ತಿರುಪತಿ ತಿಮ್ಮಪ್ಪನ ದರ್ಶಕ್ಕೆ ತೆರಳಬೇಕೇ.. KSRTC ಬಸ್‌ಗಳ ವೇಳಾಪಟ್ಟಿ ಏನು, ಟಿಕೆಟ್ ರೇಟ್ ಎಷ್ಟಿದೆ?

ಪವಿತ್ರ ಪುಣ್ಯಕ್ಷೇತ್ರ ತಿರುಪತಿಗೆ ಕರ್ನಾಟಕದಿಂದ ಪ್ರತಿನಿತ್ಯ ಸಾವಿರಾರು ಭಕ್ತರು ತೆರಳುತ್ತಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ - KSRTC) ಕೂಡ ಯಾತ್ರಿಕರ ಅನುಕೂಲಕ್ಕೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಸ್ ಸೇವೆಯನ್ನು ಒದಗಿಸುತ್ತಿದ್ದು, ವೇಳಾಪಟ್ಟಿ ಹಾಗೂ ಟಿಕೆಟ್ ದರದ ಕುರಿತು ಸಂಪೂರ್ಣವಾದ ವಿವರ ಇಲ್ಲಿದೆ.

ಬೆಂಗಳೂರು (Bengaluru) ಮತ್ತು ತಿರುಪತಿ (Tirupati) ನಡುವೆ ಬೆಳಗ್ಗೆಯಿಂದ ರಾತ್ರಿವರೆಗೂ ವಿವಿಧ ಬಸ್‌ಗಳು ಕಾರ್ಯಾಚರಣೆಯನ್ನು ನಡೆಸುತ್ತವೆ. ಎಸಿ ಸ್ಲೀಪರ್ ಬಸ್‌ನಲ್ಲಿ ರೂ.803, ಐರಾವತ ಕ್ಲಬ್ ಕ್ಲಾಸ್ ನಲ್ಲಿ ರೂ.654 ರಿಂದ ರೂ.704, ನಾನ್ ಎಸಿ ಸ್ಲೀಪರ್ ನಲ್ಲಿ ರೂ.680, ರಾಜಹಂಸದಲ್ಲಿ ರೂ.477 ಮತ್ತು ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ರೂ.351 ಟಿಕೆಟ್ ದರವಿದೆ.

KSRTC Bus Services Karnataka To Tirupati Time And Ticket Price Details

ಮೈಸೂರು - ತಿರುಪತಿ ಮಧ್ಯೆಯೂ ಐರಾವತ ಕ್ಲಬ್ ಕ್ಲಾಸ್ ಬಸ್ ಓಡಾಟವನ್ನು ನಡೆಸುತ್ತಿದೆ. ಸಂಜೆ 4.30ಕ್ಕೆ ಮೈಸೂರಿನಿಂದ ಹೊರಡಲಿದ್ದು, ಬೆಳಗ್ಗೆ 3 ಗಂಟೆಗೆ ತಿರುಪತಿಯನ್ನು ತಲುಪಲಿದೆ. ಮತ್ತೊಂದು ಐರಾವತ ಬಸ್, ರಾತ್ರಿ 8.25ಕ್ಕೆ ಸಂಚಾರವನ್ನು ಆರಂಭಿಸಲಿದ್ದು, ಬೆಳಗ್ಗೆ 4.30ರ ಸುಮಾರಿಗೆ ತಿರುಪತಿಗೆ ಹೋಗುತ್ತದೆ. ಟಿಕೆಟ್ ವೊಂದಕ್ಕೆ ರೂ.1,066 ದರವಿದೆ.

ತಿರುಪತಿಯಿಂದ ರಾತ್ರಿ 8ರ ಸುಮಾರಿಗೆ ಹೊರಡಲಿರುವ ಐರಾವತ ಕ್ಲಬ್ ಕ್ಲಾಸ್ ಬಸ್, ಬೆಳಗ್ಗೆ 04:45ರ ಸುಮಾರಿಗೆ ಮೈಸೂರಿಗೆ ಬರುತ್ತದೆ. ಇನ್ನೊಂದು ಐರಾವತ ಬಸ್ ರಾತ್ರಿ 9.32ಕ್ಕೆ ಸಂಚಾರವನ್ನು ಶುರು ಮಾಡಲಿದ್ದು, ಬೆಳಗ್ಗೆ 6:02ರ ಸುಮಾರಿಗೆ ಮೈಸೂರಿಗೆ ತಲುಪಲಿದೆ. ದಾವಣಗೆರೆ ಹಾಗೂ ತಿರುಪತಿ ನಡುವೆಯೂ ಕೆಎಸ್‌ಆರ್‌ಟಿಸಿ ಬಸ್‌ಗಳು ಕಾರ್ಯಾಚರಣೆಯನ್ನು ನಡೆಸುತ್ತಿವೆ.

