KSRTC: ಹತ್ತಿರದ ಜಿಲ್ಲೆಗಳನ್ನು ಸಂಪರ್ಕಿಸಲು ಬರಲಿವೆ ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳು, ದರ ತುಂಬಾ ಕಡಿಮೆ!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ತನ್ನ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದೆ. ಬೆಂಗಳೂರಿನಿಂದ ಹತ್ತಿರದ ಜಿಲ್ಲೆಗಳ ಪ್ರಯಾಣಕ್ಕಾಗಿ 300 ಎಲೆಕ್ಟ್ರಿಕ್ ಬಸ್‌ಗಳನ್ನು ಬಿಡಲು ಯೋಜಿಸುತ್ತಿದೆ. ಇದರಿಂದ ತುಮಕೂರು, ಮಂಡ್ಯ, ರಾಮನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಹೊಸ ಎಲೆಕ್ಟ್ರಿಕ್ ಬಸ್‌ಗಳು ಬೆಂಗಳೂರಿನ ಸಮೀಪವಿರುವ ಜಿಲ್ಲೆಗಳು ಹಾಗೂ 100 ಕಿ.ಮೀ ಗಿಂತ ಕಡಿಮೆಯಿರುವ ಇತರೆ ಪ್ರದೇಶಗಳಲ್ಲಿ ಸಂಚರಿಸಲಿವೆ ಎಂದು ವರದಿಯಾಗಿದೆ. ಈ ಹಿಂದೆ ಕೆಎಸ್‌ಆರ್‌ಟಿಸಿ, ಫೇಮ್ II (FAME II) ಸಬ್ಸಿಡಿಯಡಿಯಲ್ಲಿ 50 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಿತ್ತು. ಇವು ಕಳೆದ 7 - 8 ತಿಂಗಳಿಂದ ಸಂಚಾರ ನಡೆಸುತ್ತಿದ್ದು, ಈಗಾಗಲೇ 7 - 8 ಲಕ್ಷ ಕಿಲೋಮೀಟರ್‌ಗಳನ್ನು ದಾಟಿವೆ.

KSRTC: ಹತ್ತಿರದ ಜಿಲ್ಲೆಗಳನ್ನು ಸಂಪರ್ಕಿಸಲು ಬರಲಿವೆ ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳು, ದರ ತುಂಬಾ ಕಡಿಮೆ!

ಬೆಂಗಳೂರು (Bengaluru) ಮತ್ತು ದಾವಣಗೆರೆ (Davangere) ಮಾರ್ಗದಲ್ಲಿ ಹೆಚ್ಚಿನ ಎಲೆಕ್ಟ್ರಿಕ್ ಬಸ್‌ಗಳು ಓಡಾಡುತ್ತಿವೆ. ಜೊತೆಗೆ ಬೆಂಗಳೂರು - ಮೈಸೂರು, ವಿರಾಜಪೇಟೆ ಹಾಗೂ ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗ ಮಾರ್ಗದಲ್ಲಿಯೂ ಕಾರ್ಯಚರಣೆ ನಡೆಸುತ್ತಿವೆ. ಈ ಇವಿ ಪವರ್ ಪ್ಲಸ್ (EV Power Plus) ಬಸ್‌ಗಳು ಪ್ರಸ್ತುತ 200 ಕಿಲೋಮೀಟರ್ ಗೂ ಹೆಚ್ಚಿನ ದೂರವನ್ನು ಕ್ರಮಿಸುತ್ತಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 250 ಕಿ.ಮೀ ವರೆಗೆ ಚಲಿಸಲಿವೆ.

'ಮುಂಬರಲಿರುವ ಹೊಸ 300 ಎಲೆಕ್ಟ್ರಿಕ್ ಬಸ್‌ಗಳು, ಸಂಪೂರ್ಣ ಚಾರ್ಜ್ ನಲ್ಲಿ 180 ಕಿಲೋಮೀಟರ್ ವರೆಗೆ ಕ್ರಮಿಸಲಿವೆ. 12 - ಮೀಟರ್ ಉದ್ದವಿರುವ ಈ ನಾನ್ - ಎಸಿ (non - AC) ಬಸ್‌ಗಳು ಅಂಗವಿಕಲರ ಸ್ನೇಹಿ ವೈಶಿಷ್ಟ್ಯವನ್ನು ಹೊಂದಿರಲಿದ್ದು, ಬೆಂಗಳೂರಿನಿಂದ ಹತ್ತಿರದ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಲಿವೆ' ಎಂದು ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

KSRTC: ಹತ್ತಿರದ ಜಿಲ್ಲೆಗಳನ್ನು ಸಂಪರ್ಕಿಸಲು ಬರಲಿವೆ ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳು, ದರ ತುಂಬಾ ಕಡಿಮೆ!

ಕೆಎಸ್‌ಆರ್‌ಟಿಸಿ ನೂತನ ಎಲೆಕ್ಟ್ರಿಕ್ ಬಸ್‌ಗಳನ್ನು ಜಿಸಿಸಿ (GCC) ಮಾದರಿಯಲ್ಲಿ ಖರೀದಿಸಲು ಚಿಂತನೆ ನಡೆಸಿದೆ. ಆದರೆ, ಈ ಸಂಬಂಧ ಯಾವುದೇ ಟೆಂಡರ್‌ನ್ನು ಆಹ್ವಾನಿಸಿಲ್ಲ. ಒಂದೊಮ್ಮೆ ಈ ಮಾದರಿಯಲ್ಲಿ ಬಸ್‌ಗಳನ್ನು ಕೊಂಡುಕೊಂಡರೇ ವೆಚ್ಚ ಹೆಚ್ಚಳವಾಗುವ ನೀರಿಕ್ಷೆಯಲ್ಲಿ ಅಧಿಕಾರಿಗಳಿದ್ದಾರೆ. ಜಿಸಿಸಿ (ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್) ಮಾದರಿ ಎಂದರೆ, ಖಾಸಗಿ ಸಂಸ್ಥೆಯು ಸಾರಿಗೆ ನಿಗಮದೊಂದಿಗೆ ಒಪ್ಪಂದ ಮಾಡಿಕೊಂಡು ಬಸ್‌ಗಳನ್ನು ಪೂರೈಸುತ್ತದೆ. ನಿಗಮವು ಪ್ರತಿ ಕಿ.ಮೀ ಸಂಚಾರಕ್ಕೆ ನಿಗದಿಪಡಿಸಿರುವ ಹಣವನ್ನು ಪಾವತಿಸಬೇಕು.

ಕಳೆದ ಅಕ್ಟೋಬರ್ ತಿಂಗಳು ಕೆಎಸ್‌ಆರ್‌ಟಿಸಿ, ದೂರದ ಊರುಗಳಿಗೆ ಕಡಿಮೆ ಖರ್ಚಿನಲ್ಲಿ ಜನರು ಪ್ರಯಾಣಿಸಲು, ಆಕರ್ಷಕ 40 'ಪಲ್ಲಕ್ಕಿ' (ನಾನ್ ಎಸಿ ಸ್ಲೀಪರ್) ಬಸ್‌ಗಳನ್ನು ಪರಿಚಯಿಸಿತ್ತು. ಇವು, ಅಂಬಾರಿ ಎಸಿ ಬಸ್​ಗಳಿಗೆ ಹೋಲಿಕೆಯಾಗುತ್ತಿವೆ. ಆಗಸ್ಟ್ 28 ರಂದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆ​ಆರ್​ಟಿಸಿ), 'ಕಲ್ಯಾಣ ರಥ' ಹೆಸರಿನಲ್ಲಿ ನೂತನ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್​ ಸಂಚಾರವನ್ನು ಪ್ರಾರಂಭಿಸಿತ್ತು.

ಈ ಕೆಕೆ​ಆರ್​ಟಿಸಿ ಬಸ್, ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದ್ದು, ಸಂಪೂರ್ಣ ಎಸಿ ವ್ಯವಸ್ಥೆ, ಸ್ವಯಂಚಾಲಿತ ಬಾಗಿಲು, ಅಗ್ನಿ ನಿರೋಧಕ ಸಾಧನಗಳು, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಅನ್ನು ಒಳಗೊಂಡಿದೆ. ಇದೇ ವರ್ಷದ ಫೆಬ್ರವರಿಯಲ್ಲಿ ಕೆಎಸ್​ಆರ್​ಟಿಸಿ ತನ್ನ ಪ್ರೀಮಿಯಂ 'ಅಂಬಾರಿ ಉತ್ಸವ' ವೋಲ್ವೋ 9600 ಮಲ್ಟಿ ಆಕ್ಸಲ್ ಸ್ಲೀಪರ್ ಬಸ್​ಗಳನ್ನು ಪರಿಚಯಿಸಿತ್ತು. ಇವು ಬೆಂಗಳೂರು - ಹೈದರಾಬಾದ್, ಬೆಂಗಳೂರು - ಪಣಜಿ ಸೇರಿದಂತೆ ವಿವಿಧ ಮಾರ್ಗದಲ್ಲಿ ಸಂಚರಿಸುತ್ತಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, December 14, 2023, 11:05 [IST]
English summary
Ksrtc to add 300 non ac electric buses low cost journey
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+