KSRTC: ಅಶ್ವಮೇಧ ಕ್ಲಾಸಿಕ್ ಬಸ್‌ಗಳಿಗೆ ಮನಸೋತ ಪ್ರಯಾಣಿಕರು.. ಉತ್ತಮ ಆದಾಯ ಬರುತ್ತಿದೆ!
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ - KSRTC), ಪ್ರಯಾಣಿಕರ ಅನುಕೂಲಕ್ಕಾಗಿ ಫೆಬ್ರವರಿಯಲ್ಲಿ ಅಶ್ವಮೇಧ ಕ್ಲಾಸಿಕ್ (Ashwamedha Classic) ಬಸ್‌ಗಳನ್ನು ಪರಿಚಯಿಸಿತ್ತು. ಇವುಗಳಿಗೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ವ್ಯಕ್ತವಾಗಿದೆ. ಸಾಮಾನ್ಯ ಸಾರಿಗೆ ಬಸ್‌ಗಳಿಗೆ ಹೋಲಿಸಿದರೆ ಈ ಅಶ್ವಮೇಧ ಬಸ್‌ಗಳು ಪ್ರತಿ ಕಿಲೋಮೀಟರ್‌ಗೆ ರೂ.10ಕ್ಕಿಂತ ಹೆಚ್ಚು ಆದಾಯವನ್ನು ಗಳಿಸುವಲ್ಲಿ ಯಶಸ್ವಿಯಾಗಿವೆ. ಬೆಂಗಳೂರು ಹಾಗೂ ವಿವಿಧ ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸುವ ನೂತನ ಅಶ್ವಮೇಧ ಕ್ಲಾಸಿಕ್ ಬಸ್‌ಗಳು 'ಪ್ರಯಾಣದ ಮರುಕಲ್ಪನೆ' ಎಂಬ ಘೋಷ ವಾಕ್ಯವನ್ನು ಹೊಂದಿವೆ.
'ನಾನ್ - ಸ್ಟಾಪ್ ಸೇವೆಯನ್ನು ಒದಗಿಸುತ್ತಿರುವ ಅಶ್ವಮೇಧ ಕ್ಲಾಸಿಕ್ ಬಸ್‌ಗಳಿಗೆ ಪ್ರಯಾಣಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾನ್ಯ ಸಾರಿಗೆ ಬಸ್‌ಗಳು ಪ್ರತಿ ಕಿಲೋಮೀಟರ್‌ಗೆ ರೂ.44 ರಿಂದ ರೂ.50 ವರಮಾನವನ್ನು ಗಳಿಸಿದರೆ, ಹೊಸ ಅಶ್ವಮೇಧ ಬಸ್‌ಗಳು ಒಂದು ಕಿಲೋಮೀಟರ್‌ಗೆ ರೂ.52 ರಿಂದ ರೂ.62 ಆದಾಯವನ್ನು ಗಳಿಸುತ್ತಿವೆ' ಎಂದು ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಹುತೇಕ ಅಶ್ವಮೇಧ ಕ್ಲಾಸಿಕ್ ಬಸ್‌ಗಳು (Ashwamedha Classic) ತಡೆರಹಿತವಾಗಿ ಪಾಯಿಂಟ್-ಟು-ಪಾಯಿಂಟ್ ಸಂಚರಿಸುವುದರಿಂದಾಗಿ ನಿರ್ವಾಹಕರನ್ನು ಹೊಂದಿಲ್ಲ. ಚಾಲಕನ ಆಸನದ ಬಳಿಯೇ ಬಾಗಿಲು ಇದ್ದು, ಅವರೇ ಟಿಕೆಟ್ ವಿತರಿಸುತ್ತಾರೆ. ಇದು ಸಿಬ್ಬಂದಿ ವೆಚ್ಚವನ್ನು ಕಡಿಮೆ ಮಾಡುತ್ತಿದ್ದು, ವರಮಾನ ಹೆಚ್ಚಳಕ್ಕೂ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ನೂತನ ಕೆಎಸ್‌ಆರ್‌ಟಿಸಿ ಅಶ್ವಮೇಧ ಕ್ಲಾಸಿಕ್ ಬಸ್‌ಗಳು 50 ಆಸನ (ಸೀಟ್)ಗಳನ್ನು ಹೊಂದಿದ್ದು, ಮುಂಭಾಗ (ಫ್ರಂಟ್) & ಹಿಂಭಾಗ (ಬ್ಯಾಕ್) ಎಲ್‌ಇಡಿ ಡೆಸ್ಟಿನೇಶನ್ ಬೋರ್ಡ್‌ಗಳು, ಪೋರ್ಟ್‌ಗಳು, ಸೆನ್ಸರ್ ಚಾಲಿತ ನ್ಯೂಮ್ಯಾಟಿಕ್ ಡೋರ್ (ಬಾಗಿಲು), ಎಮರ್ಜೆನ್ಸಿ ಬಟನ್ ಮ್ಯಾಗಜೀನ್ ಪೌಚ್‌ಗಳು ಮತ್ತು ವಾಟರ್ ಬಾಟಲ್ ಹೋಲ್ಡರ್‌ಗಳನ್ನು ಪಡೆದಿವೆ.
