ಆಟೋ ಶೋದಲ್ಲಿ ಟೆಸ್ಲಾ ಕಂಪನಿಯ ವಿರುದ್ಧ ಪ್ರತಿಭಟನೆ ನಡೆಸಿದ ಯುವತಿ

ಅಮೆರಿಕಾ ಮೂಲದ ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್ ಕಾರುಗಳು ವಿಶ್ವದಾದ್ಯಂತ ಜನಪ್ರಿಯವಾಗಿವೆ. ಟೆಸ್ಲಾ ಕಾರುಗಳು ಪರ್ಫಾಮೆನ್ಸ್ ಹಾಗೂ ಟೆಕ್ನಾಲಜಿ ದೃಷ್ಟಿಯಿಂದ ಬೇರೆಲ್ಲಾ ಕಂಪನಿಯ ಕಾರುಗಳಿಗಿಂತ ಒಂದು ಹೆಜ್ಜೆ ಮುಂದಿವೆ.

ಆಟೋ ಶೋದಲ್ಲಿ ಟೆಸ್ಲಾ ಕಂಪನಿಯ ವಿರುದ್ಧ ಪ್ರತಿಭಟನೆ ನಡೆಸಿದ ಯುವತಿ

ಟೆಸ್ಲಾ ಎಲೆಕ್ಟ್ರಿಕ್ ಕಾರುಗಳನ್ನು ಆಟೋ ಮೊಬೈಲ್ ಉದ್ಯಮದಲ್ಲಿ ಕ್ರಾಂತಿಕಾರಿ ಕಾರುಗಳೆಂದು ಪರಿಗಣಿಸಲಾಗಿದೆ. ಇಷ್ಟೆಲ್ಲಾ ಗರಿಮೆ, ಹೆಗ್ಗಳಿಕೆಯನ್ನು ಹೊಂದಿರುವ ಟೆಸ್ಲಾ ಕಂಪನಿಯ ಕಾರುಗಳಿಗೆ ಸಮಯ ಸರಿಯಾಗಿಲ್ಲವೆಂದು ಕಾಣುತ್ತದೆ.

ಆಟೋ ಶೋದಲ್ಲಿ ಟೆಸ್ಲಾ ಕಂಪನಿಯ ವಿರುದ್ಧ ಪ್ರತಿಭಟನೆ ನಡೆಸಿದ ಯುವತಿ

ಟೆಸ್ಲಾ ಕಂಪನಿಯ ಕೆಲವು ಎಲೆಕ್ಟ್ರಿಕ್ ಕಾರುಗಳು ಪದೇ ಪದೇ ಅಪಘಾತಕ್ಕೀಡಾಗುತ್ತಿವೆ. ಈ ಅಪಘಾತಗಳು ಟೆಸ್ಲಾ ಕಾರುಗಳಲ್ಲಿರುವ ಆಟೋಪೈಲಟ್ ಎಂಬ ಡ್ರೈವರ್ ಲೆಸ್ ತಂತ್ರಜ್ಞಾನದಿಂದ ಸಂಭವಿಸುತ್ತಿರಬಹುದು ಎಂಬ ಅನುಮಾನ ಕಾಡುತ್ತಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಆಟೋ ಶೋದಲ್ಲಿ ಟೆಸ್ಲಾ ಕಂಪನಿಯ ವಿರುದ್ಧ ಪ್ರತಿಭಟನೆ ನಡೆಸಿದ ಯುವತಿ

ಈಗ ಯುವತಿಯೊಬ್ಬಳು ಶಾಂಘೈ ಆಟೋ ಶೋದಲ್ಲಿ ಪ್ರದರ್ಶನಕ್ಕಿಟ್ಟಿದ್ದ ಟೆಸ್ಲಾ ಮಾಡೆಲ್ ಎಸ್ ಕಾರಿನ ಮೇಲೆ ಹತ್ತಿ ಟೆಸ್ಲಾ ಕಂಪನಿಯ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ದಾಳೆ.

ಆಟೋ ಶೋದಲ್ಲಿ ಟೆಸ್ಲಾ ಕಂಪನಿಯ ವಿರುದ್ಧ ಪ್ರತಿಭಟನೆ ನಡೆಸಿದ ಯುವತಿ

ಆಕೆ ಟೆಸ್ಲಾ ಬ್ರೇಕ್ ಲಾಸ್ಟ್ ಕಂಟ್ರೋಲ್ ಎಂದು ಕೂಗಿದ್ದಾಳೆ. ಆಕೆ ಧರಿಸಿದ್ದ ಟೀ ಶರ್ಟ್‌ ಮೇಲೆಯೂ ಸಹ ಬ್ರೇಕ್ ಲಾಸ್ಟ್ ಕಂಟ್ರೋಲ್ ಎಂಬ ಪದಗಳನ್ನು ಬರೆಯಲಾಗಿತ್ತು. ಯುವತಿ ಏಕಾಏಕಿ ಕಾರಿನ ಮೇಲೆ ಹತ್ತಿ ಘೋಷಣೆ ಕೂಗುತ್ತಿದ್ದಂತೆ ಸ್ಥಳದಲ್ಲಿ ಗದ್ದಲ ಉಂಟಾಗಿತ್ತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಆಟೋ ಶೋದಲ್ಲಿ ಟೆಸ್ಲಾ ಕಂಪನಿಯ ವಿರುದ್ಧ ಪ್ರತಿಭಟನೆ ನಡೆಸಿದ ಯುವತಿ

