ಸೂಪರ್‌ಕಾರ್ ಜೊತೆ ಫೋಟೋಗೆ ಕಾಯುತ್ತಿದ್ದ ಗೂಡ್ಸ್ ರಿಕ್ಷಾ ಬಾಲಕ: 6 ಕೋಟಿಯ ಕಾರಿನ ಮಾಲೀಕ ಮಾಡಿದ್ದೇನು ನೋಡಿ!
ಭಾರತದಲ್ಲಿ ಕಾರು ಕ್ರೇಜ್‌ಗೆ ಯಾವುದೇ ಎಲ್ಲೆಯಿಲ್ಲ. ನಿಮ್ಮ ಹತ್ತಿರ ಹಣವಿರಲಿ ಅಥವಾ ಇಲ್ಲದೇ ಇರಲಿ, ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ದಿನ ಒಂದಾದರು ಸೂಪರ್ ಕಾರು ಖರೀದಿಸಬೇಕು, ಅಥವಾ ಅದನ್ನು ಒಮ್ಮೆಯಾದರೂ ಒಡಿಸಬೇಕು ಎಂಬ ಕನಸಿರುತ್ತದೆ. ಎಷ್ಟೋ ಬಾರಿ ರಸ್ತೆಯಲ್ಲಿ ಫರಾರಿ , ಲ್ಯಾಂಬೋರ್ಗಿನಿಯಂತಹ ಸೂಪರ್ ಕಾರುಗಳು ಜೋರಾಗಿ ಸದ್ದು ಮಾಡುತ್ತಾ ಹೋಗುವುದನ್ನು ನಮ್ಮಲ್ಲಿ ಹಲವರು ನೋಡಿದ್ದೇವೆ. ಆ ಸಂಧರ್ಭದಲ್ಲಿ ಆ ಕಾರಿನ ಜೊತೆ ಒಂದು ಫೊಟೋ ಕ್ಲಿಕ್ಕಿಸಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಆಲೋಚನೆ ಒಂದು ಕ್ಷಣ ಬಂದು ಹೋಗಿದೆ ಎಂಬುದು ಸುಳ್ಳಲ್ಲ.
ಇನ್ನು ನಮ್ಮಲ್ಲಿ ಹಲವರು ರಸ್ತೆಯ ಬದಿಯಲ್ಲಿ ಸೂಪರ್ ಕಾರುಗಳೇನಾದರೂ ನಿಂತರೆ ಹತ್ತಿರ ಹೋಗುವುದಕ್ಕೂ ಕೊಂಚ ಅಂಜುತ್ತೇವೆ. ಇದಕ್ಕೆ ಹಲವಾರು ಕಾರಣಗಳಿದೆ. ನಮ್ಮಿಂದ ಆ ಕಾರಿಗೆ ಸ್ಕ್ರಾಚ್ ಏನಾದರೂ ಸಂಭವಿಸಿದರೆ ಅಥವಾ ಇನ್ನೇನಾದರೂ ಆದರೆ ಎಂಬುದೇ ಈ ಕಾರಣಗಳು. ಅದರೆ ಇಲ್ಲೊಬ್ಬ ಯುವಕ ತನ್ನ ಸೂಪರ್ ಕಾರ್ ಜೊತೆ ಫೊಟೋ ತೆಗೆಸಿಕೊಳ್ಳಲು ಆಟೋ ರಿಕ್ಷಾದಲ್ಲಿದ್ದ ಬಾಲಕನೊಬ್ಬನಿಗೆ ಅನುವು ಮಾಡಿಕೊಟ್ಟಿದ್ದಾನೆ.

ಹೌದು, ಬಹುಕೋಟಿ ಬೆಲೆಯ ಮೆಕ್‌ಲಾರೆನ್ 720S (McLaren 720S) ಕಾರನ್ನು ನೋಡಿ ರೋಮಾಂಚಿತಗೊಂಡಿದ್ದ ಬಡ ಬಾಲಕನೊಬ್ಬ ಆ ಕಾರಿನ ಹತ್ತಿರ ಬರಲೂ ಆಂಜುತ್ತಾ ನಿಂತಿದ್ದ. ಇದನ್ನು ಕಂಡ ಆ ಕಾರಿನ ಮಾಲೀಕ, ಖುದ್ದಾಗಿ ಆ ಬಾಲಕನ ಬಳಿ ಬಂದು ತನ್ನ ಕಾರಿನ ಜೊತೆ ಫೊಟೋ ತೆಗೆದುಕೊಂಡಿದ್ದು ಮಾತ್ರವಲ್ಲದೇ, ತಾನೂ ಸಹ ಆ ಬಾಲಕನ ಜೊತೆ ಫೊಟೋ ಕ್ಲಿಕ್ಕಿಸಿಕೊಂಡು ಮಾನವೀಯತೆಯನ್ನು ಮೆರೆದಿದ್ದಾನೆ.
