ವಾಗ್ವಾದ ನಡೆಸಿದ ಯುವತಿಗೆ ಕಪಾಳ ಮೋಕ್ಷ ಮಾಡಿದ ಮಹಿಳಾ ಪಿಎಸ್‌ಐ

ಭಾರತದಲ್ಲಿ ಉಂಟಾಗುವ ರಸ್ತೆ ಅಪಘಾತಗಳಿಗೆ ಸಂಚಾರ ನಿಯಮಗಳ ಉಲ್ಲಂಘನೆಯೇ ಪ್ರಮುಖ ಕಾರಣ. ಈ ಕಾರಣಕ್ಕೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ.

ವಾಗ್ವಾದ ನಡೆಸಿದ ಯುವತಿಗೆ ಕಪಾಳ ಮೋಕ್ಷ ಮಾಡಿದ ಮಹಿಳಾ ಪಿಎಸ್‌ಐ

ಪೊಲೀಸರು ಕಾಲ ಕಾಲಕ್ಕೆ ವಾಹನಗಳ ತಪಾಸಣೆ ನಡೆಸಿ ಸಂಚಾರ ನಿಯಮಗಳ ಉಲ್ಲಂಘನೆ ಕಂಡು ಬಂದರೆ ದಂಡ ವಿಧಿಸುತ್ತಾರೆ. ವಾಹನಗಳನ್ನು ತಡೆದು ನಿಲ್ಲಿಸಿದಾಖಲೆಗಳನ್ನು ಪರಿಶೀಲಿಸುವ ವೇಳೆ ಕೆಲವೊಮ್ಮೆ ವಾಹನ ಸವಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯುತ್ತದೆ.

ವಾಗ್ವಾದ ನಡೆಸಿದ ಯುವತಿಗೆ ಕಪಾಳ ಮೋಕ್ಷ ಮಾಡಿದ ಮಹಿಳಾ ಪಿಎಸ್‌ಐ

ಹೀಗೆ ಮಾತಿನ ಚಕಮಕಿ ನಡೆದಾಗ ಸಾರ್ವಜನಿಕರು ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಹಾಗೂ ಪೊಲೀಸರು ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿರುವ ಹಲವಾರು ಘಟನೆಗಳು ಈ ಹಿಂದೆ ವರದಿಯಾಗಿವೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ವಾಗ್ವಾದ ನಡೆಸಿದ ಯುವತಿಗೆ ಕಪಾಳ ಮೋಕ್ಷ ಮಾಡಿದ ಮಹಿಳಾ ಪಿಎಸ್‌ಐ

ಈಗ ಇದೇ ರೀತಿಯ ಮತ್ತೊಂದು ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ. ಸ್ಕೂಟರ್‌ ತಪಾಸಣೆ ವೇಳೆ ತಮ್ಮ ವಿರುದ್ಧ ಮಾತನಾಡಿದ ಯುವತಿಯ ಮೇಲೆ ಮಂಡ್ಯದ ಮಹಿಳಾ ಪಿಎಸ್‌ಐ ಹಲ್ಲೆ ನಡೆಸಿದ್ದಾರೆ.

ವಾಗ್ವಾದ ನಡೆಸಿದ ಯುವತಿಗೆ ಕಪಾಳ ಮೋಕ್ಷ ಮಾಡಿದ ಮಹಿಳಾ ಪಿಎಸ್‌ಐ

ಮಹಿಳಾ ಪಿಎಸ್‌ಐ ಯುವತಿಗೆ ಕಪಾಳ ಮೋಕ್ಷ ಮಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ಈ ಘಟನೆಯ ಸಂಬಂಧ ಸಾರ್ವಜನಿಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ವಾಗ್ವಾದ ನಡೆಸಿದ ಯುವತಿಗೆ ಕಪಾಳ ಮೋಕ್ಷ ಮಾಡಿದ ಮಹಿಳಾ ಪಿಎಸ್‌ಐ

ಮಂಡ್ಯದ ಬೆಸರಗರಹಳ್ಳಿ ರಾಮಣ್ಣ ವೃತ್ತದಲ್ಲಿ ಪೊಲೀಸರು ವಾಹನ ಸವಾರರ ದಾಖಲೆ ಪರಿಶೀಲನೆ ಮಾಡುತ್ತಿದ್ದ ವೇಳೆ ಅಲ್ಲಿಗೆ ಸ್ಕೂಟರಿನಲ್ಲಿ ಬಂದ ಯುವತಿಯನ್ನು ತಡೆದು ದಾಖಲೆಗಳನ್ನು ನೀಡುವಂತೆ ಕೇಳಲಾಗಿದೆ.

ವಾಗ್ವಾದ ನಡೆಸಿದ ಯುವತಿಗೆ ಕಪಾಳ ಮೋಕ್ಷ ಮಾಡಿದ ಮಹಿಳಾ ಪಿಎಸ್‌ಐ

ಈ ವೇಳೆ ಯುವತಿ ನನ್ನ ಸ್ಕೂಟರ್‌ ಅನ್ನು ಯಾಕೆ ಮುಟ್ಟುತ್ತೀರಾ ಎಂದು ಪೊಲೀಸರನ್ನು ಏರು ಧ್ವನಿಯಲ್ಲಿ ಪ್ರಶ್ನಿಸಿ, ಪೊಲೀಸರ ಬಗ್ಗೆ ಲಘುವಾಗಿ ಮಾತನಾಡಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಮಹಿಳಾ ಪಿಎಸ್‌ ಐ ಸವಿತಾಗೌಡ ಪಾಟೀಲ್ ಯುವತಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ವಾಗ್ವಾದ ನಡೆಸಿದ ಯುವತಿಗೆ ಕಪಾಳ ಮೋಕ್ಷ ಮಾಡಿದ ಮಹಿಳಾ ಪಿಎಸ್‌ಐ

ಆಗ ಯುವತಿ ಮತ್ತು ಮಹಿಳಾ ಪಿ‌ಎಸ್‌ಐ ನಡುವೆ ಮಾತಿನ ಚಕಮಕಿ ನಡೆದಿದೆ. ನನ್ನನ್ನು ಹೊಡೆಯಲು ನೀನು ಯಾರು ಎಂದು ಯುವತಿ ಪ್ರಶ್ನಿಸುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಪೇದೆಯೊಬ್ಬರು ಯುವತಿಯ ಸ್ಕೂಟರ್ ಅನ್ನು ತಳ್ಳಿಕೊಂಡು ಹೋಗುತ್ತಿರುವುದನ್ನು ಸಹ ಈ ವೀಡಿಯೊದಲ್ಲಿ ಕಾಣಬಹುದು.

ಘಟನೆಯ ಬಳಿಕ ಪೊಲೀಸ್‌ ಠಾಣೆಗೆ ತೆರಳಿದ ಯುವತಿ ಹಾಗೂ ಆಕೆಯ ಪೋಷಕರು ಪೊಲೀಸರಿಗೆ ಕ್ಷಮಾಪಣಾ ಪತ್ರ ಬರೆದುಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಜೊತೆಗೆ ರೂ.500 ದಂಡ ಪಾವತಿಸಿದ್ದಾರೆ ಎಂದು ವರದಿಯಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಾಗ್ವಾದ ನಡೆಸಿದ ಯುವತಿಗೆ ಕಪಾಳ ಮೋಕ್ಷ ಮಾಡಿದ ಮಹಿಳಾ ಪಿಎಸ್‌ಐ

ಈ ಘಟನೆ ಬಗ್ಗೆ ವರದಿ ಸಲ್ಲಿಸುವಂತೆ ಮಂಡ್ಯ ಜಿಲ್ಲಾ ಎಸ್‌ಪಿರವರು ಡಿವೈಎಸ್‌ಪಿಯವರಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ಎಲ್ಲಾ ಪೊಲೀಸ್‌ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚಿಸಿದ್ದಾರೆ. ಸಾರ್ವಜನಿಕರು ಸಹ ಪೊಲೀಸರೊಂದಿಗೆ ಸಹಕರಿಸಬೇಕೆಂದು ಕೋರಿದ್ದಾರೆ.

ಚಿತ್ರ ಹಾಗೂ ವೀಡಿಯೊ ಕೃಪೆ: ಟಿವಿ5 ಕನ್ನಡ

Most Read Articles

Kannada
English summary
Lady PSI slaps lady for arguing. Read in Kannada.
Story first published: Wednesday, March 10, 2021, 13:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X