Kia: ಹಸುವಿಗೆ ಕಿಯಾ ಕಾರು ಡಿಕ್ಕಿ.. ಮುಂದೇನಾಯ್ತು? ಲೈವ್ ವಿಡಿಯೋ ಸೆರೆ

ದೇಶದ ಹೆದ್ದಾರಿಗಳಲ್ಲಿ ಪ್ರತಿದಿನ ನಾನಾ ಕಾರಣಗಳಿಗೆ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಆದರೆ, ಕೆಲವೊಮ್ಮೆ ಏಕಾಏಕಿಯಾಗಿ ಜಾನುವಾರುಗಳು ಅಥವಾ ಕಾಡು ಪ್ರಾಣಿಗಳು ರಸ್ತೆಗೆ ನುಗ್ಗಿ ಬಿಡುತ್ತವೆ. ಮೊದಲೇ ವಾಹನಗಳು ವೇಗದಲ್ಲಿರುತ್ತವೆ. ಅವುಗಳನ್ನು ನಿಯಂತ್ರಿಸಲಾಗದೇ ದುರ್ಘಟನೆ ನಡೆದು ಬಿಡುತ್ತವೆ. ಇಲ್ಲಿಯೂ ಅಂತಹದ್ದೇ ಅಪಘಾತವೊಂದು ಜರುಗಿದೆ.

ಕಿಯಾ ಸೆಲ್ಟೋಸ್‌ (Kia Seltos) ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯಗಳು ಸೆರೆಯಾಗಿದ್ದು, ನಿಖರವಾದ ಸ್ಥಳದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಪ್ರತೀಕ್ ಸಿಂಗ್ ಎಂಬ ಯೂಟ್ಯೂಬ್ ವಾಹಿನಿಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಕಿಯಾ ಸೆಲ್ಟೋಸ್ ರಸ್ತೆಯ ಎಡ ಪಥದಿಂದ (left lane) ನಿಧಾನವಾಗಿ ಚಲಿಸುತ್ತಿರುವ ಟ್ರಕ್‌ಗಳನ್ನು ಹಿಂದಿಕ್ಕುವುದನ್ನು ದೃಶ್ಯಾವಳಿಯಲ್ಲಿ ನೋಡಬಹುದು.

Kia: ಹಸುವಿಗೆ ಕಿಯಾ ಕಾರು ಡಿಕ್ಕಿ.. ಮುಂದೇನಾಯ್ತು? ಲೈವ್ ವಿಡಿಯೋ ಸೆರೆ

ಕಿಯಾ ಸೆಲ್ಟೋಸ್‌ ಚಾಲಕ ಎಡದಿಂದ ಟ್ರಕ್ ಓವರ್ ಟೆಕ್ ಮಾಡಿ, ಬಲ ಪಥಕ್ಕೆ (right lane) ಬರುತ್ತಿದ್ದಂತೆ ಏಕಾಏಕಿ ಹಸುವೊಂದು ಡಿವೈಡರ್ ಮೇಲಿಂದ ಹಾರಿ ಕಾರಿಗೆ ಡಿಕ್ಕಿಯೊಡೆದಿದೆ. ಅಲ್ಲಿ ಹೆಚ್ಚಿನ ಗಿಡಗಳು ಬೆಳೆದಿದ್ದರಿಂದ ಸೆಲ್ಟೋಸ್‌ ಚಾಲಕನಿಗೆ ಹಸು ಬರುತ್ತಿರುವುದು ಕಂಡಿಲ್ಲ. ಕಾರಿಗೆ ಸ್ವಲ್ಪ ಡ್ಯಾಮೇಜ್ ಆಗಿದೆ. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಅಲ್ಲಿ ಏನಾಯಿತು ಎಂದು ನೋಡಲು ಚಾಲಕ ಕೊಂಚ ಕಾರನ್ನು ನಿಧಾನ ಮಾಡಿದ್ದಾರೆ.

ಆ ಬಳಿಕ, ಹಿಂಭಾಗದ ಡ್ಯಾಶ್‌ಬೋರ್ಡ್ ಕ್ಯಾಮೆರಾದಿಂದ ಗಮನಿಸಿದ್ದು, ಡಿಕ್ಕಿಯಾದ ರಭಸಕ್ಕೆ ಹಸು ಹಾಗೂ ಕರು ರಸ್ತೆಯಲ್ಲಿ ಬಿದ್ದಿದ್ದು, ಕೆಲವೇ ಕ್ಷಣಗಳಲ್ಲಿ ಗಾಬರಿಯಿಂದ ಎದ್ದು ಓಡಿವೆ. ದೇಶದಲ್ಲಿ ಇಂತಹ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಕೆಲವೇ ದಿನಗಳ ಹಿಂದೆ, ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಈ ರೀತಿಯ ಘಟನೆಯೊಂದು ನಡೆದಿದೆ. ಆ ವಿಡಿಯೋ ಟಾಟಾ ಆಲ್ಟ್ರೋಜ್ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.

Kia: ಹಸುವಿಗೆ ಕಿಯಾ ಕಾರು ಡಿಕ್ಕಿ.. ಮುಂದೇನಾಯ್ತು? ಲೈವ್ ವಿಡಿಯೋ ಸೆರೆ

ಟಾಟಾ ಆಲ್ಟ್ರೋಜ್ ಕಾರು ವೇಗವಾಗಿ ಹೋಗುತ್ತಿರುತ್ತದೆ. ಇದ್ದಕ್ಕಿದ್ದಂತೆ ರಸ್ತೆಯ ಬಲಭಾಗದಿಂದ ಜಿಂಕೆ ಟಾಟಾ ಆಲ್ಟ್ರೋಜ್ ಮುಂದೆ ಬರುತ್ತದೆ. ಅದಕ್ಕೆ ಡಿಕ್ಕಿಯಾಗಿ ಕಾರು ಸ್ಕಿಡ್ ಆಗಿದೆ. ಪರಿಣಾಮ, ಕಾರಿನ ಒಂದು ಭಾಗಕ್ಕೆ ಹಾನಿಯಾಗಿದೆ. ಆದರೆ, ಚಾಲಕ ಮತ್ತೆ ಕಾರನ್ನು ತನ್ನ ಹತೋಟಿಗೆ ತೆಗೆದುಕೊಂಡು ಪ್ರಯಾಣವನ್ನು ಮುಂದುವರಿಸಿದ್ದಾನೆ.

ಘಟನೆ ನಡೆದಾಗ ಕಾರಿನಲ್ಲಿ ಚಾಲಕ ಒಬ್ಬನೇ ಇದ್ದರಿಂದ ಆತನಿಗೆ ಯಾವುದೇ ಗಾಯಗಳಾಗಿಲ್ಲ. ಅಲ್ಲದೆ, ಜಿಂಕೆ ರಸ್ತೆಯಲ್ಲಿ ಹೇಗೆ ಬಂತು ಎಂಬುದರ ಬಗ್ಗೆ ಮಾಹಿತಿಯಿಲ್ಲ. ಜೊತೆಗೆ ಆ ಮೂಕ ಜೀವಿಗೆ ಏನಾಗಿದೆ ಎಂಬುದರ ಕುರಿತು ತಿಳಿದಿಲ್ಲ. ದೇಶದ ವಿವಿಧ ರಸ್ತೆಗಳಲ್ಲಿ ಜಾನುವಾರುಗಳು ಕಾಡು ಪ್ರಾಣಿಗಳು ಇದ್ದಕ್ಕಿಂತ ಪ್ರವೇಶಿಸಿ ಬಿಡುತ್ತವೆ. ಮೊದಲೇ ವೇಗದಲಿರುವ ವಾಹನಗಳು ಅವುಗಳನ್ನು ತಪ್ಪಿಸಲು ಹೋಗಿ, ಅಪಘಾತಕ್ಕೆ ತುತ್ತಾಗುತ್ತವೆ.

Kia: ಹಸುವಿಗೆ ಕಿಯಾ ಕಾರು ಡಿಕ್ಕಿ.. ಮುಂದೇನಾಯ್ತು? ಲೈವ್ ವಿಡಿಯೋ ಸೆರೆ

ಇನ್ನು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುವ ಜಾನುವಾರುಗಳ ಸಾವನ್ನು ತಡೆಯಲು ಕೇಂದ್ರ ಸರ್ಕಾರ ಸಹ ಮಹತ್ವದ ಹೆಜ್ಜೆ ಇಟ್ಟಿದೆ. ಎಕ್ಸ್‌ಪ್ರೆಸ್‌ವೇಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಬಿದಿರಿನಿಂದ ಮಾಡಲಾಗಿರುವ ಬಾಹುಬಲಿ ಬೇಲಿಯನ್ನು ನಿರ್ಮಾಣ ಮಾಡಲು ತೀರ್ಮಾನಿಸಿದೆ. ಇದು ಉಕ್ಕಿನ ಪರ್ಯಾಯವಾಗಿದೆ. ಜೊತೆಗೆ ಪರಿಸರ ಸ್ನೇಹಿ ಆಗಿರಲಿದ್ದು, ಕೆಲವು ರಾಸಾಯನಿಕಗಳನ್ನು ಲೇಪಿಸಲಾಗುತ್ತದೆ. ಇದನ್ನು ಜಾನುವಾರುಗಳು ದಾಟುವುದು ಕಷ್ಟ. ಜೊತೆಗೆ ಗಾಯಗಳು ಆಗುವುದಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, October 29, 2023, 8:30 [IST]
English summary
Kia seltos car collides cow on the road recorded on live camera
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+