ಈ ಕುರಿತಾದ ವಿಡಿಯೋವನ್ನು ಕಾರಿನ ಮಾಲೀಕ ಆಮಿರ್ ಶರ್ಮಾ ಸ್ವತಃ ತಾನೇ ತನ್ನ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ವಿಡಿಯೋದಲ್ಲಿ ಕಾಣುವಂತೆ ಪಿಯಾಜಿಯೋ ಆಪೆ ರಿಕ್ಷಾದಲ್ಲಿದ್ದ ಯುವಕ ಈತನ ಸೂಪರ್ ಕಾರನ್ನು ನೋಡುವ ಧಾವಂತದಲ್ಲಿದ್ದ. ಆತನನ್ನು ಕರೆದು ಆ ಬಾಲಕನ ಜೊತೆ ಫೊಟೋ ಕ್ಲಿಕ್ಕಿಸಿಕೊಂಡಿದ್ದಾನೆ, ಈ ಸಂಧರ್ಭದಲ್ಲಿ ಬಾಲಕನ ಆನಂದಕ್ಕೆ ಪಾರವೇ ಇಲ್ಲ!

ಮೆಕ್‌ಲಾರೆನ್ ಎಂಬ ಹೆಸರು ಭಾರತದಲ್ಲಿ ವಿರಳವಾದರೂ, ವಿದೇಶದಲ್ಲಿ ಈ ಹೆಸರು ಕೇಳದವರ ಸಂಖ್ಯೆ ಅತೀ ವಿರಳ ಎಂದರೆ ತಪ್ಪಾಗಲಾರದು. ಐಷಾರಾಮಿ ಸ್ಪೋರ್ಟ್ಸ್ ಕಾರುಗಳಲ್ಲಿ ಅತಿ ಹೆಚ್ಚು ಹೆಸರು ಮಾಡಿರುವ ಕಾರುಗಳಲ್ಲಿ ಈ ಕಾರು ಸಹ ಸೇರುತ್ತದೆ. ಈ ಕಾರಿನ ಡಿಸೈನ್, ಫೀಚರ್‌ಗಳೇ ಅತಿ ದೊಡ್ಡ ಹೈಲೈಟ್ ಎಂದರೆ ತಪ್ಪಾಗಲಾರದು. ಮೆಕ್‌ಲಾರೆನ್ 750ಎಸ್ (McLaren 750S) ಕಾರಿನ ಆರಂಭಿಕ ಬೆಲೆ ಸುಮಾರು 5.91 ಕೋಟಿ ರೂಪಾಯಿಗಳು.
ಈ ಕಾರಿನ ಎಂಜಿನ್ ಬಗ್ಗೆ ಮಾತನಾಡುವುದಾದರೆ ಮೆಕ್‌ಲಾರೆನ್ 750ಎಸ್, M840T ಎಂಜಿನ್ ಹೊಂದಿದ್ದು ಈ ಎಂಜಿನ್ ಸಹಾಯದಿಂದ ಈ ಕಾರು ಬರೋಬ್ಬರಿ 750 hp ಪವರ್ ಮತ್ತು 800 NM ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂದು ತಿಳಿದು ಬಂದಿದೆ. ಇನ್ನು ಇಷ್ಟೊಂದು ಪವರ್ ಅನ್ನು ಯಾವುದೇ ಎಲೆಕ್ಟ್ರಿಕ್ ಅಸಿಸ್ಟ್ ಸಹಾಯವಿಲ್ಲದೆ ಈ ಕಾರು ಉತ್ಪಾದಿಸುತ್ತದೆ ಎಂದರೆ ನೀವು ನಂಬಲೇ ಬೇಕು.
ಈ ಬ್ರ್ಯಾಂಡ್ ಈ ಹಿಂದೆ ಕೆಲವು ಅದ್ಭುತ ಸೂಪರ್‌ಕಾರ್‌ಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಮೆಕ್ಲಾರೆನ್ ಕಳೆದ ವರ್ಷ ಭಾರತದಲ್ಲಿ ಅಧಿಕೃತವಾಗಿ ಕಾರುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿತು. ಜನಪ್ರಿಯ ಫ್ಯೂಷನ್ ಜಿಮ್‌ನ ಮಾಲೀಕ ಅಮಿತ್ ಸಿಂಗ್ ಇತ್ತೀಚೆಗೆ ಹೊಸ ಮೆಕ್ಲಾರೆನ್ 720S (McLaren 720S) ಸೂಪರ್‌ಕಾರ್ ಅನ್ನು ಖರೀದಿಸಿದ್ದಾರೆ. ಜನಪ್ರಿಯ ಫ್ಯೂಷನ್ ಜಿಮ್ ಮಾಲೀಕ ಅಮಿತ್ ಸಿಂಗ್ ಖರೀದಿಸಿದ McLaren 720S ಸಿಗ್ನೇಚರ್ ಆರೆಂಜ್ ಶೇಡ್‌ನಲ್ಲಿ ಬರುತ್ತದೆ.
ಇನ್ನು ಹಳೆಯ ಮೆಕ್ಲಾರೆನ್ 720ಎಸ್ ಸ್ಪೋರ್ಟ್ಸ್ ಕಾರು 2.8 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ ಮತ್ತು ಗಂಟೆಗೆ 341 ಕಿಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಹೊಸ ಮೆಕ್ಲಾರೆನ್ 720ಎಸ್ ಸ್ಪೋರ್ಟ್ಸ್ ಕಾರು ಲೆದರ್ ಮತ್ತು ಅಲ್ಕಾಂಟರಾ ವಸ್ತುಗಳ ಸಂಯೋಜನೆಯನ್ನು ನೀಡುತ್ತದೆ. ಈ ಕಾರಿನಲ್ಲಿ ಕಾರ್ಬನ್ ಫೈಬರ್ ಅಂಶಗಳನ್ನು ಒಳಗೊಂಡಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








