KSRTC: ಶೀಘ್ರ ಹೊಸ ಬಸ್‌ಗಳು ಸೇರ್ಪಡೆ.. ಆರಾಮಾಗಿ ನಿಮ್ಮೂರಿಗೆ ಹೋಗಬಹುದು!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ - KSRTC) ಶೀಘ್ರದಲ್ಲೇ ತನ್ನ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಹವಾನಿಯಂತ್ರಿತ ಸ್ಲೀಪರ್ ಹಾಗೂ ಮಲ್ಟಿ ಆಕ್ಸಲ್ ಸೆಮಿ ಇಂಟೆಗ್ರಲ್ ಸೀಟರ್ (ಆಸನ) ಬಸ್‌ಗಳನ್ನು ಪರಿಚಯಿಸಲು ಸಿದ್ಧತೆಯನ್ನು ನಡೆಸುತ್ತಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಮಾರ್ಚ್ 16ರಂದು ಕೆಎಸ್‌ಆರ್‌ಟಿಸಿ 20 ಸ್ಲೀಪರ್‌ ಹಾಗೂ 20 ಸೀಟರ್ ಬಸ್‌ಗಳಿಗಾಗಿ ಟೆಂಡರ್ ಕರೆದಿತ್ತು ಎಂದು ವರದಿಯಾಗಿದೆ. ಈ ಬಸ್‌ಗಳು ಪ್ರಯಾಣಿಕರು ದೂರದ ಊರುಗಳಿಗೆ ಆರಾಮದಾಯಕವಾಗಿ ಪ್ರಯಾಣಿಸಲು ಸಾಧ್ಯವಾಗುವಂತೆ ಐಷಾರಾಮಿ ಸೌಕರ್ಯವನ್ನು ಹೊಂದಿರಲಿವೆ. 15 ಮೀಟರ್ ಉದ್ದದ ಬಿಎಸ್-6 ಆಧಾರಿತ ನೂತನ ಹವಾ ನಿಯಂತ್ರಿತ ಬಸ್‌ಗಳು, 40 ಆಸನಗಳನ್ನು ಒಳಗೊಂಡಿರಲಿವೆ ಎಂದು ಅಂದಾಜಿಸಲಾಗಿದೆ.

Ksrtc Soon Introduce Ac Sleeper And Multi Axle Seater Buss

ರಾತ್ರಿ ವೇಳೆಯಲ್ಲಿ ಸುಖಕರವಾಗಿ ನಿದ್ರಿಸಲು ಅತ್ಯುತ್ತಮ ಗುಣಮಟ್ಟದ ಕುಶನ್ ಹೊಂದಿರುವ ಬರ್ತ್‌ ಹಾಗೂ ದಿಂಬು (ಪಿಲ್ಲೋ)ಗಳನ್ನು ಕೂಡ ಪಡೆದಿರಲಿವೆ. ಜೊತೆಗೆ ಪ್ರತಿಯೊಂದು ಬರ್ತ್‌ಗಳಿಗೂ ಬ್ಯಾಕ್‌ರೆಸ್ಟ್‌ನ್ನು ನೀಡಲಾಗಿರುತ್ತದೆ ಎನ್ನಲಾಗಿದೆ. ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಒತ್ತು ಕೊಡಲಾಗಿದೆ. 3 ಕ್ಯಾಮೆರಾಗಳು, ಎಮೆರ್ಜೆನ್ಸಿ ಪ್ಯಾನಿಕ್ ಬಟನ್, VLT (ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್) ಹಾಗೂ ಫೈರ್ ಡಿಟೆಕ್ಷನ್ ಸಿಸ್ಟಮ್ ಅನ್ನು ಈ ಬಸ್‌ಗಳು ಹೊಂದಿರಲಿವೆ ಎಂದು ಹೇಳಲಾಗಿದೆ.

