ಕಪ್ಪು ಬಣ್ಣದ ಕಾರುಗಳ್ಯಾಕೆ ಅಷ್ಟೊಂದು ಅಗ್ರಸಿವ್: ಕೈಗೆಟಕುವ ಮ್ಯಾಟ್ ಬ್ಲಾಕ್ ಪೈಂಟ್‌ನ ಕಾರುಗಳು
ಕಾರುಗಳ ಬಣ್ಣದಲ್ಲಿ ಹಲವರಿಗೆ ಹಲವು ಅಭಿಪ್ರಾಯಗಳಿದೆ. ಕೆಲವರಿಗೆ ಕಾರುಗಳ ಹೊಳೆಯುವ ಬಣ್ಣ ಇಷ್ಟವಾಗುತ್ತದೆ. ಇನ್ನು ಕೆಲವರಿಗೆ ಕಾರುಗಳ ಬಣ್ಣ ತಿಳಿಯಾಗಿದ್ದರೆ ಇಷ್ಟವಾಗುತ್ತದೆ. ಮತ್ತೆ ಕೆಲವರು ಹೇಗೆಂದರೆ ಕಾರನ್ನು ಖರೀದಿಸಿ ತಮಗೆ ಇಷ್ಟ ಬಂದ ಬಣ್ಣವನ್ನು ಹಚ್ಚಿ ರಸ್ತೆಗಳಲ್ಲಿ ಮಿಂಚುತ್ತಾ ಇರುವುದನ್ನು ನಾವು ಹಲವು ಕಡೆ ನೋಡಿದ್ದೇವೆ.
ಆದರೆ ಇವೆಲ್ಲದರ ನಡುವೆ ಎದ್ದು ಕಾಣುವ ಬಣ್ಣವೆಂದರೆ ಕಾರಿನ ಮ್ಯಾಟ್ ಬ್ಲಾಕ್ ಬಣ್ಣಗಳು. ಇಂದಿನ ಈ ಲೇಖನದಲ್ಲಿ ಭಾರತದಲ್ಲಿ ಲಭ್ಯವಿರುವ ಕಡಿಮೆ ಬೆಲೆಯ ಮ್ಯಾಟ್ ಬ್ಲ್ಯಾಕ್ ಬಣ್ಣದ ಕಾರುಗಳು ಯಾವುದೆಂದು ನೋಡೋಣ. ಇದರಲ್ಲಿ ಹಲವು ಕಂಪನಿಗಳ ಹಲವು ಕಾರುಗಳಿದ್ದು, ನಿಮ್ಮ ಫೇವರೀಟ್ ಸಹ ಇರಬಹುದು.

ಕಿಯಾ ಸೆಲ್ಟೋಸ್ ಏಕ್ಸ್ ಲೈನ್ ವೇರಿಯಂಟ್: ಬಿಡುಗಡೆಯಾದಾಗಿನಿಂದ Seltos ಎಸ್‍ಯುವಿ ಜನಪ್ರಿಯವಾಗುವುದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ. ಮಾರಾಟದಲ್ಲಿ Kia Seltos ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು. ಕಿಯಾ ಸೆಲ್ಟೋಸ್ ಏಕ್ಸ್ ಲೈನ್ ವೇರಿಯಂಟ್ ಮ್ಯಾಟ್ ಬ್ಲಾಕ್ ಬಣ್ಣದಲ್ಲಿ ಲಭ್ಯವಿದೆ.
ಕಿಯಾ ಕರೆನ್ಸ್ ಎಕ್ಸ್‌ಲೈನ್ ವೇರಿಯಂಟ್: ಕಾರೆನ್ಸ್ ಎಂಪಿವಿ ಮೂಲಕ ಈಗಾಗಲೇ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿರುವ ಕಿಯಾ ಕಂಪನಿ ಇದೀಗ ಸ್ಪೋರ್ಟಿ ಲುಕ್ ಹೊಂದಿರುವ ಎಕ್ಸ್ ಲೈನ್ ಆವೃತ್ತಿಯನ್ನು ಪರಿಚಯಿಸಿದ್ದು, ಇದು ಸ್ಟ್ಯಾಂಡರ್ಡ್ ವೆರಿಯೆಂಟ್ ಗಳಿಂತಲೂ ತುಸು ದುಬಾರಿ ಹೊಂದಿದೆ. ಹೊಸ ಎಕ್ಸ್ ಲೈನ್ ಆವೃತ್ತಿಯು ಕಾರೆನ್ಸ್ ಟಾಪ್ ಎಂಡ್ ಮಾದರಿಯನ್ನು ಆಧರಿಸಿದ್ದು, ಇದು ಟರ್ಬೊ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ಹೊಂದಿದೆ.

ಫೋಕ್ಸ್‌ವಾಗನ್ ವರ್ಟಿಸ್ ಜಿಟಿ ಎಡ್ಜ್ ಪ್ಲಸ್ ಮ್ಯಾಟ್ ಎಡಿಷನ್: ಜರ್ಮನ್ ಕಾರು ನಿರ್ಮಾಣ ಕಂಪನಿಯಾದ ಫೋಕ್ಸ್‌ವಾಗನ್ ತನ್ನ ಪ್ರಸಿದ್ದ ಮಾಡೆಲ್ ಆದ ವರ್ಟಿಸ್ ಜಿಟಿ ಎಡ್ಜ್ ಪ್ಲಸ್ ಕಾರನ್ನು ಮ್ಯಾಟ್ ಎಡಿಷನ್ ಕೆಲವು ವರ್ಷಗಳ ಹಿಂದೆ ಲಾಂಚ್ ಮಾಡಿತ್ತು. ಈ ಕಾರು ಮಾಟ್ ಬ್ಲಾಕ್ ಬಣ್ಣದಲ್ಲಿ ಕಂಗೊಳಿಸುತ್ತಿದ್ದು, ಹಲವರನ್ನು ಇದು ಆಕರ್ಷಿಸಿದ್ದು ನೆಚ್ಚಿನ ಕಾರಾಗಿ ಬದಲಾಗಿದೆ.
ಸ್ಕೋಡಾ ಸ್ಲಾವಿಯಾ ಮ್ಯಾಟ್ ಎಡಿಷನ್: ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಸ್ಕೋಡಾ ಸ್ಲಾವಿಯಾ ಬಗ್ಗೆ ಹೇಳುವುದಾದರೆ, ಇದು ರೂ.11.39-18.45 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದೆ. 1 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 115 PS ಪವರ್, 178 Nm ಪೀಕ್ ಟಾರ್ಕ್, 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 150 PS ಪವರ್, 250 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 ಸ್ವೀಡ್ ಮ್ಯಾನುವಲ್ ಸೇರಿದಂತೆ ವಿವಿಧ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.
ಸ್ಕೋಡಾ ಕುಷಾಕ್ ಮ್ಯಾಟ್ ಎಡಿಷನ್: ಸ್ಕೋಡಾ ಕುಷಾಕ್ ಮ್ಯಾಟ್ ಎಡಿಷನ್ ಸಹ ಮಾರುಕಟ್ಟೆಯಲ್ಲಿ ಲಭ್ಯವಿದೆ. 1.0 ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ 1.5 ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಪ್ರತಿ ವೆರಿಯೆಂಟ್‌ನಲ್ಲೂ 6 ಸ್ಪೀಡ್ ಮ್ಯಾನುವಲ್, 6 ಸ್ಪೀಡ್ ಆಟೋಮ್ಯಾಟಿಕ್ ಮತ್ತು ಹೈ ಎಂಡ್ ಮಾದರಿಯಲ್ಲಿ 7 ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications