ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಶೃಂಗೇರಿಯ ಶಾರದಾಂಬಾ ದೇಗುಲವು ಒಂದಾಗಿದೆ. ತಾಯಿಯ ಸನ್ನಿಧಾನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ತೆರಳುತ್ತಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಸಹ ಯಾತ್ರಿಕರ ಅನುಕೂಲಕ್ಕೆ ಬೆಂಗಳೂರಿಂದ ಶೃಂಗೇರಿಗೆ ವಿವಿಧ ಬಸ್‌ಗಳನ್ನು ಓಡಿಸುತ್ತಿದ್ದು, ವೇಳಾಪಟ್ಟಿ ಹಾಗೂ ಟಿಕೆಟ್ ದರದ ಕುರಿತು ಸಂಪೂರ್ಣವಾದ ಮಾಹಿತಿ ಇಲ್ಲಿದೆ.
ಬೆಂಗಳೂರಿನಿಂದ ಶೃಂಗೇರಿಗೆ ಪ್ರತಿದಿನ ಪಲ್ಲಕ್ಕಿ (ನಾನ್ ಎಸಿ ಸ್ಲೀಪರ್) ಬಸ್ ಕಾರ್ಯಚರಣೆಯನ್ನು ನಡೆಸುತ್ತಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ರಾತ್ರಿ 9.01ಕ್ಕೆ ಸಂಚಾರವನ್ನು ಆರಂಭಿಸುವ ಈ ಬಸ್, ಮರುದಿನ ಬೆಳಗ್ಗೆ 5:30ಕ್ಕೆ ಶೃಂಗೇರಿಯನ್ನು ತಲುಪುತ್ತದೆ. ಅಲ್ಲಿಂದ ರಾತ್ರಿ 9.36ಕ್ಕೆ ಹೊರಟು ಬೆಳಗ್ಗೆ 5 ಗಂಟೆ ಸುಮಾರಿಗೆ ಬೆಂಗಳೂರಿಗೆ ಬರುತ್ತದೆ. ಟಿಕೆಟ್ ವೊಂದಕ್ಕೆ ರೂ.751 ದರವಿದೆ.

ವಾರಾಂತ್ಯದ ದಿನಗಳಾದ ಶನಿವಾರ ಹಾಗೂ ಭಾನುವಾರದಂದು ವಿಶೇಷವಾಗಿ ಐರಾವತ ಕ್ಲಬ್ ಕ್ಲಾಸ್ ಎಸಿ ಬಸ್ ಕೂಡ ಓಡಾಟವನ್ನು ನಡೆಸುತ್ತದೆ. ಬೆಂಗಳೂರಿನಿಂದ ರಾತ್ರಿ 10.30ಕ್ಕೆ ಹೊರಡುವ ಈ ಬಸ್, ಬೆಳಗ್ಗೆ 6.30ರ ಸುಮಾರಿಗೆ ಶೃಂಗೇರಿಗೆ ತೆರಳುತ್ತದೆ. ಶೃಂಗೇರಿಯಿಂದ ರಾತ್ರಿ 10.06ಕ್ಕೆ ಸಂಚಾರವನ್ನು ಆರಂಭಿಸಲಿದ್ದು, ಬೆಳಗ್ಗೆ 6.45ಕ್ಕೆ ಬೆಂಗಳೂರನ್ನು ತಲುಪುತ್ತದೆ. ರೂ.783 ರಿಂದ ರೂ.853 ಟಿಕೆಟ್ ದರವನ್ನು ಪ್ರಯಾಣಿಕರು ಪಾವತಿಸಬೇಕು.
ಬೆಂಗಳೂರು - ಶೃಂಗೇರಿ ನಡುವೆ ವಿವಿಧ ನಾನ್ ಎಸಿ ಸ್ಲೀಪರ್ ಬಸ್‌ಗಳು ಓಡಾಟವನ್ನು ನಡೆಸುತ್ತಿವೆ. ಟಿಕೆಟ್ ವೊಂದಕ್ಕೆ ರೂ.682 ದರವಿದೆ. ರಾಜಹಂಸ ಬಸ್ ಸಹ ಸಂಚರಿಸುತ್ತಿದ್ದು, ರೂ.609 ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ. ಬೇರೆ - ಬೇರೆ ಸಮಯದಲ್ಲಿ ಸಾಮಾನ್ಯ ಕರ್ನಾಟಕ ಸಾರಿಗೆ ಬಸ್‌ಗಳು ಕೂಡ ಕಾರ್ಯಾಚರಣೆಯನ್ನು ಮಾಡುತ್ತಿದ್ದು, ರೂ.402 ರಿಂದ ರೂ.442 ಟಿಕೆಟ್ ದರವಿದೆ.
