ಸರ್ವೀಸ್‌ಗೆ ನೀಡಿದ್ದ ಕಾರು ನುಜ್ಜುಗುಜ್ಜು : ಬದಲಿ ಕಾರು ನೀಡಲು ನಿರಾಕರಿಸಿದ ಕಂಪನಿ

ಕಾರುಗಳನ್ನು ಸರ್ವೀಸ್‌ಗೆ ನೀಡುವಾಗ, ಅಲ್ಲಿನ ಸಿಬ್ಬಂದಿ ಬೇಜಾವಬ್ದಾರಿತನದಿಂದ ಅವುಗಳನ್ನು ಹಾನಿಮಾಡುವುದು ಇತ್ತೀಚೆಗೆ ಸರ್ವೇಸಾಧಾರಣವಾಗಿದೆ. ಇತ್ತೀಚೆಗಷ್ಟೇ ಕಿಯಾ ಸೋನೆಟ್‌ ಕಾರು ಜೈಪುರದಲ್ಲಿ ಸರ್ವೀಸ್‌ ಸೆಂಟರ್‌ನಲ್ಲಿ ಹಾನಿಯಾದ ಘಟನೆ ಮಾಸುವ ಮುನ್ನವೇ ಒರಿಸ್ಸಾದ ಕಾರು ಸರ್ವೀಸ್‌ ಸೆಂಟರ್‌ನಲ್ಲಿ ಮಾಲೀಕನ ಮುಂದೆಯೇ ಆತನ ಕಿಯಾ ಕಾರು ಹಾನಿಯಾದ ಮತ್ತೊಂದು ಘಟನೆ ನಡೆದಿದೆ.

ಹೌದು, ಕಿಯಾ ಸೊನೆಟ್‌ ಕಾರಿನ ಮಾಲೀಕ ತನ್ನ ಕಾರನ್ನು ರೆಗ್ಯುಲರ್‌ ಸರ್ವೀಸ್‌ ಮಾಡಿಸುವ ಸಲುವಾಗಿ ತನ್ನ ಕಾರನ್ನು ಸರ್ವೀಸ್‌ ಸೆಂಟರ್‌ಗೆ ಕೊಂಡೊಯ್ದಿದ್ದಾರೆ. ಕಾರನ್ನು ಸರ್ವೀಸ್‌ ಮಾಡಿದ ನಂತರ ಸಿಬ್ಬಂದಿಯೊಬ್ಬ ಕಾರಿನ ಟೈರ್‌ನ ಅಲೈನ್‌ಮೆಂಟ್‌ ಮಾಡುವುದಕ್ಕಾಗಿ ಸಿದ್ದಗೊಳಿಸುತ್ತಿದ್ದಾಗ ಮಾಲೀಕನ ಕಣ್ಣ ಮುಂದೆಯೇ ಕಾರಿಗೆ ಹಾನಿಗೊಳಿಸಿದ್ದಾರೆ. ಇನ್ನೇನು ಕಾರಿನ ಸರ್ವೀಸ್‌ ಮುಗಿದು ಕೊನೆಯ ಹಂತದ ಕೆಲಸಗಳು ಬಾಕಿಯಿತ್ತು. ಅದಾದ ಕೂಡಲೇ ತನ್ನ ಕಾರನ್ನು ಡೆಲಿವರಿ ಪಡೆಯಲು ಕುಟುಂಬದೊಂದಿಗೆ ಕಾಯುತ್ತಿದ್ದ ಮಾಲೀಕನಿಗೆ ಆಘಾತವಾಗಿದೆ.

