ಸದುದ್ದೇಶಕ್ಕಾಗಿ ಕೈಜೋಡಿಸಿದ ಲೇಡಿ ಗಾಗಾ ಹಾಗೂ ಲ್ಯಾಂಬೊರ್ಗಿನಿ ಕಂಪನಿ

ಅಮೆರಿಕಾದ ಖ್ಯಾತ ಗಾಯಕಿ ಲೇಡಿ ಗಾಗಾ ಹಾಗೂ ಜನಪ್ರಿಯ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ಒಂದು ಒಳ್ಳೆಯ ಉದ್ದೇಶಕ್ಕಾಗಿ ಕೈಜೋಡಿಸಿದ್ದಾರೆ ಎಂದು ವರದಿಯಾಗಿದೆ. ಕೋವಿಡ್ -19 ಪೀಡಿತರಿಗೆ ನೆರವಾಗಲು ಲ್ಯಾಂಬೊರ್ಗಿನಿ ಕಂಪನಿ ಹಾಗೂ ಲೇಡಿ ಗಾಗಾ ಕೈಜೋಡಿಸಿದ್ದಾರೆ ಎಂದು ಹೇಳಲಾಗಿದೆ.

ಸದುದ್ದೇಶಕ್ಕಾಗಿ ಕೈಜೋಡಿಸಿದ ಲೇಡಿ ಗಾಗಾ ಹಾಗೂ ಲ್ಯಾಂಬೊರ್ಗಿನಿ ಕಂಪನಿ

ಈ ಮೂಲಕ ಕರೋನಾ ವೈರಸ್ ಪೀಡಿತರ ನೆರವಿಗೆ ಧಾವಿಸಿದ್ದಾರೆ. ಕರೋನಾ ವೈರಸ್ ಪೀಡಿತರಿಗಾಗಿ ಹಣ ಸಂಗ್ರಹಿಸಲು ಅವರು ವಿಶೇಷ ಕಾರ್ಯಕ್ರಮಗಳನ್ನು ನಡೆಸಲು ಯೋಜನೆಯನ್ನು ರೂಪಿಸಿದ್ದಾರೆ. ಕರೋನಾ ವೈರಸ್ ಹರಡುವಿಕೆಯ ಆರಂಭದ ಸಮಯದಲ್ಲಿ ವಿಶ್ವದ ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ವಿವಿಧ ರೀತಿಯಲ್ಲಿ ನೆರವು ನೀಡಿದ್ದವು.

ಸದುದ್ದೇಶಕ್ಕಾಗಿ ಕೈಜೋಡಿಸಿದ ಲೇಡಿ ಗಾಗಾ ಹಾಗೂ ಲ್ಯಾಂಬೊರ್ಗಿನಿ ಕಂಪನಿ

ಅದರಲ್ಲೂ ಭಾರತದಲ್ಲಿ ಟಾಟಾ ಗ್ರೂಪ್ ನೀಡಿದ ಕೊಡುಗೆ ಅಪಾರ. ಟಾಟಾ ಮೋಟಾರ್ಸ್ ಜೊತೆಗೆ ಮಹೀಂದ್ರಾ ಅಂಡ್ ಮಹೀಂದ್ರಾ ಹಾಗೂ ಹೀರೋ ಸೇರಿದಂತೆ ಇನ್ನು ಹಲವು ಕಂಪನಿಗಳು ಹಣಕಾಸಿನ ನೆರವು ನೀಡಿದ್ದವು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಸದುದ್ದೇಶಕ್ಕಾಗಿ ಕೈಜೋಡಿಸಿದ ಲೇಡಿ ಗಾಗಾ ಹಾಗೂ ಲ್ಯಾಂಬೊರ್ಗಿನಿ ಕಂಪನಿ

ಈಗ ಲ್ಯಾಂಬೊರ್ಗಿನಿ ಕಂಪನಿಯು ಲೇಡಿ ಗಾಗಾ ಜೊತೆ ಕೈಜೋಡಿಸಿ ಕರೋನಾ ವೈರಸ್ ಪೀಡಿತರಿಗಾಗಿ ಹಣಕಾಸಿನ ನೆರವನ್ನು ನೀಡಲು ಮುಂದಾಗಿದೆ. ನಿಧಿಸಂಗ್ರಹಣೆ ಕಾರ್ಯವು ಈಗಾಗಲೇ ಆರಂಭವಾಗಿದೆ.

ಸದುದ್ದೇಶಕ್ಕಾಗಿ ಕೈಜೋಡಿಸಿದ ಲೇಡಿ ಗಾಗಾ ಹಾಗೂ ಲ್ಯಾಂಬೊರ್ಗಿನಿ ಕಂಪನಿ

ಈ ಕಾರ್ಯವು ಡಿಸೆಂಬರ್ 16ರವರೆಗೆ ನಡೆಯಲಿದೆ. ಗಾಗಾ ಅವರ ವಿಶೇಷ ಕಾರ್ಯಕ್ರಮಗಳು ಒಮಾಜ್ ಪ್ಲಾಟ್‌ಫಾರಂ ಮೂಲಕ ನಡೆಯುತ್ತವೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಸದುದ್ದೇಶಕ್ಕಾಗಿ ಕೈಜೋಡಿಸಿದ ಲೇಡಿ ಗಾಗಾ ಹಾಗೂ ಲ್ಯಾಂಬೊರ್ಗಿನಿ ಕಂಪನಿ

ಇದರಲ್ಲಿ ಭಾಗವಹಿಸಲು ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಹೇಳಲಾಗಿದೆ. ಆದರೆ ಕರೋನಾ ವೈರಸ್ ನಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ಹಣವನ್ನು ಸಂಗ್ರಹಿಸಲಾಗುತ್ತಿದೆ.

ಸದುದ್ದೇಶಕ್ಕಾಗಿ ಕೈಜೋಡಿಸಿದ ಲೇಡಿ ಗಾಗಾ ಹಾಗೂ ಲ್ಯಾಂಬೊರ್ಗಿನಿ ಕಂಪನಿ

ಇದರಲ್ಲಿ ಬರುವ ಬಹುಪಾಲು ಆದಾಯವು ಲೇಡಿ ಗಾಗಾ ಅವರ ಬಾರ್ನ್ ದಿಸ್ ವೇ ಫೌಂಡೇಶನ್‌ಗೆ ಹೋಗುತ್ತದೆ. ಇದರ ಜೊತೆಗೆ ಟುಗೆದರ್ ರೈಸಿಂಗ್ ಎಂಬ ಸಂಸ್ಥೆಗೆ ಸಹಾಯ ಮಾಡಲು ಲೇಡಿ ಗಾಗಾ ಬಯಸಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಸದುದ್ದೇಶಕ್ಕಾಗಿ ಕೈಜೋಡಿಸಿದ ಲೇಡಿ ಗಾಗಾ ಹಾಗೂ ಲ್ಯಾಂಬೊರ್ಗಿನಿ ಕಂಪನಿ

ಲೇಡಿ ಗಾಗಾ ಅವರ ಈ ಕಾರ್ಯವನ್ನು ಸಾರ್ವಜನಿಕರು ಪ್ರಶಂಸಿದ್ದು, ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಅಚ್ಚರಿಯ ಕೊಡುಗೆಯನ್ನು ನೀಡಲಾಗುತ್ತದೆ. ಅದೃಷ್ಟಶಾಲಿಯೊಬ್ಬರಿಗೆ 911 ಆಲ್ಬಂನಲ್ಲಿ ಲೇಡಿ ಗಾಗಾ ಬಳಸಿದ್ದ ಲ್ಯಾಂಬೊರ್ಗಿನಿ ಕಾರನ್ನು ನೀಡಲಾಗುತ್ತದೆ.

ಸದುದ್ದೇಶಕ್ಕಾಗಿ ಕೈಜೋಡಿಸಿದ ಲೇಡಿ ಗಾಗಾ ಹಾಗೂ ಲ್ಯಾಂಬೊರ್ಗಿನಿ ಕಂಪನಿ

ಗಾಯಕಿ ಲೇಡಿ ಗಾಗಾ ಹಾಗೂ ಲ್ಯಾಂಬೊರ್ಗಿನಿ ಕಂಪನಿ ವಿಶ್ವಾದ್ಯಂತ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿವೆ. ಇವರಿಬ್ಬರ ಈ ಕಾರ್ಯದಲ್ಲಿ ದೊಡ್ಡ ಮೊತ್ತದ ಹಣ ಸಂಗ್ರಹವಾಗುವ ನಿರೀಕ್ಷೆಗಳಿವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸದುದ್ದೇಶಕ್ಕಾಗಿ ಕೈಜೋಡಿಸಿದ ಲೇಡಿ ಗಾಗಾ ಹಾಗೂ ಲ್ಯಾಂಬೊರ್ಗಿನಿ ಕಂಪನಿ

ಪ್ರದರ್ಶನದ ಕೊನೆಯ ದಿನವಾದ ಡಿಸೆಂಬರ್ 16ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು. ಈ ಕಾರ್ಯಕ್ಕೆ ಸಾರ್ವಜನಿಕರಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿರುವುದು ಗಮನಾರ್ಹ.

Most Read Articles

Kannada
English summary
Lamborghini company joins hands with Lady Gaga to raise funds for covid 19 affected people. Read in Kannada.
Story first published: Tuesday, December 15, 2020, 9:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X