ವಿಡಿಯೋ: ಹೀರೋಯಿಸಂ ತೋರಿಸಲು ಹೋದ KTM ಸವಾರ, ಯುವತಿ ಪ್ರಾಣಕ್ಕೆ ತಂದಿಟ್ಟ ಸಂಚಕಾರ..!
ಸಾರ್ವಜನಿಕ ರಸ್ತೆಗಳಲ್ಲಿ ಸಾಹಸ ಪ್ರದರ್ಶನ (ಸ್ಟಂಟ್) ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ಈಗಿನ ಯುವ ಜನರಿಗೆ ಕ್ರೇಜ್ ಆಗಿ ಬಿಟ್ಟಿದೆ. ಇದರಿಂದ ತಮ್ಮ ಪ್ರಾಣಕ್ಕೆ ಅಥವಾ ಇತರರಿಗೆ ಹಾನಿಯಾಗಬಹುದು ಎಂದು ಗೊತ್ತಿದ್ದರೂ ಬೇಗ ಫೇಮಸ್ ಆಗಲು ಈ ರೀತಿಯ ಕೆಲಸವನ್ನು ಮಾಡುತ್ತಾರೆ.
ಪೊಲೀಸರು ಎಷ್ಟೇ ಬುದ್ದಿ ಹೇಳಿ, ಕಠಿಣ ಕ್ರಮ ಕೈಗೊಂಡರೂ ಈ ಚಾಳಿ ಬಿಡುವುದಿಲ್ಲ. ಅಲ್ಲಲ್ಲಿ ಮುಂದುವರಿಸಿಕೊಂಡೇ ಬಂದಿದ್ದಾರೆ. ಸದ್ಯ, ಇಂತಹದ್ದೇ ಘಟನೆಯೊಂದು ನಡೆದಿದ್ದು, ಕೊಂಚ ಯಾಮಾರಿದ್ದರೂ ಯುವತಿಯ ಪ್ರಾಣಕ್ಕೆ ಹಾನಿಯಾಗುತ್ತಿತ್ತು. ಅದೃಷ್ಟವಶಾತ್ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. 'Z900' ಹೆಸರಿನ ಯೂಟ್ಯೂಬ್ ವಾಹಿನಿಯಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ.

ಇಲ್ಲಿ, ಬ್ಲಾಗರ್ 'ಕವಾಸಕಿ ನಿಂಜಾ ZX10 R' ಸೂಪರ್‌ಬೈಕ್ ಓಡಿಸುತ್ತಿರುವುದನ್ನು ಕಾಣಬಹುದು. ಅದರಿಂದ ಬರುತ್ತಿದ್ದ ಶಬ್ದವನ್ನು ಕೇಳಿದಾಗ ಬೈಕ್‌ನ್ನು ಸಂಬಂಧಪಟ್ಟ ಡೀಲರ್ ಬಿಟ್ಟು, ಬೇರೆಡೆ ಮಾಡಿಫೈ ಮಾಡಿಸಿರುವುದು ಗೊತ್ತಾಗುತ್ತದೆ. ಆ ಬ್ಲಾಗರ್, ಅದರಿಂದಲೇ ಪಾದಚಾರಿಗಳು ಹಾಗೂ ರಸ್ತೆಯಲ್ಲಿ ಚಲಿಸುತ್ತಿದ್ದ ಇತರೆ ವಾಹನ ಸವಾರರನ್ನು ತನ್ನೆಡೆಗೆ ಸೆಳೆಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಹೀಗೆ, ಬೈಕ್ ರೈಡ್ ಮಾಡುವಾಗ ಕೆಟಿಎಂ ಡ್ಯೂಕ್ (KTM Duke) ಮೋಟಾರ್‌ಸೈಕಲ್ ನಲ್ಲಿ ಹೋಗುತ್ತಿದ್ದ ಯುವಕ - ಯುವತಿಯನ್ನು ಕಾಣುತ್ತೇನೆ. ಅವರು, ಬೈಕಿನಲ್ಲಿ ತೆರಳುತ್ತಿದ್ದರೂ ಹೈಲ್ಮೆಟ್ ಸೇರಿದಂತೆ ಯಾವುದೇ ಸುರಕ್ಷತಾ ಪರಿಕರಗಳನ್ನು ಬಳಕೆ ಮಾಡಿರಲಿಲ್ಲ. ಕವಾಸಕಿ ನಿಂಜಾ ಮೋಟಾರ್‌ಸೈಕಲ್ ನಲ್ಲಿ ಕ್ಯಾಮೆರಾದೊಂದಿಗೆ ಬರುತ್ತಿದ್ದ ಬ್ಲಾಗರ್ ನನ್ನು ಕಂಡು, ಆ ಯುವಕ ಕೆಟಿಎಂ ಬೈಕ್‌ನ್ನು ಮತ್ತಷ್ಟು ವೇಗದಲ್ಲಿ ಓಡಿಸುತ್ತನೆ.
