ್ಲಿಯೇ ಎಲೆಕ್ಟ್ರಿಕ್ ವಾಹನವನ್ನು ತಯಾರಿಸಿದ್ದಾರೆ. ಈ ವಿಡಿಯೋವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ಎಲೆಕ್ಟ್ರಿಕ್ ಬೈಕನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಯೋಜಿಸಿರುವ ಸಂಸ್ಥೆಗೆ ತಾನು ಇದನ್ನು ಮಾಡುತ್ತಿದ್ದೇನೆ ಎಂದು ಹೇಳುವ ಮೂಲಕ ವಿಡಿಯೋ ಪ್ರಾರಂಭವಾಗುತ್ತದೆ.

ರಾಕೇಶ್ ಬಾಬು ಸಂಸ್ಥೆಗೆ ಬೈಕ್‌ನ ಮೊದಲ ಮೂಲಮಾದರಿಯನ್ನು ನಿರ್ಮಿಸುತ್ತಿದ್ದಾರೆ ಮತ್ತು ಅವರು ಸಣ್ಣ ಬದಲಾವಣೆಗಳನ್ನು ಮಾಡಿದ ನಂತರ ಕೆಲವು ಹಂತದ ಪರಿಶೀಲನೆಯ ಬಳಿಕ ಈ ಬೈಕನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸುತ್ತಿದ್ದಾರೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಈ ಉದ್ದೇಶಕ್ಕಾಗಿ ಚೀನಾದಿಂದ ಎಲೆಕ್ಟ್ರಿಕ್ ಬೈಕ್ ಗಳನ್ನು ಆಮದು ಮಾಡಿಕೊಂಡಿದ್ದಾರೆ. ಇದನ್ನು ಅದನ್ನು ಸಂಪೂರ್ಣವಾಗಿ ಬೇರ್ಪಡಿಸಿದ್ದಾರೆ. ಆಮದು ಮಾಡಿಕೊಂಡ ಬೈಕ್ ಗಳು ವಾಸ್ತವವಾಗಿ ಕೆಫೆ ರೇಸರ್ ಬಾಡಿ ಶೈಲಿಯನ್ನು ಹೊಂದಿದೆ.

ನಂತರ ಅದರ ಭಾಗಗಳನ್ನು ಬಳಿಸಿ ಹೊಸ ವಿನ್ಯಾಸದಲ್ಲಿ ಎಲೆಕ್ಟ್ರಿಕ್ ಬೈಕನ್ನು ಸಿದ್ದಪಡಿಸಿದ್ದಾರೆ. ಈ ಬೈಕಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳೊಂದಿಗೆ ದಪ್ಪವಾದ ಟೈರ್‌ಗಳು ಮತ್ತು ಸ್ಪೋಕ್ ವ್ಹೀಲ್‌ಗಳನ್ನು ಹೊಂದಿತ್ತು. ಉದ್ದವಾದ ಸೀಟ್ ನೀಡಲು ಬೈಕಿನ ಫ್ರೇಮ್ ಅನ್ನು ವಿಸ್ತರಿಸಸಿದೆ.
MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ರಾಕೇಶ್ ಹೊಸ ಡಮ್ಮಿ ಇಂಧನ ಟ್ಯಾಂಕ್ ಮತ್ತು ಸೈಡ್ ಪ್ಯಾನೆಲ್‌ಗಳನ್ನು ತಯಾರಿಸಿದರು ಮತ್ತು ಮುಂಭಾಗದ ಫೋರ್ಕ್‌ಗಳನ್ನು ಹೋಂಡಾ ಯೂನಿಕಾರ್ನ್ ಯುನಿಟ್ ಗಳೊಂದಿಗೆ ಬದಲಾಯಿಸಲಾಯಿತು.

ಬ್ಯಾಟರಿಗಳನ್ನು ಸಾಮಾನ್ಯವಾಗಿ ಇರಿಸಲಾಗಿರುವ ಪ್ರದೇಶವನ್ನು ದೊಡ್ಡ ಬ್ಯಾಟರಿಗಳಿಗೆ ಅನುಕೂಲವಾಗುವಂತೆ ಮಾರ್ಪಡಿಸಲಾಗಿದೆ. ಇನ್ನು ಬೈಕಿನ ಎಂಜಿನ್‌ನಂತೆ ಕಾಣುವ ಫೈಬರ್ ಗ್ಲಾಸ್ ಕವರ್ ಅನ್ನು ಬ್ಯಾಟರಿ ಭಾಗವನ್ನು ಸರಿದೂಗಿಸಲು ರಚಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್
ಎಲ್ಲಾ ಮಾರ್ಪಾಡುಗಳನ್ನು ಮಾಡಿದ ನಂತರ ತುಕ್ಕು ಹಿಡಿಯುವ ಮಸ್ಯೆಗಳನ್ನು ತಪ್ಪಿಸಲು ಫ್ರೇಮ್ ಅನ್ನು ಸಂಪೂರ್ಣವಾಗಿ ಚಿತ್ರಿಸಲಾಗಿದೆ. ಇನ್ನು ಇವರು ತಯಾರಿಸಿದ ಬೈಕಿನ ಫ್ಯೂಯಲ್ ಟ್ಯಾಂಕ್ ಸೈಡ್ ಪ್ಯಾನೆಲ್‌ಗಳನ್ನು ಕ್ರಮವಾಗಿ ಚೆರ್ರಿ ಕೆಂಪು ಮತ್ತು ಕಪ್ಪು ಬಣ್ಣದಲ್ಲಿದೆ.
ಆಮದು ಮಾಡಿಕೊಂಡ ಬೈಕಿನ ಹೆಡ್‌ಲೈಟ್‌ಗಳು ಟರ್ನ್ ಇಂಡಿಕೇಟರ್‌ಗಳು, ಟೈಲ್ ಲೈಟ್‌ಗಳನ್ನು ಇದಕ್ಕೆ ನೀಡಿದ್ದಾರೆ. ಇದನ್ನು ಹೊರತುಪಡಿಸಿ ಇವರು ಹೊಸದಾದ ಸೀಟ್ ಮತ್ತು ಹ್ಯಾಂಡಲ್ ಬಾರ್ ಅನ್ನು ನೀಡಿದ್ದಾರೆ. ಅಲ್ಲದೇ ಇವರು ತಯಾರಿಸಿದ ಹ್ಯಾಂಡಲ್ ಬಾರ್ ಅನ್ನು ಈ ಬೈಕಿನಲ್ಲಿ ನೀಡಲಾಗಿದೆ.
ಈ ಹೊಸ ಎಲೆಕ್ಟ್ರಿ ಬೈಕಿನಲ್ಲಿ ಹ್ಯಾಂಡಲ್ ಬಾರ್‌ನಲ್ಲಿನ ಅಕ್ಸಿಲೇಟರ್ ಮತ್ತು ಇತರ ಸ್ವಿಚ್‌ಗಳನ್ನು ನೀಡಲಾಗಿದೆ. ಈ ಬೈಕ್ ಹಬ್ ಮೌಂಟಡ್ 2000ಡಬ್ಲ್ಯು ಎಲೆಕ್ಟ್ರಿಕ್ ಮೋಟರ್ ಅನ್ನು ಪಡೆಯುತ್ತದೆ.

ರಾಕೇಶ್ ಬಾಬು ಅವರ ಎಲ್ಲಾ ವೀಡಿಯೊಗಳಿಂದ ಯಾವಾಗಲೂ ಆಶ್ಚರ್ಯಗೊಳಿಸುತ್ತಾರೆ ಮತ್ತು ಈ ವಿಡಿಯೋ ಕೂಡ ಇದಕ್ಕೆ ಹೊರತಾಗಿಲ್ಲ. ವಿಡಿಯೋದಲ್ಲಿ ಬೈಕನ್ನು ತಯಾರಿಸುವ ಪ್ರತಿಯೊಂದು ಹಂತವನ್ನು ವಿಶ್ಲೇಷಣೆಯ ಮೂಲಕ ತೋರಿಸಿದ್ದಾರೆ. ರಾಕೇಶ್ ಬಾಬು ಸೀಮಿತ ಸಂಪನ್ಮೂಲಗಳೊಂದಿಗೆ ಅವರು ಮನೆಯಲ್ಲಿ ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು ತಯಾರಿಸಿದ್ದಾರೆ. ಇದರ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Image Courtesy: sudus custom