25 ಕೋಟಿ ರೂ. ಕಾರು ಸುಟ್ಟು ಭಸ್ಮ: ಕಂಪನಿ ಕೊಟ್ಟ ಆಫರ್‌ಗೆ ಹುಚ್ಚೆದ್ದು ಕುಣಿದ ಮಾಲೀಕ!
ಸಾಮಾನ್ಯವಾಗಿ ಅಪಘಾತ ಅಥವಾ ಬೆಂಕಿ ಅವಘಡಗಳಲ್ಲಿ ಸೂಪರ್ ಕಾರುಗಳು ನಾಶವಾಗುವ ಹೆಚ್ಚಿನ ಸಂದರ್ಭಗಳಲ್ಲಿ ಮಾಲೀಕರೇ ಕಾರಣರಾಗಿರುತ್ತಾರೆ. ಇನ್ನೂ ಕೆಲವು ಸಂದರ್ಭಗಳಲ್ಲಿ ವಾಹನದಲ್ಲಿನ ಕೆಲವು ತಾಂತ್ರಿಕ ದೋಷದಿಂದಾಗಿ ಕಾರಿಗೆ ಬೆಂಕಿ ಹೊತ್ತಿಕೊಂಡ ನಿದರ್ಶನಗಳಿವೆ. ಇತ್ತೀಚೆಗೆ ಇಂಥಹದ್ದೇ ಘಟನೆ ನಡೆದಿದ್ದು, 3 ಮಿಲಿಯನ್ ಡಾಲರ್ (ಅಂದಾಜು 25 ಕೋಟಿ ರೂ.) ಮೌಲದ್ಯ ಹೈಪರ್‌ಕಾರಾದ ಕೊಯೆನಿಗ್ಸೆಗ್ ಜೆಸ್ಕೊ ಬೆಂಕಿಗೆ ಆಹುತಿಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಈ ಘಟನೆಗೆ ಕಂಪನಿ ಪ್ರೆತಿಕ್ರಿಯಿಸಿರುವ ರೀತಿಗೆ ಎಲ್ಲರೂ ಫಿದಾ ಆಗಿದ್ದಾರೆ.
ಬೆಂಕಿಗೆ ಆಹುತಿಯಾದ ಕಾರು ಕೊಯೆನಿಗ್ಸೆಗ್ ಜೆಸ್ಕೊ ನೂರ್ ಆವೃತ್ತಿಯಾಗಿದ್ದು, ಇದು ಕಾರ್ಬನ್ ಫೈಬರ್ ಬಾಡಿವರ್ಕ್ ಹೊಂದಿದೆ. ಕಾರ್ಬನ್ ವೀಲ್‌ಗಳು ಮತ್ತು ಗೋಲ್ಡ್ ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ ಬರುತ್ತದೆ. ಅಪಘಾತ ಸಂಭವಿಸಿದಾಗ ಕಾರು ಗ್ರೀಸ್‌ನಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿತ್ತು. ವರದಿಗಳ ಪ್ರಕಾರ, ಕಾರು ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.

ಅಪಘಾತದ ನಂತರ, ಕಾರಣವನ್ನು ತಿಳಿಯಲು ತನಿಖೆ ನಡೆಸಲಾಗಿತ್ತು. ತನಿಖೆಯಲ್ಲಿ ವಾಹನದಲ್ಲಿಯೇ ದೋಷವಿದೆ ಎಂದು ಕಂಡುಬಂದಿದೆ. ಕೊಯೆನಿಗ್ಸೆಗ್ ಕಂಪನಿಯ ಸಿಇಒ ಕ್ರಿಶ್ಚಿಯನ್ ವಾನ್ ಕೊಯೆನಿಗ್ಸೆಗ್ ಅವರು ಹೈಪರ್ ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣ ಕಾರಿನ ಹಿಂಭಾಗದಲ್ಲಿರುವ ದೋಷಪೂರಿತ ಒತ್ತಡದ ಹೈಡ್ರಾಲಿಕ್ ಕೊಳವೆ ಎಂದು ಹೇಳಿದ್ದಾರೆ. ಇದು ಹೈಡ್ರಾಲಿಕ್ ಆಯಿಲ್ ಸೋರಿಕೆಗೆ ಕಾರಣವಾಗಿ ಬೆಂಕಿ ಹೊತ್ತಿಕೊಂಡಿದೆ.
