Viral Video - ಶಿವಾ ಅಂತ ರಸ್ತೆ ದಾಟುತ್ತಿದ್ದ ವೃದ್ದನಿಗೆ ನೇರವಾಗಿ ಗುದ್ದಿದ ಬೈಕರ್‌... ತಪ್ಪು ಯಾರದ್ದು?‌

ಭಾರತದಲ್ಲಿ ಹಲವರಿಗೆ ಬೈಕ್‌ ಎಂದರೆ ಒಂದು ರೀತಿಯ ಹುಚ್ಚು. ಕೆಲವರು ಆ ಹುಚ್ಚಿನಿಂದ ಬೈಕನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡರೆ ಇನ್ನು ಹಲವರು ಆ ಬೈಕ್‌ ಅನ್ನು ಹುಚ್ಚರ ರೀತಿಯಲ್ಲಿಯೇ ಓಡಿಸುತ್ತಾರೆ. ಹೀಗೆ ಆದಾಗ ಅಪಘಾತಗಳು ಸಂಭವಿಸಿ, ಸಾಕಷ್ಟು ಕಷ್ಟ - ನಷ್ಟ ಎದುರಾಗುತ್ತದೆ.

ಹೌದು, ಇಲ್ಲೊಬ್ಬ ಯ್ಯೂಟ್ಯೂಬರ್‌ ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ತೀರಾ ರಾಷ್‌ ರೈಡಿಂಗ್‌ ಮಾಡಿ ವೃದ್ದರೊಬ್ಬರಿಗೆ ಅಪಘಾತ ಮಾಡಿದ ಘಟನೆಯೊಂದು ನಡೆದಿದೆ. ನಿರ್ದಿಷ್ಟವಾಗಿ ಈ ಘಟನೆ ಎಲ್ಲಿ ನಡೆದಿದೆ ಎಂದು ತಿಳಿದು ಬಂದಿಲ್ಲವಾದರೂ, ತಾನೇ ಶೂಟ್‌ ಮಾಡಿದ ವಿಡಿಯೋದಲ್ಲಿ ಬೈಕ್‌ ಸವಾರ ವೃದ್ದರೊಬ್ಬರಿಗೆ ಡಿಕ್ಕಿ ಹೊಡೆಯುತ್ತಿರುವುದು ವ್ಯಕ್ತವಾಗಿದೆ.

KTM RC 390 Rider Hits Old Man While Crossing The Road

ಘಟನೆಗೆ ಸಂಭಂಧಿಸಿದಂತೆ ಬೈಕ್‌ ಸವಾರ ಹೊಸ ಕೆಟಿಎಂ ಆರ್‌ಸಿ 390 ಬೈಕ್ ಅನ್ನು ಓಡಿಸುತ್ತಿದ್ದ ಎಂದು ತಿಳಿದು ಬಂದಿದೆ. ಪಟ್ಟಣದಲ್ಲಿ ಈತ ತೀರಾ ವೇಗವಾಗಿ ಬೈಕ್‌ ಅನ್ನು ಚಲಾಯಿಸುತ್ತಿದ್ದ ವೇಳೆ, ರಸ್ತೆ ದಾಟುತ್ತಿದ್ದ ವೃದ್ದರೊಬ್ಬರಿಗೆ ತನ್ನ ಬೈಕ್‌ ಯಿಂದ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮವಾಗಿ ಆಯ ತಪ್ಪಿದ ಬೈಕ್‌ ರೈಡರ್‌ ನೇರವಾಗಿ ತನ್ನ ಬೈಕನ್ನು ಅಲ್ಲಿದ್ದ ಕಂಬಕ್ಕೂ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾನೆ.

ಜನನಿಬಿಡ ಪ್ರದೇಶದಲ್ಲಿ ಬೈಕ್‌ ಚಲಾವಣೆ ಮಾಡುವಾಗ ಹುಷಾರಾಗಿ, ಎಚ್ಚರಿಕೆಯಿಂದ ಇರುವುದು ಉತ್ತಮ. ಯಾಕೆಂದರೆ ಸಾಕಷ್ಟು ಅಮಾಯಕರು ಚಂಚರಿಸುವ ವೇಳೆ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಅಪಘಾತಗಳನ್ನು ಮಾಡಿದರೆ ಯಾವುದೇ ತಪ್ಪು ಮಾಡದೇ ಇರುವವರು ಪ್ರಾಣವನ್ನು ಕಳೆದುಕೊಂಡು ಬೆಲೆ ತೆರಬೇಕಾಗುತ್ತದೆ. ಈ ವಿಡಿಯೋ ಕೆಳಗೆ ಸಾಕಷ್ಟು ಕಾಮೆಂಟ್‌ಗಳು ಬಂದಿರುವುದನ್ನು ನಾವು ಕಾಣಬಹುದು.

