ತನ್ನದಲ್ಲದ ತಪ್ಪಿಗೆ ಕೂಗಾಡಿದ್ದಕ್ಕೆ ಬಸ್ ಅಡ್ಡಗಟ್ಟಿದ ಬೈಕ್ ಸವಾರ..!

ಕೆ‍‍ಟಿಎಂ ಡ್ಯೂಕ್ 200 ಬೈಕ್ ಸವಾರ ಹಾಗೂ ಪ್ರಯಾಣಿಕರಿದ್ದ ತುಂಬಿದ್ದ ಸಾರಿಗೆ ಸಂಸ್ಥೆಯ ಬಸ್ಸಿನ ಅಟೆಂಡರ್/ಕ್ಲೀನರ್ ನಡುವೆ ಮಾತಿನ ಚಕಮಕಿ ನಡೆದಿದೆ. ಸಾರಿಗೆ ಸಂಸ್ಥೆಯ ಬಸ್ ರಾಂಗ್ ಸೈಡಿನಲ್ಲಿ ಚಲಿಸಿದ್ದಲ್ಲದೇ ಬೈಕ್ ಸವಾರನ ಮೇಲೆ ಬಸ್ಸಿನ ಅಟೆಂಡರ್/ಕ್ಲೀನರ್ ಕೂಗಾಡಿದ್ದೇ ಈ ಚಕಮಕಿಗೆ ಕಾರಣ.

ತನ್ನದಲ್ಲದ ತಪ್ಪಿಗೆ ಕೂಗಾಡಿದ್ದಕ್ಕೆ ಬಸ್ ಅಡ್ಡಗಟ್ಟಿದ ಬೈಕ್ ಸವಾರ..!

ಅಂದ ಹಾಗೆ ಈ ಘಟನೆ ನಡೆದಿರುವುದು ರಾಜಸ್ತಾನದಲ್ಲಿರುವ ಜೈಪುರ - ಅಜ್ಮೇರ್ ಹೈವೇನಲ್ಲಿ. ಎರಡೂ ವಾಹನಗಳ ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಬೈಕ್ ಸವಾರನು ಹತಾಶೆಯಿಂದ ಅಲ್ಲಿಂದ ತೆರಳಿದ್ದಾನೆ. ವಾಹನ ಸವಾರರು ಹತಾಶರಾಗಿ ವಾಹನ ಚಲಾಯಿಸುವುದು ಭಾರತದ ರಸ್ತೆಗಳಲ್ಲಿ ಸಾಮಾನ್ಯವಾದ ಸಂಗತಿಯಾಗಿದೆ. ಭಾರತದ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ತೀರಾ ಅಪಾಯಕಾರಿಯಾಗುತ್ತಿದೆ.

ತನ್ನದಲ್ಲದ ತಪ್ಪಿಗೆ ಕೂಗಾಡಿದ್ದಕ್ಕೆ ಬಸ್ ಅಡ್ಡಗಟ್ಟಿದ ಬೈಕ್ ಸವಾರ..!

ಹೆದ್ದಾರಿಯಾಗಿರಲಿ ಅಥವಾ ಟ್ರಾಫಿಕ್ ಜಾಮ್ ಹೆಚ್ಚಿರುವ ನಗರಗಳ ರಸ್ತೆಯಾಗಿರಲಿ, ಕಾರ್ ಆಗಿರಲಿ ಅಥವಾ ದ್ವಿಚಕ್ರ ವಾಹನವಾಗಿರಲಿ, ವಾಹನ ಚಲಾಯಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ನಮ್ಮ ದೇಶದ ಹೆದ್ದಾರಿಗಳಲ್ಲಿ ಎದುರಾಗುವ ದೊಡ್ಡ ಅಪಾಯವೆಂದರೆ ರಾಂಗ್ ಸೈಡಿನಲ್ಲಿ ವಾಹನ ಚಲಾಯಿಸುವುದು.

ತನ್ನದಲ್ಲದ ತಪ್ಪಿಗೆ ಕೂಗಾಡಿದ್ದಕ್ಕೆ ಬಸ್ ಅಡ್ಡಗಟ್ಟಿದ ಬೈಕ್ ಸವಾರ..!

ಆರು ಪಥದ ಹೆದ್ದಾರಿಯಲ್ಲಿ ಯಾವುದೇ ದ್ವಿಚಕ್ರ ವಾಹನವಾದರೂ ರಾಂಗ್ ಸೈಡಿನಲ್ಲಿ ಬಂದರೆ ಅದು ಅಪಾಯಕಾರಿಯಾಗುವ ಸಾಧ್ಯತೆಗಳಿವೆ. ಅಂತಹದರಲ್ಲಿ 70ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊಂದಿರುವ ಸಾರಿಗೆ ಸಂಸ್ಥೆಯ ಬಸ್ ರಾಂಗ್ ಸೈಡಿನಲ್ಲಿ ಬಂದರೆ ಹೇಗಾಗಬೇಡ.