ಕಾರಿನ ಮಾಲೀಕನ ಪ್ರಕಾರ, ಶೋ ರೂಮ್‌ನ ಸಿಬ್ಬಂದಿಗೆ ಡ್ರೈವಿಂಗ್‌ ಸರಿಯಾಗಿ ಬರುತ್ತಿದ್ದಂತೆ ಕಾಣುತ್ತಿರಲಿಲ್ಲ. ವ್ಹೀಲ್‌ ಅಲೈನ್‌ಮೆಂಟ್‌ ಮಾಡಲೆಂದು ಗಾಡಿ ಸ್ಟಾರ್ಟ್‌ ಮಾಡಿದ ಸಿಬ್ಬಂದಿ ನೇರವಾಗಿ ತನ್ನ ಕಾರನ್ನು ಅಲ್ಲಿದ್ದ ಕಂಬವೊಂದಕ್ಕೆ ನೇರವಾಗಿ ಗುದ್ದಿ ಹಾನಿಗೊಳಿಸಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಫೋಟೋದಲ್ಲಿ ಅಪಘಾತವಾದ ಬಳಿಕ ಕೆಂಪು ಬಣ್ಣದ ಕಿಯಾ ಸೋನೆಟ್‌ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿರುವುದು ಕಂಡು ಬರುತ್ತದೆ. ಮುಂಬಾಗದ ಬಂಪರ್‌ಗೆ ಹಾನಿಯಾಗಿದ್ದು ಗ್ರಿಲ್‌ ಸಂಪೂರ್ಣವಾಗಿ ಒಳಗೆ ಹೋಗಿರುವುದನ್ನು ಗಮನಿಸಬಹುದು.

ಕಾರಿನ ಮುಂಬಾಗದ ಫೆಂಡರ್‌ ಮುರಿದು ಹೋಗಿರುವುದನ್ನು ಗಮನಿಸಿದರೆ ಯಾವುದೋ ದೊಡ್ಡ ಅಪಘಾತಕ್ಕೆ ಒಳಗಾಗಿದೆ ಎಂದು ತೋರುವುದಲ್ಲಿ ಎರಡು ಮಾತಿಲ್ಲ. ದುರದೃಷ್ಟಕರವೆಂದರೆ ಕಾರು ಹಾನಿಗೊಳಗಾಗಿರುವ ಯಾವುದೇ ಸಿಸಿಟಿವಿ ದೃಶ್ಯಗಳು ಸಹ ದೊರೆತಿಲ್ಲವಾದರೂ ಕಾರಿನ ಕಾರಿನ ಫೋಟೋ ಗಮನಿಸಿದರೆ ಸಾಕು ಅಪಘಾತದ ತೀವ್ರತೆ ತಿಳಿಯುತ್ತದೆ. ಈ ರೀತಿ ಸರ್ವೀಸ್‌ ಸೆಂಟರ್‌ ಸಿಬ್ಬಂದಿ ಕಾರನ್ನು ಬೇಜವಾಬ್ದಾರಿತನದಿಂದ ಅಪಘಾತಕ್ಕೊಳಪಡಿಸಿದರೆ ಮಾಲೀಕರಾದರೂ ಏನು ಮಾಡಬೇಕು ಎಂದು ಚಿಂತಿಸುವ ಕಾಲ ಬಂದಿದೆ.

ಇನ್ನು ಅಪಘಾತವಾದ ಕೆಲ ಕ್ಷಣದಲ್ಲೇ ಸರ್ವೀಸ್‌ ಸೆಂಟರ್‌ನ ಸಿಬ್ಬಂದಿ ಮಾಲೀಕನ ಬಳಿ ಇನ್ಸ್ಯುರೆನ್ಸ್‌ ಕ್ಲೈಮ್‌ ಮಾಡುವಂತೆ ಹೇಳಿದ್ದಾರೆ. ಆದರೆ ಸಿಬ್ಬಂದಿಗಳ ಬೇಡಿಕೆಯನ್ನು ನಿರಾಕರಿಸಿದ ಮಾಲೀಕ ಕೆಲವು ತಿಂಗಳ ಹಿಂದೆ ನಡೆದ ಇದೇ ರೀತಿಯ ಘಟನೆಯನ್ನು ಸಿಬ್ಬಂದಿಗೆ ತಿಳಿಸಿದ್ದಾರೆ. ಜೈಪುರದಲ್ಲಿ ಜಲಜ್‌ ಅಗರ್‌ವಾಲ್ ಎಂಬಾತ‌ ತನ್ನ ಕಿಯಾ ಸೋನೆಟ್ ಕಾರನ್ನು ರೆಗ್ಯಲರ್‌ ಸರ್ವೀಸ್‌ಗೆ ಎಂದು ನೀಡಿದ್ದರು. ಆದರೆ ಸರ್ವೀಸ್‌ ಸೆಂಟರ್‌ ಸಿಬ್ಬಂದಿ ಕಾರನ್ನು ಹಾನಿಗೊಳಿಸಿದ್ದರು. ಬಳಿಕ ಬದಲಿಗೆ ಹೊಸ ಕಾರನ್ನು ನೀಡಿದ್ದರು.