ಇತ್ತೀಚೆಗೆ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯೂಕೆಆರ್‌ಟಿಸಿ) ಹುಬ್ಬಳ್ಳಿಯಿಂದ ಶಿರಡಿಗೆ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಶುರು ಮಾಡಿತ್ತು. ಹುಬ್ಬಳ್ಳಿಯಿಂದ ರಾತ್ರಿ 8.08ಕ್ಕೆ ಹೊರಡಲಿರುವ ಈ ಬಸ್, ಮರುದಿನ ಬೆಳಗ್ಗೆ 8.44ರ ಸುಮಾರಿಗೆ ಶಿರಡಿಯನ್ನು ತಲುಪುತ್ತದೆ. ಧಾರವಾಡ, ಬೆಳಗಾವಿ, ಪುಣೆ ಮತ್ತು ಅಹಮದ್ ನಗರ ಮಾರ್ಗವಾಗಿ ಹೋಗುತ್ತದೆ.
ಶಿರಡಿಯಿಂದ ರಾತ್ರಿ 8ಕ್ಕೆ ಹೊರಡಲಿರುವ ಈ ಬಸ್, ಬೆಳಗ್ಗೆ 8.45ರ ಸುಮಾರಿಗೆ ಹುಬ್ಬಳ್ಳಿಗೆ ಬರಲಿದೆ. ಟಿಕೆಟ್ ಯೊಂದಕ್ಕೆ ರೂ.1300 ದರವನ್ನು ನಿಗದಿಪಡಿಸಲಾಗಿದೆ. ಬೆಂಗಳೂರು - ಶಿರಡಿ ನಡುವೆಯೂ ಅಂಬಾರಿ ಡ್ರೀಮ್ ಕ್ಲಾಸ್ ಎಸಿ ಸ್ಲೀಪರ್ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಟಿಕೆಟ್ ವೊಂದಕ್ಕೆ ರೂ.2,115 ದರವಿದೆ.
ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ 'ಪಲ್ಲಕ್ಕಿ' ನಾನ್ ಎಸಿ ಸ್ಲೀಪರ್ ಬಸ್‌ಗಳು 30 ಸ್ಲೀಪರ್ ಬರ್ತ್ ಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಅತ್ಯುತ್ತಮ ಸೌಕರ್ಯವನ್ನು ಒದಗಿಸುತ್ತವೆ. ಈ ಬಸ್‌ಗಳು ವಿಶೇಷ ಅಗ್ನಿ ನಿರೋಧಕ ಸಾಧನವನ್ನು ಪಡೆದಿವೆ. ಜೊತೆಗೆ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ನ್ನು ಚಾರ್ಜ್ ಮಾಡಲು ಚಾರ್ಜಿಂಗ್ ಪೋರ್ಟ್‌ಗಳನ್ನು ಹೊಂದಿವೆ.
ಕೆಎಸ್‌ಆರ್‌ಟಿಸಿಯ ವಿವಿಧ ಬಸ್‌ಗಳಲ್ಲಿ ಪ್ರಯಾಣಿಸಲು ಇಚ್ಚಿಸುವ ಸಾರ್ವಜನಿಕರು https://www.ksrtc.in/oprs-web/ಗೆ ಭೇಟಿ ನೀಡಿ ಟಿಕೆಟ್ ಕಾಯ್ದಿರಿಸಬಹುದು. ಇಲ್ಲವೇ ಸಮೀಪದ ನಿಲ್ದಾಣಕ್ಕೆ ತೆರಳಿ ಬುಕ್ಕಿಂಗ್ ಸಂಬಂಧ ವಿಚಾರಿಸಬಹುದು. ಒಟ್ಟಾರೆ ರಾಜ್ಯ ಸಾರಿಗೆ ನಿಗಮದ ಬಸ್‌ಗಳು ಪ್ರಯಾಣಿಕರಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಸೌಲಭ್ಯಗಳೊಂದಿಗೆ ಸುರಕ್ಷಿತ ಪ್ರಯಾಣವನ್ನು ಒದಗಿಸುತ್ತಿವೆ ಎಂದು ಹೇಳಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








