Just In
- 22 min ago
ಮಿನಿ ಎಂಪಿವಿ ಕಾರು ಮಾರಾಟದಲ್ಲಿ ರೆನಾಲ್ಟ್ ಟ್ರೈಬರ್ ಹೊಸ ಮೈಲಿಗಲ್ಲು
- 2 hrs ago
ಎಕ್ಸ್ಯುವಿ700 ಬಿಡುಗಡೆಯ ನಂತರ ತಾತ್ಕಾಲಿಕವಾಗಿ ಮಾರಾಟದಿಂದ ಸ್ಥಗಿತವಾಗಲಿದೆ ಎಕ್ಸ್ಯುವಿ500
- 2 hrs ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ರಾಯಲ್ ಎನ್ಫೀಲ್ಡ್ ಹಂಟರ್ ಬೈಕ್
- 3 hrs ago
ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮೇಲೆ ಒಟ್ಟು ರೂ.12 ಸಾವಿರ ಕೋಟಿ ಹೂಡಿಕೆ ಮಾಡಿದ ಮಹೀಂದ್ರಾ
Don't Miss!
- Lifestyle
ಅಧ್ಯಯನ: ಸ್ಥೂಲಕಾಯದವರ ಸ್ಮರಣಾ ಶಕ್ತಿ ಕಾಪಾಡುತ್ತೆ ಬೆಣ್ಣೆಹಣ್ಣು
- Finance
ಏಪ್ರಿಲ್ 13ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- News
ಹೆಲಿ ಟೂರಿಸಂ; 'ಸೇವ್ ಮೈಸೂರು' ಅಭಿಯಾನಕ್ಕೆ ಭಾರೀ ಬೆಂಬಲ
- Movies
ಸಾಮಾಜಿಕ ಜಾಲತಾಣಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಕನಸುಗಾರ
- Sports
ಚೇತನ್ ಸಕಾರಿಯಾ ಕುಟುಂಬದ ದುರಂತ ಕತೆ ಬಿಚ್ಚಿಟ್ಟ ಸೆಹ್ವಾಗ್
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಿಗ್ನಲ್'ನಲ್ಲಿ ನಿಂತಿದ್ದ ಬೈಕಿನಿಂದ ಇಳಿದು ವಾಟಿ ಕಮಿಂಗ್ ಹಾಡಿಗೆ ಡ್ಯಾನ್ಸ್ ಮಾಡಿದ ಕೆಟಿಎಂ ಬೈಕ್ ಸವಾರ
ಯೂಟ್ಯೂಬ್'ನಲ್ಲಿ ಹಲವಾರು ರೀತಿಯ ಚಿತ್ರ ವಿಚಿತ್ರ ವೀಡಿಯೊಗಳಿವೆ. ಜನರು ರಾತ್ರೋರಾತ್ರಿ ಜನಪ್ರಿಯರಾಗಲು ಯೂಟ್ಯೂಬ್'ನಲ್ಲಿ ನಾನಾ ರೀತಿಯ ವೀಡಿಯೊಗಳನ್ನು ಅಪ್ ಲೋಡ್ ಮಾಡುತ್ತಲೇ ಇರುತ್ತಾರೆ.

ಈಗ ಟ್ರಾಫಿಕ್ ಸಿಗ್ನಲ್‌ನಲ್ಲಿ ತಮಿಳು ಹಾಡಿಗೆ ಡ್ಯಾನ್ಸ್ ಮಾಡಿದ ಯುವಕನ ವಿಲಕ್ಷಣ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊವನ್ನು ಇದುವರೆಗೂ 8 ದಶಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ವಾಹನಗಳು ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾಯುತ್ತಿದ್ದಾಗ ಕೆಟಿಎಂ ಬೈಕಿನಲ್ಲಿ ಕುಳಿತಿದ್ದ ಯುವಕ ಇದ್ದಕ್ಕಿದ್ದಂತೆ ಬೈಕಿನಿಂದ ಇಳಿದು ಇಳಯ ದಳಪತಿ ಖ್ಯಾತಿಯ ವಿಜಯ್ ನಟನೆಯ ಮಾಸ್ಟರ್ ಚಿತ್ರದ ವಾಟಿ ಕಮಿಂಗ್ ಹಾಡಿಗೆ ನೃತ್ಯ ಮಾಡುತ್ತಾನೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವೈರಲ್ ಆಗಿರುವ ಈ ವೀಡಿಯೊಗೆ ಟ್ರಾಫಿಕ್ ಸಿಗ್ನಲ್'ನಲ್ಲಿ ಕಾಯುವಾಗ ಹೀಗೆ ಮಾಡಿ ಎಂದು ಪೋಸ್ಟ್ ಮಾಡಲಾಗಿದೆ. ವೀಡಿಯೊದಲ್ಲಿ ಕಾಣಿಸಿಕೊಂಡಿರುವ ವಾಹನಗಳ ನಂಬರ್ ಪ್ಲೇಟ್ ಗಮನಿಸಿದರೆ ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿರುವ ಸಾಧ್ಯತೆಗಳಿವೆ.

ಈ ರೀತಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾಯುತ್ತಿರುವಾಗ ಡ್ಯಾನ್ಸ್ ಮಾಡುತ್ತಿರುವ ವೀಡಿಯೊಗಳು ಅಪ್ ಲೋಡ್ ಆಗಿ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಈ ರೀತಿಯ ಹಲವು ವೀಡಿಯೊಗಳು ವೈರಲ್ ಆಗಿದ್ದವು.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಸಾಮಾನ್ಯವಾಗಿ ಯುವಕರು ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ಗಳಲ್ಲಿ ಜನಪ್ರಿಯರಾಗಲು ಬೈಕ್ ಸ್ಟಂಟ್‌ಗಳಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಾರೆ.

ಆದರೆ ಈ ವೀಡಿಯೊದಲ್ಲಿರುವ ವ್ಯಕ್ತಿ ಯಾವುದೇ ನಿಯಮವನ್ನು ಉಲ್ಲಂಘಿಸದೆ ವಿಭಿನ್ನ ರೀತಿಯಲ್ಲಿ ಡ್ಯಾನ್ಸ್ ಮಾಡಿ ವೀಡಿಯೊವನ್ನು ಅಪ್ ಲೋಡ್ ಮಾಡಿದ್ದಾನೆ. ಈ ವೀಡಿಯೊಗೆ ನೆಟಿಜನ್‌ಗಳು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ
ಈ ವೀಡಿಯೊ ಸಾಕಷ್ಟು ಸಂಖ್ಯೆಯ ಲೈಕ್ ಹಾಗೂ ವೀವ್ಸ್'ಗಳನ್ನು ಗಿಟ್ಟಿಸುತ್ತಿದೆ. ಮಾಸ್ಟರ್ ಚಿತ್ರದ ವಾಟಿ ಕಮಿಂಗ್ ಭಾರಿ ಜನಪ್ರಿಯವಾಗಿದೆ. ಈ ಹಾಡನ್ನು ಹಲವಾರು ಜನರು ಡಬ್ ಮಾಡಿ ಅಪ್ ಲೋಡ್ ಮಾಡಿದ್ದಾರೆ.
ಡಬ್ ಮಾಡಿ ಅಪ್ ಲೋಡ್ ಮಾಡಿರುವ ವೀಡಿಯೊಗಳು ಸಹ ಹೆಚ್ಚಿನ ಸಂಖ್ಯೆಯ ಲೈಕ್ ಹಾಗೂ ವೀವ್ಸ್'ಗಳನ್ನು ಗಿಟ್ಟಿಸುತ್ತಿರುವುದು ವಿಶೇಷ. ಇದು ಈ ಹಾಡು ಸೃಷ್ಟಿಸಿರುವ ಕ್ರೇಜ್ ಅನ್ನು ತೋರಿಸುತ್ತದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ವೀಡಿಯೊದಲ್ಲಿರುವ ಕೆಟಿಎಂ ಬೈಕ್ ಸವಾರ ನೃತ್ಯ ಮಾಡುವಾಗ ಅವರ ಹಿಂದಿನ ವಾಹನದಲ್ಲಿದ್ದವರು ವೀಡಿಯೊ ಮಾಡುತ್ತಿದ್ದಾರೆ. ರಸ್ತೆಯ ಮಧ್ಯದಲ್ಲಿ ಇತರ ವಾಹನಗಳು ಸಿಗ್ನಲ್'ನಲ್ಲಿ ನಿಂತಿರುವುದನ್ನು ಕಾಣಬಹುದು.