ನೂತನ ಸೀಟರ್-ಕಮ್-ಸ್ಲೀಪರ್ ಬಸ್‌ಗಳ ಪ್ರಾಯೋಗಿಕ ಸಂಚಾರ ಶುರುವಾದ ಬಳಿಕ, ಕೆಎಸ್‌ಆರ್‌ಟಿಸಿಯ ತಾಂತ್ರಿಕ ಪರಿಣಿತರ ಸಮಿತಿಯು ಒಂದು ತಿಂಗಳೊಳಗೆ ವರದಿಯನ್ನು ನೀಡಲಿದೆ. ಫಲಿತಾಂಶಗಳು ತೃಪ್ತಿಕರವಾಗಿದ್ದರೆ, ಸಾರಿಗೆ ಸಂಸ್ಥೆಯು ಮತ್ತಷ್ಟು ಬಸ್‌ಗಳನ್ನು ತೆಗೆದುಕೊಳ್ಳಲಿದೆ. ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದಿದ್ದರೆ, ಈ ಬಸ್‌ಗಳ ಖರೀದಿಸುವ ಆದೇಶವನ್ನು ರದ್ದುಪಡಿಸಬಹುದು ಎಂದು ತಿಳಿದುಬಂದಿದೆ.
ಈ ಸೀಟರ್-ಕಮ್-ಸ್ಲೀಪರ್ ಬಸ್‌ಗಳಲ್ಲಿ ಪ್ರಯಾಣಿಕರು ಆರಾಮದಾಯಕವಾಗಿ ತೆರಳಲು ಹಲವು ಸೌಕರ್ಯಗಳನ್ನು ಒದಗಿಸಲಾಗಿದೆ. ಮೊಬೈಲ್ ಮತ್ತು ಲ್ಯಾಪ್‌ಟಾಪ್ ಚಾರ್ಜಿಂಗ್ ಪೋರ್ಟ್‌ಗಳು, ಮೊಬೈಲ್ ಹೋಲ್ಡರ್, ಎಲ್‌ಇಡಿ ರೀಡಿಂಗ್ ಲೈಟ್‌ಗಳು, ಆಡಿಯೋ ಸ್ಪೀಕರ್‌ಗಳು ಮತ್ತು ದಿಂಬು (Pillows)ಗಳನ್ನು ಪಡೆದಿರಲಿವೆ. ಸುರಕ್ಷತೆಗೂ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದು, ಚಾಲಕನಿಗೆ ನೆರೆವಾಗಲು ಹಿಂಬದಿ (ರೇರ್) ಕ್ಯಾಮೆರಾವನ್ನು ಅಳವಡಿಸಲಾಗಿರುತ್ತದೆ.
ಕೆಎಸ್‌ಆರ್‌ಟಿಸಿಯು 1,000 ಪ್ರೀಮಿಯಂ ಸೇರಿದಂತೆ ಒಟ್ಟು 8,234 ಬಸ್‌ಗಳನ್ನು ಓಡಿಸುತ್ತಿದೆ. ಪ್ರತಿದಿನ 7,000 ಕಿಲೋಮೀಟರ್ ಸಂಚರಿಸುವ ಸಾರಿಗೆ ಸಂಸ್ಥೆ ಬಸ್‌ಗಳು, 23 ಲಕ್ಷ ಪ್ರಯಾಣಿಕರನ್ನು ಸುರಕ್ಷಿತವಾಗಿ ನಿರ್ದಿಷ್ಟ ಗಮ್ಯ ಸ್ಥಾನವನ್ನು ತಲುಪಿಸುತ್ತವೆ. ಕೆಎಸ್‌ಆರ್‌ಟಿಸಿ ಐರಾವತ, ಫ್ಲೈಬಸ್, ಐರಾವತ ಕ್ಲಬ್ ಕ್ಲಾಸ್, ಅಂಬಾರಿ, ಅಂಬಾರಿ ಉತ್ಸವ್, ಪಲ್ಲಕ್ಕಿ ಹಾಗೂ ರಾಜಹಂಸದಂತಹ ಬಸ್‌ಗಳನ್ನು ಹೊಂದಿದ್ದು, ಸುಮಾರು 34,904 ಸಿಬ್ಬಂದಿಗಳು ಹಗಲು-ರಾತ್ರಿ ದುಡಿಯುತ್ತಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications