ಕಿಯಾ ಸೆಲ್ಟೋಸ್ & ಮರ್ಸಿಡಿಸ್ ಡಿಕ್ಕಿ: ಬೆಂಝ್ ರಿಪೇರಿಗೆ ಸೆಲ್ಟೋಸ್ ಬೆಲೆಗಿಂತ ದುಪ್ಪಟ್ಟು ಖರ್ಚು!

ಭಾರತೀಯ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವುದು ಸವಾಲಿನ ವಿಷಯವಾಗಿದೆ ಎಂದು ಎನ್ನಬಹುದು. ಇದರಿಂದ ವಾಹನ ಚಾಲನೆ ಮಾಡುವಾಗ ಹಲವಾರು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಭಾರತದಲ್ಲಿ ಉತ್ತಮ ರಸ್ತೆಗಳು ನಿರ್ಮಾಣವಾಗುತ್ತಿದ್ದರೂ, ವಾಹಗಳ ಆಪಾಘತ ಸಂಭವಿಸುವ ಸಂಖ್ಯೆಯು ಕಡಿಮೆಯಾಗುತ್ತಿಲ್ಲ. ರಾತ್ರಿ ಮತ್ತು ಮುಂಚಾನೆ ಸಮಯದಲ್ಲಿ ವಾಹನ ಚಾಲಯಿಸುವಾಗ ಹೆಚ್ಚಿನ ಎಚ್ಚರವಹಿಸಬೇಕಿದೆ.

ರಸ್ತೆ ಅಪಘಾತಗಳು ಸಂಖ್ಯೆ ಹೆಚ್ಚುತ್ತಿರುವಾಗ, ಜನರು ಈಗ ಉತ್ತಮ ಗುಣಮಟ್ಟದ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಕಿಯಾ ಸೆಲ್ಟೋಸ್ ಎಸ್‍ಯುವಿಯು ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಕಾರಿಗೆ ಡಿಕ್ಕಿ ಹೊಡೆದು ವೀಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ನಿಖಿಲ್ ರಾಣಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದ ಪ್ರಕಾರ, ಮರ್ಸಿಡಿಸ್-ಬೆನ್ಜ್ ಇ-ಕ್ಲಾಸ್ ಐಷಾರಾಮಿ ಸೆಡಾನ್ ಕಿಯಾ ಸೆಲ್ಟೋಸ್‌ಗೆ ಡಿಕ್ಕಿ ಹೊಡೆದಿದೆ.

Kia Seltos

ಇಲ್ಲಿ ಯಾವ ಕಾರಿನ ಡ್ರೈವರ್ ತಪ್ಪು ಎಂದು ತಿಳಿದುಬಂದಿಲ್ಲ. ಅಪಘಾತದಲ್ಲಿ ಎರಡೂ ಕಾರುಗಳ ಎಡಭಾಗ ಜಖಂಗೊಂಡಿದೆ. ಚಿತ್ರಗಳನ್ನು ನೋಡಿದಾಗ, ಕಿಯಾ ಸೆಲ್ಟೋಸ್ ಹೆಚ್ಚು ಹಾನಿಗೊಳಗಾಗಿದೆ ಎಂದು ತೋರುತ್ತದೆ. ಅಪಘಾತದಲ್ಲಿ ಮುಂಭಾಗದ ಬಂಪರ್, ಹೆಡ್‌ಲೈಟ್, ಫೆಂಡರ್ ಮತ್ತು ಎಡಭಾಗದ ಟೈರ್‌ಗೆ ಹಾನಿಯಾಗಿದೆ. ಕಿಯಾ ಸೆಲ್ಟೋಸ್‌ನ ಕ್ಯಾಬಿನ್ ಹಾಗೇ ಕಾಣುತ್ತದೆ. ಈ ಅಪಘಾತದಲ್ಲಿ ಬಾನಿಟ್ ಕೂಡ ಹಾನಿಗೊಳಗಾಗಿದೆ.

ಈ ಅಪಘಾತದಲ್ಲಿ ಮರ್ಸಿಡಿಸ್-ಬೆಂಝ್ ಇ-ಕ್ಲಾಸ್ ಕೂಡ ಅಪಘಾತದಲ್ಲಿ ಹಾನಿಗೊಳಗಾಗಿದೆ. ಕಿಯಾ ಸೆಲ್ಟೋಸ್‌ನಂತೆಯೇ, ಹೆಡ್‌ಲೈಟ್, ಬಂಪರ್‌ನ ಒಂದು ಭಾಗ, ಫೆಂಡರ್ ಮತ್ತು ಬಾನೆಟ್ ಇ-ಕ್ಲಾಸ್‌ನಲ್ಲಿ ಹಾನಿಗೊಳಗಾಗಿದೆ. ಈ ಅಪಘಾತದಲ್ಲಿ ಡೋರ್ ಮತ್ತು ORVM ಸಹ ಸ್ವಲ್ಪ ಹಾನಿಯಾಗಿದೆ. ಅದೃಷ್ಟವಶಾತ್, ಕಿಯಾ ಸೆಲ್ಟೋಸ್ ಮತ್ತು ಮರ್ಸಿಡಿಸ್ ಬೆಂಝ್ ಎರಡರಲ್ಲೂ ಪ್ರಯಾಣಿಕರು ಯಾವುದೇ ದೊಡ್ಡ ಗಾಯಗಳಿಲ್ಲದೆ ಪಾರಾಗಿದ್ದಾರೆ.

Kia Seltos

ಮರ್ಸಿಡಿಸ್-ಬೆಂಝ್ ಇ-ಕ್ಲಾಸ್‌ನಲ್ಲಿನ ಏರ್‌ಬ್ಯಾಗ್‌ಗಳು ಸಮಯಕ್ಕೆ ಸರಿಯಾಗಿ ನಿಯೋಜನೆಯಾಗಿರುವುದು ನಾವು ನೋಡಬಹುದು. ಆದರೆ ಕಿಯಾ ಸೆಲ್ಟೋಸ್‌ಗೆ ನಾವು ಅದನ್ನು ಖಚಿತಪಡಿಸಲು ಸಾಧ್ಯವಿಲ್ಲ. ಈ ವ್ಯತ್ಯಾಸವು ಚಿತ್ರವನ್ನು ತೆಗೆದ ವಿಧಾನದ ಕಾರಣದಿಂದಾಗಿರಬಹುದು. ಅಪಘಾತದಲ್ಲಿ ಇ-ಕ್ಲಾಸ್‌ನ ಟೈರ್ ಕೂಡ ಹಾನಿಯಾಗಿದೆ. ಚಿತ್ರಗಳಲ್ಲಿ, ಕಿಯಾ ಸೆಲ್ಟೋಸ್ ದೊಡ್ಡ ಹಾನಿಯನ್ನು ಅನುಭವಿಸಿದೆ ಮತ್ತು ಇ-ಕ್ಲಾಸ್ ಮಾಲೀಕರು ಅದೃಷ್ಟಶಾಲಿಯಾಗಿದ್ದಾರೆ.

ಐಷಾರಾಮಿ ಕಾರನ್ನು ನಿರ್ವಹಿಸುವುದು ಮಧ್ಯಮ ಗಾತ್ರದ ಎಸ್‍ಯುವಿಗಿಂತ ಹೆಚ್ಚು ದುಬಾರಿಯಾಗಿದೆ. ಈ ಐಷಾರಾಮಿ ಮರ್ಸಿಡಿಸ್-ಬೆಂಝ್ ಇ-ಕ್ಲಾಸ್ (Mercedes-Benz E-Class) ನ ಹಾನಿಯು ಚಿಕ್ಕದಾಗಿ ಕಂಡುಬಂದರೂ, ಭಾಗಗಳನ್ನು ದುರಸ್ತಿ ಮಾಡುವುದು ಅಥವಾ ಬದಲಾಯಿಸುವುದು ಮಾಲೀಕರಿಗೆ ಬಹಳಷ್ಟು ವೆಚ್ಚವಾಗಲಿದೆ. ವಾಸ್ತವವಾಗಿ, ಮರ್ಸಿಡಿಸ್-ಬೆಂಝ್ ವೆಚ್ಚವು ಕಿಯಾ ಸೆಲ್ಟೋಸ್ ಬೆಲೆಗಿಂತ ಹೆಚ್ಚಿರಬಹುದು.

ಕಿಯಾ ಸೆಲ್ಟೋಸ್ (Kia Seltos) ಎಸ್‍ಯುವಿ ಬಗ್ಗೆ ಹೇಳುವುದಾದರೆ, ಕಿಯಾ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಕಾರು ಸೆಲ್ಟೋಸ್ ಎಸ್‍ಯುವಿಯಾಗಿದೆ. ಈ ಕಿಯಾ ಸೆಲ್ಟೋಸ್ ಎಸ್‍ಯುವಿಯು ಮಾರಾಟದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ಇತ್ತೀಚೆಗೆ ಹೊಸ ನವೀಕರಣಗಳೊಂದಿಗೆ ಕಿಯಾ ಇಂಡಿಯಾ ಕಂಪನಿಯು 2023ರ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು.

ಭಾರತದ ಗ್ರಾಹಕರು ಕಿಯಾ ಸೆಲ್ಟೋಸ್ ಎಸ್‍ಯುವಿ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳಿಗೆ ಫುಲ್ ಫಿದಾ ಆಗಿದ್ದಾರೆ. ಇದೀಗ ಹೊಸ ನವೀಕರಣಗಳೊಂದಿಗೆ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಸಜ್ಜಾಗಿದೆ. ಇನ್ನು ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಯಾದಗಿನಿಂದ ಇಲ್ಲಿಯವರೆಗೆ ಸೆಲ್ಟೋಸ್ ಎಸ್‍ಯುವಿ ಯಾವುದೇ ಪ್ರಮುಖ ನವೀಕರಣಗಳನ್ನು ಪಡೆದಿರಲಿಲ್ಲ. ಹೊಸದಾಗಿ ಬಿಡುಗಡೆಯಾದ 2023ರ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯು 18 ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಈ ರೂಪಾಂತರಗಳು 3 ಎಂಜಿನ್ ಆಯ್ಕೆಗಳು ಮತ್ತು 5 ಟ್ರಾನ್ಸ್ಮಿಷನ್ ಆಯ್ಕೆಗಳನ್ನು ಒಳಗೊಂಡಿರುತ್ತವೆ. ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ನ್ಯಾಚುರಲ್ ಆಸ್ಪರರ್ಡ್ ಪೆಟ್ರೋಲ್ ಎಂಜಿನ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್, 6-ಸ್ಪೀಡ್ ಐಎಂಟಿ ಯುನಿಟ್, ಸಿವಿಟಿ ಯುನಿಟ್, ಸಿವಿಟಿ ಯುನಿಟ್, 6-ಜಿ-ಸ್ಪೀಡ್ ಡ್ಯುಯಲ್ ಟ್ರಾನ್ಸ್‌ಮಿಷನ್ ಮತ್ತು 6-ಜಿ-ಸ್ಪೀಡ್ ಡ್ಯುಯಲ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಹೊಂದಿವೆ.

Article Published On: Saturday, August 12, 2023, 17:37 [IST]
English summary
Kia seltos and benz e class accident result details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+