ಟೀಕ್ ಸೇರಿದಂತೆ ಹಲವು ಮರಗಳಿಂದ ತಯಾರಾಯ್ತು ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್

ರಾಯಲ್ ಎನ್‌ಫೀಲ್ಡ್ ಕಂಪನಿಯ ಬೈಕುಗಳು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಹಲವು ದೇಶಗಳಲ್ಲಿ ಜನಪ್ರಿಯವಾಗಿವೆ. ರಾಯಲ್ ಎನ್‌ಫೀಲ್ಡ್ ವಿಶ್ವದ ಅತ್ಯಂತ ಹಳೆಯ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದು.

ಟೀಕ್ ಸೇರಿದಂತೆ ಹಲವು ಮರಗಳಿಂದ ತಯಾರಾಯ್ತು ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್

ಕೇರಳದ ಯುವಕನೊಬ್ಬ ರಾಯಲ್ ಎನ್‌ಫೀಲ್ಡ್ ಕಂಪನಿಯ ಬೈಕ್ ಅನ್ನು ಮರದಿಂದ ತಯಾರಿಸಿದ್ದಾನೆ. ಈತ ಮರದಿಂದ ತಯಾರಿಸಿರುವುದು ಹಳೆಯ ಬುಲೆಟ್ ಮಾದರಿ ಬೈಕ್ ಅನ್ನು. 1980ರಿಂದ 2000ದವರೆಗೆ ಚಾಲ್ತಿಯಲ್ಲಿದ್ದ ಹಳೆಯ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಎಲ್ಲಾ ವಯೋಮಾನದವರನ್ನು ತನ್ನತ್ತ ಸೆಳೆದಿತ್ತು.

ಟೀಕ್ ಸೇರಿದಂತೆ ಹಲವು ಮರಗಳಿಂದ ತಯಾರಾಯ್ತು ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್

ಈ ಯುವಕ ಸಹ ಹಳೆಯ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕಿನ ಅಭಿಮಾನಿ ಎನ್ನುವುದು ಗಮನಾರ್ಹ. ಈ ಕಾರಣಕ್ಕಾ ಆತ ಹಳೆಯ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಅನ್ನು ಮರದಿಂದ ತಯಾರಿಸಿದ್ದಾನೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಟೀಕ್ ಸೇರಿದಂತೆ ಹಲವು ಮರಗಳಿಂದ ತಯಾರಾಯ್ತು ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್

ಹ್ಯಾಂಡಲ್‌ನಿಂದ ವ್ಹೀಲ್'ವರೆಗೆ ಎಲ್ಲಾ ಭಾಗಗಳನ್ನು ಮರದಿಂದಲೇ ತಯಾರಿಸಲಾಗಿದೆ. ಬ್ರೇಕ್‌, ಕಿಕ್‌ಸ್ಟಾರ್ಟ್‌, ಗೇರ್, ಸ್ಟ್ಯಾಂಡ್‌, ಎಂಜಿನ್‌, ಬ್ರೇಕ್ ಕೇಬಲ್‌, ಫುಟ್ ರೆಸ್ಟ್, ಹೆಡ್‌ಲೈಟ್‌ಗಳು ಮರದಿಂದ ತಯಾರಾಗಿವೆ.

ಟೀಕ್ ಸೇರಿದಂತೆ ಹಲವು ಮರಗಳಿಂದ ತಯಾರಾಯ್ತು ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್

ಪ್ರತಿಯೊಂದು ಭಾಗವು ಮರದಿಂದ ತಯಾರಾಗಿದ್ದರೂ ಸಹ ಬೈಕ್ ನೈಜವಾಗಿ ಕಾಣುತ್ತವೆ. ಇದು ನೋಡುಗರನ್ನು ತನ್ನತ್ತ ಆಕರ್ಷಿಸುತ್ತದೆ. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಜಿಧಿನ್ ಕರುಲೈ ಎಂಬ ಯುವಕ ಈ ಅದ್ಭುತ ಕಾರ್ಯಕ್ಕೆ ಕೈಹಾಕಿದ್ದಾನೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಟೀಕ್ ಸೇರಿದಂತೆ ಹಲವು ಮರಗಳಿಂದ ತಯಾರಾಯ್ತು ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್

ಈ ಮರದ ಬೈಕ್ ತಯಾರಿಸಲು ಆತ ಮಲೇಷಿಯಾದ ಮರಗಳನ್ನು ಬಳಸಿದ್ದಾನೆ. ಜೊತೆಗೆ ತೇಗದ ಮರಗಳನ್ನು ಬಳಸಲಾಗಿದೆ. ಈ ಮರಗಳ ಸಹಾಯದಿಂದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಟೀಕ್ ಸೇರಿದಂತೆ ಹಲವು ಮರಗಳಿಂದ ತಯಾರಾಯ್ತು ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್

ಈ ಮರದ ಬೈಕ್ ತಯಾರಿಸಲು ಜಿಧಿನ್ ಎರಡು ವರ್ಷ ತೆಗೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ತನ್ನ ಎಲೆಕ್ಟ್ರಿಷಿಯನ್ ವೃತ್ತಿಯ ನಡುವೆ ಬೈಕ್ ತಯಾರಿಸಬೇಕಾದ ಕಾರಣಕ್ಕೆ 2 ವರ್ಷ ತೆಗೆದುಕೊಳ್ಳಲಾಗಿದೆ ಎಂದು ಜಿಧಿನ್ ಕರುಲೈ ತಿಳಿಸಿದ್ದಾನೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಟೀಕ್ ಸೇರಿದಂತೆ ಹಲವು ಮರಗಳಿಂದ ತಯಾರಾಯ್ತು ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್

ಜಿಧಿನ್ ಕರುಲೈ ಮರದಿಂದ ತಯಾರಿಸಿರುವುದು ಕಿಕ್ ಸ್ಟಾರ್ಟ್ ಹಾಗೂ ಗೇರ್ ಲಿವರ್ ಎರಡನ್ನೂ ಒಂದೇ ಬದಿಯಲ್ಲಿ ಹೊಂದಿರುವ ಹಳೆಯ ಬುಲೆಟ್ ಎಂಬುದು ಈ ಬೈಕ್ ಅನ್ನು ನೋಡಿದರೆ ತಿಳಿಯುತ್ತದೆ.

ಮರದಿಂದ ತಯಾರಾಗಿರುವ ಈ ಬೈಕಿನ ಆಕಾರ ಹಾಗೂ ಶೈಲಿಯನ್ನು ನೋಡಿದರೂ ಸಹ ಈ ಬೈಕ್ ಹಳೆಯ ಬುಲೆಟ್ ಮಾದರಿ ಬೈಕ್ ಎಂಬುದು ಖಚಿತವಾಗುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಟೀಕ್ ಸೇರಿದಂತೆ ಹಲವು ಮರಗಳಿಂದ ತಯಾರಾಯ್ತು ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್

ಕೇರಳ ಯುವಕನ ಈ ಕಾರ್ಯವು ನೆಟಿಜನ್‌ಗಳನ್ನು ಮಾತ್ರವಲ್ಲದೆ ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರನ್ನು ಸಹ ಅಚ್ಚರಿಗೊಳಿಸಿದೆ. ಜಿಧಿನ್ ಕರುಲೈನಲ್ಲಿರುವ ಪ್ರತಿಭೆಯನ್ನು ಜನರು ಶ್ಲಾಘಿಸುತ್ತಿದ್ದಾರೆ.

Most Read Articles

Kannada
English summary
Kerala youth makes Royal Enfield Bullet bike from wood. Read in Kannada.
Story first published: Monday, March 15, 2021, 14:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X