ಕಳಪೆ ಸೇವೆಯಿಂದ ಕುಪಿತಗೊಂಡ ಮಾಲಿಕನಿಂದ ಬೆಂಝ್ ಕಾರು ಧ್ವಂಸ
ಸ್ಥಳೀಯ ಡೀಲರ್ ಶಿಪ್ ವೊಂದರ ಕಳಪೆ ಸೇವೆಯಿಂದ ಕುಪಿತಗೊಂಡಿರುವ ಮಾಲಿಕರೋರ್ವರು ತಮ್ಮ ದುಬಾರಿ ಮರ್ಸಿಡಿಸ್ ಬೆಂಝ್ ಕಾರನ್ನು ಧ್ವಂಸಗೈದಿದ್ದಾರೆ. ಪ್ರಸ್ತುತ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ದಕ್ಷಿಣ ಕೊರಿಯಾದಿಂದ ಘಟನೆ ವರದಿಯಾಗಿದ್ದು, 33 ಹರೆಯದ ಮಾಲಿಕ ಸ್ಥಳೀಯ ಡೀಲರ್ ಶಿಪ್‌ನ ಕಳಪೆ ಸೇವೆಯಿಂದ ಬೆಸತ್ತು ತಮ್ಮ ಬೆಲೆ ಬಾಳುವ ಮರ್ಸಿಡಿಸ್ ಬೆಂಝ್ ಎಸ್63 ಎಎಂಜಿ ಕಾರನ್ನು ಪುಡಿಗೈದಿದ್ದಾರೆ.

ಗಾಲ್ಪ್ ಸ್ಟಿಕ್ ನಿಂದ ಬೆಂಝ್ ಮಾಲಿಕ ತಮಗೆ ಮನಬಂದಂತೆ ಕಾರನ್ನು ಹೊಡೆದುರುಳಿಸಿದ್ದಾರೆ.

ಅತ್ಯಂತ ಶಕ್ತಿಶಾಲಿ ಬೆಂಝ್ ಕಾರಿನ ಎಂಜಿನ್ ನಲ್ಲಿ ಮೂರು ಬಾರಿ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮಾಲಕರು ಸ್ಥಳೀಯ ಡೀಲರ್ ಶಿಪ್ ಅನ್ನು ಸಂಪರ್ಕಿಸಿದ್ದರು.

ನಾಲ್ಕನೇ ಬಾರಿಗೆ ಸಮಸ್ಯೆ ಪುನರಾರ್ವತಿಸಿದರೆ ಕಾರನ್ನೇ ಬದಲಾಯಿಸಿಕೊಡುವುದಾಗಿ ಡೀಲರುಗಳು ಭರವಸೆ ಕೊಟ್ಟಿದ್ದರು. ಹಾಗೆ ನಾಲ್ಕನೇ ಬಾರಿಯೂ ಸಮಸ್ಯೆ ಕಾಣಿಸಿದ್ದರಿಂದ ಮಾಲಿಕ ನೇರವಾಗಿ ಡೀಲರುಗಳ ನೆರವು ಕೋರಿದ್ದರು.

ಆದರೆ ಸದ್ಯ ನಮ್ಮಿಂದ ಏನು ಮಾಡಲು ಸಾಧ್ಯವಿಲ್ಲ. ವಾಣಿಜ್ಯ ಪ್ರವಾಸದಲ್ಲಿರುವ ಶೋ ರೂಂ ಮಾಲಿಕ ಹಿಂತಿರುಗುವ ವರೆಗೂ ಕಾಯುವಂತೆ ಡೀಲರುಗಳು ತಿಳಿಸಿದ್ದರು.

ಕೊನೆಗೆ ಡೀಲರುಗಳ ಬೇಜವಾಬ್ದಾರಿ ಉತ್ತರದಿಂದ ಸಹಿಗೆಟ್ಟ ಬೆಂಝ್ ಮಾಲಿಕ ಕಾರಿಗೆ ತಕ್ಕ ಶಾಸ್ತಿ ಮಾಡಿದ್ದಾರೆ.
ವಿಡಿಯೋ ವೀಕ್ಷಿಸಿ


Click it and Unblock the Notifications