ಪ್ರವಾಹದ ನೀರಿನಲ್ಲಿ ಈಜುತ್ತಾ ಸಾಗಿದ ಲ್ಯಾಂಬೊರ್ಗಿನಿ ಸೂಪರ್ ಕಾರು

ಲ್ಯಾಂಬೊರ್ಗಿನಿ ಕಾರು ಇತರ ಕಾರುಗಳು ಮಾಡದಿದ್ದನ್ನು ಮಾಡಬಹುದು. ಆದರೆ ಲ್ಯಾಂಬೊರ್ಗಿನಿ ಕಾರಿಗೆ ಇತರ ಕಾರುಗಳಂತೆ ಈಜುತ್ತಾ ಸಾಗಲು ಸಾಧ್ಯವಿಲ್ಲ. ಆದರೆ ಇತ್ತೀಚಿಗೆ ಅಮೆರಿಕಾದ ಫ್ಲೋರಿಡಾದಲ್ಲಿ ಪ್ರವಾಹಕ್ಕೀಡಾಗಿದ್ದ ರಸ್ತೆಯಲ್ಲಿ ಲ್ಯಾಂಬೊರ್ಗಿನಿ ಹುರಾಕನ್ ಸ್ಪೈಡರ್ ಕಾರು ಈಜುತ್ತಾ ಸಾಗುತ್ತಿರುವುದು ಕಂಡುಬಂದಿದೆ.

ಪ್ರವಾಹದ ನೀರಿನಲ್ಲಿ ಈಜುತ್ತಾ ಸಾಗಿದ ಲ್ಯಾಂಬೊರ್ಗಿನಿ ಸೂಪರ್ ಕಾರು

ಇದನ್ನು ನೋಡಿದ ಇತರ ವಾಹನ ವಾಹನಗಳ ಸವಾರರು ಆಶ್ಚರ್ಯಚಕಿತರಾಗಿದ್ದಾರೆ. ಸ್ಥಳದಲ್ಲಿದ್ದ ವ್ಯಕ್ತಿ ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಇತ್ತೀಚಿಗೆ ಎಟಾ ಚಂಡಮಾರುತದಿಂದ ಫ್ಲೋರಿಡಾದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು.

ಪ್ರವಾಹದ ನೀರಿನಲ್ಲಿ ಈಜುತ್ತಾ ಸಾಗಿದ ಲ್ಯಾಂಬೊರ್ಗಿನಿ ಸೂಪರ್ ಕಾರು

ಈ ಚಂಡಮಾರುತದಿಂದಾಗಿ ರಸ್ತೆಗಳಲ್ಲಿದ್ದ ಹಲವು ವಾಹನಗಳು ಕೊಚ್ಚಿ ಹೋಗಿವೆ. ಹೀಗೆ ನೀರಿನಿಂದ ಜಲಾವೃತವಾಗಿದ್ದ ರಸ್ತೆಯಲ್ಲಿ ಲ್ಯಾಂಬೊರ್ಗಿನಿ ಕಾರು ಸುಲಭವಾಗಿ ಸಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಪ್ರವಾಹದ ನೀರಿನಲ್ಲಿ ಈಜುತ್ತಾ ಸಾಗಿದ ಲ್ಯಾಂಬೊರ್ಗಿನಿ ಸೂಪರ್ ಕಾರು

ಲ್ಯಾಂಬೊರ್ಗಿನಿ ಹುರಾಕನ್ ಸ್ಪೈಡರ್ ಕಾರು ಜಲಾವೃತವಾಗಿರುವ ರಸ್ತೆಯಲ್ಲಿ ಸಾಗುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಈ ಜಲಾವೃತದ ಮಧ್ಯೆಯೂ ಹುರಾಕನ್ ಸ್ಪೈಡರ್ ಮುಂದೆ ಸಾಗಿದೆ.

ಪ್ರವಾಹದ ನೀರಿನಲ್ಲಿ ಈಜುತ್ತಾ ಸಾಗಿದ ಲ್ಯಾಂಬೊರ್ಗಿನಿ ಸೂಪರ್ ಕಾರು

ಈ ವೀಡಿಯೊದಲ್ಲಿ ಲ್ಯಾಂಬೊರ್ಗಿನಿ ಕಾರು ಸಂಪೂರ್ಣವಾಗಿ ಮುಳುಗಿದಂತೆ ಕಂಡು ಬರುತ್ತದೆ. ಅಲ್ಲಿಗೆ ವೀಡಿಯೊ ಕೊನೆಗೊಳ್ಳುತ್ತದೆ. ಈ ಘಟನೆಯ ನಂತರ ಕಾರು ಯಾವ ರೀತಿಯಲ್ಲಿ ಹಾನಿಗೀಡಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಆದರೆ ಈ ಘಟನೆಯ ನಂತರ ಈ ಲ್ಯಾಂಬೊರ್ಗಿನಿ ಹುರಾಕನ್ ಸ್ಪೈಡರ್ ಕಾರನ್ನು ಅದರ ಮಾಲೀಕರು ಸರ್ವೀಸ್ ಸೆಂಟರ್ ಗೆ ಕೊಂಡೊಯ್ಯುವ ಅಗತ್ಯವಿದೆ. ಏಕೆಂದರೆ ಲ್ಯಾಂಬೊರ್ಗಿನಿ ಹುರಾಕನ್ ಸ್ಪೈಡರ್ ಕಾರಿನಲ್ಲಿ ಎಂಜಿನ್ ಅನ್ನು ಅದರ ಹಿಂಭಾಗದಲ್ಲಿ ಜೋಡಿಸಲಾಗಿರುತ್ತದೆ. ಇದರಿಂದ ಎಂಜಿನ್ ಹಾನಿಗೀಡಾಗಿರುವ ಸಾಧ್ಯತೆಗಳಿವೆ.

ಪ್ರವಾಹದ ನೀರಿನಲ್ಲಿ ಈಜುತ್ತಾ ಸಾಗಿದ ಲ್ಯಾಂಬೊರ್ಗಿನಿ ಸೂಪರ್ ಕಾರು

ಈ ವೀಡಿಯೊದಲ್ಲಿ ನೀರು ಕಾರಿನ ಎಂಜಿನ್ ನೊಳಕ್ಕೆ ಹೋಗಿರುವ ಸಾಧ್ಯತೆಗಳು ಹೆಚ್ಚು. ಇದರ ಜೊತೆಗೆ ಈ ನೀರಿನಿಂದಾಗಿ ಕಾರು ಹಾಗೂ ಅದರ ಒಳಗಿರುವ ಭಾಗಗಳಿಗೆ ತುಕ್ಕು ಹಿಡಿಯುವ ಸಾಧ್ಯತೆಗಳಿವೆ. ಲ್ಯಾಂಬೊರ್ಗಿನಿ ಹುರಾಕನ್ ಸ್ಪೈಡರ್ ಕಾರು ತನ್ನ ಲುಕ್ ಹಾಗೂ ಪರ್ಫಾಮೆನ್ಸ್ ಗೆ ಹೆಸರುವಾಸಿಯಾಗಿದೆ.

Most Read Articles

Kannada
English summary
Lamborghini car swims in flooded street of Florida. Read in Kannada.
Story first published: Wednesday, November 11, 2020, 19:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X