ಶಿಕ್ಷಕಿಗೆ ಬೆಂಝ್ ಕಾರು ಉಡುಗೊರೆಯಾಗಿ ನೀಡಿದ ನರ್ಸರಿ ಬಾಲಕಿ

By Nagaraja

ಶಿಕ್ಷಕರ ದಿನಾಚರಣೆಯಂದು ಅಧ್ಯಾಪಕರಿಗೆ ಗುಲಾಬಿ ಹೂವನ್ನು ನೀಡುವುದನ್ನು ಹೊರತುಪಡಿಸಿದರೆ ಶಿಕ್ಷಕರಿಗೆ ಉಡುಗರೆ ನೀಡುವ ವಾಡಿಕೆಯೇ ಇಲ್ಲ. ಅಬ್ಬಬ್ಬಾ ಅಂದರೆ ಅಧ್ಯಾಪಕರ ನಿವೃತ್ತಿ ವೇಳೆ ಉಡುಗೊರೆ ನೀಡಲೂ ಬಹುದು. ಹಾಗಿರಬೇಕೆಂದರೆ ಅತ್ತ ಕುವೈತ್ ನಲ್ಲಿ ನರ್ಸರಿ ಶಾಲಾ ಬಾಲಕಿಯೊಬ್ಬಾಕೆ ತನ್ನ ಶಿಕ್ಷಕಿಗೆ ಅತಿ ದುಬಾರಿ ಮರ್ಡಿಡಿಸ್ ಬೆಂಝ್ ಕಾರನ್ನು ಉಡುಗೊರೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಈ ವಿಷಯ ಕಿವಿಗೆ ಬೀಳುತ್ತಿದ್ದಂತೆಯೇ ಹಲವರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು 5ರ ಹರೆಯದ ಬಾಲಕಿ ನೂರ್ ಅಲ್ ಫಾರಿಸ್ ಮುಗ್ಧ ಮನಸ್ಸು ಮಾತ್ರ ಮಂದಹಾಸ ಬೀರಿದೆ. ಪ್ರಸ್ತುತ ಸುದ್ದಿಯೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಪಸರಿಸುತ್ತಿದೆ.

ಶಿಕ್ಷಕಿಗೆ ಬೆಂಝ್ ಕಾರು ಉಡುಗೊರೆಯಾಗಿ ನೀಡಿದ ನರ್ಸರಿ ಬಾಲಕಿ

ಕಿಂಡರ್ ಗಾರ್ಟನ್ ಶಾಲೆಯಿಂದ ತೇರ್ಗಡೆ ಹೊಂದಿರುವುದಕ್ಕಾಗಿ ತಮ್ಮ ನೆಚ್ಚಿನ ಶಿಕ್ಷಕಿ ಮಿಸ್ ನಾದಿಯಾ ಅವರಿಗೆ ಈ ಪುಟ್ಟ ಬಾಲಕಿ ಐಷಾರಾಮಿ ಬೆಂಝ್ ಕಾರನ್ನು ಉಡುಗರೆಯಾಗಿ ನೀಡಿದ್ದಾರೆ.

ಶಿಕ್ಷಕಿಗೆ ಬೆಂಝ್ ಕಾರು ಉಡುಗೊರೆಯಾಗಿ ನೀಡಿದ ನರ್ಸರಿ ಬಾಲಕಿ

ಬೆಂಝ್ ಕಾರಿನ ಮುಂಭಾಗದ ಬೊನೆಟ್ ನಲ್ಲಿ ಕುಳಿತುಕೊಂಡಿರುವ ಬಾಲಕಿ ವಿಂಡ್ ಶೀಲ್ಡ್ ಮೇಲೆ ಇದು ನನ್ನ ನೆಚ್ಚಿನ ಟೀಚರ್ ಗೆ ನೀಡುವ ಉಡುಗೊರೆ ಎಂದು ಅರೇಬಿ ಭಾಷೆಯಲ್ಲಿ ಬರೆದಿಟ್ಟಿದ್ದಾರೆ.

ಶಿಕ್ಷಕಿಗೆ ಬೆಂಝ್ ಕಾರು ಉಡುಗೊರೆಯಾಗಿ ನೀಡಿದ ನರ್ಸರಿ ಬಾಲಕಿ

ಸ್ಥಳೀಯರ ಪ್ರಕಾರ ಬಾಲಕಿ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದರು. ಈ ಶಾಕ್ ನಿಂದ ಹೊರಬರಲು ಶಿಕ್ಷಕಿ ನೆರವಾಗಿದ್ದಾರೆ.

ಶಿಕ್ಷಕಿಗೆ ಬೆಂಝ್ ಕಾರು ಉಡುಗೊರೆಯಾಗಿ ನೀಡಿದ ನರ್ಸರಿ ಬಾಲಕಿ

ಇದೇ ಕಾರಣಕ್ಕಾಗಿ ಬಾಲಕಿಯ ಅಪ್ಪ ಶಿಕ್ಷಕಿಗೆ ಕಾರನ್ನು ಕೊಡುಗೆಯಾಗಿ ನೀಡಿದ್ದಾರೆ. ಆದರೆ ಕಾರಿನ ಮಾಡೆಲ್ ಅಥವಾ ಬೆಲೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ.

ಶಿಕ್ಷಕಿಗೆ ಬೆಂಝ್ ಕಾರು ಉಡುಗೊರೆಯಾಗಿ ನೀಡಿದ ನರ್ಸರಿ ಬಾಲಕಿ

ಒಟ್ಟಿನಲ್ಲಿ ಗುರ-ಶಿಷ್ಯ ಬಾಂಧವ್ಯ ಕಡಿದುಕೊಳ್ಳುತ್ತಿರುವ ಈ ಆಧುನಿಕ ಯುಗದಲ್ಲೂ ಪುಟ್ಟ ಬಾಲಕಿ ತೋರಿರುವ ಕೃತಜ್ಞತಾ ಸ್ಮರಣೆಯನ್ನು ಮೆಚ್ಚಲೇ ಬೇಕು.

More from DriveSpark

Article Published On: Tuesday, June 7, 2016, 15:51 [IST]
English summary
Thinking What To Gift Your Teacher? How About A Mercedes-Benz?
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+