ಲೋಕೇಶ್ ಸ್ವಾಮಿ ಅವರಿಗೆ ಆಗಿದ್ದು ಅದೇ. ಅವರು ಸರಿಯಾಗಿ ಚಲಿಸುತ್ತಿದ್ದರೂ, ಬಸ್‍‍ವೊಂದು ಅವರಿಗೆ ರಾಂಗ್ ಸೈಡಿನಲ್ಲಿ ಅಡ್ಡ ಬಂದಿದೆ. ಲೋಕೇಶ್ ತಮ್ಮ ಹೆಲ್ಮೆಟ್‍‍ನಲ್ಲಿ ಅಳವಡಿಸಿದ್ದ ಕ್ಯಾಮೆರಾದಲ್ಲಿ ಈ ಸಂಪೂರ್ಣ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ.

ತನ್ನದಲ್ಲದ ತಪ್ಪಿಗೆ ಕೂಗಾಡಿದ್ದಕ್ಕೆ ಬಸ್ ಅಡ್ಡಗಟ್ಟಿದ ಬೈಕ್ ಸವಾರ..!

ವೀಡಿಯೊದಲ್ಲಿ ಕಾಣುವಂತೆ ಲೋಕೇಶ್ ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಸರಿಯಾದ ವೇಗದಲ್ಲಿಯೇ ತಮ್ಮ ಕೆಟಿಎಂ ಡ್ಯೂಕ್ 200 ಬೈಕ್ ಅನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಕೆಲ ಸೆಕೆಂಡುಗಳ ನಂತರ ಲೋಕೇಶ್ ಅವರ ಬೈಕು ಹಾಗೂ ಬಸ್ ಹತ್ತಿರವಾಗಿವೆ.

ತನ್ನದಲ್ಲದ ತಪ್ಪಿಗೆ ಕೂಗಾಡಿದ್ದಕ್ಕೆ ಬಸ್ ಅಡ್ಡಗಟ್ಟಿದ ಬೈಕ್ ಸವಾರ..!

ಲೋಕೇಶ್ ತಮ್ಮ ಬೈಕ್ ಅನ್ನು ಪಕ್ಕಕ್ಕೆ ತಿರುಗಿಸಿ, ಬಸ್ಸಿಗೆ ಹಾದುಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಬಸ್‌ನ ಅಟೆಂಡರ್/ಕ್ಲೀನರ್, ಲೋಕೇಶ್‍‍‍ರವರದು ಯಾವುದೇ ತಪ್ಪಿಲ್ಲದಿದ್ದರೂ ವಿನಾ ಕಾರಣ ಸನ್ನೆ ಮಾಡಿ ಲೋಕೆಶ್ ಮೇಲೆ ಕೂಗಾಡಿದ್ದಾನೆ.

MOST READ: ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ತನ್ನದಲ್ಲದ ತಪ್ಪಿಗೆ ಕೂಗಾಡಿದ್ದಕ್ಕೆ ಬಸ್ ಅಡ್ಡಗಟ್ಟಿದ ಬೈಕ್ ಸವಾರ..!

ತಮ್ಮದಲ್ಲದ ತಪ್ಪಿಗೆ ತನ್ನ ಮೇಲೆ ಕೂಗಾಡಿದ ಅಟೆಂಡರ್/ಕ್ಲೀನರ್ ಮೇಲೆ ಕೆರಳಿದ ಲೋಕೇಶ್ ಯೂ-ಟರ್ನ್ ತೆಗೆದುಕೊಂಡು ಬಸ್ಸನ್ನು ಹಿಂದಿಕ್ಕಿ ಅಡ್ಡಗಟ್ಟುವ ಕಾರಣದಿಂದ ತಾವೂ ಸಹ ಸ್ವಲ್ಪ ದೂರ ರಾಂಗ್ ಸೈಡಿನಲ್ಲಿ ಸವಾರಿ ಮಾಡಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ತನ್ನದಲ್ಲದ ತಪ್ಪಿಗೆ ಕೂಗಾಡಿದ್ದಕ್ಕೆ ಬಸ್ ಅಡ್ಡಗಟ್ಟಿದ ಬೈಕ್ ಸವಾರ..!

ಲೋಕೇಶ್, ಬಸ್ ಅಟೆಂಡರ್/ಕ್ಲೀನರ್‍‍ಗೆ ಸರಿಯಾಗಿ ವರ್ತಿಸುವಂತೆ ಹೇಳಿದರೂ ಕೇಳದ ಅಟೆಂಡರ್/ಕ್ಲೀನರ್ ತನ್ನ ವರ್ತನೆಯನ್ನು ಮುಂದುವರೆಸಿದ್ದಾನೆ. ಕೊನೆಗೆ ಬಸ್‌ ಅಟೆಂಡರ್/ಕ್ಲೀನರ್ ಲೋಕೇಶ್‌ರವರ ಬಳಿ ಕ್ಷಮೆಯಾಚಿಸಿದ ನಂತರ ಜಗಳ ಕೊನೆಗೊಳ್ಳುತ್ತದೆ.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ತನ್ನದಲ್ಲದ ತಪ್ಪಿಗೆ ಕೂಗಾಡಿದ್ದಕ್ಕೆ ಬಸ್ ಅಡ್ಡಗಟ್ಟಿದ ಬೈಕ್ ಸವಾರ..!