ಇದೆಲ್ಲವನ್ನು ತೋರಿಸಿದ ನಂತರ ಸರ್ವೀಸ್‌ ಸೆಂಟರ್‌ನ ಸಿಬ್ಬಂದಿ ಯಾವುದೇ ಇನ್ಸ್ಯುರೆನ್ಸ್‌ ಪಡೆಯದೆಯೇ ಆತನ ಕಿಯಾ ಸೋನೆಟ್‌ ಕಾರನ್ನು ದುರಸ್ತಿ ಮಾಡಿ ಕೊಡುವುದಾಗಿ ಒಪ್ಪಿದ್ದಾರೆ. ಆದರೆ ಮಾಲೀಕ ತನಗೆ ಹೊಸ ಕಾರನ್ನೇ ನೀಡುವಂತೆ ಪಟ್ಟು ಹಿಡಿದಿದ್ದರು ಎಂದು ತಿಳಿದು ಬಂದಿದೆ. ನಂತರ ಸರ್ವೀಸ್‌ ಸೆಂಟರ್‌ನ ಸಿಬ್ಬಂದಿ ಕಿಯಾ ಮೋಟಾರ್ಸ್‌ ಜೊತೆ ಮಾತುಕತೆ ನಡೆಸಿದ್ದರು. ಬದಲಿ ಹೊಸ ಕಾರನ್ನು ನೀಡಲು ಕಿಯಾ ಮೋಟಾರ್ಸ್‌ ನಿರಾಕರಿಸಿದೆ ಎಂದು ಹೇಳಿದ್ದಾರೆ.

ಡ್ರೈವ್‌ಸ್ಪಾರ್ಕ್‌ ಅಭಿಪ್ರಾಯ:
ಸರ್ವೀಸ್‌ ಸೆಂಟರ್‌ನಲ್ಲಿ ಕಾರು ಅಪಘಾತಕ್ಕೊಳಗಾಗುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ಹಲವಾರು ಪ್ರಕರಣಗಳಲ್ಲಿ ಅಲ್ಲಿನ ಸಿಬ್ಬಂದಿ ತಾವೇ ಅಪಘಾತಗೊಳಿಸಿದ ಕಾರನ್ನು ರಿಪೇರಿ ಮಾಡಲು ಹಿಂದೇಟು ಹಾಕಿರುವ ಉದಾಹರಣೆಗಳು ಸಹ ನಮ್ಮ ಮುಂದಿದೆ. ಇಂದತಹ ಸಂಧರ್ಭಗಳಲ್ಲಿ ಆ ಕಾರಿನ ಕಂಪೆನಿಗಳು ಮುಂದೆ ಬಂದು ಗ್ರಾಹಕರಿಗೆ ಬೆಂಬಲ ನೀಡಬೇಕು. ಹೀಗಾದಾಗ ಗ್ರಾಹಕರಿಗೆ ಆ ಕಾರು ಕಂಪನಿ ಮೇಲಿನ ನಂಬಿಕೆ ದುಪ್ಪಟ್ಟಾಗುತ್ತದೆ ಎಂಬುದು ನೂರಕ್ಕೆ ನೂರರಷ್ಟು ಸತ್ಯ.

Most Read Articles

Kannada
English summary
Kia service centre crashes kia sonnet in front of car owner
Story first published: Wednesday, December 7, 2022, 17:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X