ಹಳೇ ಬಸ್‌ಗಳಿಗೆ ಹೊಸ ರೂಪ: ಶೀಘ್ರದಲ್ಲೇ ರಸ್ತೆಗಿಳಿಯಲಿವೆ ರಾಜಹಂಸ ಮಾದರಿಯ ಹೈಟೆಕ್ ಕೆಂಪು ಬಸ್‌ಗಳು

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಅವರು ಬಸ್‌ ಕಂಡಕ್ಟರ್‌ (conductor) ಆಗಿ ಶಕ್ತಿ ಯೋಜನೆಗೆ ವಿನೂತನವಾಗಿ ಜೂನ್‌ 11ರಂದು ಚಾಲನೆ ನೀಡಿದ್ದರು. ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್‌ (Bus) ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆ ಜಾರಿಯಾದ ಬಳಿಕ ಕೆಲವು ಆರಂಭಿಕ ಹಲವು ಅವಘಡಗಳು ಬಿಟ್ಟರೆ ಉಳಿದಂತೆ ಉತ್ತಮ ಯಶಸ್ವಿ ಕಂಡಿದೆ.

ಶಕ್ತಿ ಯೋಜನೆ ಬಳಿಕ ಸಾರಿಗೆ ಇಲಾಖೆಯು ಮತ್ತೊಂದು ಗುಡ್ ನ್ಯೂಸ್ ಅನ್ನು ನೀಡಿದೆ. ಶೀಘ್ರದಲ್ಲೇ ವಿನ್ಯಾಸದ ಮೂಲಕ ವಿನೂತನ ಮಾದರಿಯ KSRTC ಬಸ್‌ಗಳು ರಸ್ತೆಗೆ ಇಳಿಯಲಿವೆ. ರಾಜಹಂಸ ಮಾದರಿಯ ವ್ಯವಸ್ಥೆ ಇನ್ಮುಂದೆ ಸಾಮಾನ್ಯ ಸಾರಿಗೆಯಲ್ಲಿಯೂ ಬರಲಿದೆ. ಈ ವಿನೂತನ ಮಾದರಿಯ ಬಸ್​ಗಳನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈ ವಿನೂತನ ಮಾದರಿಯ ಬಸ್ ಪರಿಶೀಲನೆ ಮಾಡಿದ್ದಾರೆ. ಈ ಬಸ್​ಗಳ ವಿಶೇಷತೆಗಳು ಮತ್ತು ಯಾವ ಮಾರ್ಗದಲ್ಲಿ ಸಂಚರಿಸಲಿವೆ ಎಂಬುವುದರ ಕುರಿತು ಇಲ್ಲಿದೆ ಮಾಹಿತಿ.

KSRTC

KSRTC ಕೆಂಪು ಬಸ್​ಗಳಲ್ಲಿ ಇನ್ನು ಮುಂದೆ ರಾಜಹಂಸ ಬಸ್ ಮಾದರಿಯ ಸೇವೆಯನ್ನು ದೊರೆಯಲಿದೆ KSRTC ಹೊಸ ಮಾದರಿ point to point ಮತ್ತು Express ಸೇವೆ ನೀಡಲು ಸಿದ್ಧತೆ ನಡೆಸುತ್ತಿದೆ. ನೂತನ ಬಸ್ ಒಂದೂವರೆ ತಿಂಗಳಲ್ಲಿ ವಿನೂತನ ಮಾದರಿಯ 300 ಬಸ್ ರಸ್ತೆಗೆ ಇಳಿಯಲಿದೆ. ಈ ವಿನೂತನ ಬಸ್ ನಲ್ಲಿ ಎಂಡ್ ಟು ಎಂಡ್ ಮಾತ್ರ ನಿಲುಗಡೆಯಾಗಲಿವೆ. ಸದ್ಯ 10 ಲಕ್ಷ ಕಿಲೋ ಮೀಟರ್ ಓಡಿರುವ ಬಸ್ ಗೆ ಹೊಸ ವಿನ್ಯಾಸ ನೀಡಲಾಗುತ್ತಿದೆ.

ಈ ಮಾದರಿಯ ಬಸ್ ಬೆಂಗಳೂರು ಟು ಧರ್ಮಸ್ಥಳ ನಡುವೆ ಓಡಾಟ ನಡೆಸಲಿದೆ. ಬೆಂಗಳೂರು ಬಿಟ್ಟರೆ ಧರ್ಮಸ್ಥಳದಲ್ಲಿ ಮಾತ್ರ ನಿಲುಗಡೆ ಯಾಗಲಿದೆ. ಯಾಕೆಂದರೆ, ಸರ್ಕಾರಿ ಸಾರಿಗೆಯಲ್ಲಿ ಬಸ್‌ಗಳ ಕೊರತೆಯದ್ದೇ ಸಮಸ್ಯೆ.ಈಗಿರುವ ಬಸ್‌ಗಳು ಹಳೆಯದಾಗಿದ್ದು ಬಳಕೆಗೆ ಬರುತ್ತಿಲ್ಲ. ಲಕ್ಷಾಂತರ ರೂ. ಕೊಟ್ಟು ಹೊಸ ಬಸ್‌ಗಳನ್ನು ಖರೀದಿಸುವ ಬದಲು ಹೀಗೆ ಹಳೆ ಬಸ್‌ಗಳನ್ನೇ ನವೀಕರಿಸುವ ಸಾಹಸಕ್ಕೆ ಕೆಎಸ್‌ಆರ್‌ಟಿಸಿ ಕೈಹಾಕಿದೆ.

ಇನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ರಾಜ್ಯದ ಎಲ್ಲ ವಿಭಾಗೀಯ ಡಿಪೋ ಮತ್ತು ಪ್ರಾದೇಶಿಕ ಕಾರ್ಯಾಗಾರಗಳಲ್ಲಿ ಹಳೆಯ ಬಸ್‌ಗಳ ನವೀಕರಣ ಪ್ರಾರಂಭವಾಗಿದೆ. ವರದಿಗಳ ಪ್ರಕಾರ, ಹೊಸ ಬಸ್‌ ಖರೀದಿಸಬೇಕಾದರೆ ಕೆಎಸ್‌ಆರ್‌ಟಿಸಿಗೆ ಕನಿಷ್ಠ 18 ರಿಂದ 20 ಲಕ್ಷ ಬೇಕಾಗುತ್ತದೆ. ಆದರೆ 12-15 ವರ್ಷಗಳ ಹಳೆಯ ಬಸ್‌ಗಳನ್ನು ಮತ್ತೆ ಉತ್ತಮ ಸ್ಥತಿಗೆ ತರಲು 4 ಲಕ್ಷ ರೂ. ವೆಚ್ಚ ತಗಲುತ್ತಿದೆ

ತಾಂತ್ರಿಕವಾಗಿ ಗುಣಮಟ್ಟದಿಂದ ಬಸ್‌ಗಳನ್ನು ಸಿದ್ಧಪಡಿಸುವ ಕೆಲಸ ಮಾಡಲಾಗುತ್ತಿದೆ. ತುಕ್ಕು ಹಿಡಿದ ಮತ್ತು ಹಾನಿಗೊಳಗಾದ ಭಾಗಗಳನ್ನು ಹೊರ ತೆಗೆದು ಹೊಸ ಉಪಕರಣ ಜೋಡಿಸಲಾಗುವುದು. ಬಸ್‌ನ ಬಾಡಿಯನ್ನು ಹೊಸದಾಗಿ ತಯಾರಿಸಿ ಅಳವಡಿಸಲಾಗುವುದು. ಹೊಸ ಸೀಟ್‌ ಕುಶನ್‌ಗಳು ಮತ್ತು ಕವರ್‌, ಹೊಸ ಕಿಟಕಿಗಳನ್ನು ಅಳವಡಿಸಲಾಗುತ್ತದೆ. ಎಂಜಿನ್‌ ಹದಗೆಟ್ಟಿದ್ದರೇ ಕಾರ್ಯಾಗಾರದಲ್ಲೇ ಎಂಜಿನಿಯರ್‌ಗಳೇ ರಿಪೇರಿ ಮಾಡಿ ಹೊಸ ಬಸ್‌ನಂತೆ ಸಜ್ಜುಗೊಳಿಸುತ್ತಿದ್ದಾರೆ.

ಇನ್ನು ನಾಡಹಬ್ಬ ದಸರಾ ಸಂದರ್ಭದಲ್ಲಿ ಸರ್ಕಾರಿ ಬಸ್​ಗಳಲ್ಲಿ ಜನಸಂಚಾರ ಹೆಚ್ಚಳವಾಗಬಹುದೆಂದು ನಿರೀಕ್ಷಿಸಲಾಗಿದೆ. ಮೈಸೂರು ದಸರಾ ವೀಕ್ಷಣೆಗೆ ಬರುವ ಮಹಿಳೆಯರ ಸಂಖ್ಯೆಯಲ್ಲಿಯೂ ಹೆಚ್ಚವಾಗಬಹುದು. ಹೀಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೈಸೂರು ವಿಭಾಗವು ಹೆಚ್ಚುವರಿ ಬಸ್‌ಗಳನ್ನು ಕೋರಿದೆ ಎಂದು ವರದಿಗಳಾಗಿದೆ. ಮೈಸೂರು ದಸರಾ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಪೂರೈಸಲು ಬಸ್​​ಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಆದರೆ ಶಕ್ತಿ ಯೋಜನೆ ಜಾರಿಯಲ್ಲಿರುವುದರಿಂದ ಬಸ್​ಗಳು ಹೆಚ್ಚು ರಷ್ ಆಗುತ್ತದೆ.

ಇತ್ತೀಚೆಗೆ 2023ನೇ ಸಾಲಿನ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಪಡೆದುಕೊಂಡಿದೆ. KSRTC ಬಸ್​​ಗಳ ಸ್ಥಿತಿ ಈಗೀಗ ಸುಧಾರಿಸಿದೆ. ಇನ್ನು ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಹಿನ್ನಲೆಯಲ್ಲಿ ಸರ್ಕಾರಿ ಬಸ್​​ಗಳ ಬಳಕೆಯು ಹೆಚ್ಚಾಗಿದ್ದು, ಮಹಿಳೆಯರಿಗೆ ಉಚಿತ ಸೇವೆಯನ್ನು ನೀಡುವುದರಲ್ಲಿ ಮುಂಚೂಣಿಯಲ್ಲಿದ

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Tuesday, August 22, 2023, 11:46 [IST]
English summary
Ksrtc point to point and express bus services details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+