ಒಂದು ಹಂತದಲ್ಲಿ ಜನ ಸಂಚಾರಿ ರಸ್ತೆಯಲ್ಲಿ ಇವೆರೆನು ರೇಸ್ ನಡೆಸುತ್ತಿದ್ದಾರೆ ಎನ್ನುವ ರೀತಿಯಲ್ಲಿ ಭಾಸವಾಗುತ್ತಿತ್ತು. ಬೈಕ್‌ನ ಪಿಲಿಯನ್ ಸೀಟ್ ನಲ್ಲಿ ಕುಳಿತಿರುವ ಯುವತಿಯೊಂದಿಗೆ ಕೆಟಿಎಂ ರೈಡರ್ ಅಪಾಯಕಾರಿಯಾಗಿ ಓವರ್‌ಟೇಕ್ ಮಾಡುತ್ತಾನೆ. ಆಕೆ, ಕೂಡ ಹಲವು ಬಾರಿ ಹಿಂದೆ ತಿರುಗಿ ನೋಡುತ್ತಿರವುದನ್ನು ಕಾಣಬಹುದು. ಕವಾಸಕಿ ನಿಂಜಾ ಬೈಕ್ ನಲ್ಲಿ ಬ್ಲಾಗರ್ ಹಿಂಬಾಲಿಸುವುದನ್ನು ಮುಂದುವರಿಸುತ್ತಾನೆ. ವಿಡಿಯೋದಲ್ಲಿ ಕೆಟಿಎಂ ಮೋಟಾರ್‌ಸೈಕಲ್ ನ ನಂಬರ್ ಪ್ಲೇಟ್ ಕೂಡ ಸರಿಯಾಗಿ ಕಾಣುವುದಿಲ್ಲ.
ಕೆಲ ಸಮಯ ಕೆಟಿಎಂ ಬೈಕ್‌ನ್ನು ಬ್ಲಾಗರ್ ಹಿಂಬಾಲಿಸುವುದನ್ನು ಮಾಡುತ್ತೇನೆ. ಸಂಚಾರ ದಟ್ಟಣೆ ಕಡಿಮೆ ಇರುವ ರಸ್ತೆಯಲ್ಲಿ ನಿಧಾನವಾಗಿ ಹೋಗಬೇಕಾದರೆ, ಯುವತಿಗೆ ಏನನ್ನು ಹೇಳದಂತೆ ಕೆಟಿಎಂ ರೈಡರ್ ಫ್ರಂಟ್ ವೀಲ್ ಮೇಲಕ್ಕೆತ್ತಿ ವೀಲಿಂಗ್ ಮಾಡಲು ಪ್ರಯತ್ನಿಸುತ್ತಾನೆ. ಆಕೆ, ತನ್ನ ಸಪೋರ್ಟ್ ಗೆ ಏನು ಹಿಡಿದುಕೊಂಡಿರಲ್ಲ. ಇನೇನು ಕೆಳಗೆ ಬಿದ್ದು ಗಂಭೀರ ಗಾಯ ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲಿ ಯುವತಿಯ ಸೈಟ್ ಭಾಗವನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾಳೆ.
ಸವಾರನಿಗೆ ಅದು ತಿಳಿದು, ಬೈಕನ್ನು ನಿಧಾನ ಮಾಡಿ, ಮತ್ತೆ ವೇಗವಾಗಿ ಹೋಗುವುದನ್ನು ಶುರು ಮಾಡುತ್ತಾನೆ. ಮತ್ತೆ, ಬ್ಲಾಗರ್ ಕೆಟಿಎಂಸವಾರನ್ನು ಹಿಂಬಾಲಿಸಿ, ಕಡೆಗೆ ಆತನನ್ನು ಭೇಟಿಯಾಗಿ, ತಪ್ಪಿನ ಬಗ್ಗೆ ತಿಳಿ ಹೇಳದೆ ಆತನನ್ನು ಶ್ಲಾಘಿಸುತ್ತಾನೆ. ಏನು ಹರೆಯದ ವಯಸ್ಸಿನಲ್ಲಿ ಮೋಜಿಗೆ ಬಿದ್ದು, ಈ ರೀತಿಯ ಸ್ಟಂಟ್ ಮಾಡಿದರೆ, ಪ್ರಾಣಕ್ಕೆ ಕುತ್ತು ತಂದುಕೊಳ್ಳುವುದು ಕಟ್ಟಿಟ್ಟ ಬುತ್ತಿ. ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.
ಇನ್ನು, ಜನ ಸಂಚಾರಿ ರಸ್ತೆಗಳಲ್ಲಿ ಸ್ಟಂಟ್ ಮಾಡುವುದು ಕಾನೂನುಬಾಹಿರ. ಇದು, ತನಗೆ ಹಾಗೂ ಇತರರಿಗೆ ಅಪಾಯವನ್ನುಂಟು ಮಾಡುತ್ತದೆ ಎಂಬುದರ ಅರಿವು ಇರಬೇಕು. ಇಂತಹ ಪ್ರಕರಣಗಳಲ್ಲಿ ಜೈಲು ಶಿಕ್ಷೆ, ಗಣನೀಯ ದಂಡ ಸೇರಿದಂತೆ ಕಠಿಣ ಕ್ರಮಗಳನ್ನು ಎದುರಿಸಬಹುದು. ನೀವು ಸ್ಟಂಟ್ ಮಾಡಲೇಬೇಕು ಅಂದುಕೊಂಡರೆ ನುರಿತ ವ್ಯಕ್ತಿಗಳ ಮಾರ್ಗದರ್ಶದಲ್ಲಿ ಸೂಕ್ತ ಸುರಕ್ಷತಾ ಪರಿಕರಗಳೊಂದಿಗೆ ಖಾಸಗಿ ರೇಸ್ ಟ್ರ್ಯಾಕ್‌ಗಳಲ್ಲಿ ನಡೆಸಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications