ಅಜ್ಜಿ-ಮೊಮ್ಮಗಳಿಗಷ್ಟೇ ಉಚಿತ ಪ್ರಯಾಣ, ಪಕ್ಷಿಗಳಿಗಲ್ಲ: KSRTC ಬಸ್ನಲ್ಲಿ ಬರ್ಡ್ಸ್‌ಗಳಿಗೆ ಟಿಕೆಟ್ ಎಷ್ಟು?
ಶಕ್ತಿ ಯೋಜನೆ (Shakti Scheme) ಜಾರಿಯಾದ ಬಳಿಕ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ (KSRTC Bus) ಮಹಿಳೆಯರದ್ದೇ ದರ್ಬಾರ್. ವೀಕೆಂಡ್ ಶುರುವಾಗುತ್ತಲೇ ಬಸ್‌ಗಳಲ್ಲಿ ಕಾಲು ಇಡಲು ಸಾಧ್ಯವಾಗದಷ್ಟು ರಶ್. ಬಸ್‌ಗಳಲ್ಲಿ ಫ್ರೀ ಪ್ರಯಾಣ ಅಂತ ಮಹಿಳೆಯರು ಪ್ರವಾಸ, ಧಾರ್ಮಿಕ ಕ್ಷೇತ್ರಗಳಿಗೆ ಸಾಗರೋಪಾದಿಯಲ್ಲಿ ತೆರಳುತ್ತಿದ್ದಾರೆ.
ಇಂದು ಕೆಎಸ್‌ಆರ್‌ಟಿಸಿ ಬಸ್ನಲ್ಲಿ ಹಾಸ್ಯಮಯ ಘಟನೆಯೊಂದು ವರದಿಯಾಗಿದೆ. ಇಂದು ಬೆಂಗಳೂರಿನಿಂದ ಮೈಸೂರಿಗೆ ಕೆಎಸ್‌ಆರ್‌ಟಿಸಿ (KSRTC) ಬಸ್ನಲ್ಲಿ ಹೊರಟ್ಟಿದ ಅಜ್ಜಿ ಮೊಮ್ಮಗಳಿಗೆ ಫ್ರೀ ಟಿಕೆಟ್ ನೀಡಿ ಅವರು ಕಂಡಕ್ಟರ್ ಟೆಕೆಟ್ ನೀಡಿ ತೆಗೆದುಕೊಂಡು ಹೋದ ಪಕ್ಷಿಗಳಿಗೆ ಟೆಕೆಟ್ ಕೊಟ್ಟು ಶಾಕ್ ನೀಡಿದ್ದಾರೆ. ನಾಲ್ಕು ಪಕ್ಷಿಗಳಿಗೆ 444 ರೂ. ಮೌಲ್ಯದ ಟಿಕೆಟ್ ಅನ್ನು ಕಂಡಕ್ಟರ್ ಕೊಟ್ಟಿದ್ದಾರೆ.

ಈ ಘಟನೆಯ ಬಗ್ಗೆ ವಿವರವಾಗಿ ಹೇಳುವುದಾದರೆ. ಇಂದು ಬೆಳಗ್ಗೆ ಬೆಳಗ್ಗೆ 8 ಗಂಟೆಗೆ ಅಜ್ಜಿ ಮೊಮ್ಮಗಳು ಫ್ರಿ ಬಸ್ ಎಂದು ಬೆಂಗಳೂರಿನಿಂದ ಮೈಸೂರಿಗೆ ಕೆಎಸ್‌ಆರ್‌ಟಿಸಿ (KSRTC) ಬಸ್ನಲ್ಲಿ ಹೊರಟ್ಟಿದ್ದಾರೆ. ಆದರೆ ಅವರು 4 ಲವ್ ಬರ್ಡ್ಸ್‌ಗಳನ್ನು ಪಂಜರದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಂಡಕ್ಟರ್ ಅಜ್ಜಿ - ಮೊಮ್ಮಗಳಿಗೆ ಶಕ್ತಿ ಯೋಜನೆಯಡಿ ಫ್ರೀ ಟಿಕೆಟ್ ಕೊಟ್ಟಿದ್ದಾರೆ
ಆದರೆ ಅವರು ತೆಗೆದುಕೊಂಡು ಹೋದ ಆದರೆ, ನಾಲ್ಕು ಲವ್ ಬರ್ಡ್ಸ್‌ಗಳಿಗೆ ಮಾತ್ರ ದುಡ್ಟು ಕೊಟ್ಟು ಟಿಕೆಟ್ ತೆಗೆದುಕೊಳ್ಳಲೇಬೇಕು ಎಂದು ಕಂಡಕ್ಟರ್ ಹೇಳಿದ್ದಾರೆ. ನಾಲ್ಕು ಲವ್ ಬರ್ಡ್ಸ್‌ಗಳಿಗೆ ತಲಾ ಒಂದಕ್ಕೆ 111 ರೂ. ನಂತೆ ಒಟ್ಟು 444 ರೂ. ಟಿಕೆಟ್ ನೀಡಿದ್ದಾರೆ. ಪಕ್ಷಿಗಳಿಗೆ ಆಫ್ ಟಿಕೆಟ್ ಅನ್ನು ಕಂಡಕ್ಟರ್ ನೀಡಿದ್ದಾನೆ. ಆದರೆ ಮಹಿಳೆ ಟೆಕೆಟ್ ಯಾಕೆ ಎಂದು ಕೇಳಿದರು. ಆದರೆ ಕಂಡಕ್ಟರ್ ಟೆಕೆಟ್ ಕೊಡಬೇಕು ಎಂದು ಹೇಳುತ್ತಾರೆ. ಆದರೆ ಬೇರೆ ಆಯ್ಕೆ ಇಲ್ಲದೇ ಮಹಿಳೆಯು ಟೆಕೆಟ್ ದರ ಪಾವತಿಸುತ್ತಾರೆ.
