Woman Cab Driver: ಅಪ್ಪನ ಸಾವು... ಕುಟುಂಬವನ್ನು ಸಾಕಲು ಕ್ಯಾಬ್ ಡ್ರೈವರ್ ಆದ ಯುವತಿ...ಆದ್ರೆ

ಭಾರತದಲ್ಲಿ 70ರ ದಶಕದ ಬಳಿಕ ಮಹಿಳೆಯರ ಏಳಿಗೆಯು ಹಲವರನ್ನು ಆಶ್ಚರ್ಯಗೊಳಿಸಿದೆ. ಪುರುಷರು ಮಾಡುವ ಹಲವು ಕೆಲಸಗಳನ್ನು ಮಹಿಳೆಯರು ಮಾಡುವ ಮೂಲಕ ಯಾವುದರಲ್ಲೂ ಕಮ್ಮಿಯಿಲ್ಲ ಎಂಬುದನ್ನು ಸಾಭೀತುಪಡಿಸಿದ್ದಾರೆ. ಇದೀಗ ಕ್ಯಾಬ್ ಓಡಿಸುತ್ತಾ ಕಾಣಿಸಿಕೊಂಡ ಯುವತಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾರೆ.

ಕಲ್ಕತ್ತಾದಲ್ಲಿ ಮಹಿಳಾ ಉಬರ್ ಚಾಲಕಿ
ಮಹಿಳಾ ಉಬರ್ ಚಾಲಕಿಯನ್ನು ಭೇಟಿಯಾದ ಪರಮ್ ಕಲ್ಯಾಣ್ ಸಿಂಗ್ ಎಂಬಾತ, ಫೇಸ್‌ಬುಕ್ ಪೋಸ್ಟ್‌ನಲ್ಲಿ ಆಕೆಯ ಜೊತೆಗಿನ ಅನುಭವವನ್ನು ಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ ಅಪರೂಪದ ಮಹಿಳಾ ಉಬರ್ ಚಾಲಕಿಯನ್ನು ಭೇಟಿಯಾಗಿರುವುದಾಗಿ ತಿಳಿಸಿದ್ದಾರೆ. ಈ ಪೋಸ್ಟ್‌ನಲ್ಲಿ ಡ್ರೈವ್‌ನ ಅನುಭವ ಹಾಗೂ ಆಕೆಯ ವಿವರಗಳು ಹಾಗೂ ಚಾಲಕಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ.

An engineering graduate women turned cab driver to support his family

ವಿಷಯಕ್ಕೆ ಬಂದರೆ ಪರಮ್ ಕಲ್ಯಾಣ್ ಸಿಂಗ್ ಉಬರ್ ಬುಕ್ ಮಾಡಿದ್ದು, ಪಿಕಪ್ ಮಾಡಿಕೊಳ್ಳಲು ಚಾಲಕನಿಗೆ ಕರೆ ಮಾಡಿದ್ದಾರೆ. ಆ ವೇಳೆ ಅತ್ತಕಡೆ ಮಹಿಳೆ ಪ್ರತಿಕ್ರಿಯಿಸಿದ್ದನ್ನು ಕಂಡು ಒಂದು ಕ್ಷಣ ದಂಗಾಗಿದ್ದಾರೆ. ಸಾಮಾನ್ಯವಾಗಿ ನಾವು ಕೂಡ ಉಬರ್‌ನಲ್ಲಿ ಮಹಿಳಾ ಚಾಲಕಿಯರನ್ನು ನೋಡಿಲ್ಲ. ಈ ಹಿಂದೆ ಟ್ರಕ್ ಹಾಗೂ ಬಸ್‌ಗಳನ್ನು ಮಹಿಳೆಯರು ಓಡಿಸಿ ಫೆಮಸ್ ಆಗಿದ್ದಾರೆ.

ಆದರೆ ಕ್ಯಾಬ್ ಚಾಲಕಿಯನ್ನು ನೋಡಿರುವುದು ಇದೇ ಮೊದಲು. ಈ ಮಹಿಳಾ ಚಾಲಕಿಯ ಬಗ್ಗೆ ಪೋಸ್ಟ್‌ಲ್ಲಿ ವಿವರಿಸಿರುವ ಸಿಂಗ್‌, ಉಬರ್ ಇಂಡಿಯಾದ ಮಹಿಳಾ ಚಾಲಕಿಯ ಹೆಸರು ದೀಪ್ತಾ ಘೋಷ್, "ನಿನ್ನೆ ಲೇಕ್ ಮಾಲ್‌ಗೆ ಹೋಗಲು ಕ್ಯಾಬ್ ಅನ್ನು ಬುಕ್ ಮಾಡಿದ್ದೆ. ಮಹಿಳಾ ಡ್ರೈವರ್‌ನಿಂದ ಕರೆ ಸ್ವೀಕರಿಸಿದೆ. ನಿಮ್ಮ ಡ್ರಾಪ್ ಎಲ್ಲಿಗೆ, ಪೇಮೆಂಟ್ ಹೇಗೆ ಮಾಡುತ್ತೀರಿ ಎಂದು ಸಭ್ಯವಾಗಿ ಕೇಳಿದ್ದಾರೆ''.

An engineering graduate women turned cab driver to support his family

ನಮ್ಮ ಪ್ರಯಾಣದ ವೇಳೆ ದೀಪ್ತಾ ಘೋಷ್ ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡೆ, ಈಕೆ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮುಗಿಸಿದ್ದಾರೆ. 2020 ರ ಮೊದಲು, ಘೋಷ್ ಅನೇಕ ಕಂಪನಿಗಳಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. 2020 ರಲ್ಲಿ ತಂದೆಯ ಹಠಾತ್ ಮರಣದಿಂದಾಗಿ ಜವಾಬ್ದಾರಿಗಳು ಹೆಚ್ಚಾಗಿರುವುದಾಗಿ ಆಕೆ ಹೇಳಿದ್ದಾರೆ ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ತಂದೆಯನ್ನು ಕಳೆದುಕೊಂಡ ಬಳಿಕ ದೀಪ್ತಾ ಘೋಷ್‌ಗೆ ಸಿಕ್ಕ ಕೆಲಸಗಳೆಲ್ಲವೂ ಹೊರ ರಾಜ್ಯಗಳಲ್ಲಿನವು ಆಗಿದ್ದು, ಘೋಷ್‌ಗೆ ತಾಯಿ, ತಂಗಿಯನ್ನು ಬಿಟ್ಟೋಗುವುದು ಸಾಧ್ಯವಾಗಲಿಲ್ಲ. ಸದ್ಯ ದೀಪ್ತಾ ಘೋಷ್‌ಗೆ ಆಕೆಯ ತಾಯಿ ಮತ್ತು ತಂಗಿಯನ್ನು ಬಿಟ್ಟು ಹೋಗುವುದಕ್ಕಿಂತ ಜೊತೆಗಿದ್ದು ನೋಡಿಕೊಳ್ಳುವದೇ ಆಕೆಗೆ ಮುಖ್ಯವಾಗಿತ್ತು. ಹಾಗಾಗಿ ಘೋಷ್ ವಾಣಿಜ್ಯ ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸಿದರು.

ಆಲ್ಟೊ ಕಾರನ್ನು ಖರೀದಿಸಿ 2021 ರಲ್ಲಿ ಉಬರ್‌ಗೆ ಚಾಲಕಿಯಾಗಿ ಕೆಲಸ ಮಾಡಲು ಅರ್ಜಿ ಸಲ್ಲಿಸಿದರು. ಸದ್ಯಕ್ಕೆ ಘೋಷ್ ತನ್ನ ಕೆಲಸದಲ್ಲಿ ತೃಪ್ತರಾಗಿದ್ದಾರೆ. ವಾರಕ್ಕೆ 6 ದಿನ ದುಡಿಯುತ್ತಾರೆ ಪ್ರತಿದಿನ ಸುಮಾರು 6-7 ಗಂಟೆ ಕೆಲಸ ಮಾಡುತ್ತಾರೆ. ತಿಂಗಳಿಗೆ 40,000 ರೂ. ಸಂಪಾದನೆಯಿದೆ. ಕಾರ್ಪೊರೇಟ್ ಉದ್ಯೋಗಗಳಿಗೆ ಮರಳಲು ಆಕೆಗೆ ಯಾವುದೇ ಯೋಜನೆ ಇಲ್ಲ ಎಂದು ಪರಮ್ ಕಲ್ಯಾಣ್ ಸಿಂಗ್ ಪೋಸ್ಟ್‌ನಲ್ಲಿ ಘೋಷ್‌ ಬಗ್ಗೆ ತಿಳಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಸಾಮಾನ್ಯವಾಗಿ ಈಗಿನ ಪರಿಸ್ಥಿತಿಯಲ್ಲಿ ರಾತ್ರಿ ವೇಳೆ ಕ್ಯಾಬ್‌ಗಳಲ್ಲಿ ಓಡಾಡಲು ಯುವತಿಯರು ಹೆದರುತ್ತಾರೆ. ಆದರೆ ಇಲ್ಲಿ ಮಹಿಳಾ ಚಾಲಕಿಯರೇ ಕ್ಯಾಬ್‌ಗಳನ್ನು ಓಡಿಸುತ್ತಿರುವುದು ಹಲವರಿಗೆ ಮಾದರಿಯಾಗಿದೆ. ಹೀಗೆ ಇನ್ನೂ ಹಲವರು ಯುವತಿಯರು ಕ್ಯಾಬ್ ರಂಗದಲ್ಲಿ ಮುಂದೆ ಬಂದರೆ ಯುವತಿಯರು ರಾತ್ರಿ ವೇಳೆ ಮಹಿಳಾ ಕ್ಯಾಬ್‌ಗಳನ್ನು ಬುಕ್ ಮಾಡಿಕೊಂಡು ಯಾವುದೇ ಭಯವಿಲ್ಲದೇ ಓಡಾಡಬಹುದು ಎಂಬುದು ನಮ್ಮ ಅಭಿಪ್ರಾಯ.

Article Published On: Thursday, May 4, 2023, 11:47 [IST]
English summary
Kolkata women cab driver fb post viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+