KTM RC 390 Rider Hits Old Man While Crossing The Road

ವಿಡಿಯೋದಲ್ಲಿ ಕಂಡು ಬಂದಂತೆ ಬೈಕ್‌ ರೈಡರ್‌ ಸುಮಾರು ಐವತ್ತು ಕಿಮೀ ವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದುದು ಕಾಣಬಹುದಾಗಿದೆ. ಅದೃಷ್ಟವಶಾತ್‌ ಬೈಕ್‌ ರೈಡರ್ ಮತ್ತು ವೃದ್ದ ಇಬ್ಬರಿಗೂ ಹೆಚ್ಚೇನು ಗಾಯಗಳಾಗದೆ ಘಟನೆಯಿಂದ ಪಾರಾಗಿದ್ದು ಇನ್ನಾದರೂ ಆತ ಎಚ್ಚರಿಕೆಯಿಂದ ಬೈಕ್‌ ಚಲಾಯಿಸಬೇಕಾಗಿದೆ. ಇನ್ನು ಘಟನೆ ನಡೆದ ಕೂಡಲೇ ಅಲ್ಲಿಗೆ ನೆರೆದಿದ್ದ ಜನರು ಧಾವಿಸಿ ಇಬ್ಬರನ್ನೂ ಪಾರು ಮಾಡಿದ್ದಾರೆ.

ಯುವಕರು ಸಾರ್ವಜನಿಕ ರಸ್ತೆಯಲ್ಲಿ ಬೈಕ್‌ ಸವಾರಿ ಮಾಡುವಾಗ ತಮ್ಮ ಸುರಕ್ಷತೆಯ ಜೊತೆಗೆ ಇತರರ ಸುರಕ್ಷತೆಯನ್ನೂ ಗಮನಿಸಬೇಕು. ಬೈಕ್‌ ಸಿಕ್ಕಿದ ಕೂಡಲೇ ಅಪರಿಮಿತ ವೇಗದಲ್ಲಿ ಚಲಿಸುವುದು, ಸಾರ್ವಜನಿಕ ಸ್ಥಳದಲ್ಲಿ ಅಪಾಯಕಾರಿ ರೀತಿಯಲ್ಲಿ ಬೈಕ್‌ ಓಡಿಸುವುದು ಭಾರತದಲ್ಲಿ ಶಿಕ್ಷಾರ್ಹ ಅಪರಾಧ ಎಂಬುದನ್ನು ಅರಿತು ಜವಾಬ್ದಾರಿಯುತವಾಗಿ ಬೈಕ್‌ ಚಲಾಯಿಸಬೇಕು.

ಇನ್ನು ಬೈಕ್‌ ರೈಡರ್‌ ಚಲಾಯಿಸುತ್ತಿದ್ದ ಕೆಟಿಎಂ ಆರ್‌ಸಿ ೩೯೦ ಬಗ್ಗೆ ನೋಡುವುದಾದರೆ, 2022ರ ಕೆಟಿಎಂ ಆರ್‌ಸಿ 390 ಬೈಕಿನಲ್ಲಿ ತನ್ನ ಟಾರ್ಕ್ ವಿತರಣೆಯನ್ನು ಹೆಚ್ಚಿಸುವ 40% ದೊಡ್ಡ ಏರ್‌ಬಾಕ್ಸ್ ಅನ್ನು ಒಳಗೊಂಡಿರುವ 37 ಸಿಸಿ, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಬಳಸುತ್ತದೆ. ಈ ಎಂಜಿನ್ 43.5 ಬಿಹೆಚ್‍ಪಿ ಪವರ್ ಮತ್ತು 37 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಹಳೆಯ ಮಾದರಿಯಂತೆಯೇ ಇರುತ್ತದೆ.

ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವ್ಹೀಲ್ ಗಳು ಮತ್ತು ಹಾಲೋ ಫ್ರಂಟ್ ಆಕ್ಸಲ್ ಜೊತೆಗೆ ಹೆಚ್ಚು ಏರೋಡೈನಾಮಿಕ್ ವಿನ್ಯಾಸ ಅಂಶಗಳನ್ನು ಹೊಂದಿದೆ. ಇದು ಎರಡು-ಹಂತದ ಹೊಂದಾಣಿಕೆ ಕ್ಲಿಪ್-ಆನ್ ಬಾರ್ ಅನ್ನು ಹೊಂದಿದೆ. ಈ ಬೈಕ್‌ನ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು 13.7-ಲೀಟರ್‌ಗಳಿಗೆ ಹೆಚ್ಚಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, January 24, 2024, 10:25 [IST]
English summary
Ktm rc 390 rider hits old man while crossing the road
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+