Just In
- 23 min ago
ಮಿನಿ ಎಂಪಿವಿ ಕಾರು ಮಾರಾಟದಲ್ಲಿ ರೆನಾಲ್ಟ್ ಟ್ರೈಬರ್ ಹೊಸ ಮೈಲಿಗಲ್ಲು
- 2 hrs ago
ಎಕ್ಸ್ಯುವಿ700 ಬಿಡುಗಡೆಯ ನಂತರ ತಾತ್ಕಾಲಿಕವಾಗಿ ಮಾರಾಟದಿಂದ ಸ್ಥಗಿತವಾಗಲಿದೆ ಎಕ್ಸ್ಯುವಿ500
- 2 hrs ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ರಾಯಲ್ ಎನ್ಫೀಲ್ಡ್ ಹಂಟರ್ ಬೈಕ್
- 3 hrs ago
ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮೇಲೆ ಒಟ್ಟು ರೂ.12 ಸಾವಿರ ಕೋಟಿ ಹೂಡಿಕೆ ಮಾಡಿದ ಮಹೀಂದ್ರಾ
Don't Miss!
- Lifestyle
ಅಧ್ಯಯನ: ಸ್ಥೂಲಕಾಯದವರ ಸ್ಮರಣಾ ಶಕ್ತಿ ಕಾಪಾಡುತ್ತೆ ಬೆಣ್ಣೆಹಣ್ಣು
- Finance
ಏಪ್ರಿಲ್ 13ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- News
ಹೆಲಿ ಟೂರಿಸಂ; 'ಸೇವ್ ಮೈಸೂರು' ಅಭಿಯಾನಕ್ಕೆ ಭಾರೀ ಬೆಂಬಲ
- Movies
ಸಾಮಾಜಿಕ ಜಾಲತಾಣಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಕನಸುಗಾರ
- Sports
ಚೇತನ್ ಸಕಾರಿಯಾ ಕುಟುಂಬದ ದುರಂತ ಕತೆ ಬಿಚ್ಚಿಟ್ಟ ಸೆಹ್ವಾಗ್
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಧ್ಯ ರಾತ್ರಿಯಲ್ಲಿ ಸ್ವಿಗ್ಗಿ ಡೆಲಿವರಿ ಹುಡುಗನ ಪಾಲಿಗೆ ಆಪದ್ಭಾಂದವನಾದ ಕೆಟಿಎಂ ಬೈಕ್ ಸವಾರ
ಸ್ವಿಗ್ಗಿ ಡೆಲಿವರಿ ಹುಡುಗನ ಬೈಕ್ ರಾತ್ರಿ ವೇಳೆಯಲ್ಲಿ ಪಂಕ್ಚರ್ ಆಗಿದೆ. ಆದರೆ ಆತ ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ಆಹಾರವನ್ನು ತಲುಪಿಸಲೇಬೇಕಾಗಿತ್ತು. ಆ ಸಮಯದಲ್ಲಿ ಆ ದಾರಿಯಲ್ಲಿ ಸಾಗುತ್ತಿದ್ದವರೊಬ್ಬರು ಆತನಿಗೆ ತಮ್ಮ ಕೆಟಿಎಂ ಆರ್‌ಸಿ 390 ಬೈಕ್ ನೀಡಿ ಸಮಯಕ್ಕೆ ಸರಿಯಾಗಿ ಆಹಾರ ತಲುಪಿಸಲು ನೆರವಾಗಿದ್ದಾರೆ.

ಈ ಘಟನೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಈ ಘಟನೆ ರಾತ್ರಿ 11 ಗಂಟೆಯ ಸುಮಾರಿಗೆ ನಡೆದಿದೆ. ಈ ವೀಡಿಯೊವನ್ನು ಎನ್‌ಸಿಆರ್ ಬೈಕರ್ಸ್ ಎಂಬ ಯೂಟ್ಯೂಬ್ ಚಾನೆಲ್'ನಲ್ಲಿ ಪೋಸ್ಟ್ ಮಾಡಲಾಗಿದೆ.

ಕೆಟಿಎಂ ಬೈಕಿನಲ್ಲಿ ಸಾಗುತ್ತಿದ್ದವರು ಸ್ವಿಗ್ಗಿ ಡೆಲಿವರಿ ಹುಡುಗ ತನ್ನ ಬೈಕ್ ಅನ್ನು ತಳ್ಳಿಕೊಂಡು ಹೋಗುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಆತನ ನೆರವಿಗೆ ಧಾವಿಸಿದ ಕೆಟಿಎಂ ಬೈಕ್ ಸವಾರ ಯಾವ ಕಾರಣಕ್ಕೆ ಬೈಕ್ ಅನ್ನು ತಳ್ಳಿಕೊಂಡು ಹೋಗುತ್ತಿರುವಿರಿ ಎಂದು ಕೇಳಿದ್ದಾರೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸ್ವಿಗ್ಗಿ ಡೆಲಿವರಿ ಹುಡುಗ ತನ್ನ ಬೈಕ್ ಪಂಕ್ಚರ್ ಆಗಿದ್ದು, ಆಹಾರವನ್ನು ಗ್ರಾಹಕರಿಗೆ ತಲುಪಿಸಬೇಕಾಗಿದೆ ಎಂದು ಹೇಳಿದ್ದಾನೆ. ಇದನ್ನು ಕೇಳಿದ ಕೆಟಿಎಂ ಬೈಕ್ ಮಾಲೀಕರು ತಮ್ಮ ಬೈಕ್ ಅನ್ನು ಡೆಲಿವರಿ ಹುಡುಗನಿಗೆ ನೀಡಿದ್ದಾರೆ.

ಆರಂಭದಲ್ಲಿ ಸ್ವಿಗ್ಗಿ ಡೆಲಿವರಿ ಹುಡುಗ ಬೈಕ್ ಪಡೆಯಲು ನಿರಾಕರಿಸಿದ್ದಾನೆ. ತಾನು ಯಾರಿಗೂ ತೊಂದರೆ ಕೊಡಲು ಬಯಸುವುದಿಲ್ಲ ಎಂದು ಹೇಳಿದ್ದಾನೆ. ಆದರೆ ಕೆಟಿಎಂ ಬೈಕ್ ಮಾಲೀಕರು ಒತ್ತಾಯ ಮಾಡಿ ಡೆಲಿವರಿ ಹುಡುಗನಿಗೆ ತಮ್ಮ ಕೆಟಿಎಂ ಬೈಕ್ ನೀಡಿದ್ದಾರೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಡೆಲಿವರಿ ಹುಡುಗ ಆಹಾರವನ್ನು ತಲುಪಿಸುವ ವೇಳೆಗೆ ಕೆಟಿಎಂ ಬೈಕ್ ಮಾಲೀಕರು ಹಾಗೂ ಅವರ ಸ್ನೇಹಿತರು ಡೆಲಿವರಿ ಹುಡುಗನ ಬೈಕ್ ಅನ್ನು ರಿಪೇರಿ ಕೇಂದ್ರಕ್ಕೆಕೊಂಡೊಯ್ಯುತ್ತಾರೆ.

ಬೈಕ್ ರಿಪೇರಿ ಕೇಂದ್ರದಲ್ಲಿ ಪಂಕ್ಚರ್ ಆಗಿರುವ ಟಯರ್'ನ ಟ್ಯೂಬ್ ಬದಲಿಸಬೇಕೆಂದು ರಿಪೇರಿ ಕೇಂದ್ರದವರು ಹೇಳಿದ್ದಾರೆ. ಕೆಟಿಎಂ ಬೈಕ್ ಮಾಲೀಕರು ಹೊಸ ಟ್ಯೂಬ್ ಹಾಕಲು ಹೇಳಿ ಯುಪಿಐ ಮೂಲಕ ಹಣ ಪಾವತಿಸಿದ್ದಾರೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕೆಲ ಕ್ಷಣಗಳ ನಂತರ ಡೆಲಿವರಿ ಹುಡುಗ ಅಲ್ಲಿಗೆ ಬಂದಿದ್ದಾನೆ. ಟ್ಯೂಬ್ ಬದಲಿಸಲು ಹಣ ನೀಡಿದ ಕೆಟಿಎಂ ಬೈಕ್ ಮಾಲೀಕರಿಗೆ ಹಣ ನೀಡಲು ಮುಂದಾಗಿದ್ದಾನೆ. ಆದರೆ ಕೆಟಿಎಂ ಬೈಕ್ ಮಾಲೀಕರು ಹಣ ಬೇಡವೆಂದು ಹೇಳಿದ್ದಾರೆ.

ಬದಲಿಗೆ ರಸ್ತೆಯಲ್ಲಿ ಈ ರೀತಿಯ ಅಗತ್ಯವಿರುವವರಿಗೆ ಸಹಾಯ ಮಾಡುವಂತೆ ಡೆಲಿವರಿ ಹುಡುಗನಿಗೆ ತಿಳಿಸಿದ್ದಾರೆ. ವೈರಲ್ ಆಗಿರುವ ಈ ವೀಡಿಯೊವನ್ನು ವೀಕ್ಷಿಸಿರುವವರು ಡೆಲಿವರಿ ಹುಡುಗನ ನೆರವಿಗೆ ಧಾವಿಸಿದ ಕೆಟಿಎಂ ಬೈಕ್ ಮಾಲೀಕರನ್ನು ಶ್ಲಾಘಿಸಿದ್ದಾರೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು
ತಾವೂ ಸಹ ರಸ್ತೆಯಲ್ಲಿ ಅಗತ್ಯವಿರುವವರಿಗೆ ಈ ರೀತಿ ನೆರವು ನೀಡುವುದಾಗಿ ಕಾಮೆಂಟ್ ಮಾಡಿದ್ದಾರೆ. ಈ ಕೆಟಿಎಂ ಬೈಕ್ ಮಾಲೀಕರು ರಸ್ತೆಯಲ್ಲಿ ಅಗತ್ಯವಿರುವವರಿಗೆ ನೆರವು ನೀಡುತ್ತಿರುವುದು ಇದೇ ಮೊದಲ ಬಾರಿಯಲ್ಲ ಎಂಬುದು ಗಮನಾರ್ಹ.

ಈ ಕೆಟಿಎಂ ಬೈಕ್ ಮಾಲೀಕರು ಈ ಹಿಂದೆಯೂ ರಸ್ತೆಯಲ್ಲಿ ಸಹಾಯದ ಅಗತ್ಯವಿರುವವರಿಗೆ ನೆರವು ನೀಡಿದ್ದಾರೆ. ಅವರು ಈ ರೀತಿ ಸಹಾಯ ಮಾಡಿರುವ ಹಲವಾರು ವೀಡಿಯೊಗಳನ್ನು ಅವರು ತಮ್ಮ ಯೂಟ್ಯೂಬ್ ಚಾನೆಲ್'ನಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಚಿತ್ರ ಕೃಪೆ: ಎನ್‌ಸಿಆರ್ ಬೈಕರ್ಸ್