KSRTC Bus Services Karnataka To Tirupati Time And Ticket Price Details

ದಾವಣಗೆರೆಯಿಂದ ಸಂಜೆ 4.06 ಗಂಟೆಗೆ ಸಂಚಾರವನ್ನು ಶುರು ಮಾಡುವ ಐರಾವತ ಬಸ್, ಬೆಳಗ್ಗೆ 4:06 ಗಂಟೆ ಸುಮಾರಿಗೆ ತಿರುಪತಿಗೆ ತೆರಳುತ್ತದೆ. ರೂ.1,357 ಟಿಕೆಟ್ ದರವಿದೆ. ರಾತ್ರಿ 7.15ರ ಸುಮಾರಿಗೆ ಹೊರಡುವ ಕರ್ನಾಟಕ ಸಾರಿಗೆ ಬಸ್, ಬೆಳಗ್ಗೆ 6.30ಕ್ಕೆ ತಿರುಪತಿಗೆ ಹೋಗುತ್ತದೆ. ಮತ್ತೊಂದು ಬಸ್ 10:15ಕ್ಕೆ ದಾವಣಗೆರೆ ಬಿಡಲಿದ್ದು, ಬೆಳಗ್ಗೆ 10:15 ಗಂಟೆಗೆ ತಿರುಪತಿಗೆ ಹೋಗಲಿದೆ. ಟಿಕೆಟ್ ವೊಂದಕ್ಕೆ ರೂ.560 ರಿಂದ ರೂ.620 ದರವನ್ನು ನಿಗದಿಪಡಿಸಲಾಗಿದೆ.

ಮಂಗಳೂರು (Mangaluru) - ತಿರುಪತಿ (Tirupati) ಮಧ್ಯೆಯೂ ಐರಾವತ ಕ್ಲಬ್ ಕ್ಲಾಸ್ ಬಸ್‌ಗಳು ಓಡಾಟವನ್ನು ನಡೆಸುತ್ತಿವೆ. ಮಧ್ಯಾಹ್ನ 12ಕ್ಕೆ ಸಂಚಾರವನ್ನು ಶುರು ಮಾಡಲಿದ್ದು, ಬೆಳಗ್ಗೆ 3:30ಕ್ಕೆ ತಿರುಪತಿಗೆ ಹೋಗುತ್ತದೆ. ಇನ್ನೊಂದು ಐರಾವತ ಬಸ್ ಮಧ್ಯಾಹ್ನ 2.02 ಗಂಟೆಗೆ ಹೊರಡಲಿದ್ದು, ಬೆಳಗ್ಗೆ 6ಕ್ಕೆ ತಿರುಪತಿಗೆ ತೆರಳುತ್ತದೆ. ಇನ್ನೊಂದು ಬಸ್ ರಾತ್ರಿ 8:50ಕ್ಕೆ ಪ್ರಯಾಣವನ್ನು ಆರಂಭಿಸಲಿದ್ದು, ಬೆಳಗ್ಗೆ 11:30ಕ್ಕೆ ತಿರುಪತಿಗೆ ತಲುಪಲಿದೆ. ರೂ.1,684 ಟಿಕೆಟ್ ದರವಿದೆ.

KSRTC Bus Services Karnataka To Tirupati Time And Ticket Price Details

ಈ ನಗರಗಳು ಮಾತ್ರವಲ್ಲದೆ, ರಾಜ್ಯದ ನಾನಾ ಭಾಗಗಳಿಂದಲೂ ಕೆಎಸ್‌ಆರ್‌ಟಿಸಿ ಬಸ್‌ಗಳು ಕೂಡ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಹೆಚ್ಚಿನ ಮಾಹಿತಿಗೆ ಸಾರಿಗೆ ನಿಗಮದ ಅಧಿಕೃತ ವೆಬ್‌ಸೈಟ್‌ https://www.ksrtc.in/oprs-web/ ಗೆ ಭೇಟಿ ನೀಡಿರಿ. ಇಲ್ಲವೇ ನಿಮ್ಮ ಹತ್ತಿರಕ್ಕೆ ನಿಲ್ದಾಣಕ್ಕೆ ತೆರಳಿ, ತಿರುಪತಿಗೆ ತೆರಳುವ ಬಸ್‌ಗಳ ಕುರಿತು ವಿಚಾರಿಸಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, April 21, 2024, 9:00 [IST]
English summary
Ksrtc bus services karnataka to tirupati time and ticket price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+