ನಂತರ ಅವರು ತಮ್ಮ ಹಾದಿಗಳನ್ನು ಹಿಡಿಯುತ್ತಾರೆ. ಆದರೂ ಸಹ ಬಸ್ ರಾಂಗ್ ಸೈಡಿನಲ್ಲಿಯೇ ಮುಂದೆ ಹೋಯಿತು. ಲೋಕೇಶ್ ತಾವು ಆ ರೀತಿಯಾಗಿ ಕೋಪಗೊಂಡಿದ್ದೇಕೆ ಎಂದು ಹೇಳುತ್ತಾ ತನ್ನ ಸವಾರಿಯನ್ನು ಮುಂದುವರಿಸಿದರು.

ತನ್ನದಲ್ಲದ ತಪ್ಪಿಗೆ ಕೂಗಾಡಿದ್ದಕ್ಕೆ ಬಸ್ ಅಡ್ಡಗಟ್ಟಿದ ಬೈಕ್ ಸವಾರ..!

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಇಲ್ಲಿ ಬಸ್ ಚಾಲಕನಿಂದ ತಪ್ಪಾಗಿದೆ. ಕೆಟಿಎಂ ಸವಾರನು ಮಾಡಿದ್ದು ಸರಿಯಾಗಿದೆ. ಇದು ಕೇವಲ ಒಂದು ಉದಾಹರಣೆಯಷ್ಟೆ. ಪ್ರತಿ ನಿತ್ಯ ಪ್ರತಿ ಕ್ಷಣ ದೇಶದ ವಿವಿಧ ಭಾಗಗಳಲ್ಲಿ ಇಂತಹ ಸಾವಿರಾರು ವಾಹನಗಳು ರಾಂಗ್ ಸೈಡಿನಲ್ಲಿ ಚಲಿಸುತ್ತಲೇ ಇರುತ್ತವೆ. ಕೆಲವು ಹೆದ್ದಾರಿಗಳಲ್ಲಿ ಯೂ-ಟರ್ನ್‍ ತೆಗೆದುಕೊಳ್ಳ ಬೇಕಾದರೆ ತುಂಬಾ ದೂರ ಹೋಗಬೇಕಾಗುತ್ತದೆ.

ತನ್ನದಲ್ಲದ ತಪ್ಪಿಗೆ ಕೂಗಾಡಿದ್ದಕ್ಕೆ ಬಸ್ ಅಡ್ಡಗಟ್ಟಿದ ಬೈಕ್ ಸವಾರ..!

ಇದರಿಂದ ಯೂ-ಟರ್ನ್ ತೆಗೆದುಕೊಳ್ಳವವರು ಸಾಕಷ್ಟು ದೂರ ಚಲಿಸಬೇಕಾಗುತ್ತದೆ. ಆದ ಕಾರಣ ಜನ ದೂರ ಹೋಗಿ ಯು ಟರ್ನ್ ತೆಗೆದುಕೊಳ್ಳುವ ಬದಲು ರಾಂಗ್ ಸೈಡಿನಲ್ಲಿ ವಾಹನಗಳನ್ನು ಚಲಾಯಿಸಿಕೊಂಡು ಹೋಗುತ್ತಾರೆ. ಕೆಲವು ಯೂ-ಟರ್ನ್‍‍ಗಳಂತೂ ಒಂದು ಕಿಲೋಮೀಟರ್ ದೂರದಲ್ಲಿದ್ದರೆ, ಇನ್ನೂ ಕೆಲವು ಕೆಲವೇ ಅಡಿಗಳಷ್ಟು ದೂರದಲ್ಲಿರುತ್ತವೆ.

ತನ್ನದಲ್ಲದ ತಪ್ಪಿಗೆ ಕೂಗಾಡಿದ್ದಕ್ಕೆ ಬಸ್ ಅಡ್ಡಗಟ್ಟಿದ ಬೈಕ್ ಸವಾರ..!

ಪರಿಸ್ಥಿತಿ ಯಾವುದೇ ಇರಲಿ, ರಸ್ತೆಗಳಲ್ಲಿ ಈ ರೀತಿಯಾಗಿ ಜಗಳ ಮಾಡಬಾರದು. ಒಂದು ವೇಳೆ ಬಸ್ ಕಂಡಕ್ಟರ್ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ್ದರೆ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು. ಭಾರತದ ರಸ್ತೆಗಳಲ್ಲಿ ಎಂದಿಗೂ ಹೆಚ್ಚು ಜಾಗರೂಕರಾಗಿರಲು ಸಾಧ್ಯವಿಲ್ಲ.

Most Read Articles

Kannada
English summary
KTM Duke 200 Rider Stops Government Bus Being Driven In The Wrong Way — Read in kannada
Story first published: Tuesday, August 27, 2019, 17:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X