Just In
Don't Miss!
- News
ಪೊಲೀಸ್ ಠಾಣೆಯಲ್ಲಿ ಬಗೆಹರಿದ ಒಂದು ಕೋಣದ ವಿವಾದ!
- Movies
'ದೀಪ್ ಸಿಧು ಜೊತೆ ನನಗೆ ಯಾವುದೇ ಸಂಬಂಧವಿಲ್ಲ': ಸಂಸದ, ನಟ ಸನ್ನಿ ಡಿಯೋಲ್ ಸ್ಪಷ್ಟನೆ
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದ ಮಸಾಲೆಗಳ ರಾಜನ ಬಳಿಯಿದ್ದ ಐಷಾರಾಮಿ ಕಾರುಗಳಿವು
ಎಂಡಿಹೆಚ್ ಮಸಾಲೆ ಕಂಪನಿಯ ಮಾಲೀಕರು ಹಾಗೂ ಸಂಸ್ಥಾಪಕರಾದ ಮಹಾಶಯ್ ಧರ್ಮಪಾಲ್ ಗುಲಾಟಿ ಅವರು ಭಾರತದ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರು. ಭಾರತದಲ್ಲಿ ಅವರನ್ನು ಮಸಾಲೆಗಳ ರಾಜ ಎಂದೂ ಸಹ ಕರೆಯಲಾಗುತ್ತದೆ.

ಮಸಾಲೆಗಳ ರಾಜ ಮಹಾಶಯ್ ಧರ್ಮಪಾಲ್ ಗುಲಾಟಿ ಕಳೆದ ವಾರ ನಿಧನರಾದರು. ಮಸಾಲೆಗಳ ರಾಜ, ಮಸಾಲೆಗಳನ್ನು ಮಾತ್ರವಲ್ಲದೇ ಮತ್ತಷ್ಟು ವಸ್ತುಗಳನ್ನು ಪ್ರೀತಿಸುತ್ತಿದ್ದರು. ಮಹಾಶಯ್ ಧರ್ಮಪಾಲ್ ಯಾವುದರ ಬಗ್ಗೆ ಒಲವನ್ನು ಹೊಂದಿದ್ದರು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಮಸಾಲೆಗಳ ರಾಜ ಧರ್ಮಪಾಲ್ ಗುಲಾಟಿ ವಾಹನಗಳನ್ನು ಪ್ರೀತಿಸುತ್ತಿದ್ದರು ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ. ಇದಕ್ಕೆ ಅವರ ಬಳಿಯಿರುವ ಹಲವಾರು ಕಾರುಗಳ ಸಂಗ್ರಹವೇ ಸಾಕ್ಷಿ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಅವರು ತಮ್ಮ ಕಾರುಗಳೊಂದಿಗಿರುವ ಹಲವಾರು ಚಿತ್ರಗಳು ಬಹಿರಂಗಗೊಂಡಿವೆ. ಅವರು ಹೆಚ್ಚಾಗಿ ತಮ್ಮ ನೆಚ್ಚಿನ ಕಾರುಗಳಲ್ಲಿ ಸಂಚರಿಸುತ್ತಿದ್ದರು. ಇದಕ್ಕೆ ಸಂಬಂಧಿಸಿದ ಹಲವಾರು ಚಿತ್ರಗಳು ಹಾಗೂ ವೀಡಿಯೊಗಳು ಲಭ್ಯವಾಗಿವೆ.

ಧರ್ಮಪಾಲ್ ಗುಲಾಟಿ ಅವರ ಗ್ಯಾರೇಜ್‌ನಲ್ಲಿ ರೋಲ್ಸ್ ರಾಯ್ಸ್ ಘೋಸ್ಟ್, ಕ್ರಿಸ್ಲರ್ 300 ಸಿ ಲಿಮೋಸಿನ್, ಮರ್ಸಿಡಿಸ್ ಬೆಂಝ್ ಎಂ-ಕ್ಲಾಸ್ ಎಂಎಲ್ 500 ಸೇರಿದಂತೆ ಹಲವಾರು ಐಷಾರಾಮಿ ಕಾರುಗಳಿವೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಇದರ ಜೊತೆಗೆ ಅವರು ತಮ್ಮ ನೆಚ್ಚಿನ ಟೊಯೊಟಾ ಇನೋವಾ ಕ್ರಿಸ್ಟಾದಲ್ಲಿಯೂ ಹಲವಾರು ಬಾರಿ ಕಾಣಿಸಿಕೊಂಡಿದ್ದರು. ಇವು ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಕೆಲವು ಕಾರುಗಳು ಮಾತ್ರ.

ಅವರು ಟೊಯೋಟಾ ಫಾರ್ಚೂನರ್, ಹೋಂಡಾ ಡಬ್ಲ್ಯುಆರ್-ವಿ ಕಾರುಗಳಲ್ಲಿಯೂ ಕೆಲ ಬಾರಿ ಕಾಣಿಸಿಕೊಂಡಿದ್ದಾರೆ. ಭಾರತದ ಮಸಾಲೆ ಉದ್ಯಮದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ಧರ್ಮಪಾಲ್ ಗುಲಾಟಿ ತಮ್ಮ 98ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಎಂಡಿಹೆಚ್ ಕಂಪನಿಯ ಸಿಇಒ ಆಗಿದ್ದ ಅವರಿಗೆ ಭಾರತದ ವ್ಯಾಪಾರ ಹಾಗೂ ಉದ್ಯಮಕ್ಕೆ ನೀಡಿದ ಕೊಡುಗೆಗಾಗಿ ಕಳೆದ ವರ್ಷ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್'ರವರು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದ್ದರು.