ಆಟೋ ಶೋಗೆ ಬಂದಿದ್ದವರು ಒಂದು ಕ್ಷಣ ಈ ಯುವತಿಯ ಕೃತ್ಯವನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಯುವತಿ ಟೆಸ್ಲಾ ಕಾರಿನ ರೂಫ್ ಮೇಲೆ ನಿಂತು ಘೋಷಣೆ ಕೂಗಿದ್ದಾಳೆ. ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್'ಗಳು ಆಕೆಯನ್ನು ಅಲ್ಲಿಂದ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ.

ಆಟೋ ಶೋದಲ್ಲಿ ಟೆಸ್ಲಾ ಕಂಪನಿಯ ವಿರುದ್ಧ ಪ್ರತಿಭಟನೆ ನಡೆಸಿದ ಯುವತಿ

ಇನ್ನೂ ಕೆಲವರು ಯುವತಿಯ ಟೀ ಶರ್ಟ್‌ ಮೇಲಿದ್ದ ಪದಗಳನ್ನು ಕೊಡೆಗಳಿಂದ ಮುಚ್ಚಲು ಪ್ರಯತ್ನಿಸಿದ್ದಾರೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಯುವತಿ ಕೊಡೆಗಳನ್ನು ಕಿತ್ತುಕೊಂಡು ಮತ್ತೆ ಘೋಷಣೆ ಕೂಗಿದ್ದಾಳೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಆಟೋ ಶೋದಲ್ಲಿ ಟೆಸ್ಲಾ ಕಂಪನಿಯ ವಿರುದ್ಧ ಪ್ರತಿಭಟನೆ ನಡೆಸಿದ ಯುವತಿ

ಸತತ ಪ್ರಯತ್ನದ ನಂತರ ಸೆಕ್ಯೂರಿಟಿ ಗಾರ್ಡ್'ಗಳು ಆಕೆಯನ್ನು ಕೆಳಕ್ಕೆ ಇಳಿಸಿ ಅಲ್ಲಿಂದ ಹೊರಕ್ಕೆ ಕರೆದೊಯ್ದಿದ್ದಾರೆ. ವರದಿಗಳ ಪ್ರಕಾರ ಪ್ರತಿಭಟನೆ ನಡೆಸಿದ ಯುವತಿ ಟೆಸ್ಲಾ ಮಾಡೆಲ್ ಎಸ್ ಕಾರ್ ಅನ್ನು ಹೊಂದಿದ್ದಾಳೆ.

ಅಪಘಾತದಲ್ಲಿ ಆಕೆಯ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಟೆಸ್ಲಾ ಮಾಡೆಲ್ ಎಸ್ ಕಾರಿನ ಬ್ರೇಕ್ ಸಿಸ್ಟಂ ದೋಷಯುಕ್ತವಾಗಿದ್ದೇ ಈ ಅಪಘಾತಕ್ಕೆ ಕಾರಣವೆಂದು ಆರೋಪಿಸಿ ಯುವತಿ ಪ್ರತಿಭಟನೆ ನಡೆಸಿದ್ದಾಳೆ ಎಂದು ತಿಳಿದು ಬಂದಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಆಟೋ ಶೋದಲ್ಲಿ ಟೆಸ್ಲಾ ಕಂಪನಿಯ ವಿರುದ್ಧ ಪ್ರತಿಭಟನೆ ನಡೆಸಿದ ಯುವತಿ

ಆದರೆ ಅಪಘಾತಕ್ಕೀಡಾದ ಕಾರಿನಲ್ಲಿ ಯಾವುದೇ ತೊಂದರೆ ಇರಲಿಲ್ಲವೆಂದು ಟೆಸ್ಲಾ ಕಂಪನಿ ಹೇಳಿದೆ. ಒಟ್ಟಿನಲ್ಲಿ ಪ್ರಮುಖ ಆಟೋ ಶೋದಲ್ಲಿ ಯುವತಿಯೊಬ್ಬಳು ಟೆಸ್ಲಾ ಕಂಪನಿಯ ವಿರುದ್ಧ ಪ್ರತಿಭಟನೆ ನಡೆಸಿ ತನ್ನ ಆಕ್ರೋಶವನ್ನು ಹೊರ ಹಾಕಿದ್ದಾಳೆ.

Most Read Articles

Kannada
English summary
Lady protest against Tesla company at Shanghai auto show. Read in Kannada.
Story first published: Tuesday, April 20, 2021, 12:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X