ಕೆಎಸ್‌ಆರ್‌ಟಿಸಿ 1,000 ಪ್ರೀಮಿಯಂ ಸೇರಿದಂತೆ ಒಟ್ಟು 8,234 ಬಸ್‌ಗಳನ್ನು ಓಡಿಸುತ್ತಿದೆ. ಪ್ರತಿದಿನ 7,000 ಕಿ.ಮೀ ಸಂಚರಿಸುವ ನಿಗಮದ ಬಸ್‌ಗಳು, 23 ಲಕ್ಷ ಪ್ರಯಾಣಿಕರನ್ನು ಸುರಕ್ಷಿತವಾಗಿ ನಿಗದಿತ ಗಮ್ಯ ಸ್ಥಾನವನ್ನು ತಲುಪಿಸುತ್ತವೆ. ಕೆಎಸ್‌ಆರ್‌ಟಿಸಿ ಐರಾವತ, ಫ್ಲೈಬಸ್, ಐರಾವತ ಕ್ಲಬ್ ಕ್ಲಾಸ್, ಅಂಬಾರಿ, ಅಂಬಾರಿ ಉತ್ಸವ್, ಪಲ್ಲಕ್ಕಿ ಹಾಗೂ ರಾಜಹಂಸದಂತಹ ಬಸ್‌ಗಳನ್ನು ಕೂಡ ಹೊಂದಿದೆ.

Ksrtc Soon Introduce Ac Sleeper And Multi Axle Seater Buss

ಕೆಎಸ್‌ಆರ್‌ಟಿಸಿಯ ಬಸ್‌ಗಳು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರದಿಂದ ಕಾರ್ಯಾಚರಣೆಯನ್ನು ನಡೆಸುತ್ತವೆ. ರಾಜ್ಯ ಮತ್ತು ಹೊರರಾಜ್ಯದ ವಿವಿಧ ನಗರಗಳಿಗೆ ಸಂಪರ್ಕದ ಕೊಂಡಿಯಾಗಿದ್ದು, ಸುಮಾರು 34,904 ನೌಕರರು ಹಗಲು - ರಾತ್ರಿ ಕಾರ್ಯನಿರ್ವಹಿಸುತ್ತಾರೆ.

ಫೆಬ್ರವರಿ 5ರಂದು ನೂತನ 100 ಅಶ್ವಮೇಧ ಕ್ಲಾಸಿಕ್ (Ashwamedha Classic) ಹೆಸರಿನ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಪರಿಚಯಿಸಿತ್ತು. ಇವು ಅತ್ಯಾಧುನಿಕ ಸೌಕರ್ಯವನ್ನು ಹೊಂದಿದ್ದು, 52 ಆಸನಗಳು, ಮುಂಭಾಗ ಮತ್ತು ಹಿಂಭಾಗ ಎಲ್‌ಇಡಿ ಡೆಸ್ಟಿನೇಶನ್ ಬೋರ್ಡ್‌, ಸೆನ್ಸರ್‌ ಚಾಲಿತ ನ್ಯೂಮ್ಯಾಟಿಕ್ ಡೋರ್ (ಬಾಗಿಲು), ಜಿಪಿಎಸ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಎಮರ್ಜೆನ್ಸಿ ಬಟನ್‌ ಸೇರಿದಂತೆ ಹತ್ತಾರು ಸೌಲಭ್ಯಗಳನ್ನು ಪಡೆದಿವೆ. ವಿಶೇಷವಾಗಿ ಶಕ್ತಿ ಯೋಜನೆಯಡಿ ಮಹಿಳೆಯರು ಈ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.

ಇತರೆ ರಾಜ್ಯದ ಸಾರಿಗೆ ನಿಗಮದ ಬಸ್‌ಗಳಿಗೆ ಹೋಲಿಕೆ ಮಾಡಿದರೆ, ಕೆಎಸ್‌ಆರ್‌ಟಿಸಿ ಅತ್ಯುತ್ತಮ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸುತ್ತಿದೆ ಎಂದು ಹೇಳಬಹುದು. ಶೀಘ್ರದಲ್ಲಿಯೇ 20 ಸ್ಲೀಪರ್‌ ಮತ್ತು 20 ಸೀಟರ್ ಬಸ್‌ಗಳನ್ನು ಪರಿಚಯಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದರಿಂದ ದೂರದ ಊರುಗಳಿಗೆ ಪ್ರಯಾಣಿಸುವವರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಸುರಕ್ಷಿತವಾಗಿ ನಿರ್ದಿಷ್ಟ ಗಮ್ಯ ಸ್ಥಾನವನ್ನು ತಲುಪಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, March 20, 2024, 17:04 [IST]
English summary
Ksrtc soon introduce ac sleeper and multi axle seater bus journey very easy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+