ಪಕ್ಷಿಗಳನ್ನು ಮಕ್ಕಳಂತೆ ಪರಿಗಣಿಸಿ ಅರ್ಧ ಟಿಕೆಟ್ ಅನ್ನು ನಿರ್ವಾಹಕ ನೀಡಿದ್ದಾನೆ. ಈ ಹಿಂದೆ ಕೋಳಿಗೆ ಟಿಕೆಟ್ ತೆಗೆದುಕೊಳ್ಳುವ ವಿಚಾರಕ್ಕೂ ಕೂಡ ಅನೇಕ ಕಡೆ ಬಸ್ ಕಂಡಕ್ಟರ್ ಹಾಗೂ ಜನರ ನಡುವೆ ಗಲಾಟೆಗಳಾಗಿವೆ. ಎರಡು ವರ್ಷದ ಹಿಂದೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಸಿಬ್ಬಂದಿ ಬಸ್ ಹತ್ತಿ ಬಂದು ಚೆಕ್ ಮಾಡಿದಾಗ ಪಕ್ಷಿಗಳಿಗೆ ಯಾವುದೇ ರೀತಿಯ ಟಿಕೆಟ್ ತೆಗೆದುಕೊಂಡಿಲ್ಲವೆಂಬುದು ಕಂಡಕ್ಟರ್ಗೆ ದಂಡ ವಿಧಿಸಿದ್ದರು.
ಇನ್ನು ಕೆಎಸ್‌ಆರ್‌ಟಿಸಿ ನಿಯಮದ ಪ್ರಕಾರ ಪ್ರಯಾಣಿಕರು ಕರೆತರುವ ಯಾವುದೇ ಪ್ರಾಣಿ, ಪಕ್ಷಿಗಳಿಗೆ ಆಫ್ ಟಿಕೆಟ್ ಅನ್ನು ನೀಡಬೇಕು. ಟಿಕೆಟ್ ನೀಡದಿದ್ದರೆ, ಪ್ರಯಾಣಿಕನಿಗೆ ಟಿಕೆಟ್ ಬೆಲೆಯ ಶೇ.10ರಷ್ಟು ದಂಡ ಹಾಗೂ ನಿರ್ವಾಹಕನಿಗೆ ಅಮಾನತು ಶಿಕ್ಷೆ ನೀಡಲಾಗುತ್ತದೆ. ಕೆಎಸ್‌ಆರ್‌ಟಿಸಿ ಐರಾವತ, ಫ್ಲೈಬಸ್, ಐರಾವತ ಕ್ಲಬ್ ಕ್ಲಾಸ್, ಅಂಬಾರಿ, ಅಂಬಾರಿ ಉತ್ಸವ್, ಪಲ್ಲಕ್ಕಿ ಹಾಗೂ ರಾಜಹಂಸದಂತಹ ಬಸ್‌ಗಳನ್ನು ಕೂಡ ಹೊಂದಿದೆ.
ಇನ್ನು ಕೆಎಸ್‌ಆರ್‌ಟಿಸಿಯ ಬಸ್‌ಗಳು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರದಿಂದ ಕಾರ್ಯಾಚರಣೆಯನ್ನು ನಡೆಸುತ್ತವೆ. ರಾಜ್ಯ ಮತ್ತು ಹೊರರಾಜ್ಯದ ವಿವಿಧ ನಗರಗಳಿಗೆ ಸಂಪರ್ಕದ ಕೊಂಡಿಯಾಗಿದ್ದು, ಸುಮಾರು 34,904 ನೌಕರರು ಹಗಲು - ರಾತ್ರಿ ಕಾರ್ಯನಿರ್ವಹಿಸುತ್ತಾರೆ.
ಇನ್ನು ರಾಜ್ಯದ ಸಾರಿಗೆ ನಿಗಮದ ಬಸ್‌ಗಳಿಗೆ ಹೋಲಿಕೆ ಮಾಡಿದರೆ, ಕೆಎಸ್‌ಆರ್‌ಟಿಸಿ ಅತ್ಯುತ್ತಮ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸುತ್ತಿದೆ ಎಂದು ಹೇಳಬಹುದು. ಶೀಘ್ರದಲ್ಲಿಯೇ 20 ಸ್ಲೀಪರ್ ಮತ್ತು 20 ಸೀಟರ್ ಬಸ್‌ಗಳನ್ನು ಪರಿಚಯಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದರಿಂದ ದೂರದ ಊರುಗಳಿಗೆ ಪ್ರಯಾಣಿಸುವವರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಸುರಕ್ಷಿತವಾಗಿ ನಿರ್ದಿಷ್ಟ ಗಮ್ಯ ಸ್ಥಾನವನ್ನು ತಲುಪಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications