ಭೀಕರ ರಸ್ತೆ ಅಪಘಾತದಲ್ಲಿ ಇಬ್ಭಾಗವಾಯ್ತು ಹೊಸ ಎಸ್‌ಯುವಿ

ಮಧ್ಯಪ್ರದೇಶದಲ್ಲಿ ವೇಗವಾಗಿ ಚಲಿಸುತ್ತಿದ್ದ ಕಿಯಾ ಸೆಲ್ಟೋಸ್ ಎಸ್‌ಯುವಿಯು ಅಪಘಾತಕ್ಕೀಡಾಗಿದೆ. ವೈರಲ್ ಆಗಿರುವ ಚಿತ್ರಗಳನ್ನು ಗಮನಿಸಿದರೆ ಈ ಅಪಘಾತದ ಭೀಕರತೆ ತಿಳಿದು ಬರುತ್ತದೆ.

ಭೀಕರ ರಸ್ತೆ ಅಪಘಾತದಲ್ಲಿ ಇಬ್ಭಾಗವಾಯ್ತು ಹೊಸ ಎಸ್‌ಯುವಿ

ಈ ಭೀಕರ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದ ಚಿಂಧ್ವಾರದಲ್ಲಿರುವ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಚಿತ್ರಗಳು ನೋಡುಗರನ್ನು ಬೆಚ್ಚಿ ಬೀಳಿಸುತ್ತವೆ.

ಭೀಕರ ರಸ್ತೆ ಅಪಘಾತದಲ್ಲಿ ಇಬ್ಭಾಗವಾಯ್ತು ಹೊಸ ಎಸ್‌ಯುವಿ

ಅತಿ ವೇಗದಲ್ಲಿ, ಕಿಯಾ ಸೆಲ್ಟೋಸ್ ನಿಯಂತ್ರಣ ಕಳೆದುಕೊಂಡು ಸೇತುವೆಯ ತಡೆ ಗೋಡೆಗೆ ಅಪ್ಪಳಿಸಿದೆ. ಅತಿ ವೇಗವಾಗಿ ಕಾರು ಚಾಲನೆ ಮಾಡಿದ್ದೇ ಈ ಅಪಘಾತಕ್ಕೆಕಾರಣವೆಂದು ತಿಳಿದು ಬಂದಿದೆ.

ಭೀಕರ ರಸ್ತೆ ಅಪಘಾತದಲ್ಲಿ ಇಬ್ಭಾಗವಾಯ್ತು ಹೊಸ ಎಸ್‌ಯುವಿ

ಕಾರಿನೊಳಗಿನವರನ್ನು ಹೊರಕ್ಕೆಳೆಯಲು ರಕ್ಷಣಾ ಸಲಕರಣೆಗಳಿಂದ ಕಾರನ್ನು ಎರಡು ಭಾಗಗಳಾಗಿ ತುಂಡರಿಸಿರಬಹುದು ಎಂದು ಹಲವರು ಹೇಳಿದ್ದಾರೆ. ಆದರೆಸೇತುವೆಯ ತಡೆ ಗೋಡೆಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಎರಡು ಭಾಗಗಳಾಗಿ ಮುರಿದು ಬಿದ್ದಿದೆ ಎಂದು ಚಿತ್ರಗಳನ್ನು ಹಂಚಿಕೊಂಡ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ.

ಭೀಕರ ರಸ್ತೆ ಅಪಘಾತದಲ್ಲಿ ಇಬ್ಭಾಗವಾಯ್ತು ಹೊಸ ಎಸ್‌ಯುವಿ

ಆದರೆ ಯಾವ ಕಾರಣಕ್ಕೆ ಈ ಕಾರು ಇಬ್ಭಾಗವಾಯಿತು ಎಂಬ ಸ್ಪಷ್ಟ ಮಾಹಿತಿ ಇನ್ನಷ್ಟೇ ಲಭ್ಯವಾಗ ಬೇಕಾಗಿದೆ. ಕಾರುಗಳು ಎಷ್ಟೇ ಆಧುನಿಕ ಸುರಕ್ಷತಾ ಫೀಚರ್'ಗಳನ್ನು ಹೊಂದಿದ್ದರೂ, ಅತಿ ವೇಗದಲ್ಲಿ ಚಾಲನೆ ಮಾಡಿದಾಗ ನೆರವಿಗೆ ಬರುವುದಿಲ್ಲ. ಈ ಕಾರಿನ ಅಪಘಾತದ ಭೀಕರತೆಯು ಈ ಮಾತಿಗೆ ಪುಷ್ಟಿ ನೀಡುತ್ತದೆ.

ಭೀಕರ ರಸ್ತೆ ಅಪಘಾತದಲ್ಲಿ ಇಬ್ಭಾಗವಾಯ್ತು ಹೊಸ ಎಸ್‌ಯುವಿ

ಅತಿ ವೇಗವಾಗಿ ಚಾಲನೆ ಮಾಡುವುದನ್ನು ತಪ್ಪಿಸುವುದು ಮುಖ್ಯ. ಯಾರೇ ಆಗಲಿ ಯಾವ ಸುರಕ್ಷತಾ ಫೀಚರ್'ಗಳೇ ಆಗಲಿ ಅತಿ ವೇಗದಲ್ಲಿ ಚಾಲನೆ ಮಾಡುವವರನ್ನು ಉಳಿಸಲು ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿಡ ಬೇಕು.

ಈ ರೀತಿಯ ಘಟನೆಗಳು ನಿಜಕ್ಕೂ ಆಘಾತವನ್ನುಂಟು ಮಾಡುತ್ತವೆ. ಇಂತಹ ಘಟನೆಗಳಿಂದ ಜನರು ಪಾಠ ಕಲಿತು ಅಪಘಾತಗಳಾಗುವುದನ್ನು ತಪ್ಪಿಸ ಬೇಕು ಎಂಬ ಕಾರಣಕ್ಕೆ ಈ ರೀತಿಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದೇವೆ.

ಭೀಕರ ರಸ್ತೆ ಅಪಘಾತದಲ್ಲಿ ಇಬ್ಭಾಗವಾಯ್ತು ಹೊಸ ಎಸ್‌ಯುವಿ

ಅತಿ ವೇಗದ ಚಾಲನೆಯು ನಿಮಗೆ ಮಾತ್ರವಲ್ಲದೆ ಇತರ ವಾಹನ ಸವಾರರಿಗೆ, ಪ್ರಯಾಣಿಕರಿಗೆ, ಪಾದಚಾರಿಗಳ ಪ್ರಾಣಕ್ಕೂ ಕುತ್ತು ತರಬಲ್ಲದು. ಜೊತೆಗೆ ನಿಮ್ಮನ್ನೇ ನಂಬಿಕೊಂಡಿರುವ ಕುಟುಂಬಗಳಿಗೂ ತೊಂದರೆಯನ್ನುಂಟು ಮಾಡುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಚಿತ್ರ ಕೃಪೆ: ಫೇಸ್‌ಬುಕ್

Most Read Articles

Kannada
English summary
KIA Seltos SUV splits into two pieces in road crash. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X