ಉತ್ಪಾದನಾ ದೋಷದಿಂದಾಗಿ ಸಮಸ್ಯೆ ಉಂಟಾಗಿದೆ ಎಂದು ತಯಾರಕರು ಅರಿತುಕೊಂಡ ಕೂಡಲೇ, ಕೊಯೆನಿಗ್ಸೆಗ್ ಜೆಸ್ಕೊ ಹೈಪರ್ ಕಾರನ್ನು ಖರೀದಿಸಿರುವ ಮಾಲೀಕರಿಗೆ ವಾಹನ ಓಡಿಸಬೇಡಿ ಎಂದು ಹೇಳಿದ್ದಾರೆ. ಪ್ರಸ್ತುತ, ಪ್ರಪಂಚದಾದ್ಯಂತ ಈ ಕಾರನ್ನು 28 ಮಂದಿ ಖರೀದಿಸಿದ್ದಾರೆ. ತಯಾರಕರು ಸದ್ಯ ಎಲ್ಲಾ ವಾಹನಗಳನ್ನು ಪ್ರತ್ಯೇಕವಾಗಿ ಪರಿಶೀಲಿಸುತ್ತಿದ್ದಾರೆ.

ಸೋರಿಕೆಯ ಸಂದರ್ಭದಲ್ಲಿ ಹೈಡ್ರಾಲಿಕ್ ವ್ಯವಸ್ಥೆಯನ್ನು ಪತ್ತೆಹಚ್ಚುವ ಮತ್ತು ಸ್ವಯಂಚಾಲಿತವಾಗಿ ಸ್ಥಗಿತಗೊಳಿಸುವ ಸಾಫ್ಟ್‌ವೇರ್‌ನಲ್ಲಿ ಪ್ರಸ್ತುತ ಕೆಲಸ ಮಾಡುತ್ತಿದ್ದೇವೆ. ತಯಾರಕರು ಈ ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದು, ಸಮಸ್ಯೆಯನ್ನು ಸರಿಪಡಿಸುವವರೆಗೆ ವಾಹನವನ್ನು ಓಡಿಸದಂತೆ ಕಂಪನಿಯು ಮಾಲೀಕರನ್ನು ವಿನಂತಿಸಿದೆ.
ಮಾಲೀಕನಿಗೆ ಹೊಸ ಕಾರು: ತನ್ನ ದುಬಾರಿ ಹೊಸ ಹೈಪರ್ ಕಾರನ್ನು ಕಳೆದುಕೊಂಡ ಮಾಲೀಕನಿಗೆ ಬದಲಿ ಜೆಸ್ಕೊವನ್ನು ನೀಡುವುದಾಗಿ ಕಂಪನಿ ಘೋಷಿಸಿದೆ. ಇದು ಖಂಡಿತವಾಗಿಯೂ ತಯಾರಕರಿಂದ ಉತ್ತಮ ಪ್ರತಿಕ್ರಿಯೆಯಾಗಿದೆ. ಗ್ರಾಹಕರ ಮೇಲೆ ದೂಷಿಸುವ ಬದಲು ಸಮಸ್ಯೆಯನ್ನು ಗುರುತಿಸಿ, ಸಾರ್ವಜನಿಕವಾಗಿ ತಪ್ಪನ್ನು ಒಪ್ಪಿಕೊಂಡು ಬದಲಿ ಕಾರನ್ನು ನೀಡುತ್ತಿರುವುದು ಹಲವರನ್ನು ಮೆಚ್ಚಿಸಿದೆ.
ಕಾರಿನ ಮೇಲೆ ವಿಶ್ವ ದಾಖಲೆಯಿದೆ: ಕೊಯೆನಿಗ್ಸೆಗ್ ಜೆಸ್ಕೊ ಲಿಮಿಟೆಡ್ ಎಡಿಷನ್ ಹೈಪರ್ ಕಾರಾಗಿದ್ದು, ಪ್ರಸ್ತುತ ವಿಶ್ವದ ಅತ್ಯಂತ ವೇಗದ ಕಾರೆಂಬ ವಿಶ್ವ ದಾಖಲೆಯನ್ನು ಹೊಂದಿದೆ. ಈ ಕಾರು ಕೇವಲ 18.82 ಸೆಕೆಂಡುಗಳಲ್ಲಿ 400 ಕಿ.ಮೀ ವೇಗವನ್ನು ತಲುಪಿ ವಿಶ್ವ ದಾಖಲೆ ನಿರ್ಮಿಸಿದೆ. ಜೆಸ್ಕೊ 5.0-ಲೀಟರ್ ಟ್ವಿನ್-ಟರ್ಬೊ ವಿ 8 ಎಂಜಿನ್ ಹೊಂದಿದ್ದು, ಎಂಜಿನ್ 1,280 ಪಿಎಸ್ ಪವರ್ ಮತ್ತು 1,500 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








